Homeಮುಖಪುಟಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್‌‌; ಗುಜರಾತ್‌, ಮಧ್ಯಪ್ರದೇಶ ಅತ್ಯಂತ ಕಡಿಮೆ - RBI...

ಕಾರ್ಮಿಕರಿಗೆ ಕೂಲಿ | ಕೇರಳ, ಜಮ್ಮುಕಾಶ್ಮೀರ ಟಾಪ್‌‌; ಗುಜರಾತ್‌, ಮಧ್ಯಪ್ರದೇಶ ಅತ್ಯಂತ ಕಡಿಮೆ – RBI ವರದಿ

- Advertisement -
- Advertisement -

ಹಣದುಬ್ಬರ ಮತ್ತು ಬಡ್ಡಿದರಗಳು ಹೆಚ್ಚಾಗುತ್ತಿರುವ ವೇಳೆಯಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೃಷಿ ಕಾರ್ಮಿಕರು ದೇಶದಲ್ಲೆ ಅತ್ಯಂತ ಕಡಿಮೆ ದೈನಂದಿನ ಕೂಲಿ ಪಡೆಯುತ್ತಾರೆ ಹಾಗೂ ಕೇರಳ ಮತ್ತು ಜಮ್ಮು ಕಾಶ್ಮೀರದ ಕೃಷಿ ಕಾರ್ಮಿಕರು ಅತ್ಯಂತ ಹೆಚ್ಚಿನ ದೈನಂದಿನ ಕೂಲಿ ಪಡೆಯುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌‌ಬಿಐ) ವರದಿ ಹೇಳಿದೆ.

ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷದಲ್ಲಿ ಆರ್‌‌ಬಿಐ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶದ ಪುರುಷ ಕೃಷಿ ಕಾರ್ಮಿಕರು ಕೇವಲ 217.8 ರೂ. ದೈನಂದಿನ ಕೂಲಿ ಪಡೆದರೆ, ಗುಜರಾತ್‌ನಲ್ಲಿ ಕೃಷಿ ಕಾರ್ಮಿಕ 220.3 ರೂ. ಪಡೆಯುತ್ತಾನೆ. ಅದಾಗ್ಯೂ ಈ ಎರಡೂ ರಾಜ್ಯಗಳಲ್ಲಿ ನೀಡುವ ದೈನಂದಿನ ಕೂಲಿ ರಾಷ್ಟ್ರೀಯ ಸರಾಸರಿ 323.2 ರೂ.ಗಿಂತ ಕ್ಕಿಂತ ಕಡಿಮೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಜರಾತಿನಲ್ಲಿ ಒಬ್ಬ ಗ್ರಾಮೀಣ ಕೃಷಿ ಕಾರ್ಮಿಕನಿಗೆ ತಿಂಗಳಿಗೆ 25 ದಿನ ಕೆಲಸ ಸಿಕ್ಕಿದರೆ, ಅವನ ಮಾಸಿಕ ಸಂಪಾದನೆಯು ತಿಂಗಳಿಗೆ ಸುಮಾರು 5,500 ರೂಪಾಯಿಗಳಷ್ಟಿರುತ್ತದೆ, ಇದು ನಾಲ್ಕೈದು ಜನರಿರುವ ಕುಟುಂಬದ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲ. ಆದರೆ ಅತಿ ಹೆಚ್ಚು ವೇತನ ನೀಡುವ ಕೇರಳದ ಗ್ರಾಮೀಣ ಕೃಷಿ ಕಾರ್ಮಿಕರು ತಿಂಗಳಿಗೆ 25 ದಿನಗಳ ಕೆಲಸಕ್ಕೆ ಸರಾಸರಿ 18,170 ರೂ. ಪಡೆಯುತ್ತಾರೆ.

ಇದನ್ನೂ ಓದಿ: ‘ನೀನು ಕೂಲಿ ಕೆಲಸ ಮಾಡಬೇಕು, ಶಾಲೆಯಲ್ಲಿ ಅಡುಗೆಯನ್ನಲ್ಲ’: 6 ತಿಂಗಳಾದರೂ ದಲಿತ ಮಹಿಳೆಗೆ ನಿಲ್ಲದ ಕಿರುಕುಳ

2021-22 ರ ಆರ್ಥಿಕ ವರ್ಷವು ಗ್ರಾಮೀಣ ಆರ್ಥಿಕತೆಗೆ ಕೆಟ್ಟದ್ದಾಗಿ ಪರಿಣಮಿಸಿದ್ದು, ಕೋವಿಡ್ ಸಾಂಕ್ರಾಮಿಕವು ಉದ್ಯೋಗಗಳು ಮತ್ತು ಆದಾಯದ ಮಟ್ಟದ ಮೇಲೆ ಹೊಡೆತ ನೀಡಿದೆ. ಮಧ್ಯಪ್ರದೇಶದಲ್ಲಿ ಕೃಷಿ ಕಾರ್ಮಿಕರ ಮಾಸಿಕ ಕೂಲಿ ಸುಮಾರು 5,445 ರೂ. ಆಗಿದೆ. ಕೃಷಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡುವ ಇತರ ರಾಜ್ಯಗಳಲ್ಲಿ ಉತ್ತರ ಪ್ರದೇಶ ( ಗ್ರಾಮೀಣ ಕೃಷಿ ಕಾರ್ಮಿಕರು ಸರಾಸರಿ ದಿನಗೂಲಿ 270 ರೂ ) ಮಹಾರಾಷ್ಟ್ರ (284.2 ರೂ.) ಒಡಿಶಾ (269.5 ರೂ.) ಸೇರಿದೆ.

ಪ್ರತಿ ಕೃಷಿ ಕಾರ್ಮಿಕರಿಗೆ ಸರಾಸರಿ 726.8 ರೂ. ಕೂಲಿ ನೀಡುವುದರೊಂದಿಗೆ ಹೆಚ್ಚು ವೇತನ ನೀಡುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದೆ. ಕೇರಳದಲ್ಲಿನ ಹೆಚ್ಚಿನ ಕೂಲಿ ಇತರ ಕಳಪೆ ವೇತನ ನೀಡುವ ರಾಜ್ಯಗಳ ಕೃಷಿ ಕಾರ್ಮಿಕರನ್ನು ಆಕರ್ಷಿಸಿದ್ದು, ಹೀಗಾಗಿ ಸುಮಾರು 25 ಲಕ್ಷ ವಲಸೆ ಕಾರ್ಮಿಕರು ರಾಜ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ, ಕೃಷಿ ಕಾರ್ಮಿಕರು ಪ್ರತಿ ವ್ಯಕ್ತಿಗೆ ಸರಾಸರಿ 524.6 ರೂ., ಹಿಮಾಚಲ ಪ್ರದೇಶ 457.6 ರೂ. ಮತ್ತು ತಮಿಳುನಾಡು 445.6 ರೂ. ಕೂಲಿ ಪಡೆಯುತ್ತಾರೆ.

ಕರ್ನಾಟಕದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಸರಾಸರಿ 335.5 ರೂ. ಸಿಗುತ್ತದೆ ಎಂದು ಅಂಕಿ-ಅಂಶ ಹೇಳಿದೆ.

ಇದನ್ನೂ ಓದಿ: ದಲಿತ್‌ ಫೈಲ್ಸ್‌‌: ಕೂಲಿ ಕೇಳಿದ ದಲಿತ ಬಾಲಕನಿಗೆ ಹಲ್ಲೆ ನಡೆಸಿ ಪಾದ ನೆಕ್ಕಿಸಿದ ದುಷ್ಕರ್ಮಿಗಳು

ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಕೃಷಿಯೇತರ ಪುರುಷ ಕಾರ್ಮಿಕರ ಕೂಲಿ ನೀಡುವ ವಿಚಾರದಲ್ಲಿ, ಮಧ್ಯಪ್ರದೇಶ ಕಡಿಮೆ ವೇತನ ನೀಡುತ್ತಿದ್ದು, ಅಲ್ಲಿ ಸರಾಸರಿ 230.3 ರೂ. ರಷ್ಟಿದ್ದರೆ, ಗುಜರಾತ್ ಕಾರ್ಮಿಕರು 252.5 ರೂ. ಮತ್ತು ತ್ರಿಪುರಾದಲ್ಲಿ 250 ರೂ. ದೈನಂದಿನ ವೇತನವನ್ನು ನೀಡಲಾಗುತ್ತದೆ. ಇವೆಲ್ಲವೂ ರಾಷ್ಟ್ರೀಯ ಸರಾಸರಿಗಿಂತ 326.6. ರೂ. ಗಿಂತಲೂ ಕಡಿಮೆಯಾಗಿದೆ.

ಮತ್ತೊಂದೆಡೆ, ಕೇರಳವು ಕೃಷಿಯೇತರ ಕಾರ್ಮಿಕರ ಕೂಲಿಯ ವಿಚಾರದಲ್ಲಿ ಕೂಡಾ ಮುಂಚೂಣಿಯಲ್ಲಿದ್ದು, ಅಲ್ಲಿ ಪ್ರತಿ ವ್ಯಕ್ತಿಗೆ 681.8 ರೂ. ಕೂಲಿ ನೀಡುತ್ತಾರೆ. ಇದರ ನಂತರ ನಂತರ ಜಮ್ಮುಕಾಶ್ಮೀರ 500.8 ರೂ., ತಮಿಳುನಾಡು 462.3 ರೂ. ಮತ್ತು ಹರಿಯಾಣ 409.3 ರೂ. ಕೂಲಿ ನೀಡುತ್ತದೆ.

ಕರ್ನಾಟಕವು ಕೃಷಿಯೇತರ ಕೂಲಿ ಕಾರ್ಮಿಕರಿಗೆ 297.9 ರೂ. ಸರಾಸರಿ ಕೂಲಿ ನೀಡುತ್ತದೆ. ಇದು ರಾಷ್ಟ್ರೀಯ ಸರಾಸರಿಗಿಂತ 326.6. ರೂ. ಗಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

ಗ್ರಾಮೀಣ ಪುರುಷ ಕಟ್ಟಡ ಕಾರ್ಮಿಕ ಕೂಲಿ ವಿಷಯದಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶವು ರಾಷ್ಟ್ರೀಯ ಸರಾಸರಿ ರೂ 373.3 ಕ್ಕಿಂತ ಕಡಿಮೆ ಕೂಲಿಯನ್ನು ನೀಡುತ್ತದೆ. ಗುಜರಾತ್ ಗ್ರಾಮೀಣ ಕಟ್ಟಡ ಕಾರ್ಮಿಕರು ಸರಾಸರಿ 295.9 ರೂ. ಇದ್ದರೆ, ಮಧ್ಯಪ್ರದೇಶ 266.7 ರೂ. ಮತ್ತು ತ್ರಿಪುರಾ 250 ರೂ. ನೀಡುತ್ತದೆ.

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಗ್ರಾಮೀಣ ಕಟ್ಟಡ ಕಾರ್ಮಿಕರಿಗೆ ಕೇರಳದಲ್ಲಿ 837.7 ರೂ. ಕೂಲಿ ನೀಡಿದರೆ, ಜಮ್ಮು ಕಾಶ್ಮೀರದಲ್ಲಿ 519.8 ರೂ., ತಮಿಳುನಾಡಿನಲ್ಲಿ 478.6 ರೂ. ಮತ್ತು ಹಿಮಾಚಲ ಪ್ರದೇಶದಲ್ಲಿ 462.7 ರೂ. ನೀಡಲಾಗುತ್ತದೆ.

ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರಿಗೆ ಸರಾಸರಿ 383.5 ರೂ. ಕೂಲಿ ನೀಡಲಾಗುತ್ತಿದ್ದು, ಇದು ರಾಷ್ಟ್ರೀಯ ಸರಾಸರಿ ಕೂಲಿಗಿಂತ ತುಸುವೆ ಹೆಚ್ಚಾಗಿದೆ.

ಇದನ್ನೂ ಓದಿ: ದೌರ್ಜನ್ಯ ಶೋಷಣೆಗಳ ಸುಗ್ಗಿ! ಕಬ್ಬು ಕಟಾವು ಕೂಲಿಗಾರರ ಜೀತವಿಮುಕ್ತಿಯೆಂದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...