Homeಮುಖಪುಟಬೆಂಗಳೂರಿನ ಮತದಾರರಿಗೆ ರಸ್ತೆಗಳು, ಟ್ರಾಫಿಕ್, ಮತ್ತು ನೀರು ಮುಖ್ಯ ಸಮಸ್ಯೆಗಳು: ಜನಾಗ್ರಹ ಸಮೀಕ್ಷೆ ವರದಿ

ಬೆಂಗಳೂರಿನ ಮತದಾರರಿಗೆ ರಸ್ತೆಗಳು, ಟ್ರಾಫಿಕ್, ಮತ್ತು ನೀರು ಮುಖ್ಯ ಸಮಸ್ಯೆಗಳು: ಜನಾಗ್ರಹ ಸಮೀಕ್ಷೆ ವರದಿ

ಶೇಕಡಾ 94ರಷ್ಟು ಜನರಿಗೆ 2021-22 ಆರ್ಥಿಕ ಸಾಲಿನಲ್ಲಿ ಬಿಬಿಎಂಪಿ ವಾರ್ಡ್ ಗಳಿಗೆ ನೀಡಿದ 60 ಲಕ್ಷ ರೂಪಾಯಿಗಳ ಬಗ್ಗೆ ತಿಳಿದಿಲ್ಲ ಎನ್ನುತ್ತದೆ ವರದಿ

- Advertisement -
- Advertisement -

ಬೆಂಗಳೂರಿನ ಮತದಾರರು ರಸ್ತೆಗಳು, ಟ್ರಾಫಿಕ್, ಮತ್ತು ನೀರು ಮುಖ್ಯ ಸಮಸ್ಯೆಗಳೆಂದು ಭಾವಿಸುತ್ತಾರೆ. ಆದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡಾ 88ರಷ್ಟು ಮಂದಿಯು BBMP ತಮ್ಮ ವಾರ್ಡ್ ಕೌನ್ಸಿಲರ್ ಗಳನ್ನು ಈವರೆಗೆ ಭೇಟಿಯಾಗಿಲ್ಲ. ಶೇಕಡಾ 87 ರಷ್ಟು ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ತಿಳಿದಿಲ್ಲ. ಶೇಕಡಾ 95ರಷ್ಟು ಮಂದಿ ಎಂದೂ ವಾರ್ಡ್ ಸಮಿತಿ ಸಭೆಗೆ ಹೋಗಿಲ್ಲ. ಶೇಕಡಾ 22ರಷ್ಟು ಮಂದಿ ನೇರವಾಗಿ ಶಾಸಕರ ಬಳಿ ತೆರಳಿ ತಮ್ಮ ತೊಂದರೆಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಹೋಲಿಸಿದ್ದಲ್ಲಿ ಕೇವಲ 12% ಜನ ಮಾತ್ರ ತಮ್ಮ ಸ್ಥಳೀಯ ಕೌನ್ಸಿಲರ್ ಗಳನ್ನು ಭೇಟಿಯಾಗಿದ್ದಾರೆ ಎಂದು ಜನಾಗ್ರಹ ನಗರ ರಾಜಕೀಯ ಸಮೀಕ್ಷೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸೆಪ್ಟಂಬರ್ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಅದಕ್ಕೆ ಮುಂಚಿತವಾಗಿ ಜನಾಗ್ರಹ ಸೆಂಟರ್ ಫಾರ್ ಸಿಟಿಝನ್ ಶಿಪ್ ಆಂಡ್ ಡೆಮಾಕ್ರಸಿ ಸಂಸ್ಥೆಯು ಕೇಂದ್ರ ನಗರ ರಾಜಕೀಯ ಸಮೀಕ್ಷೆಯನ್ನು ನಡೆಸಿದೆ. ಇದರ ಭಾಗವಾಗಿ ಸ್ಥಳೀಯ ಆಡಳಿತ, ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು, ಮುಂಬರುವ ಬಿಬಿಎಂಪಿ ಚುನಾವಣೆಗಳಿಂದ ಮತದಾರರ ನಿರೀಕ್ಷೆ ಇತ್ಯಾದಿ ಪ್ರಶ್ನೆಗಳ ಆಧಾರದಲ್ಲಿ ಜೂನ್ 21 ರಂದು ವರದಿ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಶೇಕಡಾ 83ರಷ್ಟು ಮತದಾರರ ಪ್ರಕಾರ ಬಿಬಿಎಂಪಿ ಚುನಾವಣೆಯು ನಗರವು ಎದುರಿಸುತ್ತಿರುವ ಸಮಸ್ಯೆಗಳ ಆಧಾರದ ಮೇಲೆ ನಡೆಯಬೇಕೆ ಹೊರತು ಬೇರೆ ವಿಷಯಗಳ ಮೇಲಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಯ ಮುಖ್ಯಾಂಶಗಳು:

  • ಶೇಕಡಾ 17ರಷ್ಟು ನಾಗರಿಕರಿಗೆ ಮಾತ್ರ BBMP ಮಾಜಿ ಮೇಯರ್ ಹೆಸರು ತಿಳಿದಿದೆ. ಇದಕ್ಕೆ ಹೋಲಿಸಿದ್ದಲ್ಲಿ ಶೇಕಡಾ 97ರಷ್ಟು ಮಂದಿಗೆ ಪ್ರಧಾನ ಮಂತ್ರಿಯ ಹೆಸರು ತಿಳಿದಿದ್ದು, ಶೇಕಡಾ 83ರಷ್ಟು ಮಂದಿಗೆ ರಾಜ್ಯದ ಮುಖ್ಯಮಂತ್ರಿಯ ಹೆಸರು ತಿಳಿದಿದೆ.
  • ಶೇಕಡಾ 88ರಷ್ಟು ಮಂದಿಯು ತಮ್ಮ ವಾರ್ಡ್ ಕೌನ್ಸಿಲರ್ ಗಳನ್ನು ಈ ವರೆಗೆ ಭೇಟಿಯಾಗಿಲ್ಲ. ಶೇಕಡಾ 87 ರಷ್ಟು ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ತಿಳಿದಿಲ್ಲ. ಶೇಕಡಾ 95ರಷ್ಟು ಮಂದಿ ಎಂದೂ ವಾರ್ಡ್ ಸಮಿತಿ ಸಭೆಗೆ ಹೋಗಿಲ್ಲ. ಶೇಕಡಾ 22ರಷ್ಟು ಮಂದಿ ನೇರವಾಗಿ ಎಂಎಲ್ ಎ ಬಳಿ ತೆರಳಿ ತಮ್ಮ ತೊಂದರೆಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಹೋಲಿಸಿದ್ದಲ್ಲಿ ಕೇವಲ 12% ಜನ ಮಾತ್ರ ತಮ್ಮ ಸ್ಥಳೀಯ ಕೌನ್ಸಿಲರ್ ಗಳನ್ನು ಭೇಟಿಯಾಗಿದ್ದಾರೆ.
  • ಶೇಕಡಾ 94ರಷ್ಟು ಜನರಿಗೆ 2021-22 ಆರ್ಥಿಕ ಸಾಲಿನಲ್ಲಿ ಬಿಬಿಎಂಪಿ ವಾರ್ಡ್ ಗಳಿಗೆ ನೀಡಿದ 60 ಲಕ್ಷ ರೂಪಾಯಿಗಳ ಬಗ್ಗೆ ತಿಳಿದಿಲ್ಲ
  • ಬೆಂಗಳೂರಿನ ಶೇಕಡಾ 87ರಷ್ಟು ಮತದಾರರ ಪ್ರಕಾರ BBMP ಪ್ರಬಲ ಕೌನ್ಸಿಲರ್ ಗಳಿಂದ ತಮ್ಮ ವಾರ್ಡ್‌ಗಳಿಗೆ ಉತ್ತಮ ಸೇವೆ ಒದಗಿಸಿ ಮೂಲಸೌಕರ್ಯದಲ್ಲಿ ಸುಧಾರಣೆಯನ್ನು ತರಲು ಸಾಧ್ಯ
  • ಬೆಂಗಳೂರಿನ ಶೇಕಡಾ 23ರಷ್ಟು ಮತದಾರರ ಸಮಸ್ಯೆಯು ಫುಟ್ಪಾತ್ ಗೆ ಸಂಬಂಧಿಸಿದ್ದು, 20 ಪ್ರತಿಶತ ಜನ ಕಸ ನಿರ್ವಹಣೆ ತಮ್ಮ ಸಮಸ್ಯೆಯೆಂದು ಸೂಚಿಸಿದ್ದು, 16 ಶೇಕಡಾವಾರಿನಷ್ಟು ಮಂದಿ ಸಂಚಾರ ಮತ್ತು 15 ಪ್ರತಿಶತ ಮಂದಿ ಸ್ವಚ್ಛ ಕುಡಿಯುವ ನೀರಿನ ಕೊರತೆಯನ್ನು ತಮ್ಮ ಮುಖ್ಯ ಸಮಸ್ಯೆಯನ್ನಾಗಿ ಎತ್ತಿಹಿಡಿದಿದ್ದಾರೆ
  • ಬೆಂಗಳೂರಿನ 89% ಮತದಾರರಿಗೆ ಪರಿಸರ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ ಇದ್ದು, ಕೇವಲ 25% ಮತದಾರರು ಕೌನ್ಸಿಲರ್‌ಗಳು ಪರಿಸರ ಸಮಸ್ಯೆಗಳಿಗೆ ಗಮನಾರ್ಹ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂದು ಭಾವಿಸುತ್ತಾರೆ.

ಜನಾಗ್ರಹ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, “ಬೆಂಗಳೂರಿನ ಬಹುತೇಕ ಮತದಾರರು ಬಿಬಿಎಂಪಿ ಚುನಾವಣೆಗಾಗಿ ಕಾಯುತ್ತಿದ್ದಾರೆ. ಆದರೆ ವರದಿಯ ಪ್ರಕಾರ ಬಿಬಿಎಂಪಿ, ವಾರ್ಡ್ ಕಾರ್ಪೊರೇಟರ್‌ಗಳು, ವಾರ್ಡ್ ಸಮಿತಿಗಳು ಇತ್ಯಾದಿಗಳ ಪಾತ್ರವನ್ನು ಕೆಲವೇ ಕೆಲವರು ಮಾತ್ರ ಅರ್ಥೈಸಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ ಬೆಂಗಳೂರಿಗರನ್ನು ಕಾಡುವ ಸಮಸ್ಯೆಯ ಆಧಾರದ ಮೇಲೆ ಸ್ಥಳೀಯ ಚುನಾವಣೆಯನ್ನು ನಡೆಸಬೇಕು. ನಮ್ಮ ನಗರವನ್ನು ಅಭಿವೃದ್ಧಿಪಡಿಸಲು ನಮ್ಮ ಸ್ಥಳೀಯ ಆಡಳಿತಾಂಗವನ್ನು ಬಲಪಡಿಸಬೇಕಾಗಿದೆ. ಇದು ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವುದರಿಂದ ಸಾಧ್ಯವಾಗುತ್ತದೆ. ನಮ್ಮ ನಗರಕ್ಕೆ ಸಧೃಡ ಭವಿಷ್ಯದ ಯೋಜನೆಯನ್ನು ಪ್ರಸ್ತುತಪಡಿಸಲು ಮತ್ತು ಅದರ ಆಧಾರದ ಮೇಲೆ ಮತಗಳನ್ನು ಕೇಳಲು ನಾವು ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇವೆ. ಮಾಧ್ಯಮದವರು ರಾಜ್ಯ ಮತ್ತು ರಾಷ್ಟೀಯ ಮಟ್ಟದ ಚುನಾವಣೆಗೆ ನೀಡುವ ಪ್ರಾಮುಖ್ಯತೆಯನ್ನು ಬಿಬಿಎಂಪಿ ಚುನಾವಣೆಗೂ ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.” ಎಂದರು.

ಬೆಂಗಳೂರಿನ ಬಹುತೇಕ ನಾಗರಿಕರಿಗೆ ಮತ್ತು ಮತದಾರರಿಗೆ ವಾರ್ಡ್ ಮಟ್ಟದ ಆಡಳಿತಾಂಗದ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಆದರೆ, ಅವರ ಪ್ರಕಾರ ಒಳ್ಳೆಯ ಪಾದಾಚಾರಿ ಮಾರ್ಗ, ಸ್ವಚ್ಛ ಪರಿಸರ, ಸಶಕ್ತ ಸಂಚಾರಿ ವ್ಯವಸ್ಥೆ, ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಬೇಕಾಗಿದೆ ಎನ್ನುತ್ತಾರೆ.

ಶ್ರೇಣೀಕೃತ ಯಾದೃಚ್ಛಿಕ ಮಾದರಿ ವಿಧಾನವನ್ನು ಬಳಸಿ ನಡೆಸಲಾದ ಈ ಸಮೀಕ್ಷೆಯಲ್ಲಿ, ಬೆಂಗಳೂರಿನ ಎಂಟು ವಲಯಗಳಲ್ಲಿ ಇರುವ 27 ವಾರ್ಡ್ ಗಳ 503 ನಾಗರಿಕರು ಭಾಗವಹಿಸಿದ್ದಾರೆ. 16ನೇ ಡಿಸೆಂಬರ್ 2021 ರಿಂದ 2ನೇ ಜನವರಿ 2022ರ ವರೆಗೆ ನಡೆಸಲಾದ ಈ ಸಮೀಕ್ಷೆಯಲ್ಲಿ ವಿವಿಧ ವಯೋಮಿತಿ ಮತ್ತು ಆರ್ಥಿಕ ಹಾಗು ಸಾಮಾಜಿಕ ಹಿನ್ನಲೆಗೆ ಸೇರಿದ ವ್ಯಕ್ತಿಗಳು ಭಾಗವಹಿಸಿದ್ದಾರೆ.

ಈ ಸಮೀಕ್ಷೆಯ ವರದಿಯನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ; ನಾವು ಯಾರಂತ ಜನರೇ ನಮಗೆ ಪರಿಚಯಿಸುತ್ತಾರೆ: ಟ್ರಾನ್ಸ್‌ಜೆಂಡರ್‌ ‘ಶಬ್ಬು’ ಜೀವನಗಾಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....