Homeಮುಖಪುಟ17ನೇ ಲೋಕಸಭೆ: ಸಂಸತ್ತಿನಲ್ಲಿ ಒಂದೇ ಒಂದು ಮಾತನ್ನಾಡದ ಕರ್ನಾಟಕದ ನಾಲ್ವರು ಸೇರಿ 6 ಮಂದಿ ಬಿಜೆಪಿ...

17ನೇ ಲೋಕಸಭೆ: ಸಂಸತ್ತಿನಲ್ಲಿ ಒಂದೇ ಒಂದು ಮಾತನ್ನಾಡದ ಕರ್ನಾಟಕದ ನಾಲ್ವರು ಸೇರಿ 6 ಮಂದಿ ಬಿಜೆಪಿ ಸಂಸದರು!

- Advertisement -
- Advertisement -

17ನೇ ಲೋಕಸಭೆಯ ಅವಧಿ ಮುಗಿದಿದೆ. 17ನೇ ಲೋಕಸಭೆಯ ಕೊನೆಯ ಅಧಿವೇಶನ ಫೆ.9 2024ರಂದು ಕೊನೆಗೊಂಡಿತ್ತು. ಲೋಕಸಭೆಯ ಈ 5 ವರ್ಷಗಳ ಅವಧಿಯಲ್ಲಿ ಕರ್ನಾಟಕದ ನಾಲ್ವರು ಸಂಸದರು ಸೇರಿ ಒಟ್ಟು 9ಮಂದಿ ಸಂಸದರು ಒಂದೇ ಒಂದು ಬಾರಿ ಮಾತನಾಡಿಲ್ಲ ಎನ್ನುವುದನ್ನು ಸಂಸತ್ತಿನ ದಾಖಲೆಗಳು ಬಹಿರಂಗಪಡಿಸಿದೆ.

ಸನ್ನಿ ಡಿಯೋಲ್, ಶತ್ರುಘ್ನ ಸಿನ್ಹಾ ಮತ್ತು ಇತರ 9 ಸಂಸದರು ಸಂಸತ್ತಿನಲ್ಲಿ ಒಂದು ಬಾರಿಯೂ ಮಾತನಾಡಿಲ್ಲ ಎನ್ನುವುದನ್ನು ದಾಖಲೆಗಳು ಬಹಿರಂಗಪಡಿಸುತ್ತದೆ. ಗುರುದಾಸ್‌ಪುರವನ್ನು ಪ್ರತಿನಿಧಿಸುವ ಬಿಜೆಪಿಯಿಂದ ಮೊದಲ ಬಾರಿಗೆ ಸಂಸದರಾಗಿರುವ ಡಿಯೋಲ್ ಅವರು ಐದು ವರ್ಷಗಳ ಅವಧಿಯಲ್ಲಿ ಕೆಲವು ವಿಚಾರಗಳನ್ನು ಲಿಖಿತವಾಗಿ  ಸಲ್ಲಿಸಿದ್ದಾರೆ. ಆದರೆ ತೃಣಮೂಲ ಕಾಂಗ್ರೆಸ್‌ಗೆ ಸೇರಿದ್ದ ಸಿನ್ಹಾ ಅವರು ಮೌಖಿಕ ಅಥವಾ ಲಿಖಿತ ಸಂವಹನದ ಮೂಲಕ ಯಾವುದೇ ವಿಚಾರವನ್ನು ಪ್ರಸ್ತಾಪಿಸಿಲ್ಲ ಎನ್ನುವುದನ್ನು ಸಂಸತ್ತಿನ ದಾಖಲೆಗಳು ಬಹಿರಂಗಪಡಿಸಿದೆ.

17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17, 2019ರಂದು ಪ್ರಾರಂಭವಾಗಿತ್ತು. 543 ಸಂಸದರ ಪೈಕಿ 9 ಮಂದಿ ಸಂಸದರು ಐದು ವರ್ಷಗಳ ಅವಧಿಯಲ್ಲಿ ಲೋಕಸಭೆಯಲ್ಲಿ ಯಾವುದೇ  ಚರ್ಚೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದಾರೆ. ಈ ಪಟ್ಟಿಯಲ್ಲಿ ಆಡಳಿತಾರೂಢ ಬಿಜೆಪಿಯ 6 ಮಂದಿ ಸಂಸದರು,  ಟಿಎಂಸಿಯ ಇಬ್ಬರು ಮತ್ತು ಬಹುಜನ ಸಮಾಜ ಪಕ್ಷದ ಓರ್ವ ಸಂಸದರು ಸೇರಿದ್ದಾರೆ.

ಅವರಲ್ಲಿ ಕರ್ನಾಟಕದ ಬಿಜಾಪುರದ ಸಂಸದ ರಮೇಶ್ ಚಂದಪ್ಪ ಜಿಗಜಿಣಗಿ, ಉತ್ತರಪ್ರದೇಶದ ಘೋಸಿಯ ಪ್ರಸ್ತುತ ಜೈಲಿನಲ್ಲಿರುವ ಸಂಸದ ಅತುಲ್ ಕುಮಾರ್ ಸಿಂಗ್, ಪಶ್ಚಿಮ ಬಂಗಾಳದ ತಮ್ಲುಕ್‌ನ ದಿಬ್ಯೇಂದು ಅಧಿಕಾರಿ, ಕರ್ನಾಟಕದ ಚಿಕ್ಕಬಳ್ಳಾಪುರದ ಬಿ.ಎನ್. ಬಚ್ಚೇಗೌಡ,  ಅಸ್ಸಾಂನ ಲಖೀಂಪುರದ ಪ್ರಧಾನ್ ಬರುವಾ,  ಪಂಜಾಬ್‌ನ ಗುರುದಾಸ್‌ಪುರದ ಸನ್ನಿ ಡಿಯೋಲ್, ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಅನಂತ್ ಕುಮಾರ್ ಹೆಗ್ಡೆ, ಕರ್ನಾಟಕದ ಚಾಮರಾಜನಗರ ಜಿಲ್ಲೆಯ ವಿ ಶ್ರೀನಿವಾಸ ಪ್ರಸಾದ್ ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದ ಸಂಸದ ಶತ್ರುಘ್ನ ಸಿನ್ಹಾ ಸೇರಿದ್ದಾರೆ.

ಈ ಒಂಬತ್ತು ಸಂಸದರಲ್ಲಿ ಆರು ಮಂದಿ ಲಿಖಿತವಾಗಿ ಪ್ರಸ್ತಾಪಗಳನ್ನು, ಪ್ರಶ್ನೆಗಳನ್ನು ನೀಡಿದ್ದರೆ, ಸಿನ್ಹಾ, ಸಿಂಗ್ ಮತ್ತು ಚಂದಪ್ಪ ಅವರು ಲಿಖಿತ ಅಥವಾ ಮೌಖಿಕ ರೂಪಗಳಲ್ಲಿ ಸದನದ ಚರ್ಚೆಯಲ್ಲಿ ಭಾಗಿಯಾಗಿಲ್ಲ ಎನ್ನುವುದನ್ನು ಸಂಸತ್ತಿನ ದಾಖಲೆಗಳು ತಿಳಿಸುತ್ತದೆ.

ವರದಿಗಳ ಪ್ರಕಾರ, ಸನ್ನಿ ಡಿಯೋಲ್ ಸೇರಿದಂತೆ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಂಸದರಿಗೆ ಸ್ಪೀಕರ್‌ ಓಂ ಬಿರ್ಲಾ ಅವರು ಸದನದಲ್ಲಿ ಮಾತನಾಡುವಂತೆ ಉತ್ತೇಜಿಸಿದ್ದರು. ವರದಿ ಪ್ರಕರ ಎರಡು ಬಾರಿ ಸನ್ನಿ ಡಿಯೋಲ್ ಅವರಲ್ಲಿ ಸಂಸತ್ತಿನಲ್ಲಿ ಮಾತನಾಡುವಂತೆ ಸ್ಪೀಕರ್‌ ಓಂ ಬಿರ್ಲಾ ಆಗ್ರಹಿಸಿದ್ದರು. ಆದರೆ ಅವರು ಅದಕ್ಕೆ ಸರಿಯಾಗಿ ಸ್ಪಂದಿಸಿಲ್ಲ ಎನ್ನುವುದು ಸಂಸತ್ತಿನ ದಾಖಲೆಗಳು ಬಹಿರಂಗಪಡಿಸುತ್ತದೆ.

ಇದನ್ನು ಓದಿ: ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳಿಗೆ ಜಾಮೀನು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...