Homeಕರ್ನಾಟಕಬೆಂಗಳೂರು: ಇನ್ನು ಮುಂದೆ ರಸ್ತೆ ಬದಿ ಪಾರ್ಕಿಂಗ್‌‌‌ಗೆ ಶುಲ್ಕ!

ಬೆಂಗಳೂರು: ಇನ್ನು ಮುಂದೆ ರಸ್ತೆ ಬದಿ ಪಾರ್ಕಿಂಗ್‌‌‌ಗೆ ಶುಲ್ಕ!

- Advertisement -
- Advertisement -

ಬೆಂಗಳೂರಿನಲ್ಲಿ ಪಾವತಿ ಪಾರ್ಕಿಂಗ್‌‌‌ ಅನ್ನು ಪರಿಚಯಿಸಲು ಟೆಂಡರ್‌ಗಳನ್ನು ಆಹ್ವಾನಿಸಲು ಬೃಹತ್‌‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧವಾಗಿದೆ. 2021ರ ಫೆಬ್ರವರಿ 2 ರಂದು ರಾಜ್ಯ ಸರ್ಕಾರವು ಅನುಮೋದಿಸಿದ ಪಾರ್ಕಿಂಗ್ ನೀತಿಯ ಅಡಿಯಲ್ಲಿ, ನಗರವನ್ನು ಉಚಿತ ಪಾರ್ಕಿಂಗ್‌ನಿಂದ ಪಾವತಿಸಿದ ಪಾರ್ಕಿಂಗ್‌ ನಗರವಾಗಿ ರೂಪಿಸಲು ಹೊರಟಿದೆ. ಈ ಮೂಲಕ ವೈಯಕ್ತಿಕ ವಾಹನಗಳ ಬಳಕೆಯನ್ನು ಪರೋಕ್ಷವಾಗಿ ನಿರುತ್ಸಾಹಗೊಳಿಸುವ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಲಾಗಿದೆ.

ನಗರ ಭೂ ಸಾರಿಗೆ ನಿರ್ದೇಶನಾಲಯವು (DULT) ವಿವರವಾದ ಅಧ್ಯಯನದ ನಂತರ ಸಿದ್ಧಪಡಿಸಿದ ಮತ್ತು ಎಲ್ಲಾ ಎಂಟು ವಲಯಗಳಲ್ಲಿ ಜಾರಿಗೊಳಿಸುವ ಯೋಜನೆಯೊಂದಿಗೆ ಕನಿಷ್ಠ 188 ಕೋಟಿ ರೂ.ಗಳ ವಾರ್ಷಿಕ ಆದಾಯವನ್ನು ಗಳಿಸುವ ಉದ್ದೇಶವನ್ನು ಬಿಬಿಎಂಪಿ ಸಂಸ್ಥೆ ಹೊಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

DULT ನ ಅಧಿಕಾರಿಗಳು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಜೊತೆಗೆ, ಸೈಕಲ್‌ಗಳು, ಲೋಡ್-ಅನ್‌ಲೋಡಿಂಗ್ ಮತ್ತು ಆಟೋ ಸ್ಟ್ಯಾಂಡ್‌ಗಳಿಗೆ ಅನ್ವಯವಾಗುವ ಸ್ಥಳದಲ್ಲಿ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ಕಟ್ಟಡದ ಪಟ್ಟಿಯಲ್ಲಿ ವಿಪ್ರೊ, ಕೊಲಂಬಿಯಾ ಆಸ್ಪತ್ರೆ, ಪ್ರೆಸ್ಟೀಜ್‌ ಕಂಪೆನಿಗಳು; ಈ ವರೆಗೆ ಮುಟ್ಟದ ಬಿಬಿಎಂಪಿ

ಒಂದು ಅಥವಾ ಎರಡು ದಿನಗಳಲ್ಲಿ ಟೆಂಡರ್‌ಗಳು ಬಿಡ್ಡಿಂಗ್‌ಗೆ ಲಭ್ಯವಿರುತ್ತವೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಬಿ.ಎಸ್. ಪ್ರಹ್ಲಾದ್ ಹೇಳಿದ್ದಾರೆ. ರಸ್ತೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ ನಂತರ ಪಾರ್ಕಿಂಗ್ ಶುಲ್ಕವನ್ನು ನಿರ್ಧರಿಸಲಾಗಿದೆ ಎಂದು ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ (ಟಿಇಸಿ) ಅಧಿಕಾರಿಗಳು ತಿಳಿಸಿದ್ದಾರೆ.

“ಭೂಮಿಯ ಮಾರುಕಟ್ಟೆ ಮೌಲ್ಯ ಮತ್ತು ಕ್ಯಾರೇಜ್‌ ವೇ ಅಗಲದ ಆಧಾರದ ಮೇಲೆ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಸ್ಥಳದ ಲಭ್ಯತೆಯ ಆಧಾರದ ಮೇಲೆ ಪ್ರತಿಯೊಂದು ವಲಯಗಳಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿದೆ” ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (TEC) ) ಹೆಚ್.ಎನ್. ಜಯಸಿಂಹ ಹೇಳಿದ್ದಾರೆ.

ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ದಿನಕ್ಕೆ 12 ರಿಂದ 15 ಗಂಟೆಗಳ ಕಾಲ ಪಾವತಿ ಪಾರ್ಕಿಂಗ್ ಜಾರಿಯಲ್ಲಿರುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

ಇದನ್ನೂ ಓದಿ: ರಾಜಕಾಲುವೆ ಒತ್ತುವರಿ: ಘಟಾನುಘಟಿ ಸಂಸ್ಥೆಗಳ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

“ಪಾರ್ಕಿಂಗ್ ಶುಲ್ಕ ಮತ್ತು ವಾಹನ ನಿಲುಗಡೆ ಅವಧಿಯ ಕುರಿತು ಚರ್ಚೆ ಅಂತಿಮ ಹಂತದಲ್ಲಿದೆ. ತಾತ್ಕಾಲಿಕವಾಗಿ ‘ಎ ವರ್ಗ’ದ ಪಾರ್ಕಿಂಗ್ ಸ್ಥಳವನ್ನು ದ್ವಿಚಕ್ರ ವಾಹನಗಳಿಗೆ ರೂ 15/ಗಂಟೆಗೆ ಮತ್ತು ನಾಲ್ಕು-ಚಕ್ರ ವಾಹನಗಳಿಗೆ ರೂ 30/ಗಂಟೆ ವೆಚ್ಚವಾಗಲಿದೆ” ಎಂದು ಅವರು ಹೇಳಿದ್ದಾರೆ.

“‘ಬಿ ವರ್ಗ’ ಜಾಗದಲ್ಲಿ ಪಾರ್ಕಿಂಗ್ ದ್ವಿಚಕ್ರ ವಾಹನಗಳಿಗೆ ರೂ 10/ಗಂಟೆಗೆ ಮತ್ತು ಕಾರುಗಳಿಗೆ 20 ರೂ. ವೆಚ್ಚವಾಗಲಿದೆ. ‘ಸಿ ವರ್ಗ’ದ ಪಾರ್ಕಿಂಗ್ ಜಾಗವೂ ಅಗ್ಗದಲ್ಲಿ ಲಭ್ಯವಾಗಲಿದ್ದು, ಬೈಕ್ ಮತ್ತು ಕಾರ್ ಮಾಲೀಕರು ಕ್ರಮವಾಗಿ 5 ರೂ. ಮತ್ತು 10ರೂ. ಪ್ರತಿ ಗಂಟೆಗೆ ಪಾವತಿಸಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಹೊರ ವಲಯದಲ್ಲಿ ಅಗ್ಗ

ಯಲಹಂಕ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ದಾಸರಹಳ್ಳಿಯಂತಹ ವಲಯಗಳಲ್ಲಿ, ಹೆಚ್ಚಿನ ರಸ್ತೆಗಳು ಎ ವರ್ಗಕ್ಕೆ ಬರದ ಕಾರಣ ಪಾರ್ಕಿಂಗ್ ಶುಲ್ಕವು ಮಧ್ಯಮವಾಗಿರುತ್ತದೆ. ಆದರೆ, ನಗರದ ಪ್ರಮುಖ ಪ್ರದೇಶಗಳು ಮತ್ತು ದಟ್ಟಣೆಯ ಕಾರಿಡಾರ್‌ಗಳಲ್ಲಿ ಈ ವೆಚ್ಚವು ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆಯಲ್ಲಿ ಮೀಸಲಾತಿಯ ಬಗ್ಗೆ..

ಬಿಬಿಎಂಪಿಯು ಪೂರ್ವ ವಲಯದಿಂದ ಕನಿಷ್ಠ 62 ಕೋಟಿ ರೂ. ಪಾರ್ಕಿಂಗ್ ಆದಾಯವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ದಕ್ಷಿಣ (50 ಕೋಟಿ) ಮತ್ತು ಪಶ್ಚಿಮ (ರೂ. 20.71 ಕೋಟಿ) ವಲಯಗಳು ಇವೆ. ರಾಜರಾಜೇಶ್ವರಿನಗರದಿಂದ (5 ಕೋಟಿ ರೂ.) ಕನಿಷ್ಠ ಮೊತ್ತವನ್ನು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ರೀ ಸ್ವಾಮೀ, ನಿಮ್ಗೆ ಜನರಿಂದ ದುಡ್ಡು ಹೇಗೆ ಕಸಿಯಬೇಕು ಅಂತಾ ಗೊತ್ತೇ ವಿನಃ, ಅವರಿಗೆ ಏನು ಅನುಕೂಲ ಕೊಡಬೇಕು ಅನ್ನೋ ಕನಿಷ್ಠ ಮಟ್ಟದ ಆಲೋಚನೆ ಕೂಡ ನಿಮ್ಗೆ ಬರೊಲ್ವೆ,, ಒಂದೂ ರೋಡ್ ಸರೀ ಇಲ್ಲಾ, ಫ್ಲೈ ಓವರ್ ಯಾವುದೂ ನೆಟ್ಟಗೆ ಮಾಡಿಲ್ಲ, ಜಾಯಿಂಟ್ ಗಳಲ್ಲಿ ಗ್ಯಾಪ್ ಜಾಸ್ತಿ ಇದೆ, ಗಾಡಿಗಳು ಜಂಪ್ ಆಗೀ ಆಗೀ, ನಮ್ಮ ಗಾಡಿ ಹಾಳಗಿದಲ್ದೆ, ನಮ್ಮ ಸೊಂಟಾನೂ ಮುರಿದು ಬೀಳುತ್ತೆ, ಮೋರಿಗಳನ್ನೆಲ್ಲಾ unsceintific ಆಗೀ ಕಾಂಕ್ರೀಟ್ ಮಾಡೀ, ಮಳೆ ನೀರು ಭೂಮಿಯಲ್ಲಿ ಒಂದು ಚೂರೂ ಇಂಗಿ ಕೊಳ್ಳದೆ ಎಲ್ಲಾ ನೀರೂ ರಾಜಾ ಕಾಲುವೆಗೆ ಹರಿದು, ಮುಂಚಿನ ಹಾಗೆ ಭೂಮಿಯ ಒಳಗೆ ನೀರು ಹೋಗದ ಹಾಗೆ ಮಾಡಿ ಅಂತರ್ಜಲವನ್ನು ಪೂರ್ತಿ ಕಡಿಮೆ ಮಾಡಿ, ಬರಡು ಭೂಮಿ ಮಾಡಿದ್ದೀರಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...