Homeಮುಖಪುಟ40 ಐಟಿಐಗಳ ಖಾಸಗೀಕರಣಕ್ಕೆ ಮುಂದಾದ ಯೋಗಿ ಸರ್ಕಾರ: ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ

40 ಐಟಿಐಗಳ ಖಾಸಗೀಕರಣಕ್ಕೆ ಮುಂದಾದ ಯೋಗಿ ಸರ್ಕಾರ: ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ

ಉತ್ತರಪ್ರದೇಶದಲ್ಲಿ ಐಟಿಐನ ಮಾಸಿಕ ಶುಲ್ಕ 40 ರೂ. ಇದ್ದು, ಅದು ವಾರ್ಷಿಕವಾಗಿ 480 ರೂ. ಆಗುತ್ತದೆ. ಆದರೆ, ಖಾಸಗೀಕರಣದ ನಂತರ ವಿದ್ಯಾರ್ಥಿಗಳು ವಾರ್ಷಿಕವಾಗಿ 26,000 ರೂ. ಪಾವತಿಸಬೇಕಾಗುತ್ತದೆ. 

- Advertisement -
- Advertisement -

ಸರ್ಕಾರಿ ಸ್ವಾಮ್ಯದಲ್ಲಿರುವ 40 ಐಟಿಐಗಳನ್ನು ಖಾಸಗಿ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಯೋಗಿ ಆದಿತ್ಯನಾಥ್ ಸರ್ಕಾರದ ನಿರ್ಧಾರದ ವಿರುದ್ಧ ಉತ್ತರಪ್ರದೇಶದಾದ್ಯಂತ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಉತ್ತರಪ್ರದೇಶದಲ್ಲಿ 3,303 ಕ್ಕೂ ಹೆಚ್ಚು ಐಟಿಐಗಳಿವೆ. ಅದರಲ್ಲಿ 2,931 ಈಗಾಗಲೇ ಖಾಸಗಿ ವಲಯದಲ್ಲಿದ್ದರೆ, ಕೇವಲ 307 ಮಾತ್ರ ಸರ್ಕಾರಿ ಸ್ವಾಮ್ಯದಲ್ಲಿವೆ. ಅದರಲ್ಲಿ 12 ಮಹಿಳೆಯರಿಗೆ ಮಾತ್ರ ಮೀಸಲಾಗಿವೆ.

ಗೋರಖ್‌ಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಜಿಐಟಿಐ) ಈ ಖಾಸಗೀಕರಣದ ವಿರುದ್ಧದ ಪ್ರತಿಭಟನೆಯ ಕೇಂದ್ರಬಿಂದುವಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿ ವರ್ಗದ ನೇತೃತ್ವದಲ್ಲಿ, ಖಾಸಗೀಕರಣದ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ಮೂರು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.

ಭಾನುವಾರ, ನೂರಾರು ವಿದ್ಯಾರ್ಥಿಗಳು ಮುಖ್ಯ ದ್ವಾರದ ಹೊರಗೆ ತರಗತಿಗಳನ್ನು ಬಹಿಷ್ಕರಿಸಿ, ಸರ್ಕಾರದ ನಿರ್ಧಾರವು ಬಡ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯ ಎಂದು ಪ್ರತಿಭಟಿಸಿದ್ದಾರೆ.

“ಸರ್ಕಾರವು ಅನೇಕ ಅಧ್ಯಾಪಕರನ್ನು ಇತರೆ ಸರ್ಕಾರಿ ಕಾಲೇಜುಗಳಿಗೆ ವರ್ಗಾಯಿಸಿ, ನಾಲ್ಕು ಕೋರ್ಸ್‌ಗಳ ಶುಲ್ಕವನ್ನು 480 ರೂ.ಗಳಿಂದ 26,000 ರೂ.ಗೆ ಹೆಚ್ಚಿಸಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಲಾಭದತ್ತ ಹೆಚ್ಚು ಗಮನ ಹರಿಸುತ್ತವೆ” ಎಂದು ವಿದ್ಯಾರ್ಥಿ ಅಭಿಷೇಕ್ ಹೇಳಿದ್ದಾರೆ.

ಪ್ರತಿಭಟನೆಯ ಸಂಕೇತವಾಗಿ, ರಾಜ್ಯಾದ್ಯಂತ ಅನೇಕ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ‌ಗಳನ್ನು ಕಳುಹಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಹಾಜರಾಗುತ್ತಿದ್ದಾರೆ.

ಅಲಹಾಬಾದ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊರಾನ್, ಸರ್ಕಾರಿ ಐಟಿಐ ಬನ್ಸ್‌ಡಿಹ್, ಬಲ್ಲಿಯಾ, ಐಟಿಐ ತಖಾ ಇಟಾವಾ ಮತ್ತು ಪ್ರತಾಪ‌ಗಢದ ಲಾಲ್‌ಗಂಜ್‌ನಲ್ಲಿರುವ ಐಟಿಐ ಕಾಲೇಜುಗಳು ಸೇರಿದಂತೆ, ಇನ್ನೂ ಅನೇಕ ಸರ್ಕಾರಿ ಐಟಿಐ ಕಾಲೇಜುಗಳಿವೆ. ಅಲ್ಲೆಲ್ಲಾ ಪ್ರತಿಭಟನೆಗಳು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕಾಲೇಜುಗಳ ಖಾಸಗೀಕರಣವನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 16 ಐಟಿಐಗಳನ್ನು ಖಾಸಗಿ ಖಾಸಗೀಯವರಿಗೆ ಹಸ್ತಾಂತರಿಸಲಾಗಿದ್ದರೆ, 24 ಐಟಿಐಗಳನ್ನು ಎರಡನೇ ಹಂತದಲ್ಲಿ ಹಸ್ತಾಂತರಿಸಲಾಗುತ್ತದೆ.

ಉತ್ತರಪ್ರದೇಶದ ಖಾಸಗಿ ಐಟಿಐ ಸಂಸ್ಥೆಗಳ ಸಂಖ್ಯೆ ಈಗಾಗಲೇ ಸರ್ಕಾರಿ ಸಂಸ್ಥೆಗಳಿಗಿಂತ 10 ಪಟ್ಟು ಹೆಚ್ಚಾಗಿದೆ. ಈ ನಿರ್ಧಾರದ ನಂತರ, ಖಾಸಗಿ ಐಟಿಐಗಳ ಸಂಖ್ಯೆ ಇನ್ನಷ್ಟು ಹೆಚ್ಚಾದರೆಮ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಬೆರಳೆಣಿಕೆಯಷ್ಟಾಗುತ್ತವೆ.

ಐಟಿಐ ಸಮಿತಿಯ ಪ್ರಸ್ತಾವನೆಯ ನಂತರ ರಾಜ್ಯ ಸರ್ಕಾರವು ಶುಲ್ಕವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ನಿರ್ಧಾರದ ಪ್ರಕಾರ, ಹೊಸ ಅಕಾಡೆಮಿಕ್ ವರ್ಷಕ್ಕೆ (2020 -21) ದಾಖಲಾಗುವ ವಿದ್ಯಾರ್ಥಿಗಳು ಅತಿಯಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಉತ್ತರಪ್ರದೇಶದಲ್ಲಿ ಐಟಿಐನ ಮಾಸಿಕ ಶುಲ್ಕ 40 ರೂ. ಇದ್ದು, ಅದು ವಾರ್ಷಿಕವಾಗಿ 480 ರೂ. ಆಗುತ್ತದೆ. ಆದರೆ, ಖಾಸಗೀಕರಣದ ನಂತರ ವಿದ್ಯಾರ್ಥಿಗಳು ವಾರ್ಷಿಕವಾಗಿ 26,000 ರೂ. ಪಾವತಿಸಬೇಕಾಗುತ್ತದೆ.

ಆದರೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದು ವರ್ಷದ ಡಿಪ್ಲೊಮಾ ಶುಲ್ಕ ಕೇವಲ 11,000 ರೂ ಇದೆ. ಇದರ ಪರಿಣಾಮವಾಗಿ, ಉತ್ತರ ಪ್ರದೇಶದ ಐಟಿಐಗಳು ಈಗ ಪಾಲಿಟೆಕ್ನಿಕ್ ಕೋರ್ಸ್‌ಗಳಿಗಿಂತ ದುಬಾರಿಯಾಗಲಿದ್ದು, ತಾಂತ್ರಿಕ ಮಟ್ಟದಲ್ಲಿ ಐಟಿಐ ಲೆವೆಲ್ ಒನ್ ಕೋರ್ಸ್ ಆಗಿದೆ.

ಇದನ್ನೂ ಓದಿ: ರೈಲ್ವೇ ಖಾಸಗೀಕರಣಕ್ಕೆ ಚಾಲನೆ: ಮುಂದಿನ ಕರಾಳ ದಿನಗಳಿಗೆ ಹಸಿರು ನಿಶಾನೆ

ಅಧಿಕಾರಿಗಳ ಪ್ರಕಾರ, ತರಬೇತಿ ಗುಣಮಟ್ಟವನ್ನು ಸುಧಾರಿಸಲು ಖಾಸಗೀಕರಣವನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಖಾಸಗೀಕರಣದ ನಂತರ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಯಂತ್ರಗಳ ಮೂಲಕ ಹೊಸ ತಂತ್ರಜ್ಞಾನವನ್ನು ಕಲಿಯುವ ಅವಕಾಶ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೂ, ಎಲ್ಲಾ ಐಟಿಐಗಳ ಪಠ್ಯಕ್ರಮವು ಒಂದೇ ಆಗಿರುತ್ತದೆ.

“ಐಟಿಐನಲ್ಲಿ, ಹೆಚ್ಚಿನ ವಿದ್ಯಾರ್ಥಿಗಳು ದುರ್ಬಲ ವರ್ಗದವರು ಅಥವಾ ಅತ್ಯಂತ ಕಳಪೆ ಹಿನ್ನೆಲೆಯಿಂದ ಬಂದವರೇ ಇದ್ದಾರೆ. ಖಾಸಗೀಕರಣದ ನಂತರ ಅವರು ತಮ್ಮ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಐಟಿಐನ ಶಿಕ್ಷಕ ದುರ್ಗೇಶ್ ಹೇಳಿದ್ದಾಗಿ ನ್ಯೂಸ್ ಕ್ಲಿಕ್ ವರದಿ ಮಾಡಿದೆ.

“ಶುಲ್ಕವು ಮೊದಲು 40 ರೂ. ಇತ್ತು. ಆದರೆ ಖಾಸಗೀಕರಣದ ನಂತರ ಅದು ಸುಮಾರು 480 ರೂ. ಆಗುತ್ತದೆ. ನನ್ನ ತಂದೆ ಗುಜರಾತ್‌ನಲ್ಲಿ ದಿನಗೂಲಿ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗದ ನಂತರ ಅವರು ಹಳ್ಳಿಗೆ ಮರಳಿ, ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ, ನನಗೆ ಶುಲ್ಕವನ್ನು ಪಾವತಿಸಲು ಸಾಧ್ಯವಿಲ್ಲ” ಎಂದು ವಿದ್ಯಾರ್ಥಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.


ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಖಾಸಗೀಕರಣ: ಕೇಂದ್ರದ ನಿರ್ಧಾರದ ವಿರುದ್ಧ ನೌಕರರಿಂದ ಬೃಹತ್‌ ಮುಷ್ಕರಕ್ಕೆ ಸಿದ್ದತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...