Homeಫ್ಯಾಕ್ಟ್‌ಚೆಕ್FACT CHECK : ಮುಸ್ಲಿಮರು ಹೆಚ್ಚಿರುವ ಪ್ರದೇಶದಿಂದ ಹಿಂದೂಗಳು ಜಾಗ ಖಾಲಿ ಮಾಡಬೇಕೆಂಬ ಬ್ಯಾನರ್‌ನ ಅಸಲಿಯತ್ತೇನು?

FACT CHECK : ಮುಸ್ಲಿಮರು ಹೆಚ್ಚಿರುವ ಪ್ರದೇಶದಿಂದ ಹಿಂದೂಗಳು ಜಾಗ ಖಾಲಿ ಮಾಡಬೇಕೆಂಬ ಬ್ಯಾನರ್‌ನ ಅಸಲಿಯತ್ತೇನು?

- Advertisement -
- Advertisement -

“ಭಾರತದ ಉತ್ತರ ಪ್ರದೇಶ, ಬಂಗಾಲ, ಕೇರಳ, ಹೈದರಾಬಾದ, ಆಸ್ಸಾಮ ರಾಜ್ಯಗಳಲ್ಲಿ ನಾವು ಮುಸಲ್ಮಾನರು ಬಹುಸಂಖ್ಯಾಕರಾಗಿದ್ದೇವೆ. ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಈ ಪ್ರದೇಶವನ್ನು ತಕ್ಷಣ ಖಾಲಿ ಮಾಡಬೇಕು. ಇಲ್ಲವಾದರೆ ಕಾಶ್ಮೀರದಲ್ಲಿ ಪಂಡಿತರಿಗೆ ನಾವು ಏನು ಮಾಡಿದೆವೊ ಅದನ್ನು ಇಲ್ಲಿಯೂ ಅನುಸರಿಸುತ್ತೇವೆ.”ಮೌಲಾನಾ ಸೈಯ್ಯದ ಅಹ್ಮದ ಬುಖಾರಿ ಶಾಹಿ ಇಮಾಮ ಜುಮ್ಮಾ ಮಸೀದಿ, ದೆಹಲಿ” ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಬುಖಾರಿ ಅವರ ಫೋಟೋದೊಂದಿಗೆ ಹಿಂದಿಯಲ್ಲಿ ಬರೆದಿರುವ ಬ್ಯಾನರ್ ಅನ್ನು ಲಗತ್ತಿಸಲಾಗಿದೆ.

ಆ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂದು ನೋಡೋಣ

ಫ್ಯಾಕ್ಟ್‌ಚೆಕ್  : ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಲಗತ್ತಿಸಿರುವ ಬ್ಯಾನರ್ ಕುರಿತು ನಾವು ಗೂಗಲ್‌ನಲ್ಲಿ ಮಾಹಿತಿ ಹುಡುಕಿದಾಗ ವರ್ಲ್ಡ್ ವಿನ್ನರ್ ಟೈಮ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 13, 2021ರಂದು ಅಪ್ಲೋಡ್ ಮಾಡಲಾದ ವಿಡಿಯೋವೊಂದರಲ್ಲಿ ವೈರಲ್ ಪೋಸ್ಟರ್ ಕಂಡು ಬಂದಿದೆ.

ವಿಡಿಯೋದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ವೈರಲ್ ಬ್ಯಾನರ್ ಮೊಹರಂಗೆ ಮೊದಲು ಉತ್ತರಪ್ರದೇಶದ  ಪ್ರತಾಪ್ ಗಢ ಜಿಲ್ಲೆಯಲ್ಲಿ ಹಾಕಲಾಗಿತ್ತು. ಮಾಹಿತಿ ಬಂದ ಕೂಡಲೇ ಪೊಲೀಸರು ಕ್ರಮ ಕೈಗೊಂಡು ಎಲ್ಲಾ ಬ್ಯಾನರ್ ಗಳನ್ನು ತೆಗೆದು ಹಾಕಿದ್ದರು.

ನಾವು ಮತ್ತಷ್ಟು ಮಾಹಿತಿ ಹುಡುಕಿದಾಗ ವೈರಲ್ ಬ್ಯಾನರ್ ಕುರಿತು ಕೆಲ ವರದಿಗಳು ಲಭ್ಯವಾಗಿದೆ. ಆ ವರದಿಗಳ ಪ್ರಕಾರ,  ಪ್ರತಾಪ್ ಗಢ ಶಾಸಕ ರಾಜಾ ಭೈಯಾಗೆ ಸೇರಿದ ಶಾಲೆಯ ಗೋಡೆಯ ಮೇಲೆ ಬ್ಯಾನರ್ ಗಳು ಕಂಡು ಬಂದಿವೆ. ಅದನ್ನು ನೋಡಿದ ಸ್ಥಳೀಯರು ಆಕ್ರೋಶಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಬ್ಯಾನರ್ ಗಳನ್ನು ತೆರವು ಮಾಡಿಸಿದ್ದಾರೆ ಎಂದು ಲೈವ್ ಹಿಂದೂಸ್ತಾನ್  ಮತ್ತು  ದೈನಿಕ್ ಜಾಗರಣ್  ವರದಿಯನ್ನು ಪ್ರಕಟಿಸಿದ್ದವು.

ಇನ್ನು ಇದೇ ವಿಷಯದ ಕುರಿತು ಆಗಸ್ಟ್ 12, 2021ರಂದು ಪ್ರತಾಪ್ ಗಢ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದರು. ಅದರಲ್ಲಿ ಪ್ರತಾಪ್ ಗಢದ ಕುಂಡಾದಲ್ಲಿ ದುಷ್ಕರ್ಮಿಗಳು ವಿವಾದಾತ್ಮಕ ಬ್ಯಾನರ್ ಗಳನ್ನು ಹಾಕಿದ್ದರು. ಆ ಬಗ್ಗೆ ಮಾಹಿತಿ ಬಂದ ತಕ್ಷಣ, ಅದನ್ನು ತೆರವುಗೊಳಿಸಿ ಅಪರಿಚಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ವೈರಲ್ ಬ್ಯಾನರ್ ನಲ್ಲಿ ವಿವಾದಾತ್ಮಕ ಹೇಳಿಕೆ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಖಾರಿಯವರ ಹೆಸರಿನಲ್ಲಿರುವುದರಿಂದ ಅವರು ಆ ರೀತಿಯ ಹೇಳಿಕೆ ನೀಡಿದ್ದಾರೆಯೇ? ಎಂದು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಆ ಕುರಿತು ಯಾವುದೇ ವರದಿಗಳು ನಮಗೆ ಲಭ್ಯವಾಗಿಲ್ಲ.

ಬ್ಯಾನರ್ ನಲ್ಲಿ ಮುಸ್ಲಿಂ ಜನಸಂಖ್ಯೆಯ ಕುರಿತು ಉಲ್ಲೇಖಿಸಿರುವುದರಿಂದ, ನಾವು ಆ ಬಗ್ಗೆ ಮಾಹಿತಿ ಹುಡುಕಿದ್ದೇವೆ. 2011ರ ಜನಗಣತಿಯ ಪ್ರಕಾರ ಹಿಂದೂ-ಮುಸ್ಲಿಂ ಜನಸಂಖ್ಯೆಯನ್ನು ಪರಿಶೀಲಿಸಿದಾಗ, ಉತ್ತರ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಹೈದರಾಬಾದ್ ಮತ್ತು ಅಸ್ಸಾಂನಲ್ಲಿ ಹಿಂದೂ ಜನಸಂಖ್ಯೆಯೇ ಬಹುಸಂಖ್ಯಾತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಬ್ಯಾನರ್ ನಲ್ಲಿ ‘ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ’ ಎಂದಿದೆ. ಆದರೆ, ಇದು ಶುದ್ದ ಸುಳ್ಳು. ಇಸ್ಲಾಂ ಧರ್ಮದಲ್ಲಿ ಆ ರೀತಿಯ ಪ್ರತಿಪಾದನೆಯಿಲ್ಲ. ಭಾರತ ದೇಶದಾದ್ಯಂತ ಮತ್ತು ಇತರ ರಾಷ್ಟ್ರಗಳಲ್ಲಿಯೂ ಮುಸ್ಲಿಮರು ಹಿಂದೂ, ಕ್ರೈಸ್ತ, ಬೌದ್ದ, ಸಿಖ್, ಜೈನ, ಪಾರ್ಸಿ, ಯಹೂದಿ ಧರ್ಮೀಯರೊಂದಿಗೆ ಬಹಳ ಅನ್ಯೋನ್ಯತೆಯಿಂದ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗ ಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ ಎಂಬ ಹೇಳಿಕೆ ನಕಲಿಯಾಗಿದ್ದು, ಇದು 2021ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಂತಹ ಬ್ಯಾನರ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇದನ್ನೂ ಓದಿ : FACT CHECK : ಹಿಂದೂ ವಿದ್ಯಾರ್ಥಿನಿಯರಿಂದ ನಮಾಝ್ ಮಾಡಿಸಿದ ಮುಸ್ಲಿಮರು? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ‘ಪ್ರಜ್ಞಾಹೀನ’, ಕೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ: ವರದಿ

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ಕೋಮ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಜ್ಞಾಹೀನರಾಗಿದ್ದಾರೆ ಎಂದು ನಂಬಲಾಗಿದೆ ಎಂದು ಗುಪ್ತಚರ ಆಧಾರಿತ ರಾಜತಾಂತ್ರಿಕ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ದಿ ಟೈಮ್ಸ್ ವರದಿ...

ಪ. ಬಂಗಾಳ : ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಮರು ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ವೇಳೆ (ಎಸ್‌ಐಆರ್‌) ತೆಗೆದು ಹಾಕಿದ್ದ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸುವಂತೆ ಮೇಲ್ಮನವಿ ನ್ಯಾಯಮಂಡಳಿ ಸೋಮವಾರ (ಏ.6) ಆದೇಶಿಸಿರುವುದಾಗಿ ವರದಿಯಾಗಿದೆ. ರತುವಾ...

ಹೈದರಾಬಾದ್| ಐಪಿಎಲ್ ಪಂದ್ಯದಿಂದ ಭಾರೀ ಸಂಚಾರ ದಟ್ಟಣೆ; ಆಂಬ್ಯುಲೆನ್ಸ್‌ನಲ್ಲಿದ್ದ ಮಹಿಳೆ ಸಾವು

ಏಪ್ರಿಲ್ 5 ರ ಭಾನುವಾರ ಉಪ್ಪಳದಲ್ಲಿ ಉಂಟಾದ ಭಾರೀ ಸಂಚಾರ ದಟ್ಟಣೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆಂಬ್ಯುಲೆನ್ಸ್‌ನಲ್ಲಿ ಸಿಲುಕಿಕೊಂಡಿದ್ದ ಬಿಷ್ಣಾ ಎಂಬ 30 ವರ್ಷದ ಮಹಿಳೆ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಉಪ್ಪಳದ...

ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಎಸ್‌ಐಆರ್ ಪೂರಕ ಪಟ್ಟಿಯಿಂದ 95% ಮುಸ್ಲಿಂ ಮತದಾರರ ಹೆಸರು ತೆಗೆದುಹಾಕಲಾಗಿದೆ: ವರದಿ 

ಸುವೇಂದು ಅಧಿಕಾರಿ ಪ್ರತಿನಿಧಿಸುವ ಪೂರ್ವ ಮಿಡ್ನಾಪುರ ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮದಲ್ಲಿ ಒಂದು ಅಧ್ಯಯನವು ಆತಂಕಕಾರಿ ಅಸಮಾನತೆಯನ್ನು ಎತ್ತಿ ತೋರಿಸಿದೆ, ಅಲ್ಲಿ ಮತದಾರರಲ್ಲಿ ಕಡಿಮೆ ಪಾಲು ಇದ್ದರೂ ಎಸ್‌ಐಆರ್ ಪೂರಕ ಪಟ್ಟಿಯಿಂದ ಅಳಿಸಲಾದ ಮತದಾರರಲ್ಲಿ...

ಟೋಲ್ ಪ್ಲಾಜಾಗಳಲ್ಲಿನ ಅಶುಚಿತ್ವ ಶೌಚಾಲಯಗಳ ಬಗ್ಗೆ ವರದಿ ಮಾಡಿದರೆ ಬಹುಮಾನ: ಕೇಂದ್ರ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನೈರ್ಮಲ್ಯದ ಬಗ್ಗೆ ದೀರ್ಘಕಾಲದ ಕಳವಳಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೋಲ್ ಪ್ಲಾಜಾಗಳಲ್ಲಿ ಅಶುಚಿಯಾದ ಶೌಚಾಲಯ ಸೌಲಭ್ಯಗಳ ಬಗ್ಗೆ ವರದಿ ಮಾಡಲು ಪ್ರಯಾಣಿಕರನ್ನು ಪ್ರೋತ್ಸಾಹಿಸುವ...

ಮಣಿಪುರ: ಬಾಂಬ್ ದಾಳಿಗೆ ಇಬ್ಬರು ಮಕ್ಕಳು ಬಲಿ; ಕುಕಿ ದಂಗೆಕೋರರಿಂದ ದಾಳಿ ಆರೋಪ; ಇದು ಅನಾಗರಿಕ ಕೃತ್ಯ ಎಂದ ಸಿಎಂ 

ಗುವಾಹಟಿ: ಮಣಿಪುರದ ಮೈತೇಯಿ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಐದು ತಿಂಗಳ ಗಂಡು ಮಗು ಸೇರಿದಂತೆ ಇಬ್ಬರು ಅಪ್ರಾಪ್ತ ವಯಸ್ಕರು ಸಾವನ್ನಪ್ಪಿರುವ ಘಟನೆ ನಡೆದಿದೆ.  ಮೊಯಿರಾಂಗ್...

ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ವಿಪಕ್ಷಗಳಿಂದ ನೋಟಿಸ್‌ : ಕಾರಣ ನೀಡದೆ ತಿರಸ್ಕರಿಸಿದ ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು-ವರದಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ವಿಪಕ್ಷ ಸಂಸದರು ಸಲ್ಲಿಸಿದ್ದ ನಿಲುವಳಿ ನೋಟಿಸ್ ಅನ್ನು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿರಸ್ಕರಿಸಿದ್ದಾರೆ. ಉಭಯ...

ಎನ್‌ಸಿಪಿ ನಾಯಕನ ಕೊಲೆ ಪ್ರಕರಣ : ಛತ್ತೀಸ್‌ಗಢ ಮಾಜಿ ಸಿಎಂ ಅಜಿತ್ ಜೋಗಿ ಮಗ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ

2003ರ ಕೊಲೆ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿ ಹಿಂದೂ ಸೋಮವಾರ (ಏ.6) ವರದಿ ಮಾಡಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್...

ಪ. ಬಂಗಾಳ | ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಸೂಕ್ತ ಕಾರಣ ನೀಡದ ಚುನಾವಣಾ ಆಯೋಗ : ಕಾಂಗ್ರೆಸ್ ಅಭ್ಯರ್ಥಿ ಹೆಸರು ಮರು ಸೇರ್ಪಡೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರ ಅರ್ಜಿಗಳ ವಿಚಾರಣೆಗಾಗಿ ಕೋಲ್ಕತ್ತಾದಲ್ಲಿ ಸ್ಥಾಪಿಸಲಾದ ಮೇಲ್ಮನವಿ ನ್ಯಾಯಮಂಡಳಿಯು, ಮುಂಬರುವ ವಿಧಾನಸಭಾ ಚುನಾವಣೆಯ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರ ಹೆಸರನ್ನು ಭಾನುವಾರ...

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...