PC: Getty Images

2013ರ ಪಾಟ್ನಾಸರಣಿ ಸ್ಫೋಟ ಪ್ರಕರಣದ 10 ಮಂದಿ ಆರೋಪಿಗಳ ಪೈಕಿ ಒಂಬತ್ತು ಮಂದಿಯನ್ನು ಅಪರಾಧಿಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.

ಅಂದಿನ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರ ‘ಹುಂಕಾರ್’ ರ್‍ಯಾಲಿ ವೇಳೆ ಗಾಂಧಿ ಮೈದಾನದಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ರ್‍ಯಾಲಿ ನಡೆಯುತ್ತಿದ್ದ ಸ್ಥಳದ ಸುತ್ತ ಬರೋಬ್ಬರಿ ಆರು ಬಾಂಬ್‌ಗಳು ಸ್ಫೋಟವಾದ್ದವು. ಬಳಿಕ ರ್‍ಯಾಲಿ ಸ್ಥಳದ ಬಳಿ ನಾಲ್ಕು ಜೀವಂತ ಬಾಂಬ್‌ಗಳು ಪತ್ತೆಯಾಗಿದ್ದವು. ನರೇಂದ್ರ ಮೋದಿ ಭಾಷಣ ಮಾಡಿದ್ದ ವೇದಿಕೆಯಿಂದ 150 ಮೀಟರ್‌ಗಳ ಒಳಗೆ ಎರಡು ಬಾಂಬ್‌ಗಳು ಸ್ಫೋಟಗೊಂಡಿದ್ದವು.

ಇದನ್ನೂ ಓದಿ: ವಿಶ್ವಾಸಾರ್ಹರ ಸಾಲಿನಲ್ಲಿ ರಾಜಕಾರಣಿಗಳಿಗೆ ಕೊನೆಯ ಸ್ಥಾನ: ಸ್ಟ್ಯಾಟಿಸ್ಟಾ ಸರ್ವೇ

ಅಕ್ಟೋಬರ್ 27, 2013 ರಂದು ನಡೆದಿದ್ದ ಈ ದಾಳಿಯನ್ನು ಬಿಹಾರ ಪೊಲೀಸರು ಇದನ್ನು ಭಯೋತ್ಪಾದಕ ದಾಳಿ ಎಂದು ಕರೆಯದಿದ್ದರೂ, ಅಂದಿನ ಪೊಲೀಸ್ ಮಹಾನಿರ್ದೇಶಕ ಅಭಯಾನಂದ್ ಅವರು ಸ್ಫೋಟದಲ್ಲಿ ಐಇಡಿ ಮತ್ತು ಟೈಮರ್‌ಗಳ ಬಳಕೆಯನ್ನು ಖಚಿತಪಡಿಸಿದ್ದರು.

ಅಮೋನಿಯಂ ನೈಟ್ರೇಟ್, ಡಿಟೋನೇಟರ್‌ಗಳು, ಟೈಮರ್ ಸಾಧನ ಮತ್ತು ಕಬ್ಬಿಣದ ಮೊಳೆಗಳ ಬಳಕೆಯ ಬಗ್ಗೆಯೂ ಗುಪ್ತಚರ ಮೂಲಗಳು ಸುಳಿವು ನೀಡಿದ್ದವು. ನಂತರ, ಎನ್‌ಐಎ ನವೆಂಬರ್ 6, 2013 ರಂದು ಪ್ರಕರಣವನ್ನು ಕೈಗೆತ್ತಿಕೊಂಡಿತು. 11 ಆರೋಪಿಗಳ ವಿರುದ್ಧ ಆಗಸ್ಟ್ 21, 2014 ರಂದು ಚಾರ್ಜ್ ಶೀಟ್ ಸಲ್ಲಿಸಿತ್ತು.

2014ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್‌ಮೈಂಡ್ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ ಬ್ಯೂಟಿ’, ತೌಫೀಕ್ ಅನ್ಸಾರಿ, ಮೊಜಿಬುಲ್ಲಾ ಮತ್ತು ನುಮಾನ್ ಅನ್ಸಾರಿ ಅವರನ್ನು ಬಂಧಿಸಿತ್ತು.  11 ಮಂದಿ ಆರೋಪಿಗಳಲ್ಲಿ ಓರ್ವ ಅಪ್ರಾಪ್ತನಾಗಿದ್ದನು.


ಇದನ್ನೂ ಓದಿ: ಸರ್ದಾರ್‌ ಉಧಮ್ ಚಿತ್ರ ದ್ವೇಷದಿಂದ ಕೂಡಿದೆ ಎಂದ ಆಸ್ಕರ್ ಜ್ಯೂರಿ: ಸತ್ಯ ಕಹಿ ಎಂದ ಅಭಿಮಾನಿಗಳು

LEAVE A REPLY

Please enter your comment!
Please enter your name here