Homeಮುಖಪುಟಮಹಾರಾಷ್ಟ್ರ: ಮಕ್ಕಳ ಅಶ್ಲೀಲ ಚಿತ್ರ ತಯಾರಿಸಿ, ಹಂಚಿಕೆ ಮಾಡಿದ್ದ 105 ಮಂದಿ ಬಂಧನ, 213 ಪ್ರಕರಣ

ಮಹಾರಾಷ್ಟ್ರ: ಮಕ್ಕಳ ಅಶ್ಲೀಲ ಚಿತ್ರ ತಯಾರಿಸಿ, ಹಂಚಿಕೆ ಮಾಡಿದ್ದ 105 ಮಂದಿ ಬಂಧನ, 213 ಪ್ರಕರಣ

- Advertisement -
- Advertisement -

ಮಕ್ಕಳ ಅಶ್ಲೀಲ, ಲೈಂಗಿಕ ಕಿರುಕುಳದ ವಿಡಿಯೊಗಳು ಮತ್ತು ಅಪ್ರಾಪ್ತ ವಯಸ್ಕರ ಛಾಯಾಚಿತ್ರಗಳನ್ನು ತಯಾರಿಸಿ, ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರದಾದ್ಯಂತ 105 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆಪರೇಷನ್ ಬ್ಲ್ಯಾಕ್‌ಫೇಸ್’ ಅಂಗವಾಗಿ 2019 ರ ಡಿಸೆಂಬರ್‌ನಿಂದ ರಾಜ್ಯ ಸೈಬರ್ ಇಲಾಖೆಯು ಸ್ಥಳೀಯ ಪೊಲೀಸ್ ಠಾಣೆಗಳ ಸಮನ್ವಯದೊಂದಿಗೆ 213 ಎಫ್‌ಐಆರ್‌ಗಳನ್ನು ನೋಂದಾಯಿಸಿದ್ದು, 105 ಜನರನ್ನು ಬಂಧಿಸಿದೆ.

ಆರೋಪಿಗಳ ವಿರುದ್ಧ ಫೋಸ್ಕೋ ( Protection of Children from Sexual Offences Act) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ.

ಅಮೆರಿಕಾದ ’ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ವು, ಭಾರತದ ವಿವಿಧ ಭಾಗಗಳಿಂದ ಮಕ್ಕಳ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ (NCRB) ತಿಳಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಎನ್‌ಸಿಆರ್‌ಬಿ ಮಾಹಿತಿಯನ್ನು ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ರವಾನಿಸಿದೆ.

ಇದನ್ನೂ ಓದಿ: ದೆಹಲಿ: ಅಶ್ಲೀಲ ಚಿತ್ರ, ವಿಡಿಯೊಗಳನ್ನು ಕಳಿಸುವಂತೆ ಒತ್ತಡ ಹೇರುತ್ತಿದ್ದ ಯುವಕನ ಬಂಧನ

2019 ರಿಂದ ಮಹಾರಾಷ್ಟ್ರದಿಂದ 15,255 ಮಕ್ಕಳ ಕಿರುಕುಳ ವಿಡಿಯೊಗಳು ಮತ್ತು ಫೋಟೋಗಳನ್ನು ವೆಬ್‌ಗಳಿಗೆ ಅಪ್‌ಲೋಡ್ ಮಾಡಲಾಗಿದೆ. 15,255 ರಲ್ಲಿ 11,118 (ಶೇಕಡಾ 73) ಅನ್ನು ರಾಜ್ಯದ ಪ್ರಮುಖ ನಗರಗಳಿಂದ ಅಪ್‌ಲೋಡ್ ಮಾಡಲಾಗಿದೆ.

ಮುಂಬೈನಿಂದ 4,496 ಮತ್ತು ಪುಣೆಯಿಂದ 5,699 ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ. ಉಳಿದವುಗಳನ್ನು ಥಾಣೆ, ನಾಗಪುರ, ಹೊಸ ಮುಂಬೈ, ಪಿಂಪ್ರಿ ಚಿಂಚ್‌ವಾಡ್, ನಾಸಿಕ್, ಔರಂಗಾಬಾದ್ ಮತ್ತು ಸೊಲ್ಲಾಪುರದಿಂದ ಅಪ್‌ಲೋಡ್ ಮಾಡಲಾಗಿದೆ. ಜಿಲ್ಲೆಗಳ ಪೈಕಿ ಲಗಾಂವ್, ಥಾಣೆ ಗ್ರಾಮಾಂತರ, ಪಾಲ್ಘರ್ ಮತ್ತು ಕೊಲ್ಹಾಪುರದಿಂದ ಇಂತಹ 30 ಕ್ಕೂ ಹೆಚ್ಚು ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ.

“ಈ ವರ್ಷ ನಾವು 25 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಮಹಾರಾಷ್ಟ್ರದಾದ್ಯಂತ 50 ಜನರನ್ನು ಬಂಧಿಸಿದ್ದೇವೆ. ಮಕ್ಕಳ ಅಶ್ಲೀಲತೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ನಾವು ಇನ್ನೂ ತನಿಖೆ  ಮುಂದುವರಿಸುತ್ತೇವೆ” ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಅಧೀಕ್ಷಕ ಸಂಜಯ್ ಸಿಂತ್ರೆ ಹೇಳಿದ್ದಾರೆ.

ನಾಗ್ಪುರ ನಗರದಲ್ಲೇ 302 ದೂರುಗಳು ದಾಖಲಾಗಿದ್ದು, 38 ಎಫ್ಐಆರ್‌ಗಳನ್ನು ನೋಂದಾಯಿಸಿ, 14 ಜನರನ್ನು ಬಂಧಿಸಿಸಲಾಗಿದೆ. ಮುಂಬೈ ಪೋಲಿಸರು 4,496 ದೂರುಗಳನ್ನು ಸ್ವೀಕರಿಸಿದ್ದಾರೆ . ಆದರೆ, ಕೇವಲ 11 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಮೂವರನ್ನು ಬಂಧಿಸಿಸಲಾಗಿದೆ. ಇತ್ತ ಪುಣೆ ಪೊಲೀಸರು 16 ಎಫ್‌ಐಆರ್ ದಾಖಲಿಸಿದ್ದು, ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ಅಡುಗೆಯವನಿಂದ 30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ಬಂಧಿಸಿದ ಸಿಬಿಐ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...