Homeಮುಖಪುಟಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

ಬ್ರಿಟನ್ ಕವಿ ಬ್ರಯಾನ್ ಪ್ಯಾಟನ್ ಅವರ ಹತ್ತು ಪದ್ಯಗಳು

- Advertisement -
- Advertisement -

1.ಬೆಳಕಿನವತಾರ

ನನ್ನ ಕನ್ನಡಿಯೊಳಗೆ ನಡೆದು ಬಂದವಳು
ಪ್ರೀತಿ ಮತ್ತು ಅದರ ಇತರ ಉತ್ಪನ್ನಗಳ ಬಗ್ಗೆ
ಚಕಾರ ಎತ್ತುವುದಿಲ್ಲ,
ಸುಮ್ಮನೇ ನಿಂತಿರುತ್ತಾಳೆ,
ತನ್ನ ಮೌನವನ್ನು ತಾನೇ ಸುಖಿಸುತ್ತಾಳೆ,
ನನಗೆ ಗೊತ್ತಿರುವ ಎಲ್ಲ ಋತುಗಳೂ
ತಾನೇ ಎಂಬಂತೆ ಉಟ್ಟು ಮೆರೆಯುತ್ತಾಳೆ,
ಒಂದು ಮೊಲೆಯಲ್ಲಿ ಕಾಡು
ಇನ್ನೊಂದರಲ್ಲಿ ಸಮುದ್ರ ಧರಿಸಿಕೊಂಡಿದ್ದಾಳೆ.

ಯಾವುದೇ ಬೇಡಿಕೆಯಿಲ್ಲ ಅವಳಲ್ಲಿ
ಒಮ್ಮೆ ನೋಡಿದರೆ ಸಾಕು.
ಎಷ್ಟೆಲ್ಲಾ ಬೇಡಿಕೆ.

ಮಾಟ ಎಲ್ಲರ ಹಾಗೇ
ಪ್ರೇಮಕ್ಕೆ ಬೇಕಾದಷ್ಟು, ಸಾಕಾದಷ್ಟು,
ನನ್ನ ಕಟ್ಟಿ ಹಾಕಿರುವುದು ಅದಲ್ಲ,
ಅದರಾಚೆಗಿನ ಬೆಳಗು.

ಒಮ್ಮೊಮ್ಮೆ ನನಗನಿಸುತ್ತದೆ
ನಾನೂ ಹಾಗೇ
ಬೆಳಕಿನವತಾರ.

*****

2. Reading between Graffiti

ಟಾಯ್ಲೆಟ್‌ನ ಗೋಡೆಯ ಮೇಲೆ
ಮಸುಕು ಮಸುಕಾದ ಗೀಚು ಬರಹ,
‘FUCK THE STRANGER TONIGHT’
ಕಳೆದ ವಾರ ಕಣ್ಣಿಗೆ ಬಿದ್ದಿರಲಿಲ್ಲ.
ಬಾಕಿ ಎಲ್ಲ ಲವ್ ಸಿಂಬಲ್‌ಗಳು,
ಕಾಮ ಪ್ರಲಾಪಗಳು, ಉತ್ಕಟ ಹಳಹಳಿಕೆಗಳು
ಈ ಅನಾಮಿಕನ ಸಲಹೆಯ ಮುಂದೆ
ಸಪ್ಪೆ, ಸಪ್ಪೆ ಎನಿಸುವಂತಿದ್ದವು.
ಕಳೆದುಕೊಂಡವರು, ಸಾಯದ ಆದರೆ ದಿನದಿನಕ್ಕೂ
ಬಾತುಕೊಳ್ಳುತ್ತಲೇ ಸಣ್ಣಗಾಗುವವರು,
ಅನುಕಂಪಕ್ಕಾಗಿ ತುಡಿಯುವ ಆದರೆ
ಟಾಯ್ಲೆಟ್‌ನ ಗೋಡೆಗಳ ಮುಂದೆ ದಿಢೀರನೇ ದಾರ್ಶನಿಕರಾಗುವವರು,
ಹೀಗೆ ಗೋಡೆ ಬರಹಗಳು
ಆಯಾ ಗುಂಪಿನ ಮನಸ್ಥಿತಿಯನ್ನು ಹಾಡುತ್ತವೆ.
ಅದೇನೇ ಇರಲಿ
ಈ ಬರಹ ಬರೆದವನಿಗೆ
ಒಂದಿಷ್ಟು ಕ್ರೆಡಿಟ್ ಕೊಡಲೇಬೇಕು,
ಕೊನೆ ಪಕ್ಷ ತಿಳಿದುಕೊಳ್ಳಲಿಕ್ಕಾದರೂ
’ಯಾಕೆ? ರಾತ್ರಿ, ಹೀಗೆ ಒಳಗೆ ಇಳಿದು
ತನ್ನ ಉನ್ಮತ್ತ ದಾಸರಿಂದ
ತಪ್ಪುತಪ್ಪಾಗಿ ಬರೆಸುತ್ತದೆ
ಸತ್ಯ ವಚನ’

*****

3. ದುರಂತ

ನಿನ್ನೆ
ನಡು ಮನೆಯಲ್ಲಿರುವ
ಬೆಂಕಿಗೂಡಿನ ಹಿಂದೆ
ಪೆನ್ಸಿಲ್‌ನಲ್ಲಿ ಬರೆದಿರುವ ಒಂದು ಚೀಟಿ ಸಿಕ್ಕಿತು.
ಎಷ್ಟು ಹಳೆಯದೋ ಗೊತ್ತಿಲ್ಲ
ದಿನದ ಗೋಜಲುಗಳ ನಡುವೆ
ತನ್ನ ಪಾಳಿಗಾಗಿ ಕಾತುರದಿಂದ ಕಾಯುವಂತಿತ್ತು.

’ಬಾಸ್ಟರ್ಡ್’ ಹೀಗೆ ಶುರುವಾಗಿತ್ತು
’ಮತ್ತೆಂದೂ ವಾಪಸ್ ಆಗಲಾರೆ
ಇದೇ ಕೊನೆಯ ರಾತ್ರಿ
ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದೇನೆ’

ಕೆಳಗೆ ಬರೆದಿರುವ ಹೆಸರನ್ನ
ನನಗೆ ಗುರುತಿಸಲಾಗಲಿಲ್ಲ
ಆ ಸಹಿಯನ್ನ ಮಸಿ ನುಂಗಿ ಹಾಕಿತ್ತು.

ಅದು, ನನಗೇ ಬರೆದಿರುವ ಚೀಟಿ
ಎನ್ನುವ ಗ್ಯಾರಂಟಿ ಕೂಡ ನನಗಿರಲಿಲ್ಲ.
ಬಹುಶಃ ಇರಬಹುದು
ಬಹುಶಃ ಇರಲಿಕ್ಕೂ ಇಲ್ಲ.
ನನಗೆ ಅದು ಗೊತ್ತಾಗಲೂ ಇಲ್ಲ
ನಾನು ಕಾಳಜಿ ಕೂಡ ಮಾಡಲಿಲ್ಲ.

ತಮಾಷೆ ಎಂದರೆ ಒಮ್ಮೊಮ್ಮೆ
ದುರಂತ ಹೀಗೂ ನಡೆದುಹೋಗುತ್ತದೆ
ನಗಿಸದೇ ಅಳಿಸದೆ.
(The tragedy)

*****

4. ಹುಲ್ಲಿನ ಗರಿ

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು,
ನಾನು ಹುಲ್ಲಿನ ಗರಿ ಕೊಟ್ಟೆ.
ಉಹೂಂ,
ಕವಿತೆಯೇ ಬೇಕು ನಿನ್ನ ಹಟ,
ಹುಲ್ಲಿನ ಗರಿ ಸಾಕು ನನ್ನ ವಾದ.

ಮಂಜಿನಲ್ಲಿ ಮಿಂದ ಗರಿ ಎಲ್ಲಕ್ಕಿಂತ ಹೊಸದು
ನನ್ನ ಯಾವ ರೂಪಕಕ್ಕಿಂತಲೂ
ನನ್ನ ಸಮಜಾಯಿಷಿ,
ಆದರೂ ಅದು ಕವಿತೆಯಲ್ಲ…..
ಮುಂದುವರಿದಿದೆ ನಿನ್ನ ಹಟ.

ನಿನಗೆ ಸಿಟ್ಟು
ಹುಲ್ಲಿನ ಗರಿ ಸುಲಭ ಎಂಬ ನಂಬಿಕೆ
ಯಾರೂ ಕೊಡಬಲ್ಲರು ಎಂಬ ತಿಳಿವಳಿಕೆ.

ನಿನ್ನ ಫರ್ಮಾಯಿಶ್ ಕವಿತೆಯಾಗಿತ್ತು
ಹುಲ್ಲಿನ ಗರಿಯನ್ನು
ನಿನಗೆ ಒಪ್ಪಿಸಲಾಗದ ನನ್ನ ಅಸಹಾಯಕತೆಯ ಕುರಿತು
ನಾನೊಂದು ದುರಂತ ಕವಿತೆ ಬರೆದೆ
ಅದರಲ್ಲೊಂದು ಸಾಲಿತ್ತು
ನಿನ್ನ ಬಗ್ಗೆ
ವಯಸ್ಸಾಗುತ್ತಾ ಹೋದಂತೆ
ಹುಲ್ಲಿನ ಗರಿಯನ್ನು
ಒಪ್ಪಿಕೊಳ್ಳದ ನಿನ್ನ ಜಿದ್ದಿನ ಬಗ್ಗೆ.
(Blade of grass)

*****

5. What I need for the present

ಥ್ಯಾಂಕ್ಸ್, ಆದರೆ
ವಾಪಸ್ ತೆಗೆದುಕೊಂಡುಬಿಡು
ಈ ಉಂಗುರ ಮತ್ತು ಅದರ ಬಾಕ್ಸ್,
ಚಿಟ್ಟೆಯ ರೆಕ್ಕೆ ಮತ್ತು ಗಾಜಿನ ಮಣಿಗಳಿಂದ
ಅಲಂಕೃತವಾದ ಈ ಬಣ್ಣದ ಚಿತ್ರ
ಬೇಡ ನನಗೀಗ ಇವೆಲ್ಲ.
ದಯವಿಟ್ಟು, ಈ ಪುಸ್ತಕಗಳು,
ಪೋಸ್ಟ್ ಕಾರ್ಡುಗಳು,
ಜೇನು ಮೇಣದ ಕ್ಯಾಂಡಲ್‌ಗಳು,
ಹೂವಿನ ಕುಂಡಗಳು, ಪೇಂಟಿಂಗ್‌ಗಳು,
ಮತ್ತು ಈ ದುಬಾರಿ ಪೆನ್
ಎಲ್ಲವನ್ನೂ ವಾಪಸ್ ತೆಗೆದುಕೊಂಡುಬಿಡು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಯಾವುದನ್ನು ಕೊಡಲಾಗುವುದಿಲ್ಲವೋ
ಅದರ ಬದಲಿಗೆ ಕೊಡಲಾಗಿದೆ
ಎಂಬಂತಿವೆ ಈ ಉಡುಗೊರೆಗಳು.

ಹೀಗೆ ಹೇಳುವುದು ಸೌಜನ್ಯ ಅಲ್ಲ ನಿಜ, ಆದರೆ
ಈ ಕೋಣೆಯಲ್ಲಿ ಓಡಾಡುವಾಗಲೆಲ್ಲ
ಕಣ್ಣಿಗೆ ಬೀಳುವುದು ಈ ಉಡುಗೊರೆಗಳಲ್ಲ
ಅವುಗಳ ಮೇಲೆ ಧೂಳಿನಂತೆ ಕುಳಿತಿರುವ
ನಿನ್ನ ಗೈರು ಹಾಜರಿ ಮಾತ್ರ.

ದಯವಿಟ್ಟು ಕ್ಷಮಿಸು

ನೀನೇನೊ ಪ್ರೀತಿಯಿಂದಲೇ ಕೊಟ್ಟಿರಬಹುದು, ಆದರೆ
ಸದ್ಯ ಈ ಬೇಡಿಗಳ ತುರ್ತು ನನಗಿಲ್ಲ.

******

ಬ್ರಯಾನ್ ಪ್ಯಾಟನ್

6. She complicates her life

ಅದೇನೋ ಅವಳು
ಎಲ್ಲವನ್ನು ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಳ್ಳುತ್ತಾಳೆ.
ಕೆಲ ಭೂತಗಳು ಅವಳ ದಿನಗಳನ್ನು
ಹಿಡಿದು ಅಲ್ಲಾಡಿಸುತ್ತಿವೆ.

ಪ್ರೇಮ ತಾನಾಗಿಯೇ ಬಂದು, ಕೈಹಿಡಿದು
’ನಿಲ್ಲು’ ಎಂದರೆ
’ಹೋಗು’ ಎಂದು ಕೇಳಿಸಿಕೊಂಡು
ಬೆನ್ನು ತಿರುವಿ ಹೊರಟುಬಿಡುತ್ತಾಳೆ.

ಎಲ್ಲ ಬಾಗಿಲುಗಳನ್ನ ಮುಚ್ಚಿಕೊಂಡಿದ್ದಾಳೆ
ನೋವು ಹೆಚ್ಚಾದಾಗಲೆಲ್ಲ ಹಿಮವಾಗಿಬಿಡುತ್ತಾಳೆ.

*****

7. ತುಂಬಿಕೊಂಡವಳು

ಮೊನ್ನೆ ನಿನ್ನ
ಕಿಟಕಿಯಲ್ಲಿ ನೋಡಿದೆ.
ಅದೇ ಚೆಲುವು, ಅದೇ ಹೊಂಗೂದಲಿನ ಜಡೆ
ಅವೇ ಅಲೌಕಿಕ ನೀಳ ಕಾಲುಗಳು.
ಓಡಿ ಬೀದಿಗೆ ಬಂದವನೇ
ನಿನ್ನ ಹೆಸರಿಟ್ಟು ಕೂಗಿದೆ.
ನೀನು ಹಿಂತಿರುಗಿ ನೋಡಿ
ನನ್ನ ಆತುರಕ್ಕೆ
’ಛೀ’ ಎಂದೆ.
ಹೌದು obviously ಆಕೆ ನೀನಾಗಿರಲಿಲ್ಲ

ಮೂವತ್ತು ವರ್ಷ ಹೇಗೆ ಕಳೆದುಹೋಯಿತೆಂಬುದನ್ನ

ನಾನೂ ಮರೆತುಬಿಟ್ಟಿದ್ದೆ.
ಕ್ಷಮೆ ಕೇಳಿದೆ

“ಸಾರಿ, ಬೇರೆ ಯಾರೋ ಅಂದುಕೊಂಡಿದ್ದೆ” ತೊದಲಿದೆ.
ಆದರೆ ಇದರಲ್ಲಿ ನನ್ನದೇನೂ ಅಂಥ ತಪ್ಪಿಲ್ಲ.
ನಾನು ನೋಡಿದ್ದು,
ನನ್ನೊಳಗೆ ಅಂದು ತುಂಬಿಕೊಂಡಿದ್ದ ನಿನ್ನನ್ನು
ಈ ಹೊತ್ತಿಗೂ.

*****

8. ಪ್ರೇಮ ಪಾಠ

ಹಠಾತ್ ಆಗಿ ಪ್ರೇಮ
ತನ್ನ ಎಲ್ಲ ಹತಾಶೆಗಳಿಂದ ವಾಪಸ್ಸಾಗಿ
ನಿಮ್ಮ ತೋಳಲ್ಲಿ ಹುದುಗಿ, ಮುಲುಕುತ್ತ

“ಇನ್ನು ಎಲ್ಲೂ ಹೋಗಲಾರೆ,
ಬೇರೆ ದೇಹಗಳೆಲ್ಲ ಬಹುತೇಕ ರಾಜಿ ಮಾತ್ರ”

ಎಂದರೆ ಆ ಸುಳ್ಳನ್ನ
ಥಟ್ ಅಂತ ಒಪ್ಪಿಕೊಂಡುಬಿಡುತ್ತೀರಿ ನೀವು
ಅಕಸ್ಮಾತ್ ಜಾಣರಾಗಿದ್ದರೆ.
(Love lesson)

*****

9. ಸಿನಿಕನ ಪ್ರೇಮಗೀತೆ

ಪ್ರೇಮದ ಕೆಲಸವೇ
ಬರೋದು, ಹೋಗೋದು
ಮತ್ತು
ಆಗಾಗ ನಿಲ್ಲೋದು
ಆದರೆ

ಮತ್ತೆ ವಾಪಸ್ ಬರೋದು ಮಾತ್ರ
ಆದ ಅನಾಹುತದ ಪರಿಶೀಲನೆಗೆ

*****

10. ವ್ಯಾಲಂಟೈನ್

ಒಬ್ಬರು ಇನ್ನೊಬ್ಬರ ಜೊತೆ
ಹೀಗೇ ಸದಾ
ಯಾವದೇ ಸಂಶಯ ಇಲ್ಲದೆ
ಇದ್ದುಬಿಡುವ ಆಸೆ ಉಳ್ಳವರು,
(ಮುಂದೆ ಆಗಬಹುದಾದ ದಣಿವಿನ ಬಗ್ಗೆ ಯಾವ ಕಳವಳವೂ ಇಲ್ಲದೆ)

ನನ್ನ ನಿನ್ನ ಹಾಗೆ ಇರುವವರೇ,

ರಾತ್ರಿ ಇಡೀ ಪಿಸುಮಾತಿನಲ್ಲಿ
ಲೋಕದ ಉಸಿರನ್ನು ಜೀವಂತವಾಗಿಟ್ಟವರು,

ಶಾಶ್ವತದ ಮಿತಿಗೆ ಗಾಬರಿಯಾಗಿ
ನೆಲಕ್ಕೆ ಅಂಗುಷ್ಟವ ಒತ್ತಿದವರು,

ಎರಡು ಉಸಿರುಗಳ ನಡುವಿನ ಅಂತರದ ವಿರುದ್ಧ
ಕೋರ್ಟಿನಲ್ಲಿ ಸಾಕ್ಷಿ ಹೇಳಿದವರು.
( A Valentine)

ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...