Homeಕರ್ನಾಟಕ‘ಗುಜರಾತ್‌ ಮಾದರಿ’ ಅಭ್ಯರ್ಥಿ ಆಯ್ಕೆಗೆ ಸ್ವತಃ ಕರ್ನಾಟಕ ಬಿಜೆಪಿಯೆ ತಯಾರಾಗುವುದಿಲ್ಲ; ಯಾಕೆಂದರೆ...

‘ಗುಜರಾತ್‌ ಮಾದರಿ’ ಅಭ್ಯರ್ಥಿ ಆಯ್ಕೆಗೆ ಸ್ವತಃ ಕರ್ನಾಟಕ ಬಿಜೆಪಿಯೆ ತಯಾರಾಗುವುದಿಲ್ಲ; ಯಾಕೆಂದರೆ…

ರಾಜ್ಯ ಬಿಜೆಪಿಯ ಪರಿಸ್ಥಿತಿ ಎಷ್ಟು ಕೆಟ್ಟದಿದೆಯೆಂದರೆ, ಭ್ರಷ್ಟಾಚಾರ ವಿಚಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಈಶ್ವರಪ್ಪಗೆ ಕೂಡಾ ಟಿಕೆಟ್‌ ಸಿಕ್ಕರೆ ಆಶ್ಚರ್ಯವಿಲ್ಲ

- Advertisement -
- Advertisement -

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 38 ಹಾಲಿ ಶಾಸಕರನ್ನು ಕೈಬಿಟ್ಟಿದೆ. ಈ ಹಿನ್ನಲೆಯಲ್ಲಿ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುಣಾವಣೆಯಲ್ಲಿ ರಾಜ್ಯ ಬಿಜೆಪಿ ಕೂಡಾ ಅದೇ ತಂತ್ರಗಾರಿಕೆಯನ್ನು ಮಾಡಲಿದೆಯೆ ಎಂದು ಚರ್ಚೆಗಳು ಪ್ರಾರಂಭವಾಗಿದೆ. ರಾಜ್ಯ ಬಿಜೆಪಿಯ ಹಲವಾರು ಶಾಸಕರು ಈ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಉಮೇಶ್ ಕತ್ತಿ ಮತ್ತು ಬಿಜೆಪಿ ಟಿಕೆಟ್‌ನಲ್ಲಿ ಗೆದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತುಪಡಿಸಿ 224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 117 ಶಾಸಕರನ್ನು ಹೊಂದಿದೆ. ಜೊತೆಗೆ ಈ ಹಿಂದೆ ಬಿಎಸ್‌ಪಿಯಲ್ಲಿದ್ದ ಸ್ವತಂತ್ರ ಶಾಸಕ ಎನ್‌. ಮಹೇಶ್ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಜರಾತ್‌ ಟಿಕೆಟ್‌ ಘೋಷಣೆಯಾದ ನಂತರ, ಕರ್ನಾಟಕದಲ್ಲೂ ಗುಜರಾತ್‌ ಮಾದರಿಯನ್ನು ಪಾಲನೆ ಮಾಡಬೇಕು ಎಂದು ಲೆಹರ್‌ ಸಿಂಗ್ ರಾಜ್ಯ ಬಿಜೆಪಿಗೆ ಸಲಹೆ ನೀಡಿದ್ದಾರೆ. ಗುಜರಾತಿನಲ್ಲಿ ಏನಾಗಿದೆಯೋ ಅದು ಕರ್ನಾಟಕದಲ್ಲೂ ಮಾದರಿಯಾಗಬೇಕು. ಗುಜರಾತ್ ಕ್ರಮವೂ ‘ಪೀಳಿಗೆಯ ಬದಲಾವಣೆ’ಯ ಸುಗಮ ಕಾರ್ಯವಾಗಿದೆ. ಹೊಸಬರಿಗೆ ಅವಕಾಶ ನೀಡುವ ಈ ಕ್ರಮವೂ ಶ್ಲಾಘನೀಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸದೆ ಅವಮಾನಿಸಿದ ಬಿಜೆಪಿ: ಜೆಡಿಎಸ್ ಆಕ್ರೋಶ

“ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯದ ಹಿರಿಯ ನಾಯಕರು ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಯಿಂದ ಕಿರಿಯರಿಗೆ ದಾರಿ ಮಾಡಿಕೊಡಬೇಕು” ಎಂದು ಲೆಹರ್‌ ಸಿಂಗ್‌ ಟ್ವೀಟ್ ಮಾಡಿದ್ದಾರೆ.

ಹಿರಿಯ ನಾಯಕರನ್ನು ಕೈಬಿಡಬೇಕೆ ಎಂಬ ಬಗ್ಗೆ TNIE ಜೊತೆಗೆ ಮಾತನಾಡಿದ ಬಿಜೆಪಿಯ ಹಿರಿಯ ನಾಯಕರೊಬ್ಬರು, “ಕಳೆದ ಮೂರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಬಿ.ಎಸ್. ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಸಹಾಯ ಮಾಡಿದ ಪಕ್ಷಾಂತರಿಗಳಿಗೆ ಪಕ್ಷವು ಅವಕಾಶ ನೀಡಬೇಕಾಗಿರುವುದರಿಂದ ಅನೇಕ ಹಿರಿಯರಿಗೆ ಸಂಪುಟದಲ್ಲಿ ಸ್ಥಾನ ನಿರಾಕರಿಸಲಾಗಿದೆ. 3-4 ಬಾರಿ ಗೆದ್ದಿರುವ ಹಲವು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. 2023 ರಲ್ಲಿ ಅವರಿಗೆ ಟಿಕೆಟ್ ನೀಡದಿರಲು ಪಕ್ಷವು ನಿರ್ಧರಿಸಿದರೆ ಅದು ಅನ್ಯಾಯವಾಗುತ್ತದೆ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದ್ದು, ಈ ಬಾರಿ ಬಿಜೆಪಿಯ ಗೆಲುವು ಕಷ್ಟಕರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ನಡುವೆ ಗೆಲ್ಲುವ ಅಭ್ಯರ್ಥಿಗಳ ಬೇಟೆಗಾಗಿ ಪಕ್ಷವೂ ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 10% ಮೀಸಲಾತಿ: ಆರ್‌‌ಎಸ್‌ಎಸ್‌ ಮಂದಿ ಹಬ್ಬಿಸಿರುವ 100% ಸುಳ್ಳುಗಳು!

ನಾನುಗೌರಿ.ಕಾಂ ಜೊತಗೆ ಮಾತನಾಡಿದ ರಾಜಕೀಯ ವಿಶ್ಲೇಷಕರೊಬ್ಬರು, “ಗುಜರಾ‌ತ್ ಮಾದರಿಯ ತಂತ್ರಗಾರಿಕೆ ಕರ್ನಾಟಕದಲ್ಲಿ ಸಾಧ್ಯವೆ ಇಲ್ಲ. ಯಾಕೆಂದರೆ ಅಲ್ಲಿನ ಪರಿಸ್ಥಿತಿಯೆ ಬೇರೆ, ಇಲ್ಲಿನ ಪರಿಸ್ಥಿತಿಯೆ ಬೇರೆ. ಅಲ್ಲಿ ಬಿಜೆಪಿ ಸರ್ಕಾರ ಬಂದು 25 ವರ್ಷಗಳಾಗಿವೆ. ಅಲ್ಲದೆ, ಅಲ್ಲಿ ಹಾಲಿ ಶಾಕರಿಗೆ ಟಿಕೆಟ್‌ ನಿರಾಕರಿಸುವುದು ಇದುವೆ ಮೊದಲ ಬಾರಿ ಅಲ್ಲ. ಅಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಪಕ್ಷದ ಕಡೆಯಿಂದ ಶಾಸಕರ ಕಡೆಗೆ ವ್ಯಕ್ತಿಗತವಾಗಿ ತಿರುಗಿಸಿ ಅವರನ್ನು ಬದಲಾಯಿಸುವುದನ್ನು ಗುಜರಾತ್‌ನಲ್ಲಿ ಪ್ರತಿಬಾರಿಯು ನಡೆಯುತ್ತಿದೆ” ಎಂದು ಹೇಳಿದರು.

ಗುಜರಾತ್‌‌ನಲ್ಲಿ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿ ಇರುವುದರಿಂದ ಆಡಳಿತ ವಿರೋಧಿ ಅಲೆಯನ್ನು ವ್ಯಕ್ತಿಕೇಂದ್ರಿತವಾಗಿ ತಿರುಗಿಸುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಹಳೆಯ ಮುಖವನ್ನು ಬದಲಾಯಿಸಿ, ನಮ್ಮದು ಹೊಸ ಪಕ್ಷ ಮತ್ತು ಹೊಸ ಸರ್ಕಾರ ತರುತ್ತೇವೆ ಎಂದು ಜನರ ನಡುವೆ ಭ್ರಮೆ ಹುಟ್ಟುಹಾಕುತ್ತದೆ. ಈ ರೀತಿಯ ತಂತ್ರಗಾರಿಕೆಯನ್ನು ಬಿಜೆಪಿ ಮೊದಲಿನಿಂದಲೂ ಗುಜರಾತ್‌ನಲ್ಲಿ ಮಾಡುತ್ತಲೆ ಬಂದಿದೆ. ಅದಕ್ಕಾಗಿಯೆ ಗುಜರಾತ್‌ ನರೇಂದ್ರ ಮೋದಿ ಮುಖ್ಯಮಂತ್ರಿ ಆದ ನಂತರ ಹಲವಾರು ಮುಖ್ಯಮಂತ್ರಿಗಳನ್ನು ಕಂಡಿದೆ. ಅಲ್ಲದೆ, ಮೋದಿ ಅವರು ಅಲ್ಲಿ ಸಿಎಂ ಆಗಿದ್ದಾಗ ಕೂಡಾ ಬಿಜೆಪಿ ಅಲ್ಲಿನ ಹಲವಾರು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ ಮಾಡಿತ್ತು.

ಗುಜರಾತ್‌ ಚುನಾವಣೆಯ ವಿಚಾರದಲ್ಲಿ, ಯಾರ ವಿರುದ್ಧ ಜನಾಕ್ರೋಶ ಇರುತ್ತೋ ಅಂತಹ ಅಭ್ಯರ್ಥಿಗಳನ್ನು ಅಲ್ಲಿ ಬಿಜೆಪಿ ಬದಲಾವಣೆ ಮಾಡುತ್ತಲೆ ಬಂದಿದೆ. ರಾಜ್ಯದ ಈಗಿನ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್‌ ಕೂಡಾ ಮೊದಲ ಬಾರಿಗೆ ಆಯ್ಕೆಯಾಗಿರುವ  ಶಾಸಕರಾಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ಚುನಾವಣೆ ಬಂದಿದೆ. ಅವರ ಸಂಪುಟದಲ್ಲಿ ಬಿಜೆಪಿ ಯಾವುದೆ ಹಳೆಯ ಮುಖಗಳಿಗೆ ಅವಕಾಶ ನೀಡದೆ, ಹೊಸಬರಿಗೆ ಅವಕಾಶ ನೀಡಿದೆ. ಹೀಗಾಗಿ ಕಳೆದ 25 ವರ್ಷಗಳ ಸರ್ಕಾರದ ಬದಲಿಗೆ ನಾವು ಹೊಸ ಸರ್ಕಾರವನ್ನು ರಚನೆ ಮಾಡಿದ್ದೇವೆ ಎಂಬಂತೆ ಗುಜರಾತ್ ಅಲ್ಲಿನ ಜನರ ಮುಂದೆ ಹೋಗುತ್ತಿದೆ.

ಇದನ್ನೂ ಓದಿ: EWS: ಸಾಮಾಜಿಕ ನ್ಯಾಯಕ್ಕಾಗಿ ನಡೆದ ಶತಮಾನದ ಹೋರಾಟಕ್ಕೆ ಹಿನ್ನಡೆ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ಆದರೆ ಕರ್ನಾಟಕ ಬಿಜೆಪಿಯ ಪರಿಸ್ಥಿಯೆ ಬೇರೆಯದಾಗಿದ್ದು, ರಾಜ್ಯದಲ್ಲಿ ವಿರುದ್ಧ ತೀವ್ರ ಆಡಳಿತ ವಿರೋಧಿ ಅಲೆಯಿದೆ ಎಂದು ಹಿರಿಯ ಪತ್ರಕರ್ತರೊಬ್ಬರು ವಿಶ್ಲೇಷಿಸುತ್ತಾರೆ. ಹಿರಿಯ ಶಾಸಕರಿಗೆ ಟಿಕೆಟ್ ನೀಡದಿರಿ ಎಂದು ಲೆಹರ್‌ ಸಿಂಗ್ ಹೇಳಿದ್ದಾರೆ. ಅವರ ಮಾತಿನಲ್ಲೆ ಹೇಳಬಹುದಾದರೆ ಪಕ್ಷದಲ್ಲಿ ಜಗದೀಶ್‌ ಶೆಟ್ಟರ್‌, ಅಶೋಕ್‌ ಕುಮಾರ್‌, ಸುರೇಶ್‌ ಕುಮಾರ್‌ ಹಾಗೂ ಈಶ್ವರಪ್ಪ ಅವರು ಹಿರಿಯ ನಾಯಕರಾಗಿದ್ದಾರೆ. “ಈಗಿನ ರಾಜಕೀಯ ಲೆಕ್ಕಾಚಾರ ಹೇಗಿದೆ ಎಂದರೆ, ಬಿಜೆಪಿಗೆ ಸೀಟುಗಳು ಗೆಲ್ಲುವುದೆ ಕಷ್ಟವಿದೆ, ಅಷ್ಟರಮಟ್ಟಿಗೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ. ಹೀಗಾಗಿ ಗೆಲ್ಲುವ ಹಿರಿಯ ಅಭ್ಯರ್ಥಿಗಳಿಗೆ ಟಿಕೆಟ್‌ ನಿರಾಕರಣೆ ಮಾಡಿ ಪಕ್ಷಕ್ಕೆ ಅಧಿಕಾರ ಹಿಡಿಯಲು ಸಾಧ್ಯವೆ?” ಎಂದು ಅವರು ಪ್ರಶ್ನಿಸುತ್ತಾರೆ.

ಹಾಗೆ ನೋಡಿದರೆ, ಗುಜರಾತ್‌ ಮಾದರಿಯ ರಾಜಕೀಯ ತಂತ್ರಗಾರಿಕೆ ಬಿಜೆಪಿ ಬೇರೆ ಎಲ್ಲೂ ಪ್ರಯೋಗ ಮಾಡುತ್ತಿಲ್ಲ. ಗುಜರಾತ್‌ನಲ್ಲಿ ನಿರಂತರ ಅಧಿಕಾರದಲ್ಲಿ ಇರುವುದರಿಂದ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಇದನ್ನು ಪ್ರಯೋಗಿಸುತ್ತಿದೆ ಎಂಬುವುದನ್ನು ಬಿಟ್ಟರೆ, ಅದೇ ತಂತ್ರಗಾರಿಕೆಯನ್ನು ಪಕ್ಕದ ರಾಜ್ಯವಾದ ಮಧ್ಯಪ್ರದೇಶದಲ್ಲಿ ಕೂಡಾ ಮಾಡುತ್ತಿಲ್ಲ. ಜೊತೆಗೆ ಗುಜರಾತ್‌‌‌ನೊಂದಿಗೆ ಚುನಾವಣೆ ನಡೆಯುತ್ತಿರುವ ಹಿಮಾಚಲ ಪ್ರದೇಶದಲ್ಲಿ ಕೂಡಾ ಪಕ್ಷ ಈ ತಂತ್ರಗಾರಿಕೆ ಮಾಡುತ್ತಿಲ್ಲ.

ಯಾವ ರೀತಿ ಲೆಕ್ಕಾಚಾರ ಹಾಕಿದರೂ ಕರ್ನಾಟಕದಲ್ಲಿ ಗುಜರಾತ್‌ ಮಾದರಿ ತಂತ್ರಗಾರಿಕೆ ಸಾಧ್ಯವೆ ಇಲ್ಲ. ರಾಜ್ಯದಲ್ಲಿ ಗೆಲ್ಲುವುದೊಂದೆ ಮಾನದಂಡವಾಗಿ ಬಿಜೆಪಿ ಅಖಾಡಕ್ಕೆ ಇಳಿಯಲಿದೆ. ಇದೇ ತಂತ್ರಗಾರಿಕೆಯನ್ನು ರಾಜ್ಯದಲ್ಲಿ ಉಳಿದ ಪಕ್ಷಗಳೂ ಮಾಡುತ್ತವೆ. “ಗುಜರಾತ್‌ನಲ್ಲಿ ಹೊಸಬರಿಗೆ ನೀಡಿರುವ ಅವಕಾಶ ಅನ್ನುವುದಕ್ಕಿಂತ ಹಳೆ ಮುಖಗಳನ್ನು ಇಟ್ಟುಕೊಂಡರೆ ಸೋಲುತ್ತೇವೆ ಎಂಬ ಭಯಕ್ಕೆ ಹೊಸಬರಿಗೆ ಅವಕಾಶ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಹಳೆಯ ಮುಖಗಳನ್ನು ಮುಂದಕ್ಕೆ ತಂದರಷ್ಟೆ ಗೆಲ್ಲಲು ಸಾಧ್ಯ. ಹಾಗಾಗಿ ರಾಜ್ಯದಲ್ಲಿ ಹಿರಿಯ ನಾಯಕರಿಗೆ ಟಿಕೆಟ್‌ ತಪ್ಪುವ ಸಾಧ್ಯತೆಯೆ ಇಲ್ಲ” ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಸುಳ್ಯ: 2 ಹಳ್ಳಿಗಳ 4 ಕಿ.ಮಿ. ಅಂತರದಲ್ಲಿ 2 ಬಾರ್‌‌ ಓಪನ್‌; ಗ್ರಾಮಸ್ಥರ ಪ್ರತಿಭಟನೆ ಕೇಳುವವರಿಲ್ಲ!

“ಹೆಚ್ಚೆಂದರೆ ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಗೆ ಟಿಕೆಟ್‌ ತಪ್ಪುವ ಸಾಧ್ಯತೆಯಿದೆ. ಅದರಲ್ಲೂ ಯಡಿಯೂರಪ್ಪ ಅವರೇ ಪಕ್ಷದೊಂದಿಗೆ ಟಿಕೆಟ್‌ ಕೇಳುವುದಿಲ್ಲ. ಆದರೆ ಅವರ ಮಕ್ಕಳಿಗೆ ಖಂಡಿತಾ ಟಿಕೆಟ್‌ ಸಿಗುತ್ತದೆ. ರಾಜ್ಯ ಬಿಜೆಪಿಯ ಪರಿಸ್ಥಿತಿ ಎಷ್ಟು ಕೆಟ್ಟದಿದೆ ಎಂದರೆ, ಭ್ರಷ್ಟಾಚಾರ ವಿಚಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪ ಅವರಿಗೆ ಕೂಡಾ ಟಿಕೆಟ್‌ ಸಿಕ್ಕರೆ ಆಶ್ಚರ್ಯವಿಲ್ಲ” ಎಂದು ಬಿಜೆಪಿ ರಾಜಕೀಯವನ್ನು ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತರೊಬ್ಬರ ಅಭಿಪ್ರಾಯವಾಗಿದೆ.

“ಭ್ರಷ್ಟಾಚಾರ ಆರೋಪಿಗಳಿಗೆ ಟಿಕೆಟ್‌ ಇಲ್ಲ ಎಂಬುವುದು ಬಿಜೆಪಿಯ ಪತ್ರಿಕಾ ಹೇಳಿಕೆಯ ಡೈಲಾಗ್‌ಗಳು ಮಾತ್ರ. ಹಾಗಾದರೆ ಮುಖ್ಯಮಂತ್ರಿ ಬಸವರಾ‌ಜ್‌ ಅವರಿಗೆ ಟಿಕೆಟ್‌ ಸಿಗಬಾರದಿತ್ತು. ತೀರಾ ಇತ್ತೀಚೆಗೆ ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ದುರಂತ ಸಂಭವಿಸಿತು. ಅಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕೂಡಾ ಕೇಳಿ ಬಂತು. ಆದರೆ ಅಲ್ಲಿನ ಸ್ಥಳೀಯ ಶಾಸಕನಿಗೆ ಪಕ್ಷ ಟಿಕೆಟ್‌ ನೀಡಿದೆ. ಪಕ್ಷದ ವಿಶ್ಲೇಷಣೆ ಮೋರ್ಬಿ ಶಾಸಕನ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಹೇಳುತ್ತಿದೆ, ಹಾಗಾಗಿ ಅವರಿಗೆ ಟಿಕೆಟ್‌ ಸಿಕ್ಕಿದೆ. ಒಟ್ಟಿನಲ್ಲಿ ಬಿಜೆಪಿಗೆ ಗೆಲ್ಲುವುದೊಂದಗೆ ಮಾನದಂಡ ಹೊರತು ಬೇರೇನಿಲ್ಲ” ಎಂದು ಅವರು ಹೇಳುತ್ತಾರೆ.

ಈ ನಡುವೆ, ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿರುವ ಕೆಲವು ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಲೈಂಗಿಕ ಹಗರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ರಮೇಶ್‌ ಜಾರಕಿಹೊಳಿ ಜೆಡಿಎಸ್‌ ಸೇರುತ್ತಿದ್ದಾರೆ ಎಂಬ ವದಂತಿಗಳಿವೆ. ಉಳಿದಂತೆ ಆಪರೇಷನ್ ಕಮಲದ ಮೂಲಕ ಹೋದ ಎಲ್ಲರಿಗೂ ಬಿಜೆಪಿ ಟಿಕೆಟ್‌ ನೀಡುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಒಕ್ಕಲಿಗ-ಮುಸ್ಲಿಂ ಒಗ್ಗಟ್ಟು ಮುರಿಯಲು ಬಿಜೆಪಿ ನಡೆಸುತ್ತಿರುವ ಕುತಂತ್ರಗಳು

ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿಜೆಪಿ ಬದ್ಧವಾಗಿಲ್ಲ. ಈಗಿರುವ ಪಕ್ಷಾಂತರಿಗಳಲ್ಲಿ ಆರೆಸ್ಸೆಸ್‌ ಮತ್ತು ಬಿಜೆಪಿಗೆ ಸಮಾಧಾನ ತಂದಿರುವುದು ಸಚಿವ ಸುಧಾಕರ್‌ ಮತ್ತು ಎಸ್‌.ಟಿ. ಸೋಮಶೇಖರ್‌‌ ಮಾತ್ರವಾಗಿದ್ದು, ಉಳಿದ ಯಾವ ಪಕ್ಷಾಂತರಿಗಳ ಬಗ್ಗೆ ಕೂಡಾ ಬಿಜೆಪಿಗೆ ಸಮಾಧಾನವಿಲ್ಲ. ಅವರು ಗೆಲ್ಲುವ ಅಭ್ಯರ್ಥಿಗಳಾಗಿರುವುದರಿಂದ ಟಿಕೆಟ್‌ ನೀಡುತ್ತದೆಯೆ ವಿನಃ ಸಚಿವ ಸ್ಥಾನ ನೀಡುವುದಿಲ್ಲ ಎಂಬುವುದು ಬಿಜೆಪಿಯನ್ನು ಹತ್ತಿರದಿಂದ ಬಲ್ಲವರ ಮಾತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...