Homeಮುಖಪುಟಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

ಟ್ವಿಟರ್‌ಗೆ ಮೋದಿ ಸರ್ಕಾರ ಬೆದರಿಕೆ ಹಾಕಿದ ವಿಚಾರ: ದಾಖಲೆ ಸಮೇತ ಮಾಹಿತಿ ಹಂಚಿಕೊಂಡ ಟಿಎಂಸಿ ವಕ್ತಾರ

- Advertisement -
- Advertisement -

ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಅವರು ಭಾರತದಲ್ಲಿ ಟ್ವಿಟರ್ ಕಚೇರಿಯನ್ನು ಸ್ಥಗಿತಗೊಳಿಸುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬಗ್ಗೆ ಟಿಎಂಸಿ ನಾಯಕ, ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸರಣಿ ಟ್ವಿಟ್ ಮಾಡಿದ್ದು, ಟ್ವಿಟರ್ ಬಳಿ ಕೇಂದ್ರ ಸರ್ಕಾರ ಹಲವು ಖಾತೆಗಳ ಮಾಹಿತಿಯನ್ನು ಕೇಳಿತ್ತು ಎಂಬುವುದನ್ನು ಸೂಚಿಸುವ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಜಾಕ್ ಡೋರ್ಸೆ ಅವರ ಬೇಹುಗಾರಿಕೆ ಹಾಗೂ ಸೆನ್ಸಾರ್‌ಶಿಪ್ ಆರೋಪಗಳನ್ನು ಮೋದಿ ಸರ್ಕಾರವು ಸುಳ್ಳು ಎಂದು ಹೇಳಿ ನಿರಾಕರಿಸಿದೆ. ಆದರೆ, ಟ್ವಿಟರ್ ನ ಪಾರದರ್ಶಕತೆ ವರದಿಗಳ ಡೇಟಾವನ್ನು ಆಧರಿಸಿದ ಸತ್ಯ ಇಲ್ಲಿದೆ ಎಂದು ಸಿಎಎ ವಿರೋಧಿ ಪ್ರತಿಭಟನೆ, ರೈತರ ಪ್ರತಿಭಟನೆ ಹಾಗೂ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಮೋದಿ ಸರ್ಕಾರವು ಟ್ವಿಟರ್ ಬಳಿ ಕೇಳಿತ್ತು ಎಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಕೇತ್ ಗೋಖಲೆ ಟ್ವಿಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ದೇಶದ ಪ್ರಧಾನಿಗೆ ಯಾಕೆ ಇಷ್ಟೊಂದು ಹೇಡಿತನ?: ಟ್ವಿಟರ್‌ನ ಮಾಜಿ ಸಿಇಒ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ಪ್ರಶ್ನೆ

”ಈಗ ಕೆಳಗಿನ ಟ್ವೀಟ್‌ಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ರೈತ ಪ್ರತಿಭಟನೆಗಳ (2020-2021) ಅವಧಿಯ ಡೇಟಾ ಇಲ್ಲಿದೆ. 👇

CAA ವಿರೋಧಿ ಮತ್ತು ರೈತರ ಪ್ರತಿಭಟನೆಯ ಅವಧಿಯಲ್ಲಿ ಭಾರತ ಸರ್ಕಾರವು ಜಾಗತಿಕವಾಗಿ ಅತಿ ಹೆಚ್ಚು ಮಾಹಿತಿಗಳನ್ನು ಕೇಳಿದ ಸರ್ಕಾರವಾಗಿದೆ.

ಈ ಅವಧಿಯಲ್ಲಿ ಜಾಗತಿಕವಾಗಿ ಸಲ್ಲಿಸಿದ ವಿನಂತಿಗಳಲ್ಲಿ 25% ವಿನಂತಿಗಳನ್ನು ಭಾರತ ಸರ್ಕಾರವೇ ಸಲ್ಲಿಸಿದೆ” ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

2019ರ ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ 1,057 ಖಾತೆದಾರರ ಮಾಹಿತಿ ಹಾಗೂ ವಿವರಗಳನ್ನು ಭಾರತ ಸರ್ಕಾರ ಕೇಳಿದೆ.

2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಮೋದಿ ಸರ್ಕಾರವು 5,830 ಟ್ವಿಟರ್ ಬಳಕೆದಾರರ ಮಾಹಿತಿ ಹಾಗೂ ವಿವರಗಳನ್ನು ನೀಡುವಂತೆ ಟ್ವಿಟರ್ ಸಂಸ್ಥೆಯನ್ನು ಒತ್ತಾಯಿಸಿದೆ ಎಂದು ದತ್ತಾಂಶಗಳೊಡನೆ ಸಾಕೇತ್ ಗೋಖಲೆ ಹೇಳಿದ್ದಾರೆ.

👉ತದನಂತರ, 2020 ರ ಜನವರಿ ಹಾಗೂ ಡಿಸೆಂಬರ್ ಅವಧಿಯಲ್ಲಿ ಸಿಎಎ ಮತ್ತು ರೈತ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ, ಮೋದಿ ಸರ್ಕಾರವು 5830 ಖಾತೆಗಳಿಗೆ ಮಾಹಿತಿ ಮತ್ತು ಬಳಕೆದಾರರ ವಿವರಗಳನ್ನು ಕೋರಿತು.

ಇದು 452% ರಷ್ಟು ಹೆಚ್ಚಳವಾಗಿದೆ!”

2021 (ಕೋವಿಡ್) ಕಾಲದಲ್ಲಿ ಬಳಕೆದಾರರ ವಿವರಗಳಿಗಾಗಿ ಸಲ್ಲಿಕೆಯಾದ ಒಟ್ಟು ಜಾಗತಿಕ ವಿನಂತಿಗಳಲ್ಲಿ 19% ವಿನಂತಿಗಳನ್ನು ಭಾರತ ಸರ್ಕಾರವೇ ಮಾಡಿದೆ. ಇದೇ ಅವಧಿಯಲ್ಲಿ ಯುನೈಟೆಡ್ ಕಿಂಗ್‌ಡಂ 4% ವಿನಂತಿಗಳನ್ನು ಮಾಡಿದ್ದರೆ, ಜರ್ಮನಿ 6%, ಬ್ರೆಝಿಲ್ 2% ವಿನಂತಿಗಳನ್ನಷ್ಟೇ ಮಾಡಿತ್ತು. ಪಾಕಿಸ್ತಾನ ಕೇವಲ 1% ಕಡಿಮೆ ವಿನಂತಿ ಮಾಡಿದೆ ಎಂದು ಸಾಕೇತ್ ಗೋಖಲೆ ಟ್ವಿಟರ್ ನೀಡಿರುವ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಇನ್ನು, ಟ್ವಿಟರ್ ಖಾತೆಯನ್ನು ಅಮಾನತು ಮಾಡುವುದು ಮತ್ತು ವಿಷಯಗಳನ್ನು ಡಿಲಿಟ್ ಮಾಡುವಂತೆಯೂ ಭಾರತ ಸರ್ಕಾರ ನೀಡಿದ ಆದೇಶಗಳ ಮಾಹಿತಿಯನ್ನು ಟ್ವಿಟರ್ ನೀಡಿದೆ. ಅದರಲ್ಲಿ ಕೋರ್ಟ್‌ ನಿರ್ದೇಶನದ ಪ್ರಕಾರ ಸರ್ಕಾರ ನೀಡಿದ ಆದೇಶಗಳು ಹಾಗೂ ಲೀಗಲ್ ನೋಟಿಸ್ ಇಲ್ಲದೆ ಪೊಲೀಸ್ ಹಾಗೂ ಸರ್ಕಾರಿ ಏಜನ್ಸಿಗಳು ನೀಡಿದ ಆದೇಶಗಳು ಎಂದು ಎರಡು ವಿಭಾಗ ಮಾಡಬಹುದು. 2020 ರಲ್ಲಿ, ವಿಷಯವನ್ನು ತೆಗೆದುಹಾಕುವಿಕೆ ಹಾಗೂ ಖಾತೆಗಳ ಅಮಾನತು ಸೇರಿದಂತೆ 9,724 ಆದೇಶಗಳನ್ನು ಮೋದಿ ಸರ್ಕಾರ ನೀಡಿದೆ. ಅದರಲ್ಲಿ ಕೇವಲ 19 ಮಾತ್ರ ಕೋರ್ಟ್ ನಿರ್ದೇಶನದಂತೆ ಆದೇಶಿಸಲಾಗಿದೆ. ಉಳಿದ ಎಲ್ಲವನ್ನೂ ಮೋದಿ ಸರ್ಕಾರವೇ ಆದೇಶಿಸಿದೆ. 2021 ರಲ್ಲಿ 8,863 ಆದೇಶಗಳನ್ನು ಮೋದಿ ಸರ್ಕಾರ ನೀಡಿದರೆ, ಅದರಲ್ಲಿ ಕೇವಲ 32 ಮಾತ್ರ ಕೋರ್ಟ್ ಆದೇಶಗಳಾಗಿತ್ತು ಎಂದು ಗೋಖಲೆ ಟ್ವಿಟ್ ನಲ್ಲಿ ಹೇಳಿದ್ದಾರೆ.

ಭಾರತ ಸರ್ಕಾರವು 12,916 ಟ್ವಿಟರ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲು 3,992 ಆದೇಶಗಳನ್ನು ನೀಡಿದ್ದು, ಇದು ಜಾಗತಿಕವಾಗಿ 8% ಆಗಿದೆ. ಅದೇ ವೇಳೆ UK ಕೇವಲ 16 ಆದೇಶ ನೀಡಿದ್ದರೆ, ಅಮೇರಿಕ 32 ಆದೇಶಗಳನ್ನು, ಇಸ್ರೇಲ್ 7 ಆದೇಶಗಳನ್ನು ಮಾತ್ರ ನೀಡಿದೆ. ಇವೆಲ್ಲವೂ ಜಾಗತಿಕ ಆದೇಶಗಳ 1% ವೂ ಇಲ್ಲ. ನೆರೆಯ ಪಾಕಿಸ್ತಾನ 489 ಆದೇಶಗಳನ್ನು ನೀಡಿದ್ದು, ಜಾಗತಿಕವಾಗಿ 1% ಆದೇಶಗಳನ್ನು ನೀಡಿದೆ. ಬಾಂಗ್ಲಾದೇಶ ಟ್ವಿಟರ್ ಖಾತೆ ಅಮಾನತು ಹಾಗೂ ವಿಷಯ ತೆಗೆದುಹಾಕುವಿಕೆ ಕುರಿತಂತೆ ಯಾವುದೇ ಆದೇಶವನ್ನೂ ನೀಡಿಲ್ಲ. ಅದೇ ವೇಳೆ, ಭಾರತ ಸರ್ಕಾರವು 12,919 ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಆದೇಶಿಸಿದೆ ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.

ಈ ಡೇಟಾಗಳ ಪ್ರಕಾರ ಸಿಎಎ ವಿರೋಧಿ ಹಾಗೂ ರೈತರ ಆಂದೋಲನದ ಸಂದರ್ಭದಲ್ಲಿ ಮೋದಿ ಸರ್ಕಾರವು ಟ್ವಿಟರ್ ಖಾತೆದಾರರ ಮಾಹಿತಿ ನೀಡುವಂತೆ ಹಾಗೂ ಖಾತೆಗಳ ನಿಷೇಧಕ್ಕೆ ಒತ್ತಡ ಹೇರಿದೆ ಎನ್ನುವುದು ಖಚಿತವಾಗಿದೆ. ಕೋಮುವಾದಿ ದ್ವೇಷ ಹರಡುವಿಕೆ, ಮಹಿಳಾ ಖಾತೆದಾರರ ಮೇಲೆ ಸೈಬರ್ ನಿಂದನೆ ದಾಳಿ, ಬಿಜೆಪಿ ಐಟಿ ಸೆಲ್ ಗಳು ಮುಕ್ತವಾಗಿ ಸುಳ್ಳು ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಮೋದಿ ಸರ್ಕಾರವು ಇಷ್ಟೆಲ್ಲಾ ಆದೇಶಗಳನ್ನು ನೀಡಿದೆ. ಬಿಜೆಪಿ ನಾಯಕರ ಟ್ವಿಟ್‌ಗಳನ್ನು ‘ತಿರುಚಿದ ಸುದ್ದಿ’ ಎಂದು ಸ್ವತಃ ಟ್ವಿಟರ್ ಫ್ಲ್ಯಾಗ್ ಮಾಡಿದ್ದರೂ ಸಹ ಅವುಗಳನ್ನು ತೆಗೆದುಹಾಕಿರಲಿಲ್ಲ. ಮೋದಿ ಸರಕಾರ ಟೀಕೆಗಳನ್ನು ಹತ್ತಿಕ್ಕುತ್ತದೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಈ ಅಧಿಕೃತ ಡೇಟಾವನ್ನು ನಿರಾಕರಿಸುವ ಮತ್ತು ಆರೋಪಗಳನ್ನು “ಸುಳ್ಳು” ಮತ್ತು “ವಿದೇಶಿ ಪಿತೂರಿ” ಎಂದು ಹೇಳುವ ಧೈರ್ಯವನ್ನು ಮೋದಿ ಸರ್ಕಾರ ಹೊಂದಿದೆಯೇ? ಸಚಿವ ರಾಜೀವ್ ಅವರೇ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಏಕೆಂದರೆ ಈಗ ನೀವು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಸಾಕೇತ್ ಗೋಖಲೆ ಟ್ವಿಟ್ ನಲ್ಲಿ ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...