Homeಮುಖಪುಟಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಮೇಲೆ ದಾಳಿ ಖಂಡಿಸಿ ಪತ್ರ ಬರೆದ 100 ಮಂದಿ...

ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಮೇಲೆ ದಾಳಿ ಖಂಡಿಸಿ ಪತ್ರ ಬರೆದ 100 ಮಂದಿ ಚಿಂತಕರು

- Advertisement -
- Advertisement -

ಅಸ್ಸಾಂನಲ್ಲಿ ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ ಯಾತ್ರೆಯ ವೇಳೆ ಅಸ್ಸಾಂನ ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಜಟಾಪಟಿ ನಡೆದಿತ್ತು. ರಾಹುಲ್‌ ಗಾಂಧಿಯವರ ಮೇಲೆ ದಾಳಿಗೆ ಯತ್ನಿಸಲಾಗಿದೆ ಎಂಬ ಆರೋಪವು ಕೇಳಿ ಬಂದಿತ್ತು. ಇದೀಗ ಅಸ್ಸಾಂ ಸರಕಾರದ ನಡೆಯನ್ನು ಖಂಡಿಸಿ ರಾಜ್ಯದ 100 ಮಂದಿ ಹೆಸರಾಂತ ಬುದ್ದಿಜೀವಿಗಳು, ಚಿಂತಕರು ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ಮೇಲಿನ ದಾಳಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಡವಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.

ನ್ಯಾಯ್ ಯಾತ್ರೆಯು ಅಸ್ಸಾಂನಲ್ಲಿ ತನ್ನ ಎಂಟು ದಿನಗಳ ಯಾತ್ರೆಯನ್ನು ಪೂರ್ಣಗೊಳಿಸಿ ಬಂಗಾಳವನ್ನು ಪ್ರವೇಶಿಸಿತ್ತು. ಅಸ್ಸಾಂನಲ್ಲಿ ಯಾತ್ರೆಯ ವೇಳೆ ಪದೇ ಪದೇ ಅಡೆತಡೆಗಳನ್ನು ಎದುರಿಸಿತ್ತು. ನ್ಯಾಯ ಯಾತ್ರೆಯ ವಾಹನವನ್ನು ಸುತ್ತುವರಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ದಾಳಿಯನ್ನು ಕೂಡ ನಡೆಸಿದ್ದರು. ಅಸ್ಸಾಂನ 15ನೇ ಶತಮಾನದ ಸಂತ ಶ‍್ರೀಮಂತ ಶಂಕರದೇವರ ಜನ್ಮಸ್ಥಳವಾದ ಬತದ್ರವ ಸತ್ರ ದೇವಾಲಯಕ್ಕೆ ಭೇಟಿ ನೀಡದಂತೆ ರಾಹುಲ್‌ ಗಾಂಧಿಯನ್ನು ತಡೆಯಲಾಗಿತ್ತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸದಂತೆ ರಾಹುಲ್‌ ಗಾಂಧಿಗೆ ತಡೆಯಲಾಗಿತ್ತು.

ಅಸ್ಸಾಂ ಕಾಂಗ್ರೆಸ್‌ ಘಟಕದ ರಾಜ್ಯಾಧ್ಯಕ್ಷ ಭೂಪೇನ್ ಬೋರಾಹ್ ಸೇರಿದಂತೆ ಕಾಂಗ್ರೆಸ್ ನಾಯಕರ ಜೊತೆ ಅಸ್ಸಾಂ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ಬಿಜೆಪಿಗರು ಹಲ್ಲೆ ನಡೆಸಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಆರೋಪಿಸಿದ್ದರು. ಇದಲ್ಲದೆ ರಾಹುಲ್‌ ಗಾಂಧಿ, ಕೆಸಿ ವೇಣುಗೋಪಾಲ್‌ ಸೇರಿದಂತೆ ಕಾಂಗ್ರೆಸ್‌ ನಾಯಕರ  ವಿರುದ್ಧ ಹಿಂಸಾಚಾರ, ಪೊಲೀಸರ ಕರ್ತವ್ಯಕ್ಕೆ ಟಡ್ಡಿ ಸೇರಿ ವಿವಿಧ ಸೆಕ್ಸನ್‌ಗಳಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಪತ್ರದಲ್ಲೇನಿದೆ?

ಪ್ರಕ್ಷುಬ್ಧ ಮಣಿಪುರದಿಂದ ಶಾಂತಿಯುತವಾಗಿ ಯಾತ್ರೆ ಆರಂಭವಾಯಿತು. ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಮೂಲಕ ಶಾಂತಿಯುತವಾಗಿ ಯಾತ್ರೆ ಸಾಗಿದೆ. ಆದರೆ ಅಸ್ಸಾಂನಲ್ಲಿ ಮಾತ್ರ ಯಾತ್ರೆಯ ಮೇಲೆ ಪದೇ ಪದೇ ದಾಳಿ ನಡೆಸಲಾಗಿದೆ. ಭಾರತ್ ಜೋಡೋ ನ್ಯಾಯ ಯಾತ್ರೆ ಮೇಲಿನ ದಾಳಿ ಮತ್ತು ಅಸ್ಸಾಂ ಮುಖ್ಯಮಂತ್ರಿ ವರ್ತನೆಯನ್ನು ನಾವು ಖಂಡಿಸುತ್ತೇವೆ. ಕೆಲವರು ಯಾತ್ರೆಯನ್ನು ಬೆಂಬಲಿಸಬಹುದು ಮತ್ತು ಕೆಲವರು ಬೆಂಬಲಿಸದಿರಬಹುದು. ಆದರೆ ಈ ಶಾಂತಿಯುತ ಯಾತ್ರೆಯನ್ನು ಯಾರೂ ತಡೆಯಲು ಪ್ರಯತ್ನಿಸಬಾರದು. ಯಾತ್ರೆಯು ಅಸ್ಸಾಂಗೆ ಪ್ರವೇಶಿಸಿದಾಗ ಅಸ್ಸಾಂ ಸರ್ಕಾರ ಅದಕ್ಕೆ ಅಡೆತಡೆಗಳನ್ನು ಸೃಷ್ಟಿಸಲು ಎಲ್ಲವನ್ನೂ ಪ್ರಯತ್ನಿಸಿತು. ಕೆಲವೆಡೆ ಕಿಡಿಗೇಡಿಗಳ ದಾಳಿಯೂ ನಡೆದಿದೆ. ಯಾತ್ರೆಯ ಜೊತೆಗಿದ್ದ ಪತ್ರಕರ್ತರ ವಾಹನಗಳನ್ನು ಧ್ವಂಸಗೊಳಿಸಿ ಅವರ ಕ್ಯಾಮರಾಗಳನ್ನು ಕಸಿದುಕೊಂಡಿದ್ದಾರೆ. ಸೋನಿತ್‌ಪುರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಮೇಲೆ ದೈಹಿಕ ಹಲ್ಲೆ ನಡೆದಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕ್ಷುಬ್ಧ ಮಣಿಪುರದಿಂದ ಯಾತ್ರೆ ಶಾಂತಿಯುತವಾಗಿ ಆರಂಭವಾಯಿತು. ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಮೂಲಕ ಯಾವುದೇ ಅಡ್ಡಿಯಿಲ್ಲದೆ ಶಾಂತಿಯುತವಾಗಿ ಸಾಗಿತು. ಆದರೆ ಅಸ್ಸಾಂನಲ್ಲಿ ಮಾತ್ರ ಯಾತ್ರೆ ಮೇಲೆ ಪದೇ ಪದೇ ದಾಳಿ ನಡೆದಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ ಮತ್ತು ಅದರಲ್ಲಿ ತೊಡಗಿರುವವರನ್ನು ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಾವು ರಾಹುಲ್ ಗಾಂಧಿ ಮತ್ತು ಯಾತ್ರೆಯಲ್ಲಿ ಭಾಗವಹಿಸುವ ಎಲ್ಲರಿಗೂ ಶಾಂತವಾಗಿ ಯಾತ್ರೆಯಲ್ಲಿ ಸಾಗಲು ಮತ್ತು ಅಂತಹ ಪ್ರಚೋದನೆಗಳಿಗೆ ಎಂದಿಗೂ ಒಳಗಾಗದಂತೆ ಮನವಿ ಮಾಡುತ್ತೇವೆ. ಕೆಲವು ದಿನಗಳ ಹಿಂದೆ,  ಪ್ರಖ್ಯಾತ ವಿದ್ವಾಂಸ ಡಾ.ಹಿರೇನ್ ಗೊಹೈನ್ ಅವರ ವಿರುದ್ಧ ಅಸ್ಸಾಂನ ಮುಖ್ಯಮಂತ್ರಿ ಶರ್ಮಾ ಅವರು ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡುವ ಮೂಲಕ ಬುದ್ಧಿಜೀವಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಗೌಹಾಟಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಅಖಿಲ್ ರಂಜನ್ ದತ್ತಾ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಮುಖ್ಯಮಂತ್ರಿಗಳ ಭಾಷೆ ಮತ್ತು ನಡವಳಿಕೆ ಅತ್ಯಂತ ಆಘಾತಕಾರಿಯಾಗಿದೆ. ಒಬ್ಬ ವ್ಯಕ್ತಿಗೆ ವಾಕ್ ಸ್ವಾತಂತ್ರ್ಯ ಬಹುಮುಖ್ಯ. ಇದು ಪ್ರಜಾಪ್ರಭುತ್ವದ ಸಾರ್ವತ್ರಿಕ ಹಕ್ಕು ಮತ್ತು ಮೂಲಭೂತ ಹಕ್ಕು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರ ವರ್ತನೆಯಿಂದ ನಮಗೆ ಬೇಸರವಾಗಿದೆ ಮತ್ತು ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿಲಾಗಿದೆ.

ಪತ್ರದಲ್ಲಿ ಸಾಮಾಜಿಕ, ರಾಜಕೀಯ, ಸಾಹಿತ್ಯ ರಂಗದ ದಿಗ್ಗಜರು ಸಹಿಯನ್ನು ಹಾಕಿದ್ದಾರೆ. ಡಾ ನಾಗೇನ್ ಸೈಕಿಯಾ, ಶ್ರೀ ಕುಲದ ಕೃ ಭಟ್ಟಾಚಾರ್ಯ, ಶ್ರೀ ಹರೇಕೃಷ್ಣ ದೇಕಾ, ಶ್ರೀ ಹೈದರ್ ಹುಸೇನ್, ಶ್ರೀ ಅಪುರ್ಬಾ ಶರ್ಮಾ, ಶ್ರೀ ಕುಲೇಂದು ಪಾಠಕ್, ಡಾ ತಪೋಧೀರ್ ಭಟ್ಟಾಚಾರ್ಯ, ಡಾ ದಿನೇಶ್ ಚಿ. ಗೋಸ್ವಾಮಿ, ಶ್ರೀ ಅಜಿತ್ ಕುಮಾರ್ ಭೂಯಾನ್, ಡಾ ತೌಫಿಕ್ ರೆಹಮಾನ್ ಬೊರ್ಬೊರಾ,ಡಾ ಅಪುರ್ಬಾ ಕುಮಾರ್ ಬರುವಾ, ಡಾ ಮನೋರಮಾ ಶರ್ಮಾ, ಡಾ ದುಲಾಲ್ ಚ. ಗೋಸ್ವಾಮಿ, ಡಾ ಅನುರಾಧಾ ದತ್ತಾ, ಡಾ ಪರಮಾನಂದ ಮಹಾಂತ, ಡಾ ಅಬು ನಾಸರ್ ಸಯೀದ್ ಅಹ್ಮದ್, ಡಾ ಸಂಧ್ಯಾ ಗೋಸ್ವಾಮಿ, ಶ್ರೀ ಪ್ರಭಾತ್ ಬೋರಾ, ಶ್ರೀ ಲೋಕನಾಥ ಗೋಸ್ವಾಮಿ, ಶ್ರೀ ಉದಯಾದಿತ್ಯ ಭಾರಾಲಿ, ಶ್ರೀ ನಿತ್ಯಾ ಬೋರಾ,  ಶಾಂತಿಕಾಂ ಹಜಾರಿಕಾ, ಶ್ರೀ ಎಚ್.ಆರ್.ಎ. ಚೌಧರಿ, ಬಾದಲ್ ಚಕ್ರಬೋರಿ,  ಲಕ್ಷ್ಮೀನಾಥ ತಾಮುಳಿ, ಧೀರೇಂದ್ರ ನಾಥ್ ಸೈಕಿಯಾ, ಪ್ರದೀಪ ಆಚಾರ್ಯ, ಅಬ್ಸರ್ ಹಜಾರಿಕಾ, ಡಾ ಪದ್ಮಪಾಣಿ, ಪೂರ್ಣೇಶ್ವರನಾಥ, ಡಾ ಕಲ್ಯಾಣಿ ಬರುವಾ, ಉದ್ಧಬ್ ಕಾಕತಿ, ಡಾ ಜಿಬಾನ್ ಚಿ. ದತ್ತಬರುವಾ, ಅರುಪ್ ಬೊರ್ಬೊರಾ, ಕಮಲ್ ನಾರಾಯಣ ಚೌಧರಿ, ಅಜಿತ ಚಂದ್ರ ತಾಲೂಕದಾರ, ದೇಬೆನ್ ತಮುಳಿ, ಜ್ಞಾನ ಪೂಜಾರಿ, ಸತಾಂಜೀಬ್ ದಾಸ್, ರಾಜೇನ್ ಕಲಿತಾ, ಜ್ಞಾನನ್ ಬೊರ್ಕಕಟಿ, ದ್ವೀಪೇನ್ ಕಾಕತಿ, ಮುನಿನ್ ಬಯಾನ್, ಹೇಮಂತ ಬರ್ಮನ್, ಹೇಮಂತ ದಾಸ್, ಡಾ ನವನೀಲ್ ಬರುವಾ, ಮೃಣಾಲ್ ಕುಮಾರ್ ಬರ್ಮನ್, ಅಲಿ ಹೈದರ್ ಲಸ್ಕರ್, ವಾರಿಸ್ ಚೌಧರಿ, ಅಬ್ದುರ್ ರೆಹಮಾನ್ ಶೇಖ್, ಡಾ ಕಾಳಿಪ್ರಸಾದ್ ಶರ್ಮಾ, ಡಾ ಮೋಹನ್ ಚಿ. ಕಲಿತಾ, ಡಾ.ಸೋನಕುಮಾರ ತಾಲೂಕದಾರ್, ಡಾ ಇಂದ್ರಾಣಿ ದತ್ತಾ,  ರಬಿನ್ ದತ್ತಾ, ದೀಪಕ್ ಗೋಸ್ವಾಮಿ, ಘನಶ್ಯಾಮನಾಥ ಅವರು ಸಹಿಯನ್ನು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಭಾರತ್ ಜೋಡೋ ನ್ಯಾಯ ಯಾತ್ರೆ: ಸಾರ್ವಜನಿಕ ಸಭೆಗಳಿಗೆ ಅನುಮತಿ ನೀಡದ ದೀದಿ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...