Homeಕರ್ನಾಟಕಮತಾಂತರ ತಡೆಯಿರಿ, ಮೂಲವನ್ನು ಉಳಿಸಿ: ದಲಿತ ಮಠಾಧೀಶರಿಗೆ RSS ಮುಖ್ಯಸ್ಥರ ಸೂಚನೆ

ಮತಾಂತರ ತಡೆಯಿರಿ, ಮೂಲವನ್ನು ಉಳಿಸಿ: ದಲಿತ ಮಠಾಧೀಶರಿಗೆ RSS ಮುಖ್ಯಸ್ಥರ ಸೂಚನೆ

- Advertisement -
- Advertisement -

ಚಿತ್ರದುರ್ಗ: ಧಾರ್ಮಿಕ ಮತಾಂತರಗಳಿಂದಾಗಿ ಜನರು ತಮ್ಮ ಮೂಲದಿಂದ ದೂರವಾಗುತ್ತಾರೆ. ಹೀಗಾಗಿ ಮತಾಂತರವನ್ನು ತಡೆಯಲು ಪ್ರಯತ್ನಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದಲಿತ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ಹೇಳಿದ್ದಾರೆ.

“ಧಾರ್ಮಿಕ ಪರಿವರ್ತನೆಗಳು ಪ್ರತ್ಯೇಕತೆಗೆ ಕಾರಣವಾಗುತ್ತವೆ. ಜನರನ್ನು ತಮ್ಮ ಬೇರುಗಳು ಮತ್ತು ಮೂಲಗಳಿಂದ ದೂರವಾಗಿಸುತ್ತವೆ. ಆದ್ದರಿಂದ ನಾವು ಮತಾಂತರವನ್ನು ತಡೆಯಲು ಪ್ರಯತ್ನಿಸಬೇಕು” ಎಂದು ಭಾಗವತ್ ಅವರು ಮಂಗಳವಾರ ಸಂಜೆ ಕರ್ನಾಟಕದ ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಚ್ಚಿದ ಬಾಗಲಿನ ಈ ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಆಶ್ರಮದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

“ಜನರ ಮನಸ್ಸಿನಲ್ಲಿರುವ ಅಸಮಾನತೆಗಳನ್ನು ಹೋಗಲಾಡಿಸಲು ಹಿಂದೂ ಧರ್ಮ ಪ್ರಯತ್ನಿಸಬೇಕು” ಎಂದು ಭಾಗವತ್ ತಿಳಿಸಿದ್ದಾರೆ.

“ಹಿಂದೂ ಸಮಾಜದ ಮುಖ್ಯ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಭಿನ್ನತೆ ಮತ್ತು ಅಸಮಾನತೆಗಳು ಮುಖ್ಯವಾಗಿ ಜನರ ಮನಸ್ಸಿನಲ್ಲಿವೆ. ಈ ಸಮಸ್ಯೆಗಳು ಧರ್ಮಗ್ರಂಥಗಳಲ್ಲಿ ಇಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.

“ಈ ಸಮಸ್ಯೆಗಳು ಹಲವು ತಲೆಮಾರುಗಳಿಂದ ನಮ್ಮ ಮನಸ್ಸಿನಲ್ಲಿ ಅಸ್ತಿತ್ವದಲ್ಲಿವೆ. ಅವುಗಳ ಪರಿಹರಿಸಲು ಸಹ ಸಮಯ ತೆಗೆದುಕೊಳ್ಳುತ್ತದೆ. ಅವುಗಳನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕಲು ನಾವು ನಿಧಾನವಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.

ಹಿಂದೂ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅದು ಹುಟ್ಟಿ ಹಾಕಿರುವ ಅಸಮಾನತೆಯ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿರಂತರ ಮಾತನಾಡುತ್ತಿರುವ ವಿದ್ಯಮಾನದ ನಡುವೆ ದಲಿತ ಸಮುದಾಯದ ಧಾರ್ಮಿಕ ಮುಖಂಡರನ್ನು ಉದ್ದೇಶಿಸಿ ಭಾಗವತ್ ಭಾಷಣ ಮಾಡಿದ್ದಾರೆ.

ಸಂಘವು ರಾಜಕೀಯಕ್ಕಿಂತ ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ಭಾಗವತ್ ಹೇಳಿದ್ದಾರೆ. ಧಾರ್ಮಿಕ ಮುಖಂಡರು ರಾಜಕಾರಣಿಗಳಿಗಿಂತ ಆರ್‌ಎಸ್‌ಎಸ್‌ಗೆ ಹೆಚ್ಚು ಹತ್ತಿರವಾಗಿದ್ದಾರೆ ಎಂದು ತಿಳಿಸಿದ್ದಾರೆ.

“ಸಮಾಜದಲ್ಲಿ, ಕೆಲವು ವಿಭಾಗಗಳು ಸಂಪರ್ಕದ ಕೊರತೆಯಿಂದಾಗಿ ಹಿಂದುಳಿದಿವೆ. ಹಿಂದೂ ಸಮಾಜದ ಎಲ್ಲಾ ವಿಭಾಗಗಳನ್ನು ಸಮಗ್ರವಾಗಿ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಆಗಾಗ್ಗೆ ನಡೆಯುವ ಇಂತಹ ಸಭೆಗಳು ಈ ಪ್ರಯತ್ನವನ್ನು ಸುಗಮಗೊಳಿಸುತ್ತದೆ. ಇದನ್ನೇ ನಾವು ಸೌಹಾರ್ದತೆ ಎಂದು ಕರೆಯುತ್ತೇವೆ. ಸಂಘವು ಈ ಕೆಲಸ ಮಾಡಲು ಪ್ರಯತ್ನಿಸುತ್ತಿದೆ” ಎಂದು ಭಾಗವತ್ ಹೇಳಿದ್ದಾರೆ ಎಂದು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಇದನ್ನೂ ಓದಿರಿ: ಸುಗ್ರೀವಾಜ್ಞೆ ಮೂಲಕ ವಿವಾದಾತ್ಮಕ ‘ಮತಾಂತರ ವಿರೋಧಿ ಮಸೂದೆ’ ಅಂಗೀಕರಿಸಿದ ರಾಜ್ಯ ಸರ್ಕಾರ

ಮತಾಂತರ ತಡೆ ಹುನ್ನಾರದ ಸುತ್ತ ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಕೃತಿಯಲ್ಲಿ ‘ಮತಾಂತರ ತಡೆ ಕಾಯ್ದೆ’ಯ ಹುನ್ನಾರದ ಕುರಿತು ವಿಶೇಷವಾಗಿ ಚರ್ಚಿಸಲಾಗಿದೆ. ಈಗ ಭಾರೀ ಚರ್ಚೆಯಲ್ಲಿರುವ ಈ ಕೃತಿಯು, “ಆರ್‌ಎಸ್‌ಎಸ್‌ ಹೇಗೆ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ” ಎಂದು ವಿವರಿಸಿದೆ.

“ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಹೆಸರಿನಲ್ಲಿ ಜಾರಿಗೊಳಿಸಬೇಕೆಂದಿರುವ ಕಾಯ್ದೆಯಲ್ಲಿ ಸರ್ಕಾರ ಏನೆಲ್ಲ ಅಡೆತಡೆಗಳನ್ನು ಹಾಕಿದೆ ಎಂದರೆ, ಮತಾಂತರವಾಗಲು ಬಯಸುವ ವ್ಯಕ್ತಿ ಏಳು ಕೆರೆ ನೀರು ಕುಡಿಯಬೇಕಾಗುತ್ತದೆ. ಮತಾಂತರವಾಗಲು ಬಯಸುವವರು ಕನಿಷ್ಠ 30 ದಿವಸಗಳ ಮುಂಚಿತವಾಗಿ ಜಿಲ್ಲಾ ದಂಡಾಧಿಕಾರಿಯವರಿಗೆ ‘ನಮೂನೆ-I’ರಲ್ಲಿ ಘೋಷಣೆ ಮಾಡಬೇಕಂತೆ. ಮತಾಂತರದ ವಿಧಿ-ವಿಧಾನಗಳನ್ನು ನೆರವೇರಿಸುವ ಧಾರ್ಮಿಕ ಮುಖಂಡರು ಕೂಡ ‘ನಮೂನೆ-II’ರಲ್ಲಿ ನೋಟೀಸ್ ನೀಡಬೇಕಂತೆ. ಆ ಮೇಲೆ ಆಕ್ಷೇಪಣೆಗಳನ್ನೂ ಆಹ್ವಾನಿಸುತ್ತಾರೆ. ಯಾರಾದರೂ ನೆಂಟರಿಷ್ಟರು, ನೆರೆಹೊರೆಯವರು, ಸಹೋದ್ಯೋಗಿಗಳು ಆಕ್ಷೇಪಣೆ ಸಲ್ಲಿಸಬಹುದಂತೆ! ಇದೇನು ವಿಚಿತ್ರ? ಬಲವಂತವಾಗಿ ಆಮಿಷ ತೋರಿಸಿ ಮತಾಂತರವಾಗಿದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಬೇಕಾದವರು, ಯಾರು ಮತಾಂತರಗೊಂಡಿರುವರೋ ಅವರು ಮಾತ್ರವೇ ಅಲ್ಲವೇ? ಈ ಸರ್ಕಾರ ಜನರ ಜೀವನದ ಜೊತೆ ಹಾಗೂ ಭಾರತದ ಸಂವಿಧಾನದ ಜೊತೆ ಚೆಲ್ಲಾಟವಾಡುತ್ತಿದೆಯೇ ಹೇಗೆ?” ಎಂದು ದೇವನೂರರು ತಮ್ಮ ಕೃತಿಯಲ್ಲಿ ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ದಲಿತ ಮಠಗಳ ಒಂದರ ಕೆಲಸ ಅಲ್ಲಾ ಇದು ,ಎಲ್ಲಾ ಮಠಗಳ ಮಠಾದೀಶರ ಕೆಲಸ ,ಹಿಂದೆ ಮಠಾದೀಶರನ್ನ ಗೌರವದಿಂದ ಕಾಣುವ ರೀತಿ ಇತ್ತು ಕಾರಣ ಅವರು ಧರ್ಮ ರಕ್ಷಣೆಗೆ ಸದಾ ಸಿದ್ದರಾಗಿದ್ದರು,ಆದರೆ ಈಗ ಮಠಾದೀಶರ ಸ್ವ ಹಿತಾಸಕ್ತಿ ಕಾರಣ ಮಠಾದೀರನ್ನ ಜನರು ಸಹ ಏಕ ವಚನದಲ್ಲಿ ಮಾತಾಡೋ ಹಾಗೆ ಅವರ ಗುಣ ಸ್ವಭಾವ ಬೆಳೆದಿದೆ ,ಅದಕ್ಕೆ ಅವರೇ ಹೊಣೆಗಾರರು ಈ ರೀತಿಯ ಹೇಳಿಕೆಗಳಿಂದಾಗಿ

  2. It’s good and give and take your higher casts girls with dalits and take their boys for your girls can you do this and first?Find a permanent solution for castism in in India then all are possible.Only meeting and eating food with Dalits doesn’t work out

LEAVE A REPLY

Please enter your comment!
Please enter your name here

- Advertisment -

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...