Homeಕರ್ನಾಟಕಸುಗ್ರೀವಾಜ್ಞೆ ಮೂಲಕ ವಿವಾದಾತ್ಮಕ ‘ಮತಾಂತರ ವಿರೋಧಿ ಮಸೂದೆ’ ಅಂಗೀಕರಿಸಿದ ರಾಜ್ಯ ಸರ್ಕಾರ

ಸುಗ್ರೀವಾಜ್ಞೆ ಮೂಲಕ ವಿವಾದಾತ್ಮಕ ‘ಮತಾಂತರ ವಿರೋಧಿ ಮಸೂದೆ’ ಅಂಗೀಕರಿಸಿದ ರಾಜ್ಯ ಸರ್ಕಾರ

- Advertisement -
- Advertisement -

ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ಸುಗ್ರೀವಾಜ್ಞೆ ಅಥವಾ ಕಾರ್ಯಕಾರಿ ಆದೇಶದ ಮೂಲಕ ಗುರುವಾರ ಅಂಗೀಕರಿಸಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಸುಗ್ರೀವಾಜ್ಞೆಗೆ ಇಂದು ಮುಂಜಾನೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೊಸ ವಿವಾದಾತ್ಮಕ ಕಾನೂನನ್ನು ಆಮಿಷಗಳ ಮೂಲಕ ಅಥವಾ ಪ್ರಚೋದನೆಯ ಮೂಲಕ ಧಾರ್ಮಿಕ ಮತಾಂತರವನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ಮುಂದೂಡಿಕೆಯಾಗಿದ್ದರಿಂದ ಸಂಪುಟ ಸಭೆಯಲ್ಲಿ ವಿಧೇಯಕವನ್ನು ಅಂಗೀಕರಿಸಲು ಸುಗ್ರೀವಾಜ್ಞೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಸೂದೆಯನ್ನು ಆರಂಭದಲ್ಲಿ 2021ರ ಡಿಸೆಂಬರ್ 23 ರಂದು ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆ ಎದುರಾಗಿದ್ದರಿಂದ ಅದನ್ನು ಮಂಡಿಸಿರಲಿಲ್ಲ.

ಇದನ್ನೂ ಓದಿ: ಯುಪಿ: ಅಂತರ್ಧರ್ಮೀಯ ವಿವಾಹ ತಡೆದ ಹಿಂದೂ ಯುವ ವಾಹಿನಿ; ಯುವಕನ ವಿರುದ್ಧವೆ ‘ಮತಾಂತರ ಕಾನೂನಿ’ನ ಅಡಿಯಲ್ಲಿ ಪ್ರಕರಣ ದಾಖಲು

ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿ ಸಂಖ್ಯಾಬಲ ಹೊಂದಿದ್ದರೂ, ಕಾರ್ಯಕಾರಿ ಆದೇಶದ ಮೂಲಕ ಕಾನೂನು ತರಲು ಸರ್ಕಾರ ಆದ್ಯತೆ ನೀಡಿದೆ ಎಂದು ಮೂಲಗಳು ಸೂಚಿಸಿವೆ.

ಪ್ರಸ್ತಾವಿತ ಕಾನೂನನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್, ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯನ್ನು ಆಚರಿಸಲು, ಬೋಧಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಯಾವುದೇ ಕಾನೂನು ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಪ್ರಸ್ತಾವಿತ ಕಾನೂನು “ಆರ್‌ಎಸ್‌ಎಸ್‌ನ ಬುದ್ಧಿಮತ್ತೆ” ಮತ್ತು “ರಾಜಕೀಯ ನಡೆ” ಎಂದು ಬಣ್ಣಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಲವಂತದ ಮತಾಂತರದ ವಿರುದ್ಧ ಈಗಾಗಲೇ ಕಾನೂನು ಇದೆ ಎಂದು ಸೂಚಿಸಿದ್ದರು.

ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು: ಸಿದ್ದರಾಮಯ್ಯ

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ಹಲವಾರು ಬಿಜೆಪಿ ಆಡಳಿತದ ರಾಜ್ಯಗಳು ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಾನೂನುಗಳನ್ನು ಹೊಂದಿದೆ. ರಾಜ್ಯವು ಈ ಕಾನೂನನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಬೊಮ್ಮಾಯಿ ಕಳೆದ ವರ್ಷ ಹೇಳಿದ್ದರು.

“ಆಮಿಷದ ಮತಾಂತರಗಳು ಅಲ್ಲಿ ಇಲ್ಲಿ ನಡೆಯುತ್ತಿವೆ. ಪ್ರಚೋದನೆ ಅಥವಾ ಬಲವಂತದ ಮೂಲಕ ಯಾವುದೇ ಧಾರ್ಮಿಕ ಮತಾಂತರಕ್ಕೆ ಅವಕಾಶ ನೀಡದಂತೆ ನಾನು ಒಂದೆರಡು ದಿನಗಳ ಹಿಂದೆ ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ, ಏಕೆಂದರೆ ಇದು ಕಾನೂನುಬಾಹಿರವಾಗಿದೆ” ಎಂದು ಬೊಮ್ಮಾಯಿ ಅಂದು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...