ಅವಿಭಜಿತ ದಕ್ಷಿಣ ಕನ್ನಡದ ಬಿಜೆಪಿ ಬಲಾಢ್ಯ ಬಂಟರ ಮತ್ತು ಬೂಟಾಟಿಕೆಯ ಬ್ರಾಹ್ಮಣರ ಪ್ರೈವೇಟ್ ಲಿಮಿಟೆಡ್ ಎಂಬುದನ್ನು ಮುಗಿದ ಅಸೆಂಬ್ಲಿ ಚುನಾವಣೆ ನಿಸ್ಸಂಶಯವಾಗಿ ಸಾಬೀತುಮಾಡಿದೆ! ಬಹುಸಂಖ್ಯಾತ ಬಿಲ್ಲವರು ಮತ್ತು ಮೊಗವೀರ, ಕೊಟ್ಟಾರಿ, ಕುಲಾಲ, ದೇವಾಡಿಗ, ಕೋಟೆ ಕ್ಷತ್ರಿಯ, ಗಾಣಿಗ, ಗಟ್ಟಿ, ನಲಿಕೆ, ಮರಾಠಿ….. ಮುಂತಾದ ಸಣ್ಣ-ಪುಟ್ಟ ಜಾತಿಯ ಮುಗ್ಧ ಶೂದ್ರರನ್ನು ಹಿಂದೂತ್ವದ ರಕ್ತಪಿಪಾಸು ಘನಘೋರ ಯುದ್ಧಕ್ಕೆ ಕಾಲಾಳುಗಳಂತೆ ಬಳಸಿ ಬಲಿಹಾಕುವ ಸಂಘ ಪರಿವಾರದ ಹಿಂದೂತ್ವದ ಸೂತ್ರಧಾರರು ಅಧಿಕಾರ, ಸುಖ, ಸೌಭಾಗ್ಯಗಳನ್ನು ಜನಿವಾರಿಗಳಿಗೆ, ಪಾಳೆಗಾರಿ ಬಂಟರ ತುಂಟರಿಗಷ್ಟೇ ಸೀಮಿತ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಸರಿಸುಮಾರು ಶೇ.24ರಷ್ಟು ಮುಸ್ಲಿಮರಿದ್ದಾರೆ. ಅವರಷ್ಟೇ ಬಿಲ್ಲವರಿದ್ದಾರೆ. ಈ ಬಿಲ್ಲವರ ಜತೆ ಇತರ ಹಿಂದುಳಿದ ಜನಾಂಗದ ಸಣ್ಣಸಣ್ಣ ಜಾತಿಗಳನ್ನು ಸೇರಿಸಿದರೆ ಶೇಕಡಾ ಹತ್ತರಷ್ಟಿರುವ ಬಂಟರು ಮತ್ತು ಅದಕ್ಕಿಂತ ಕಡಿಮೆ ಇರುವ ಬ್ರಾಹ್ಮಣರು ಯಾವ ಲೆಕ್ಕಕ್ಕೂ ಇಲ್ಲ. ಆದರೆ ತೋಳ್ಬಲದ ಬಂಟರು ಮತ್ತು ತಾಂತ್ರಿಕ ವಿಪ್ರರು ಹಿಂದುಳಿದ ವರ್ಗದವರನ್ನ “ಮಂಗ” ಮಾಡಿ ಬಿಜೆಪಿಯಲ್ಲಿ ಬೆಣ್ಣೆಯನ್ನು ತಿನ್ನುತ್ತಿದ್ದಾರೆ. ಕರಾವಳಿಗೆ ಹಿಂದೂತ್ವದ ಅಮಲೇರಿರುವುದು ಕರಾರುವಾಕ್ಕಾಗಿ ಗ್ರಹಿಸಿದ್ದ ಸಂಸದ ನಳಿನ್ ಕುಮಾರ್ ಕುಟೀಲು ಎಂಬ ಬೆಂಕಿ ನವಾಬ ಮತ್ತು ವಿಶ್ವ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಲಾಡಿ ಸೇರಿಕೊಂಡು ಸ್ವ-ಜಾತಿಯ ಹೆಚ್ಚು ಕ್ಯಾಂಡಿಡೇಟ್‍ಗಳನ್ನು ಬಿಜೆಪಿಯಿಂದ ಅಖಾಡಕ್ಕೆ ಇಳಿಸುವಂತೆ ಷಡ್ಯಂತ್ರ ಹೆಣೆದಿದ್ದರು. ಒಂದು ಹಂತದಲ್ಲಿ ನಳಿನ್, “ಗುರು” ಕಲ್ಲಡ್ಕ ಭಟ್ಟರಿಗೇ ರೋಪು ಹಾಕಿ ಜಾತಿಬಂಧುಗಳಿಗೆ ಟಿಕೆಟ್ ಕೊಡಿಸಲು ಹಾರಾಡಿದ್ದರು. ಬೆಚ್ಚಿಬಿದ್ದ ಕಲ್ಲಡ್ಕ ಕಟೀಲ್‍ಗೆ ಶರಣಾಗಿ ಹೋಗಿದ್ದರು.
ಕಲ್ಲಡ್ಕ ಭಟ್
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 12 ಸಾಮಾನ್ಯ ಕ್ಷೇತ್ರಗಳ ಪೈಕಿ ಆರರಲ್ಲಿ ಬಂಟರ ಬಹಾದ್ದೂರರಿಗೆ ಟಿಕೆಟ್ ಕೊಡಿಸಲು ನಳಿನ್-ಮಾಲಾಡಿ ರೈ ಯಶಸ್ವಿಯಾದರು. ಬೈಂದೂರಲ್ಲಿ ಸುಕುಮಾರ ಶಟ್ಟಿ, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುರತ್ಕಲ್‍ನಲ್ಲಿ ಡಾ|| ಭರತ್ ಶೆಟ್ಟಿ, ಉಳ್ಳಾಲದಲ್ಲಿ ಸಂತೋಷ ಶೆಟ್ಟಿ, ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಎಂಬ ಲಾಟ್‍ಪೂಟ್ ಬಂಟರಿಗೆ ಬಿಜೆಪಿ ಹೈಕಮಾಂಡ್ ಕಲ್ಲಡ್ಕ ಭಟ್ಟರಿಗೆ ಟಿಕೆಟ್ ಕೊಡಬೇಕಾಗಿ ಬಂತು! 23 ಹಿಂದೂಗಳನ್ನು ಸಾಬರು ಕಾಂಗ್ರೆಸ್‍ನ ಸಿದ್ದು ಸರಕಾರದ ಸಹಕಾರದಲ್ಲಿ ಕೊಂದು ಹಾಕಿದರೆಂಬ ನಳಿನ್, ಅನಂತ್‍ಕುಮಾರ್ ಹೆಗಡೆ, ಶೋಭಾ, ಕಲ್ಲಡ್ಕ ಮತ್ತವರ ಬಾಸ್‍ಗಳಾದ ಆದಿತ್ಯನಾಥ, ಅಮಿತ್ ಶಾಗಳ ಬೊಬ್ಬೆಗೆ ಕರಾವಳಿಯ ಬಿಲ್ಲವ ಮತ್ತಿತರ ಹಿಂದುಳಿದ ವರ್ಗದ ಜನರು ಬ್ರೈನ್‍ವಾಶ್ ಆಗಿದ್ದು ಆರರಲ್ಲಿ ಐದು ಬಂಟರು ಸಾರಾಸಗಟಾಗಿ ಶಾಸಕರಾಗಲು ನೆರವಾಯ್ತು. ಇದನ್ನು ಮೊದಲೇ ಅಂದಾಜಿಸಿದ್ದ ನಳಿನ್ ಮತ್ತು ಮಾಲಾಡಿಗುತ್ತು ರೈ, ಈಗ ಕರಾವಳಿ ಬಿಜೆಪಿಯಲ್ಲಿ ಬಂಟರ ಸಾಮ್ರಾಜ್ಯ ಸ್ಥಾಪಿಸಿ ಅಟ್ಟಹಾಸಗೈಯ್ಯುತ್ತಿದ್ದಾರೆ.
ಟಿಕೆಟ್ ಹಂಚಿಕೆಯಾದಾಗ ಬಿಜೆಪಿಯ ಬಿಲ್ಲವ ಮುಂದಾಳುಗಳು ಬೇಸರ ಮಾಡಿಕೊಂಡಿದ್ದರು. ಇದು ಬಿಜೆಪಿಗೆ ಉಲ್ಟಾ ಹೊಡೆದು ಕಾಂಗ್ರೆಸ್‍ಗೆ ಅನುಕೂಲ ಮಾಡಿಕೊಡುತ್ತದೆಂದು ರಾಜಕೀಯ ಪಂಡಿತರು ತರ್ಕ ಮಾಡಿದ್ದರು. ದುರಂತವೆಂದರೆ ಜನವಾರಿಗಳ ಮತ್ತು ಬಂಟರ ನಳಿನ್‍ನ ಹಿಂದೂತ್ವದ ಹೋರಾಟದಲ್ಲಿ ಹೆಚ್ಚು ಹಾನಿಗೊಳಗಾಗಿದ್ದಲ್ಲದೇ ಜೀವಬಲಿ ಕೊಡಬೇಕಾಗಿ ಬಂದಿದ್ದ ಬಿಲ್ಲವರಿಗೆ ತಮಗಾದ ಅನ್ಯಾಯ, ಮೋಸ, ವಂಚನೆ ಅರ್ಥವೇ ಆಗಲಿಲ್ಲ. ಹೆಚ್ಚಿನ ಬಿಲ್ಲವರು ಸಂಘ ಸರದಾರರ ಹುಸಿ ಹಿಂದೂತ್ವದ ಮಾತುಗಾರಿಕೆಗೆ ಮರುಳಾಗಿ ಪರಂಪರಾಗತ ಬಂಟರ ಭೂಪರಿಗೆ ಕಣ್ಮುಚ್ಚಿ ಓಟು ಒತ್ತಿದ್ದಾರೆ. ಕಾರ್ಕಳದಲ್ಲಿ ಗೆದ್ದ ಬಾಬಾಬುಡನ್‍ಗಿರಿ-ದತ್ತಪೀಠ ಭಾನ್ಗಡಿಯ ಬೈಪ್ರಾಡಕ್ಟು ಸುನೀಲ್ ಕುಮಾರ್ ಎಂಬ ಅರೆಬಿಲ್ಲವ-ಅರೆಬ್ರಾಹ್ಮಣ ಒಬ್ಬನೇ ಬಿಜಿಪಿಯ ಘೋಷಿತ ಬಿಲ್ಲವ ಶಾಸಕ ಇಡೀ ಅವಿಭಜಿತ ದಕ್ಷಿಣ ಕನ್ನಡಕ್ಕೆ!! ಬಿಜಿಪಿ ಟಿಕೇಟ್ ದಯಪಾಲಿಸಿದ್ದ ಏಕೈಕ ಬಿಲ್ಲವ ಸುನೀಲ್‍ಕುಮಾರ.
ಪುತ್ತೂರಿನಲ್ಲಿ ಬಿಜಿಪಿ ಅಭ್ಯರ್ಥಿಯಾಗಿದ್ದ ಸಂಜೀವ್ ಮಡಂದೂರ್ ಎಂಬಾತ ಕೇಂದ್ರದ ನಾಮಕಾವಸ್ಥೆ ಮಂತ್ರಿ ಸದಾನಂದಗೌಡರ ಹತ್ತಿರತ್ತಿರದ ಸಂಬಂಧಿ ಬಂಟ-ಗೌಡ ಕೋಟಾದ ಕ್ಯಾಂಡಿಡೇಟ್. ಹೀಗಾಗಿ ಬರೋಬ್ಬರಿ ಏಳು ಮಂದಿಗೆ ಬಂಟರ ಲಾಬಿಯಿಂದಾಗಿ ಟಿಕೆಟ್ ಸಿಕ್ಕಿತ್ತು. ಮಡಂದೂರುಗೆ ಸದಾನಂದಗೌಡರಿಗಿಂತ ಸಂಸದ ನಳೀನ್ ಎಂದರೆ ಹೆಚ್ಚು ನಿಷ್ಠೆ. ಬಂಟ-ಗೌಡ ಕೋಟಾದಲ್ಲಿ ಕಮಲ ಹಿಡಿದುಕೊಂಡು ಅಖಾಡಕ್ಕೆ ಇಳಿದವರಲ್ಲಿ ಉಳ್ಳಾಲದ ಸಂತೋಷ ಶೆಟ್ಟಿ ಒಬ್ಬನ ಬಿಟ್ಟರೆ ಉಳಿದವರೆಲ್ಲರೂ ಕೇಸರಿ ಶಾಸಕರಾಗಿದ್ದಾರೆ. ಬಂಟರ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿಕೊಳ್ಳಲು ಸಂಸದ ನಳಿನ್ ಮತ್ತು ವಿಶ್ವ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ವiಲಾಡಿ ತುಂಬ ವ್ಯವಸ್ಥಿತ-ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದರು. ಹಿಂದುಳಿದ ವರ್ಗದ ಬಿಲ್ಲವರು ಮತ್ತು ಇತರೆ ಅಮಾಯಕ ಜಾತಿ ಜನಗಳಿಗೆ ಟೋಪಿ ಏರಿಸಿ ಸ್ವಜಾತಿ ಹುರಿಯಾಳುಗಳ ಎಂಎಲ್‍ಎ ಮಾಡಿಕೊಳ್ಳಲು ಬಂಟರಿಗೆ ಜಾತಿ ದುರಭಿಮಾನದ ಬೂಸ್ಟ್ ಕುಡಿಸಿ ಪ್ರಚೋದಿಸಿದರು.
ಬಿಜಿಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಒಂದು ವಾಟ್ಸಪ್ ಪ್ರಕಟಣೆ ರವಾನಿಸಿದ್ದರು. ಸ್ವಜಾತಿ ಬಂಟರ ವಲಯದಲ್ಲಿ ಹರಿದಾಡಿದ ಆ ಸಂದೇಶ “ಬಂಟತ್ವ” ಕೆರಳಿಸುವ ಒಕ್ಕಣೆಯಿಂದ ಕೂಡಿದೆ. ತಾನು ಮತ್ತು ಸಂಸದ ನಳಿನ್ ಸರದಾರ ಸೇರಿಕೊಂಡು ಬರೋಬ್ಬರಿ ಆರು ಬಂಟರು ಬಿಜೆಪಿ ಟಿಕೆಟ್ ಪಡೆಯುವಂತೆ ಮಾಡಿದ್ದೇವೆ. ಈಗ ಇವರೆಲ್ಲರನ್ನ ಗೆಲ್ಲಿಸಿಕೊಳ್ಳುವ ಸವಾಲು ಬಂಟರ ಮೇಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಬಂಟರ ಮತ್ತು ಬ್ರಾಹ್ಮಣರ ನಾಡಾಗಿದ್ದು ಅದನ್ನ ಉಳಿಸಿಕೊಳ್ಳಲು ಆರೂ ಬಂಟರ ಆಯ್ಕೆಗೆ ಬಂಟರು ಭಿನ್ನಾಭಿಪ್ರಾಯ ಮರೆತು ಬಿಜೆಪಿಗೆ ಮತ ಹಾಕುವ ಮತ್ತು ಹಾಕಿಸುವ ಕೆಲಸ ಮಾಡಬೇಕಾಗಿದೆ. ಈ ತಂತ್ರಗಾರಿಕೆ ಹಿಂದುಳಿದ ವರ್ಗದವರಿಗೆ ತಿಳಿಯದಂತೆ ಗೌಪ್ಯವಾಗಿ ಕಾರ್ಯಾಚರಣೆ ಮಾಡಬೇಕೆಂದು ಮಲಾಡಿಗುತ್ತಾ ರೈ ಸಂದೇಶ ಕಳಿಸಿದ್ದರು.
ಬಿಜೆಪಿಯ ಆರೂ ಬಂಟ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸ್ವಜಾತಿ ಬಾಂಧವರಿಗೆ ಬಂಟರ ಸಂಘದ ಅಧ್ಯಕ್ಷ ಮಲಾಡಿಗುತ್ತಾ ರೈ ಪ್ರಚೋದಿಸಿರುವುದರ ಹಿಂದಿನ ಮರ್ಮ ಕತೂಹಲಕಾರಿಯಾಗಿದೆ. ಸದರಿ ಆರು ಬಂಟರು ಗೆದ್ದರಷ್ಟೇ ಮುಂಬರುವ ಲೋಕಸಭಾ ಎಲೆಕ್ಷನ್‍ನಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಬಂಟರ ಜಯಪ್ರಕಾಶ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್‍ಗೆ ಟಿಕೆಟ್ ಸುಲಭವಾಗಿ ದಕ್ಕುತ್ತದೆ ಎಂಬುದು ಮಲಾಡಿಗುತ್ತ ರೈ ಲೆಕ್ಕಾಚಾರ. ಆಗ ಮಾತ್ರ ಬಂಟರ ಹಿತಾಸಕ್ತಿಯ ರಕ್ಷಣೆ ಸಾಧ್ಯವೆಂಬ ಭಾವನೆ ಬಂಟರಲ್ಲಿ ಬಿತ್ತಲು ರೈ ಮಸಲತ್ತು ಮಾಡಿದ್ದಾನೆ. ಇದರ ಹಿಂದೆ ನಳಿನ್‍ನ ಕುಟಿಲತೆ ಅಡಗಿದೆ ಎಂಬುದು ಕಟ್ಟರ್ ಚೆಡ್ಡಿಗಳೇ ಈಗ ಪಿಸುಗುಡುತ್ತಿದ್ದಾರೆ. ನಳಿನ್‍ನ ಕಂಡರೆ ಮೂಗುಮುರಿಯುವ ಕಲ್ಲಡ್ಕ ಕಮಾಂಡ್ ಕೂಡ ಈಗ ಬಂಟರ ಅಧ್ಯಕ್ಷನ “ವಾಟ್ಸ್‍ಆಪ್ ಆಂದೋಲನ”ದ ರೂವಾರಿ ನಳಿನ್ ಎಂದೇ ಕಂಡವರ ಮುಂದೆ ಬಡಬಡಿಸುತ್ತಿದೆ.
ಸೊರಕೆ
ಬಿಜೆಪಿ ಬಿಡಾರದಲ್ಲಿ ಹರಿದಾಡುತ್ತಿರುವ ಮತ್ತೊಂದು ಚರ್ಚೆಯ ಪ್ರಕಾರ ಇದು ನಳಿನನ್ನು ಹಣಿಯಲು ಬ್ರಾಹ್ಮಣೋತ್ತಮರ್ಯಾರೋ ಮಾಡಿದ ಕಿತಾಪತಿ. ಬಿಲ್ಲವರು ತಿರುಗಿಬಿದ್ದು ಬಂಟ ಕ್ಯಾಂಡಿಡೇಟ್‍ಗಳನ್ನೆಲ್ಲಾ ಸೋಲಿಸಿದರೆ ನಳಿನ್ ಬಿಜೆಪಿಯಲ್ಲಿ ಕಿಮ್ಮತ್ತು ಕಳೆದುಕೊಳ್ಳುತ್ತಾರೆ. ಆಗ ಮತ್ತೆ ಕಲ್ಲಡ್ಕ ಭಟ್ಟರದೇ ಏಕಮೇವಾದ್ವಿತೀಯ ದರ್ಬಾರು ಸ್ಥಾಪಿತವಾಗುತ್ತದೆಂದು ಬಂಟರ ಸಂಘದ ಅಧ್ಯಕ್ಷನ ಹೆಸರಿನಲ್ಲಿ ಇಂಥದೊಂದು ಸಂದೇಶ ರವಾನಿಸಲಾಗಿದೆಯಂತೆ. “ದಕ್ಷಿಣ ಕನ್ನಡ ಮತ್ತು ಉಡುಪಿಯು ಬಂಟರ-ಬ್ರಾಹ್ಮಣರ ನಾಡು” ಎಂಬ ವಾಕ್ಯ ಮಲಾಡಿಗುತ್ತು ರೈನ ಸಂದೇಶದಲ್ಲಿರುವುದು ಬ್ರಾಹ್ಮಣರ ಭೂಪನ ಕುಚೋದ್ಯದ ಅನುಮಾನ ಹುಟ್ಟುಹಾಕಿದೆ.
ಇದೆಲ್ಲಾ ಬಿಜೆಪಿಯ ಒಳಸುಳಿ ರಾಜಕಾರಣ ಏನೇಇರಲಿ, ಸಂಘಪರಿವಾರದ ಬ್ರಾಹ್ಮಣರ-ಬಲಾಢ್ಯ ಬಂಟರ ಷಡ್ಯಂತ್ರಕ್ಕೆ ಬಲಿಬೀಳುತ್ತಿರುವ ಬಿಲ್ಲವರಿಗೆ ಬುದ್ಧಿ ಬರುವುದು ಎಂದು? ಹುಸಿ ಹಿಂದೂತ್ವಕ್ಕೆ ಮರುಳಾಗಿ ಬಿಲ್ಲವರು ತಮ್ಮವರ ಆಹುತಿ ಕೊಡುತ್ತಾ ಬಿಜೆಪಿಗೆ ಬೆಂಬಲಿಸುತ್ತಾ ಹೋದರೆ ಮೇಲುವರ್ಗದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ. ಇದು ಬಿಲ್ಲವರ ಸ್ವಾಮಿಗೆ, ಜನಾರ್ದನ ಪೂಜಾರಿ, ವಿನಯ್ ಕುಮಾರ್ ಸೊರಕೆ, ಶ್ರೀನಿವಾಸ್ ಪೂಜಾರಿ, ರುಕ್ಮಯ್ಯ ಪೂಜಾರಿಯಂತ ಬಿಲ್ಲವರ ಭೂಪರಿಗೆ, ಬಿಲ್ಲವರ ಸಂಘದ ಸರದಾರರಿಗೆಲ್ಲಾ ಅರ್ಥವಾಗೋದು ಯಾವಾಗ?
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್ಐಆರ್ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...
ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್ಟಿ ಸಮುದಾಯದ ಕೋಲಂಗಿಂತ...
ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್ನಲ್ಲಿ ಸ್ಲೆಡ್ಜ್ ಹ್ಯಾಮರ್ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಎಕ್ಸ್ ನಲ್ಲಿ 6.8...
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...
ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...
ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...
ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ...
2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...
ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್ಜಿ ಕರ್ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...