Homeಮುಖಪುಟಶಹನಾಯ್ ವಿದ್ವಾನ್ ಬಿಸ್ಮಿಲ್ಲಾಖಾನ್ ಮನೆ ಧ್ವಂಸಕ್ಕೆ ತಡೆ

ಶಹನಾಯ್ ವಿದ್ವಾನ್ ಬಿಸ್ಮಿಲ್ಲಾಖಾನ್ ಮನೆ ಧ್ವಂಸಕ್ಕೆ ತಡೆ

ಮನೆ ಧ್ವಂಸದ ಸುದ್ದಿ ಹರಡುತ್ತಿದ್ದಂತೆ, ಹಲವಾರು ಯುವ ಸಂಘಟನೆಗಳು ಪ್ರತಿಭಟನೆ ನಡೆಸಿ 'ಮನೆಯನ್ನು ಉಳಿಸಿ, ಮ್ಯೂಸಿಯಂ ಮಾಡಿ ಸಂರಕ್ಷಿಸುವಂತೆ' ಸರ್ಕಾರ ಮತ್ತು ಸಾಂಸ್ಕೃತಿಕ ಸಚಿವಾಲಯವನ್ನು ಒತ್ತಾಯಿಸಿದ್ದರು.

- Advertisement -
- Advertisement -

ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆಂದು ಶಹನಾಯ್ ವಿದ್ವಾನ್ ಬಿಸ್ಮಿಲ್ಲಾಖಾನ್ ಮನೆ ಧ್ವಂಸ ಮಾಡುವುದಕ್ಕೆ ಈಗ ತಡೆಯೊಡ್ಡಲಾಗಿದೆ ಎಂದು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರ (ವಿಡಿಎ) ತಿಳಿಸಿದೆ.

ಕುಟುಂಬ ಸದಸ್ಯರೊಬ್ಬರು ವಾಣಿಜ್ಯ ಲಾಭಕ್ಕಾಗಿ ಮನೆಯನ್ನು ಧ್ವಂಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದ ನಂತರ, ವಲಯ ಅಧಿಕಾರಿ ಮತ್ತು ಕಿರಿಯ ಎಂಜಿನಿಯರ್ ಒಳಗೊಂಡ ವಿಡಿಎ ತಂಡವು ಕಳೆದ ವಾರ ಹಡಾಹ ಸರೈ ಪ್ರದೇಶದಲ್ಲಿರುವ ಬಿಸ್ಮಿಲ್ಲಾಖಾನ್ ಅವರ ಮನೆಗೆ ಭೇಟಿ ನೀಡಿತ್ತು.

ಬಿಸ್ಮಿಲ್ಲಾಖಾನ್ ಅವರ ಮನೆಯನ್ನು ‘ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆ’ ಎಂದು ಸಂರಕ್ಷಿಸಬೇಕೆಂಬ ಕೂಗು ಕೇಳಿಬರುತ್ತಿದ್ದಂತೆ, ಮನೆ ಉರುಳಿಸುವಿಕೆಯ ಚಟುವಟಿಕೆಯನ್ನು ನಿಲ್ಲಿಸಲಾಗಿದೆ. ವಿಡಿಎ ತಪಾಸಣೆ ವರದಿಯ ಪ್ರಕಾರ, ಎರಡನೇ ಮಹಡಿಯಲ್ಲಿರುವ ಕೊಠಡಿಯನ್ನು ಬಿಸ್ಮಿಲ್ಲಾಖಾನ್ ಅವರ ಮೊಮ್ಮಗ ಮತ್ತು ದಿವಂಗತ ಮೆಹ್ತಾಬ್ ಹುಸೇನ್ ಅವರ ಪುತ್ರ ಮೊಹಮ್ಮದ್ ಶಿಫ್ಟೈನ್ ನೆಲಸಮ ಮಾಡಿದ್ದಾರೆ. ಶಿಫ್ಟೈನ್ ಆ ಮನೆಯಲ್ಲಿ ವಾಸಿಸುತ್ತಿದ್ದರು.

ಬಿಸ್ಮಿಲ್ಲಾ ಖಾನ್ ಅವರಿಗೆ ಐದು ಗಂಡು ಮಕ್ಕಳಿದ್ದರು. ಕುಟುಂಬ ಸದಸ್ಯರಲ್ಲಿ ಆಸ್ತಿ ವಿಚಾರವಾಗಿ ವಿವಾದವಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

“ಇದು ಖಾಸಗಿ ಆಸ್ತಿಯ ಪ್ರಕರಣವಾದ್ದರಿಂದ, ವಿಡಿಎ ತಂಡವು ಮಾತುಕತೆಗಳ ಮೂಲಕ ಮತ್ತು ನೋಟಿಸ್ ಮೂಲಕ, ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದರೆ ಅದನ್ನು ನೆಲಸಮಗೊಳಿಸುವುದಕ್ಕೆ ನಗರಸಭೆಯಿಂದ ಅನುಮತಿ ಪಡೆಯಲು ಕುಟುಂಬ ಸದಸ್ಯರಿಗೆ ನಿರ್ದೇಶನ ನೀಡಿತು. ಯಾವುದೇ ಹೊಸ ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ನಕ್ಷೆಯನ್ನು ವಿಡಿಎಯಿಂದ ಅನುಮೋದಿಸಲು ನಿರ್ದೇಶಿಸಲಾಗಿದೆ “ಎಂದು ವಿಡಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬಿಸ್ಮಿಲ್ಲಾಖಾನ್ ವಾಸಿಸುತ್ತಿದ್ದ ಮನೆಯ ಮೇಲಿನ ಮಹಡಿಯನ್ನು ಅವರ ಕೆಲ ಸಂಬಂಧಿಕರು ನೆಲಸಮಗೊಳಿಸಿ ಮನೆಯನ್ನು ವಾಣಿಜ್ಯ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವುದಕ್ಕೆ ಕುಟುಂಬದ ಇತರ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಮನೆ ಧ್ವಂಸದ ಸುದ್ದಿ ಹರಡುತ್ತಿದ್ದಂತೆ, ಹಲವಾರು ಯುವ ಸಂಘಟನೆಗಳು ಪ್ರತಿಭಟನೆ ನಡೆಸಿ ‘ಮನೆಯನ್ನು ಉಳಿಸಿ, ಮ್ಯೂಸಿಯಂ ಮಾಡಿ ಸಂರಕ್ಷಿಸುವಂತೆ’ ಸರ್ಕಾರ ಮತ್ತು ಸಾಂಸ್ಕೃತಿಕ ಸಚಿವಾಲಯವನ್ನು ಒತ್ತಾಯಿಸಿದ್ದರು.

ಈ ಕುರಿತ ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ದಿಲೀಪ್ ಕುಮಾರ್, ಎಐಡಿಒಒನ ಮಕಾರ್ಥ್ವಾಜ್ ಮತ್ತು ಎಐಎಂಎಸ್ಎಸ್ ನ ವಂದನಾ ಸಿಂಗ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನೆಯನ್ನು ರಕ್ಷಿಸಬೇಕೆಂದು ಒತ್ತಾಯಿಸಿದ್ದರು.

“ಇದನ್ನು ಶಹನಾಯ್ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಕುಟುಂಬ ಸದಸ್ಯರನ್ನು ಬೇರೆಡೆ ಪುನರ್ವಸತಿಗೊಳಿಸಿ ಆರ್ಥಿಕ ನೆರವು ನೀಡಬೇಕು” ಎಂದು ಅವರು ಆಗ್ರಹಿಸಿದ್ದರು.

ಬಿಸ್ಮಿಲ್ಲಾ ಖಾನ್ ಅವರ ಸಾಕು ಮಗಳು ಮತ್ತು ಗಾಯಕಿ ಸೋಮ ಘೋಷ್ ಮತ್ತು ಕಾಂಗ್ರೆಸ್ ಮುಖಂಡ ಅಜಯ್ ರೈ ಕೂಡ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದರು. ಅವರ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಸಂರಕ್ಷಿಸಲು ಸರ್ಕಾರ ಮುಂದೆ ಬರಬೇಕು ಎಂದು ಹೇಳಿದ್ದರು.


ಇದನ್ನೂ ಓದಿ: ಕಮರ್ಷಿಯಲ್ ಕಾಂಪ್ಲೆಕ್ಸ್‌ಗಾಗಿ ಶಹನಾಯ್ ವಿದ್ವಾನ್ ಬಿಸ್ಮಿಲ್ಲಾ ಖಾನ್ ಮನೆ ಧ್ವಂಸ

ಶಹನಾಯಿಯ ಗಾರುಡಿಗ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಭಾರತೀಯ ಸಂಗೀತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...