Homeಅಂಕಣಗಳುಶ್ರಮ, ಬಂಡವಾಳ, ಚರಿತ್ರೆ ಮತ್ತು ಮಾಕ್ರ್ಸ್‍ವಾದ... ಭಾಗ -2

ಶ್ರಮ, ಬಂಡವಾಳ, ಚರಿತ್ರೆ ಮತ್ತು ಮಾಕ್ರ್ಸ್‍ವಾದ… ಭಾಗ -2

- Advertisement -
- Advertisement -

ಭಾಗ -2

ಚರಿತ್ರೆಯೆಂದರೆ ಅದು ಕನಸಲ್ಲ. ಚರಿತ್ರೆಯೆಂದರೆ ಅದು ಖಾಲಿಯಾದ ಜಾಗವೂ ಅಲ್ಲ. ಪ್ರತಿಯೊಂದು ಜ್ಞಾನದ ಮಾದರಿಯೂ ನಮ್ಮನ್ನು ಕಟ್ಟಿದೆ. ಅದೇ ರೀತಿಯಲ್ಲಿ ಚರಿತ್ರೆಯು ಸಹ. ಚರಿತ್ರೆ ಮತ್ತು ಅದರ ಅರಿವು ಬಹಳ ಅಗತ್ಯವೆಂದು ಮಾಕ್ರ್ಸ್‍ವಾದವು ಹೇಳುತ್ತದೆ. ಚರಿತ್ರೆ ಎನ್ನುವುದು ವಿಕಾಸಶೀಲವಾದುದು. ಮನುಷ್ಯನ ಶ್ರಮಶಕ್ತಿಯನ್ನು ಹೊರತುಪಡಿಸಿ ಚರಿತ್ರೆಯು ನಿರ್ಮಾಣವಾಗುವುದೂ ಇಲ್ಲ. ಅದೇ ರೀತಿ ಚರಿತ್ರೆಗೆ ಮತ್ತು ಅನುಭವಕ್ಕೆ ಸಂಬಂಧವಿದೆ. ಚರಿತ್ರೆ ಸಂಕೀರ್ಣವಾಗಿದೆ ಎನ್ನುವುದನ್ನು ಮಾಕ್ರ್ಸ್‍ವಾದವು ಅಲ್ಲಗಳೆಯುವುದೂ ಇಲ್ಲ. ಯಾವುದು ಸದÀ್ಯದ ವಾಸ್ತವ ಎಂದು ಕರೆಯುತ್ತೇವೆಯೋ ಅದನ್ನು ನಿರ್ಧರಿಸಿದ್ದೂ ಚರಿತ್ರೆಯೇ. ಮನುಷ್ಯ ಮತ್ತು ಅವನ ಅಧಿಕಾರವೇ ಚರಿತ್ರೆಯನ್ನು ನಿರ್ಧರಿಸುತ್ತದೆ. ಅದು ಚಾರಿತ್ರಿಕ ಆಗುವಿಕೆಗೆ ಸಂಬಂಧಪಟ್ಟದ್ದು. ಚರಿತ್ರೆಯಲ್ಲಿ ಹಲವರನ್ನು ದಮನ ಮಾಡಲು ಕೆಲವರು ಪ್ರಯತ್ನಿಸುತ್ತಾರೆ ಎನ್ನುವುದೂ ನಿಜ. ಹೇಗೆ ಬೇರೆ ಸಂಗತಿಗಳು ನಮ್ಮನ್ನು ನಿಯಂತ್ರಿಸುತ್ತವೆ ಎನ್ನುವುದು ಬಹಳ ಮುಖ್ಯ. ಇದನ್ನೇ ಮಾಕ್ರ್ಸ್‍ವಾದವು ಸಾಮಾಜಿಕ ಮತ್ತು ಸಾಂಸ್ಕøತಿಕ ಲಕ್ಷಣವೆಂದು ಹೇಳುತ್ತದೆ. ಸಂಸ್ಕøತಿಯೆಂದರೆ ಅದು ಅವನ ಸುಖದ ವಿವರಣೆಯಲ್ಲ. ಯಾಕೆ ಅನೇಕರು ಬಡವರಾಗಿದ್ದಾರೆ ಎನ್ನುವುದನ್ನು ಕೇಳದೆ ಸಂಸ್ಕøತಿಯ ಪ್ರಶ್ನೆಯು ಪೂರ್ಣವಾಗುವುದಿಲ್ಲ. ನಮ್ಮ ಸಮಸ್ಯೆಯನ್ನು ಕೇಳದೆ ಸಮಾಜವನ್ನು ಸುಂದರವಾಗಿದೆ ಎಂದು ಹೇಳುವುದು ತಪ್ಪಾದೀತು.
ಬಂಡವಾಳವಾದಿ ಅರ್ಥಶಾಸ್ತ್ರವು ಹೇಳಿದ ಕ್ರಮಗಳು ಭಿನ್ನ. ಅದು ಬರಿಯ ಉತ್ಪಾದನೆಯನ್ನು ಮಾತ್ರವೇ ಗಮನಿಸಿಕೊಂಡಿಲ್ಲ. ಅದರ ಪ್ರಕಾರ ಉತ್ಪಾದನೆಯೇ ಮುಖ್ಯವಲ್ಲ. ಹಣದ ಚಲಾವಣೆಯೂ ಅಷ್ಟೇ ಮುಖ್ಯ. ಯಾವುದೋ ಸನ್ನಿವೇಶವು ನಮಗೆ ಬಹಳ ಮಹತ್ವದ್ದು ಎಂದು ಕಾಣಿಸಲೂಬಹುದು. ಬಂಡವಾಳವಾದವು ಎತ್ತಿಕೊಳ್ಳುವ ಪ್ರಶ್ನೆಯು ಭಿನ್ನವಾಗಿದೆ. ಅದು ಹೇಳುವ ಸಂಗತಿಗಳು ಬೇರೆ. ಅದು ಪ್ರತಿಪಾದಿಸುವ ಸಂಗತಿಗಳು; ಮೌಲ್ಯದ ಪ್ರಶ್ನೆಗಳು ಸಾಂಸ್ಕøತಿಕವಾಗಿ ಬೇರೆಯಾಗುವುದು ಯಾಕೆಂದರೆ ಅದರಲ್ಲಿ ಇರುವುದು ಲಾಭ ಮತ್ತು ನಷ್ಟದ ವಿಷಯಗಳು ಮಾತ್ರ. ರೈತರ ಉದ್ದೇಶ ಮತ್ತು ಕಾರ್ಮಿಕರ ಉದ್ದೇಶ ಬೇರೆಯಾಗಿರುತ್ತದೆ.
ಬೇಡಿಕೆಯ ವಿಷಯ ಬಂದಾಗ ಮತ್ತೆ ಕೆಲವು ವಿಷಯಗಳನ್ನು ನಾವು ಪ್ರಸ್ತಾವಿಸಬೇಕು. ವಾಸ್ತವವಾಗಿ ಹಳ್ಳಿಯ ಜೀವನ ಮತ್ತು ನಗರ ಜೀವನಕ್ಕೆ ವ್ಯತ್ಯಾಸವಿದೆ. ಹಳ್ಳಿಯಲ್ಲಿ ಪರಿವರ್ತನೆಯು ತುಂಬಾ ನಿಧಾನವಾಗಿರುತ್ತದೆ. ಹಳ್ಳಿಯ ಜೀವನ ಕ್ರಮವು ವಿಶಿಷ್ಟವೂ ಹೌದು. ನಗರದಲ್ಲಿ ಜೀವನವು ಒಂದು ದೃಷ್ಟಿಯಿಂದ ಬೇರು ಕಳೆದುಕೊಂಡ ಸ್ಥಿತಿಯಲ್ಲಿ ಇರುತ್ತದೆ. ಜೀವನವು ತುಂಬಾ ವೇಗದಲ್ಲಿ ಇರುತ್ತದೆ. ಜೀವನ ಕ್ರಮದಲ್ಲಿ ಉಂಟಾಗುವ ಬದಲಾವಣೆಯನ್ನು ನಗರದ ಜನರು ವೇಗವಾಗಿಯೂ ಸ್ವೀಕರಿಸಬಲ್ಲರು. ಬೇರೆ ಸನ್ನಿವೇಶಕ್ಕೆ ಅನುಸಾರವಾಗಿ ಜನರು ನಗರದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಾಧಿಸಬಲ್ಲರು. ತಾಂತ್ರಿಕತೆಗೂ ಮನುಷ್ಯನ ವ್ಯಕ್ತಿತ್ವಕ್ಕೂ ಒಂದು ರೀತಿಯಿಂದ ಸಂಬಂಧವಿದೆ ಎಂದು ಮಾಕ್ರ್ಸ್‍ವಾದಿಗಳು ಹೇಳುತ್ತಾರೆ. ಕಡಿಮೆ ಉತ್ಪಾದನೆಗೂ ಮನುಷ್ಯರ ಕಡಿಮೆ ಬೇಡಿಕೆಗೂ ಸಂಬಂಧವಂತೂ ಇದ್ದೇ ಇರುತ್ತದೆ. ಉತ್ಪಾದನೆಯ ಹೆಚ್ಚಳವು ವ್ಯಕ್ತಿಯನ್ನು ಹೆಚ್ಚು ಆಸೆಕೋರರನ್ನಾಗಿಯೂ ಮಾಡುತ್ತದೆ. ಅದುವೇ ಮನುಷ್ಯರನ್ನು ಹೆಚ್ಚು ಹೆಚ್ಚು ಸಂಪತ್ತನ್ನು ಕ್ರೋಢಿಕರಿಸಲು ಪ್ರೇರೇಪಣೆ ಮಾಡುತ್ತದೆ. ಒಂದು ದೃಷ್ಟಿಯಿಂದ ಸಂಪತ್ತು ಮತ್ತು ಅದರ ಕೇಂದ್ರೀಕರಣವು ಮನುಷ್ಯನನ್ನು ಹೆಚ್ಚು ಲೋಭಿಯಂತೆಯೂ ಮಾಡುತ್ತದೆ. ಕ್ಲಾಸಿಕಲ್ ಪರಂಪರೆಯಲ್ಲಿ ಸಂಪತ್ತು ಎಂದರೆ ಎಕಾನಮಿ ಎನ್ನುವ ಅರ್ಥವು ಬಂದುದನ್ನು ಫುಕೋ ವಿವರಿಸುತ್ತಾನೆ. ಮಾರುಕಟ್ಟೆ ಮತ್ತು ಮೌಲ್ಯ, ಹಣ ಮತ್ತು ಅದರ ವಿನಿಮಯ, ಹಣ ಮತ್ತು ಸಂಪತ್ತು ಎನ್ನುವುದಕ್ಕೆ ಕೆಲವು ಅನುಮಾನಗಳು ಇದ್ದವು. ಹದಿನೆಂಟನೆಯ ಶತಮಾನದಲ್ಲಿ ಧನಾತ್ಮಕವಾದ ಅರ್ಥಶಾಸ್ತ್ರವು ಚಾಲ್ತಿಗೆ ಬಂತು. ಆಗ ಹಣವೆಂದರೆ ಅದರ ಸಂವಾದಿಯಾದ ಪದವಲ್ಲ. ಅದಕ್ಕೆ ಒಂದು ಗುಣವೂ ಬಂದಿತು. ಮಾರುಕಟ್ಟೆ ಮತ್ತು ಮೌಲ್ಯಗಳ ತಾರತಮ್ಯಗಳು ಭಿನ್ನವಾದವು. ಹಣ, ವಿನಿಮಯ, ಹಣದ ವಿಶ್ಲೇಷಣೆ, ಕೆಲಸದ ವರ್ಗೀಕರಣಗಳು ಮೂಲಭೂತವಾದ ಜ್ಞಾನವನ್ನು ಬದಲಿಸಿತು. ಹಣ ಮತ್ತು ಅದರ ಕೆಲಸವೆಂದರೆ ಒಂದು ಸಾಮಾನ್ಯವಾದ ಅಳತೆಯನ್ನು ರೂಪಿಸುವುದು ಮತ್ತು ವಿನಿಮಯದ ಮೌಲ್ಯವನ್ನು ಗಣಿಸುವುದು. ಇದನ್ನು ಮಾಕ್ರ್ಸ್ ಹೇಳಿದ ಮನಿ ಮತ್ತು ಕ್ಯಾಪಿಟಲ್ ಚರ್ಚೆಯಲ್ಲಿ ನೋಡಬಹುದು.
ಆಧುನಿಕ ಬಂಡವಾಳವಾದಲ್ಲಿ ಅನೇಕ ವೈರುದ್ಧ್ಯಗಳವೆ. ಆಧುನಿಕ ಬಂಡವಾಳವಾದವು ಹೇಳುವ ಸಂಗತಿಗಳು ಐಷಾರಾಮಿ ಜಗತ್ತಿಗೆ ಹೆಚ್ಚು ಅನ್ವಯವಾಗುತ್ತವೆ. ಮಾರುಕಟ್ಟೆ ಮತ್ತು ಅದರ ಯಜಮಾನಿಕೆಯು ನಮಗೆ ಬೇರೆ ಪಾಠವನ್ನು ಹೇಳುತ್ತದೆ. ತಾತ್ವಿಕತೆ ಮತ್ತು ವಾಸ್ತವದ ಸಂಬಂಧವಿಲ್ಲಿ ಹೆಚ್ಚು ಸಂಕೀರ್ಣವಾಗಿದೆ. ಆಧುನಿಕ ಮಾರುಕಟ್ಟೆಯು ನಮಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಹೇಳುವುದಿಲ್ಲ. ಅದರ ಬದಲು ಅದು ನಮಗೆ ಅಸಮತೆಯನ್ನು ಹೇಳುತ್ತದೆ. ವಿನಿಮಯ ಮತ್ತು ಅದರ ಮೌಲ್ಯದಲ್ಲಿಯೂ ಇದುವೇ ಹೆಚ್ಚು ಮುಖ್ಯವಾಗಿದೆ. ಶ್ರಮಿಕರು ಮತ್ತು ಅವರ ಶ್ರಮವನ್ನು ಆಧುನಿಕ ವ್ಯವಸ್ಥೆಯು ಬೇರೆ ರೀತಿ ನೋಡುತ್ತದೆ. ಬಂಡವಾಳವಾದಿ ಆಧುನಿಕತೆಯು ತನ್ನದೇ ಆದ ಮಾನದಂಡವನ್ನು ಇಟ್ಟುಕೊಂಡಿತ್ತು. ಯಾವುದನ್ನು ನಾವು ಬಯಸುತ್ತೇವೆ ಮತ್ತು ಅದರ ಸ್ವರೂಪವು ಏನು ಎನ್ನುವುದು ಒಂದು ಕಡೆಗೆ ಇದ್ದರೆ ಅದನ್ನು ಕೊಂಡುಕೊಳ್ಳುವ ಶಕ್ತಿಯು ನಮಗೆ ಇರುವುದಿಲ್ಲ. ಆದ್ದರಿಂದ ನಮ್ಮ ಬಯಕೆಯು ಒಂದು ಅರ್ಥದಲ್ಲಿ ಸಾಯುತ್ತದೆ. ಸಮಾಜವೇ ಬೇರೆ ಅದರ ವಾಸ್ತವವೇ ಬೇರೆ, ಆದರೆ ಮಾರುಕಟ್ಟೆಯೇ ಬೇರೆ ಅದರ ಅರ್ಥವೇ ಬೇರೆ ಎನ್ನುವ ಸ್ಥಿತಿ ಉದ್ಭವಿಸಿದೆ. ಆಧುನಿಕ ಸಮಾಜ ಮತ್ತು ಅದರ ರಚನೆಯು ಒಂದು ಬಗೆಯಲ್ಲಿದ್ದರೆ, ಅಭಿವೃದ್ಧಿ ಮತ್ತು ಅದರ ರಚನೆಯು ಮತ್ತೊಂದು ರೀತಿಯಲ್ಲಿದೆ. ಆಧುನಿಕ ಮಾರುಕಟ್ಟ್ಟೆಗೆ ಮತ್ತು ಸಮಾಜವಾದಕ್ಕೆ ಜಗಳ ಇರುವುದು ಸತ್ಯ. ಆಧುನಿಕ ಮಾರುಕಟ್ಟೆಯು ನಮಗೆ ಯಾವುದನ್ನು ಹೇಳುತ್ತದೆ ಎನ್ನುವುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವಿದೆ. ಇವತ್ತಿನ ಮಾರುಕಟ್ಟೆಗೆ ಒಂದು ತರ್ಕ ಎನ್ನವುದು ಇಲ್ಲ. ಮಾರುಕಟ್ಟೆಯು ಎಲ್ಲವನ್ನೂ ವ್ಯಾಪಿಸಿಕೊಂಡಿದೆ. ಒಂದು ಅರ್ಥದಲ್ಲಿ ಇದು ಸಮಾಜ ಮತ್ತು ಮನೋಸ್ಥಿತಿಯ ನಿಯಂತ್ರಣವನ್ನು ಹೇಳುತ್ತದೆ. ರಾಜಕಾರಣವೆಂದರೆ ಇವತ್ತು ಮಾರುಕಟ್ಟೆಯನ್ನು ಪೋಷಿಸುವ ವ್ಯವಸ್ಥೆಯೂ ಆಗಿದೆ. ನಮಗೆ ಆಯ್ಕೆ ಮತ್ತು ಅದರ ಸ್ವಾತಂತ್ರ್ಯ ಇದೆ. ನಾವು ಕಾರನ್ನು ತೆಗೆದುಕೊಳ್ಳಬಲ್ಲೆವು. ಬೇಕಾದ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುವುದು ನಮಗೆ ಸಾಧ್ಯ. ಮುಕ್ತವಾದ ಮಾರುಕಟ್ಟೆ ಎನ್ನುವುದು ಉದಾರಿಯ ಹಾಗೆ ನಮಗೆ ಭಾಸವಾಗುತ್ತದೆ. ಆಧುನಿಕ ಯುಗದ ಮಾರುಕಟ್ಟೆಯು ಕೆಲವು ಘೋಷಣೆಗಳನ್ನು ಮಾಡುತ್ತದೆ. ಸಾರ್ವಜನಿಕರಿಗೆ ಆಯ್ಕೆ ಸ್ವಾತಂತ್ರ್ಯವೂ ಇರುತ್ತದೆ. ಇದರ ಜೊತೆಗೆ ಮಾಧ್ಯಮ ಮತ್ತು ಗ್ರಾಹಕ ಕೇಂದ್ರಿತವಾದ ಚಿಂತನೆಗಳು ಜೊತೆಗೆ ಸೇರಿಕೊಂಡಿವೆ. ಇದು ಮಾರುಕಟ್ಟೆಯ ತಾತ್ವಿಕತೆಯನ್ನು ಹೇಳುತ್ತದೆ. ಗಿರಾಕಿಗಳನ್ನು ಮಾರುಕಟ್ಟೆಗೆ ಆಹ್ವಾನಿಸುವುದು ಒಂದು ತಂತ್ರವೂ ಹೌದು. ಮಾರುಕಟ್ಟೆ ಮತ್ತು ಮನುಷ್ಯನ ಗುಣವನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ವ್ಯಕ್ತಿಯನ್ನು ಮಾರುಕಟ್ಟೆಯ ದಾಸನನ್ನಾಗಿಸಿದರೆ ಮತ್ತೆ ಅದರಿಂದ ಅವನು ಹೊರಗೆ ಬರುವುದು ಕಡುಕಷ್ಟ. ಮನೆಗಾಗಿ ನಾವು ಮಾಡುವ ಖರ್ಚು ದೊಡ್ಡದು. ಮನೆಗಾಗಿ ನಾವು ಮಾಡುವ ಖರ್ಚು ನಮ್ಮ ಆದಾಯವನ್ನು ಅನೇಕ ಸಲ ಮೀರಿಸುತ್ತದೆ. ವಿವಿಧ ರೀತಿಯ ಸಾಮಗ್ರಿಗಳನ್ನು ನಾವು ಅನಗತ್ಯವಾಗಿ ಕೊಂಡುಕೊಳ್ಳುವುದೂ ಹೆಚ್ಚು. ಇದರ ನಡುವೆ ನಮಗೆ ಆರೋಗ್ಯದ ಖರ್ಚು ಮತ್ತು ಅದರ ವೆಚ್ಚಗಳೂ ಹೆಚ್ಚು. ಮನೆ ಮತ್ತು ಅದರ ಖರ್ಚು ಒಂದು ರೀತಿಯಲ್ಲಿದ್ದರೆ, ನಾವು ಮಾಡುವ ವೆಚ್ಚವು ಮತ್ತೊಂದು ರೀತಿಯಲ್ಲಿರುತ್ತದೆ. ಇದರ ನಡುವೆ ನಾವು ಉಳಿತಾಯ ಮತ್ತು ಕೆಲಸದ ವಿಚಾರಗಳನ್ನು ಮಾತಾಡುತ್ತೇವೆ. ಮನೆಯಲ್ಲಿ ದುಡಿಯುವವರು ಮತ್ತು ಅವರ ವೇತನವನ್ನು ಹಾಗೂ ಖರ್ಚುಗಳನ್ನು ಸಮತೂಗಿಸಲು ಶ್ರಮಿಸಬೇಕಾಗುತ್ತದೆ. ಇವುಗಳು ನಮ್ಮ ಪ್ರಜ್ಞೆಯನ್ನು ನಿಯಂತ್ರಿಸುತ್ತವೆ. ಈಗ ಆಯ್ಕೆ ಮತ್ತು ಅದರ ಅರ್ಥಗಳು ಬದಲಾಗಿವೆ. ವಸ್ತು ಮತ್ತು ಅದು ಕೊಡುವ ಸುಖವನ್ನು ನಾವು ಯೋಚಿಸಬೇಕಾಗುತ್ತದೆ. ಆದ್ದರಿಂದ ಮಾರುಕಟ್ಟೆ ಮತ್ತು ಅದರ ಸ್ವರೂಪವು ನಮ್ಮ ಸಹಜವಾದ ಗುಣವೇ ಅಥವಾ ಅದು ಒಂದು ಒತ್ತಾಸೆಯನ್ನು ನೀಡುತ್ತದೆ ಎಂದು ನೋಡಬೇಕೆ ಎನ್ನುವುದು ಅತ್ಯಂತ ಮುಖ್ಯವಾದ ಪ್ರಶ್ನೆ. ಇದು ವಾಸ್ತವವಾಗಿ ಅಸಹಜ ಬೆಳವಣಿಗೆ.
ವಾಣಿಜ್ಯಶಾಸ್ತ್ರವು ಇವತ್ತು ಹೆಚ್ಚು ಮುಂಚೂಣಿಗೆ ಬರುತ್ತಿದೆ. ಇದರ ಭಾಗವಾಗಿ ಮಾರುಕಟ್ಟೆಯು ತನ್ನನ್ನು ತಾನು ಸಮರ್ಥಿಸುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತದೆ. ವ್ಯಕ್ತಿ ಮತ್ತು ಅವನ ಹಣದ ವಿನಿಮಯವು ಒಂದು ರೀತಿಯಲ್ಲಿರುತ್ತದೆ. ಇದರಿಂದ ವ್ಯಕ್ತಿಯು ತನ್ನ ಪ್ರಜ್ಞೆಯನ್ನು ಬೇರೆ ಥರ ರೂಪಿಸಿಕೊಳ್ಳುವ ಸ್ಥಿತಿಯು ಬರುತ್ತದೆ.
ವ್ಯಕ್ತಿಗಳು ಮತ್ತು ತಳಮಟ್ಟದ ಸಂಬಂಧಗಳ ಕುರಿತು ಮಾತಾಡಿದವನು ಗ್ರಾಮ್ಷಿ. ಅವನು ಕೂಲಿಯವರು, ವೈದ್ಯರು, ಕುಶಲಕರ್ಮಿಗಳು, ಪತ್ರಿಕೋದ್ಯಮಿಗಳು, ವರದಿಗಾರರು, ಸಿನಿಮಾ ನಿರ್ದೇಶಕರು ಜೊತೆಗೆ ಸೇರಬೇಕಾದ ಅಗತ್ಯವನ್ನು ಹೇಳಿದ್ದ. ಇವರನ್ನು ಅವನು ಆಗ್ರ್ಯಾನಿಕ್ ಇಂಟಲೆಕ್ಚುವಲ್ಸ್ ಎಂದು ಹೇಳಿದ್ದು. ಒಂದು ಸಮಾಜದಲ್ಲಿ ಬುದ್ಧಿಜೀವಿಗಳು ವಹಿಸಬೇಕಾದ ಪಾತ್ರವನ್ನು ಅವನು ಕಂಡುಕೊಂಡಿದ್ದ. ಅದರ ಅಗತ್ಯವು ನಮಗೆ ಇದೆ. ವಿಶ್ವಾತ್ಮಕತೆಯ ತಾರ್ಕಿಕತೆಯನ್ನು ವಿವರಿಸುವ ಅಗತ್ಯವನ್ನು ನಾವು ಮರೆಯ ಬೇಕಾಗಿಯೂ ಇಲ್ಲ. ಅದು ಸಮಾಜಕ್ಕೆ ಅತ್ಯಂತ ಅಗತ್ಯ ವೆನ್ನುವುದನ್ನು ಲೆನಿನ್ ಕೂಡಾ ಪ್ರತಿಪಾದಿಸಿದ್ದ. ಈಗಂತೂ ಬಂಡವಾಳ ವಾದವು ಅತ್ಯಂತ ನಿರ್ಣಾಯಕ ವಾದ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದೆ. ಅದು ಸಮಾಜವನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತಿರುವುದರಿಂದ ಅದನ್ನು ಸಾಮಾಜಿಕವಾಗಿಯೇ ಎದುರಿಸಬೇಕಾಗುತ್ತದೆ. ಅದು ರಾಜಕೀಯ ಅಗತ್ಯವೂ ಹೌದು. ಜಾಗತಿಕÀ ವಿದ್ಯಮಾನಗಳನ್ನು ನೋಡಿದರೆ ನಮಗೆ ಈಗ ಯಾವುದು ಹೆಚ್ಚು ಅಗತ್ಯವೆನ್ನುವುದೂ ತಿಳಿಯುತ್ತದೆ. ಅನೇಕ ಸಂಸ್ಕತಿಗಳು ಮತ್ತು ಅವುಗಳ ಸಂಬಂಧದ ಅರಿವು ನಮಗೆ ಬೇಕು. ಜಾಗತೀಕರಣ ಮತ್ತು ಅದರ ಸ್ವರೂಪವನ್ನು ವಿರೋಧಿಸಲು ನಾವು ನಿಲುವನ್ನು ತಳೆಯಬೇಕಾಗುತ್ತದೆ. ಅದನ್ನೇ ಗ್ರಾಮ್ಷಿಯು ಯುದ್ಧದ ಕುರಿತಾದ ನಮ್ಮ ನಿಲುವು ಎಂದು ಹೇಳುತ್ತಾನೆ. ಯುದ್ಧ ಎಂದರೆ ಅದು ಅಣ್ವಸ್ತ್ರವೇ ಆಗಬೇಕಾಗಿಲ್ಲ. ಅದು ಬೇರೆ ಮಾದರಿಯಲ್ಲಿಯೂ ಇರಲು ಸಾಧ್ಯ. ಅದಕ್ಕೆ ಬೇಕಾದ ತಂತ್ರಗಳನ್ನು ನಾವು ಹೂಡಬೇಕಾಗುತ್ತದೆ. ಆಧುನಿಕ ಪ್ರಜಾಪ್ರಭುತ್ವವು ಕೂಡಾ ಈ ದೃಷ್ಟಿಯಿಂದ ಮುಖ್ಯವಾಗಿದೆ. ಅದರ ಮೂಲಕವೇ ನಾವು ನಮ್ಮ ಪರಿಭಾಷೆಗಳನ್ನು ಮತ್ತು ಹೋರಾಟಗಳನ್ನು ರೂಪಿಸಲೂಬಹುದು. ಈಗ ವರ್ಗ ಮತ್ತ ಅದರ ಸ್ವರೂಪವೂ ಬದಲಾಗಿದೆ. ಅದರ ಸಂಬಂಧಗಳೂ ಬೇರೆಯಾಗಿವೆ. ಕಾರ್ಮಿಕ ವರ್ಗ ಎನ್ನುವುದಕ್ಕೂ ಭಿನ್ನತೆಯು ಇದೆ. ಕಾರ್ಮಿಕರು, ರೈತರು, ಬಡವರು, ಕೂಲಿಗಾಗಿ ಬೇರೆ ಬೇರೆ ಕೆಲಸವನ್ನು ಮಾಡುವವರು ವಿಶ್ವಾತ್ಮಕವಾದ ಅರ್ಥವನ್ನು ಪಡೆದುಕೊಂಡಿದ್ದಾರೆ. ಜಾಗತೀಕರಣದ ಸಂದರ್ಭದಲ್ಲಿ ಹೇಗೆ ಬಂಡವಾಳವಾದ ಮತ್ತು ಅದರ ಚಹರೆಗಳು ಭಿನ್ನವಾಗಿವೆಯೋ ಅದೇ ರೀತಿಯಲ್ಲಿ ಕಾರ್ಮಿಕರು ಮತ್ತು ಅವರ ನಿರ್ವಚನಗಳೂ ಬದಲಾಗಿವೆ. ನಿರುದ್ಯೋಗವನ್ನು ಸೃಷ್ಟಿಸಿದವರಾರು? ಅದನ್ನೇ ಯಾರು ಬಂಡವಾಳ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿಯೂ ಉಳಿದಿಲ್ಲ. ಸಮಾನತೆ ಮತ್ತು ಅದರ ತರ್ಕಗಳು ಹಾಗೂ ವ್ಯತ್ಯಾಸದ ತರ್ಕಗಳು ನಮಗೆ ಗೊತ್ತಿದ್ದರೆ ಈ ಸಮಸ್ಯೆಯು ಬರುವುದೂ ಇಲ್ಲ. ಜಗತ್ತು ಮತ್ತು ಅದರ ಅಧಿಕಾರ ಕೇಂದ್ರಗಳ ಅರಿವು ನಮಗೆ ಅತ್ಯಂತ ಮುಖ್ಯವಾಗುತ್ತದೆ. ನಮಗೆ ಸೂಚಿಸುತ್ತಿರುವವರು ಎಲ್ಲಿಯೋ ಇದ್ದಾರೆ. ಸಮಾಜದಲ್ಲಿ ಅನೇಕ ಅವಕಾಶಗಳು ಮತ್ತು ಸಂಕೇತಗಳು ಇವೆ. ಅದರ ಉಪಯೋಗವನ್ನು ಯಾರೂ ಪಡೆಯಬಹುದು. ಉದಾಹರಣೆಗೆ ನಾವು ಹೇಳುವ ನಮ್ಮ ಅಸ್ತಿತ್ವ ಮತ್ತು ಅದರ ಅನನ್ಯತೆಯ ಪ್ರಶ್ನೆಗಳು. ನನ್ನ ಅಸ್ತಿತ್ವ, ನಮ್ಮ ಸಮಾಜ ವಿಶ್ವದ ಭಾಗವೆಂದು ಭಾವಿಸುವುದು ಒಂದು ಕ್ರಮ. ಇಡೀ ವಿಶ್ವವೇ ನಮಗಾಗಿ ಇದೆ ಎಂದು ತಿಳಿಯುವುದು ಮತ್ತೊಂದು ಕ್ರಮ. ಈ ಸಮಾಜದ ಅವಕಾಶಗಳನ್ನು ಹೀಗಾಗಿ ನಾವು ಹೇಗೆ ಬೇಕಾದರೂ ಬಳಸುತ್ತಿದ್ದೇವೆ. ನಾಜಿಗಳು, ಫ್ಯಾಸಿಸ್ಟರು ಇದನ್ನು ಬಳಸಿಕೊಂಡ ಕ್ರಮವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕೋಮುವಾದವು ಒಂದು ಖಾಲಿಯಾದ ಅವಕಾಶವನ್ನು ಬಹಳ ಚೆನ್ನಾಗಿಯೇ ಬಳಸಿಕೊಂಡಿದೆ. ಅದು ಎಲ್ಲಿಯೂ ಬಡತನವನ್ನು ಕುರಿತು ಮಾತಾಡಿದ ಉದಾಹರಣೆಗಳಿಲ್ಲ. ಧರ್ಮಕ್ಕಾಗಿ ಪ್ರಾಣವನ್ನು ಕೊಡು ಎಂದು ಮಾತ್ರ ಹೇಳುತ್ತದೆ. ನನಗೆ ಹೆಗೆಲ್ ಹೇಳುವ ಆದರ್ಶಕ್ಕಿಂತ ನಿಜವಾದ ಜಗತ್ತು ಮತ್ತು ಅದರ ವಾಸ್ತವಗಳು ಮುಖ್ಯ. ಭೌತಿಕ ಪ್ರಪಂಚವು ಮನುಷ್ಯನ ಆಲೋಚನೆಯನ್ನು ರೂಪಿಸುತ್ತದೆ ಎಂದು ನಂಬುತ್ತೇನೆ ಎಂದು ಮಾಕ್ರ್ಸ್ ಹೇಳುತ್ತಾನೆ.

– ಪ್ರೊ. ಕೇಶವ ಶರ್ಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...