Homeಮುಖಪುಟ‘ಘೋಷಿತ ವಿದೇಶಿ’ಯರನ್ನೆಲ್ಲ ರಾಜ್ಯದ ಅತಿದೊಡ್ಡ ಡಿಟೆನ್ಷನ್‌ ಸೆಂಟರ್‌ಗೆ ವರ್ಗಾಯಿಸಿದ ಅಸ್ಸಾಂ

‘ಘೋಷಿತ ವಿದೇಶಿ’ಯರನ್ನೆಲ್ಲ ರಾಜ್ಯದ ಅತಿದೊಡ್ಡ ಡಿಟೆನ್ಷನ್‌ ಸೆಂಟರ್‌ಗೆ ವರ್ಗಾಯಿಸಿದ ಅಸ್ಸಾಂ

- Advertisement -
- Advertisement -

ಅಸ್ಸಾಂ ರಾಜ್ಯದಲ್ಲಿ ‘ಘೋಷಿತ ವಿದೇಶಿಯರು’ ಎಂದು ಗುರುತಿಸಲ್ಪಟ್ಟ ಎಲ್ಲ ವ್ಯಕ್ತಿಗಳನ್ನು ಗೋಲ್ಪಾರಾ ಜಿಲ್ಲೆಯ ಮಾಟಿಯಾ ‘ಟ್ರಾನ್ಸಿಟ್ ಕ್ಯಾಂಪ್‌’ಗೆ ಸ್ಥಳಾಂತರಿಸಲಾಗಿದೆ. ಇದು ರಾಜ್ಯದಲ್ಲಿನ ಅತಿದೊಡ್ಡ ಡಿಟೆನ್ಷನ್‌ ಸೆಂಟರ್‌ ಎಂದು ಗುರುತಿಸಲ್ಪಟ್ಟಿದೆ.

ವಿದೇಶಿಯರೆಂದು ಗುರುತಿಸಲ್ಪಟ್ಟಿರುವ, ಗಡೀಪಾರು ಅಥವಾ ವಾಪಸ್‌‌ ಹೋಗಲು ನಿರೀಕ್ಷಿಸುತ್ತಿರುವ ವ್ಯಕ್ತಿಗಳನ್ನು; ಪೌರತ್ವದ ಹಕ್ಕುಗಳನ್ನು ಇತ್ಯರ್ಥಗೊಳಿಸಲು ಕಾಯುತ್ತಿರುವವರನ್ನು ಬಂಧಿಸಲು ಮಾಟಿಯಾ ಕೇಂದ್ರವನ್ನು ಬಳಸಲಾಗುತ್ತಿದೆ.

ಡಿಟೆನ್ಷನ್‌ ಸೆಂಟರ್‌ಗಳನ್ನು ಈಗ ‘ಟ್ರಾನ್ಸಿಸ್ಟ್‌ ಕ್ಯಾಂಪ್‌’ ಎಂದು ಕರೆಯಬೇಕೆಂದು ರಾಜ್ಯ ಸರ್ಕಾರದ ಅಧಿಸೂಚನೆ ತಿಳಿಸಿದೆ.

ಸಿಲ್ಚಾರ್ ಡಿಟೆನ್ಷನ್‌ ಸೆಂಟರ್‌ನಲ್ಲಿದ್ದ  87 ಮಂದಿ ಬಂಧಿತರ ಕೊನೆಯ ತಂಡವನ್ನು ಮಾಟಿಯಾ ಟ್ರಾನ್ಸಿಟ್ ಕ್ಯಾಂಪ್‌ಗೆ ಕರೆದೊಯ್ಯಲಾಯಿತು ಎಂದು ಅಸ್ಸಾಂ ಇನ್‌ಸ್ಪೆಕ್ಟರ್ ಜನರಲ್ ಆಫ್ ಪ್ರಿಸನ್ ಆಗಿರುವ ಪುಬಾಲಿ ಗೊಹೈನ್ ಪಿಟಿಐಗೆ ತಿಳಿಸಿದ್ದಾರೆ.

“ಇದರೊಂದಿಗೆ ಎಲ್ಲಾ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಸ್ಸಾಂನಲ್ಲಿ ಆರು ಡಿಟೆನ್ಷನ್‌ ಕೇಂದ್ರಗಳು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ” ಎಂದು ಗೊಹೈನ್ ಮಾಹಿತಿ ನೀಡಿದ್ದಾರೆ.

ಗೋಲ್ಪಾರಾ, ಕೊಕ್ರಜಾರ್, ತೇಜ್ಪುರ್, ಜೋರ್ಹತ್, ದಿಬ್ರುಗಢ್ ಮತ್ತು ಸಿಲ್ಚಾರ್ ಜಿಲ್ಲಾ ಕಾರಾಗೃಹಗಳಲ್ಲಿ ಡಿಟೆನ್ಷನ್‌ ಸೆಂಟರ್‌ಗಳಿವೆ.

ಘೋಷಿತ ವಿದೇಶಿಯರನ್ನು ಸ್ಥಳಾಂತರಿಸುವ ಪ್ರಕ್ರಿಯೆಯು ಜನವರಿ 27ರಂದು ಗೋಲ್ಪಾರಾ ಡಿಟೆನ್ಷನ್‌ ಸೆಂಟರ್‌ನಿಂದ 68 ಬಂಧಿತರನ್ನು ವರ್ಗಾಯಿಸುವುದರೊಂದಿಗೆ ಪ್ರಕ್ರಿಯೆ ಪ್ರಾರಂಭವಾಯಿತು.

ಮಾಟಿಯಾ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ 217 ಘೋಷಿತ ವಿದೇಶಿಯರು ಇದ್ದಾರೆ ಎಂದು ಗೋಲ್‌ಪಾರಾ ಡೆಪ್ಯೂಟಿ ಕಮಿಷನರ್ ಖನೀಂದ್ರ ಚೌಧರಿ ಹೇಳಿದ್ದಾರೆ.

“ಈ ಅಂಕಿ ಅಂಶವು ನ್ಯಾಯಾಲಯದ ತೀರ್ಪುಗಳು ಮತ್ತು ವಿದೇಶಿಯರನ್ನು ಗಡೀಪಾರು ಮಾಡುವುದರೊಂದಿಗೆ ಆಗಾಗ್ಗೆ ಬದಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಕೇವಲ ಮೂರು ದಿನಗಳ ಹಿಂದೆ, ಮೂರು ಬಾಂಗ್ಲಾದೇಶೀಯರನ್ನು ಮಾಟಿಯಾ ಶಿಬಿರದಿಂದ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ” ಎಂದಿದ್ದಾರೆ.

ವಿದೇಶಿಯರ ಬಂಧನಕ್ಕಾಗಿ ಒಂದು ವಿಶೇಷ ಡಿಟೆನ್ಷನ್‌ ಸೆಂಟರ್‌ ಸ್ಥಾಪಿಸುವಂತೆ ಅಸ್ಸಾಂ ಸರ್ಕಾರಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ನಿರ್ದೇಶನ ನೀಡಿತು. ಹೀಗಾಗಿ ವಿದೇಶಿ ಬಂಧಿತರನ್ನು ಜೈಲುಗಳಲ್ಲಿನ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳೊಂದಿಗೆ ಇರಿಸುತ್ತಿಲ್ಲ.

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯಿಂದ ಹೊರಗುಳಿಯುವ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳನ್ನು ಪರಿಗಣಿಸಿ ಅಸ್ಸಾಂ ಸರ್ಕಾರವು ಕನಿಷ್ಠ 10 ಇಂತಹ ಕೇಂದ್ರಗಳನ್ನು ನಿರ್ಮಿಸಲು ಯೋಜಿಸಿತ್ತು. ಪ್ರಸ್ತಾವಿತ 10 ಶಿಬಿರಗಳಲ್ಲಿ ಮಾಟಿಯಾ ಬಂಧನ ಕೇಂದ್ರವು ಮೊದಲನೆಯದು.

ರಾಜ್ಯದಲ್ಲಿ ವಾಸಿಸುವ ದಾಖಲೆರಹಿತ ವಲಸಿಗರಿಂದ ಭಾರತೀಯ ನಾಗರಿಕರನ್ನು ಪ್ರತ್ಯೇಕಿಸುವ ಗುರಿಯೊಂದಿಗೆ ಎನ್‌ಆರ್‌ಸಿ ಕಾರ್ಯಕ್ರಮವನ್ನು ಅಸ್ಸಾಂ ಸರ್ಕಾರ ಆಗಸ್ಟ್ 2019 ರಲ್ಲಿ ಪ್ರಕಟಿಸಿದೆ.

ತಮ್ಮ ಪೂರ್ವಜರು ಮಾರ್ಚ್ 24, 1971ರ ಮಧ್ಯರಾತ್ರಿಗಿಂತ ಮೊದಲು ಅಸ್ಸಾಂಗೆ ಪ್ರವೇಶಿಸಿರುವ ಸಂಬಂಧ ದೃಢೀಕರಿಸಲು ಸಾಧ್ಯವಾಗದವರನ್ನು ನಾಗರಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎನ್‌ಆರ್‌ಸಿ ನಿಬಂಧನೆಗಳು ಹೇಳುತ್ತವೆ.

ಇದನ್ನೂ ಓದಿರಿ: ಈ ಮಧುರ ದಾಂಪತ್ಯಕ್ಕೆ ‘ಎನ್‌ಆರ್‌ಸಿ’ ಏಕೆ?

19 ಲಕ್ಷಕ್ಕೂ ಹೆಚ್ಚು ಜನರು ಅಥವಾ ರಾಜ್ಯದ ಜನಸಂಖ್ಯೆಯ ಸುಮಾರು 6% ಜನರನ್ನು ಅಂತಿಮ ನಾಗರಿಕರ ಪಟ್ಟಿಯಿಂದ ಹೊರಗಿಡಲಾಗಿದೆ.

ರಾಜ್ಯ ಸರ್ಕಾರವು ಎನ್‌ಆರ್‌ಸಿಯ ಅಂತಿಮ ಕರಡನ್ನು ‘ದೋಷಪೂರಿತ’ ಎಂದು ಕರೆದಿದ್ದು, ಇದು ಅಸ್ಸಾಂನ ಹಲವಾರು ಸ್ಥಳೀಯ ಜನರನ್ನೂ ಹೊರಗಿಟ್ಟಿದೆ ಎಂದು ಆರೋಪಿಸಿದೆ. ಹೊರಗಿಡುವಿಕೆಯ ವಿರುದ್ಧದ ಮೇಲ್ಮನವಿಗಳನ್ನು ಆಲಿಸುವ ಕೆಲಸವನ್ನು ವಿದೇಶಿಯರ ನ್ಯಾಯಮಂಡಳಿಗಳಿಗೆ ವಹಿಸಲಾಯಿತು. ಎನ್‌ಆರ್‌ಸಿಯಿಂದ ಬಾಧಿತರಾದವರು ಬಂಧನದಲ್ಲಿ ಇರಬೇಕಾಗುತ್ತದೆ.

ಹೆಚ್ಚಿನ ವ್ಯಕ್ತಿಗಳು ವಿದೇಶಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಶಿಬಿರಗಳಲ್ಲಿ ಇದ್ದಾರೆ. “ಪ್ರಾಥಮಿಕ ಕಾನೂನು ಪ್ರಾತಿನಿಧ್ಯವನ್ನು ಸಹ ಇವರು ಹೊಂದಿಲ್ಲ. ನ್ಯಾಯಮಂಡಳಿಗಳೂ ಆಲಿಸುತ್ತಿಲ್ಲ” ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಾಂದರ್ ಜುಲೈ 2019 ರಲ್ಲಿ ಹೇಳಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...