Homeರಾಜಕೀಯ‘ನಿಮ್ಮ ಸಚಿವ ಶರದ್ ಪವಾರ್‌ಗೆ ಬೆದರಿಸುತ್ತಿದ್ದಾರೆ’: ಪ್ರಧಾನಿ ಮತ್ತು ಅಮಿತ್ ಶಾಗೆ ಶಿವಸೇನೆ ನಾಯಕ ಸಂಜಯ್...

‘ನಿಮ್ಮ ಸಚಿವ ಶರದ್ ಪವಾರ್‌ಗೆ ಬೆದರಿಸುತ್ತಿದ್ದಾರೆ’: ಪ್ರಧಾನಿ ಮತ್ತು ಅಮಿತ್ ಶಾಗೆ ಶಿವಸೇನೆ ನಾಯಕ ಸಂಜಯ್ ರಾವತ್‌‌

- Advertisement -
- Advertisement -

ಮಹಾರಾಷ್ಟ್ರ ಮೈತ್ರಿಕೂಟದ ನಾಯಕ ಶರದ್ ಪವಾರ್ ಅವರಿಗೆ ಒಕ್ಕೂಟ ಸರ್ಕಾರದ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಶಿವಸೇನೆ ಶುಕ್ರವಾರ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ತಮ್ಮ ಸಚಿವರ ಇಂತಹ ಬೆದರಿಕೆಗಳನ್ನು ಒಪ್ಪುತ್ತಾರೆಯೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

“ಶರದ್‌ ಪವಾರ್‌‌ ಮಹಾರಾಷ್ಟ್ರದ ಮಗ. ಒಕ್ಕೂಟ ಸರ್ಕಾರದ ಸಚಿವ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಮೋದಿ ಮತ್ತು ಅಮಿತ್ ಶಾ ಅವರೇ, ಇದನ್ನು ನೀವು ಕೇಳಿದ್ದೀರಾ? ನಿಮ್ಮ ಸಚಿವರು ಶರದ್ ಪವಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ. ನೀವು ಅಂತಹ ಬೆದರಿಕೆಗಳನ್ನು ಬೆಂಬಲಿಸುತ್ತೀರಾ ಎಂಬುವದನ್ನು ಮಹಾರಾಷ್ಟ್ರವು ತಿಳಿದುಕೊಳ್ಳಲು ಬಯಸುತ್ತದೆ” ಎಂದು ರಾವತ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಹಾರಾಷ್ಟ್ರ ಸರ್ಕಾರದಲ್ಲಿನ ಬಂಡಾಯದ ನಂತರ ಶಿವಸೇನೆಯ ಕೆಲವು ನಾಯಕರು ಇನ್ನೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೊಂದಿಗೆ ಇದ್ದಾರೆ. ಆದರೆ ಪಕ್ಷದ ಬಹುಪಾಲು ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ‘ಶಿಂಧೆ ನಮ್ಮ ನಾಯಕ’ ಎಂದು ಉಪ ಸಭಾಪತಿಗೆ ಪತ್ರ ಕಳುಹಿಸಿದ ಬಂಡಾಯ ಶಾಸಕರು

ಬೆದರಿಕೆ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ರಾವತ್‌, “ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉಳಿಸಲು ಒಂದು ವೇಳೆ ಶರದ್ ಪವಾರ್ ಪ್ರಯತ್ನಿಸಿದರೆ, ಅವರನ್ನು ಮನೆಗೆ ಹೋಗಲು ಬಿಡುವುದಿಲ್ಲ, ಅವರನ್ನು ರಸ್ತೆಯಲ್ಲೇ ತಡೆಯುತ್ತೇವೆ ಎಂದು ಒಕ್ಕೂಸ ಸರ್ಕಾರದ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ’’

“ಒಂದು ವೇಳೆ ಬಿಜೆಪಿ ಇದನ್ನು ಮಾಡುವುದಿದ್ದರೆ, ನೀವೇ ಅದನ್ನು ಘೋಷಿಸಿ. ಸರ್ಕಾರ ಉಳಿಯಲಿ ಅಥವಾ ಹೋಗಲಿ, ಶರದ್ ಪವಾರ್ ಅವರ ವಿರುದ್ಧ ಇಂತಹ ಮಾತುಗಳನ್ನು ಆಡುವುದನ್ನು ನಾವು ಒಪ್ಪುವುದಿಲ್ಲ” ಎಂದು ಬರೆದಿದ್ದಾರೆ.

ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ಉರುಳುವ ಸಾಧ್ಯತೆ ಇರುವ ಈ ಬಂಡಾಯದಲ್ಲಿ, ಉದ್ಧವ್ ಠಾಕ್ರೆ ಅವರ ತಂದೆ ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದವರೇ ಹೆಚ್ಚಿನ ಜನರಿದ್ದಾರೆ. ಸಚಿವ ಏಕನಾಥ್ ಶಿಂಧೆ ಅವರು ಶಿವಸೇನೆಯ 50 ಶಾಸಕರಲ್ಲಿ 40 ಶಾಸಕರ ಬೆಂಬಲ ಇದೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಈಶಾನ್ಯ ಪ್ರವಾಹಕ್ಕೆ ಕುರುಡಾಗಿರುವ ಬಿಜೆಪಿಗೆ ಅಧಿಕಾರದಲ್ಲಿ ಮಾತ್ರ ಆಸಕ್ತಿ: ಕಾಂಗ್ರೆಸ್

ಶಿಂಧೆ ಮತ್ತು ಬಂಡಾಯ ಶಾಸಕರು ಮಂಗಳವಾರ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌‌ಗೆ ತೆರಳುವ ಮೂಲಕ ಸರ್ಕಾರದ ವಿರುದ್ಧ ತಮ್ಮ ದಂಗೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಅವರು ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸಾಂಗೆ ವಿಶೇಷ ವಿಮಾನಗಳ ಮೂಲಕ ತೆರಳಿದ್ದಾರೆ.

ಉದ್ಧವ್ ಠಾಕ್ರೆ ಅವರು ಶಿಂಧೆ ಸೇರಿದಂತೆ 12 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ. ಆದರೆ ಶಿಂಧೆ ಅವರು ತಮ್ಮೊಂದಿಗೆ ಸಾಕಷ್ಟು ಶಾಸಕರ ಬೆಂಬಲವಿದೆ ಎಂದು ಪ್ರತಿಪಾದಿಸುತ್ತಿದ್ದು, ತಾವೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡಿದ್ದಾರೆ.

ಶರದ್ ಪವಾರ್ ಅವರ ಪಕ್ಷ ಮತ್ತು ಕಾಂಗ್ರೆಸ್‌ನೊಂದಿಗಿನ ತನ್ನ ‘ಅಸ್ವಾಭಾವಿಕ ಮೈತ್ರಿ’ಯನ್ನು ಶಿವಸೇನೆ ಕೊನೆಗೊಳಿಸಬೇಕು ಮತ್ತು ಹಳೆಯ ಮಿತ್ರಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಮಹಾರಾಷ್ಟ್ರವನ್ನು ಆಳಬೇಕು ಎಂದು ಬಂಡಾಯ ನಾಯಕ ಶಿಂಧೆ ಅವರು ಪ್ರತಿಪಾದಿಸುತ್ತಿದ್ದಾರೆ.

ಇದನ್ನೂ ಓದಿ: ‘ಮೈತ್ರಿ ತೊರೆಯುವ ಬಗ್ಗೆ ಚರ್ಚಿಸುತ್ತೇವೆ, ಬಂಡಾಯ ಶಾಸಕರು ಹಿಂತಿರುಗುವ ಧೈರ್ಯ ತೋರಲಿ’: ಶಿವಸೇನೆ ವಕ್ತಾರ ಸಂಜಯ್ ರಾವತ್‌

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿದ ನಂತರ ಶಾಸಕರು ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತಾರೆ ಎಂದು ಶರದ್ ಪವಾರ್ ಅವರು ನಿನ್ನೆ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು ಹಸಿವಿನಿಂದ...