ಆಕ್ಷೇಪಾರ್ಹ ಸೌಂದರ್ಯ ವರ್ಧಕಗಳ ಜಾಹಿರಾತಿಗೆ 5 ವರ್ಷ ಜೈಲು ಮತ್ತು 50 ಲಕ್ಷ ದಂಡ

ಆಕ್ಷೇಪಾರ್ಹ ಜಾಹೀರಾತು ಕಾಯ್ದೆ, 1954ರ ಕಾನೂನಿಗೆ ತಿದ್ದುಪಡಿಯ ಪ್ರಸ್ತಾಪ

ಒಂದೇ ವಾರದಲ್ಲಿ ನಿಮ್ಮ ಸೌಂಧರ್ಯ ಇಮ್ಮಡಿಯಾಗುವುದು, ಮೈಕಾಂತಿ ವೃದ್ದಿಸುವುದು ಮುಂತಾದ ಬಣ್ಣ ಬಣ್ಣದ ಮರಳು ಮಾಡುವ ಜಾಹೀರಾತುಗಳನ್ನು ಬೇಕಾಬಿಟ್ಟಿ ಬಳಸಿದ್ದಲ್ಲಿ ಜೈಲು ಗ್ಯಾರಂಟಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ ಮತ್ತು ಮ್ಯಾಜಿಕ್ ಪರಿಹಾರಗಳಿಗೆ (ಆಕ್ಷೇಪಾರ್ಹ ಜಾಹೀರಾತು ಕಾಯ್ದೆ, 1954) ಕರಡು ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದು, ಇದರಂತೆ ಐದು ವರ್ಷಗಳವರೆಗೆ ಜೈಲು ಹಾಗೂ 50 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ಬಿಳಿ ಚರ್ಮಕ್ಕಾಗಿ ಮ್ಯಾಜಿಕ್ ಪರಿಹಾರಗಳು, ಔಷಧಿಗಳ ಜಾಹೀರಾತುಗಳಿಗಾಗಿ, ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಮಹಿಳೆಯರಲ್ಲಿ ಬಂಜೆತನದ ಪರಿಹಾರದ ಬಗೆಗಿನ ಜಾಹಿರಾತುಗಳು ಇದರಲ್ಲಿ ಸೇರಿದೆ.

ಕರಡು ತಿದ್ದುಪಡಿಯ ಕಾಯಿದೆಯ ಪಟ್ಟಿಗೆ ಹಲವಾರು ಸೇರ್ಪಡೆಗಳನ್ನು ಮಾಡಿದೆ. ಇದರಲ್ಲಿ 78 ಕಾಯಿಲೆಗಳನ್ನು ಗುಣಪಡಿಸುವ ಔಷಧಿಗಳ “ಮ್ಯಾಜಿಕ್ ಪರಿಹಾರಗಳು” ಮತ್ತು ಉತ್ಪನ್ನಗಳನ್ನು ಜಾಹೀರಾತು ಮಾಡಬಾರದು ಎಂದು ಕಾಯಿದೆ ಹೇಳುತ್ತದೆ.

ಕಾಯಿದೆಯಡಿ, ಮೊದಲ ಅಪರಾಧಕ್ಕೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ; ಮತ್ತು ನಂತರದ ಪುನಾರಾವರ್ತನೆಗೆ ಒಂದು ವರ್ಷ ಅಥವಾ ದಂಡ ಅಥವಾ ಎರಡು ವರ್ಷ ಜೈಲು ಶಿಕ್ಷೆಗೆ ಕಾರಣವಾಗಬಹುದು.

ತಿದ್ದುಪಡಿಯು ದಂಡವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಮೊದಲ ಅಪರಾಧಕ್ಕಾಗಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ನಂತರದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಐದು ವರ್ಷಗಳವರೆಗೆ ಜೈಲು ಹಾಗು 50 ಲಕ್ಷ ರೂ.ದಂಡವನ್ನು ಪ್ರಸ್ತಾಪಿಸಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here