Homeಮುಖಪುಟವಿಹೆಚ್‌ಪಿ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯತೆ ಕುರಿತು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಭಾಷಣ

ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯತೆ ಕುರಿತು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಭಾಷಣ

- Advertisement -
- Advertisement -

ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ಇಬ್ಬರು ಹಾಲಿ ನ್ಯಾಯಾಧೀಶರು ಭಾನುವಾರ (ಡಿಸೆಂಬರ್ 8) ಹಿಂದುತ್ವ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅವರಲ್ಲಿ ಒಬ್ಬರು ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆಯ ಕುರಿತು ಉಪನ್ಯಾಸ ನೀಡಿರುವುದು ವರದಿಯಾಗಿದೆ.

ಹೈಕೋರ್ಟ್‌ನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಎಚ್‌ಪಿಯ “ಕಾಶಿ ಪ್ರಾಂತ” (ವಾರಣಾಸಿ ವಲಯ) ಮತ್ತು ಹೈಕೋರ್ಟ್ ಘಟಕದ (ಅಲಹಾಬಾದ್) ಕಾನೂನು ಘಟಕ ಆಯೋಜಿಸಿದ್ದವು.

“ವಕ್ಫ್ ಬೋರ್ಡ್ ಕಾಯ್ದೆ” ಮತ್ತು “ಧಾರ್ಮಿಕ ಪರಿವರ್ತನೆ – ಕಾರಣಗಳು ಮತ್ತು ತಡೆಗಟ್ಟುವಿಕೆ” ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ. 2026ರಲ್ಲಿ ನಿವೃತ್ತರಾಗಲಿರುವ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಯುಸಿಸಿಯಲ್ಲಿ “ಏಕರೂಪ ನಾಗರಿಕ ಸಂಹಿತೆ – ಒಂದು ಸಾಂವಿಧಾನಿಕ ಅಗತ್ಯ” ಎಂಬುದರ ಕುರಿತು ಉಪನ್ಯಾಸವನ್ನು ನೀಡಿದರು.

ಯುಸಿಸಿ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಆಧರಿಸಿದೆ ಎಂದ ಅವರು, ಜಾತ್ಯತೀತತೆ ಭಾರತದಲ್ಲಿ ದೀರ್ಘ ಕಾಲದಿಂಲೂ ಚರ್ಚೆಯ ವಿಷಯವಾಗಿದೆ.

“ಯುಸಿಸಿಯ ಮುಖ್ಯ ಉದ್ದೇಶವೆಂದರೆ ವಿವಿಧ ಧರ್ಮಗಳು ಮತ್ತು ಸಮುದಾಯಗಳ ಆಧಾರದ ಮೇಲೆ ಅಸಮಾನ ಕಾನೂನು ವ್ಯವಸ್ಥೆಗಳನ್ನು ತೆಗೆದುಹಾಕುವ ಮೂಲಕ ಸಾಮಾಜಿಕ ಸಾಮರಸ್ಯ, ಲಿಂಗ ಸಮಾನತೆ ಮತ್ತು ಜಾತ್ಯತೀತತೆಯನ್ನು ಉತ್ತೇಜಿಸುವುದು. ಈ ಸಂಹಿತೆಯು ಸಮುದಾಯಗಳ ನಡುವೆ ಮಾತ್ರವಲ್ಲದೆ ಒಂದು ಸಮುದಾಯದೊಳಗೆ ಕಾನೂನುಗಳ ಏಕರೂಪತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಯಾದವ್ ಹೇಳಿದ್ದಾರೆ.

ಇನ್ನೋರ್ವ ನ್ಯಾಯಾಧೀಶರಾದ ಜಸ್ಟಿಸ್ ದಿನೇಶ್ ಪಾಠಕ್ ಅವರು ಸಮಾರಂಭದಲ್ಲಿ “ದೀಪ ಬೆಳಗಿಸಿ” ಮತ್ತು “ಆಶೀರ್ವಾದ” ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ ಎನ್ನಲಾಗಿದೆ.

ಜಾನ್‌ಪುರ್, ಸುಲ್ತಾನ್‌ಪುರ, ಪ್ರತಾಪ್‌ಗಢ, ಅಮೇಥಿ, ಪ್ರಯಾಗ್‌ರಾಜ್, ಕೌಶಂಬಿ, ಭದೋಹಿ, ಮಿರ್ಜಾಪುರ, ಚಂದೌಲಿ, ಸೋನ್‌ಭದ್ರ, ಘಾಜಿಪುರ ಮತ್ತು ವಾರಣಾಸಿಯಿಂದ ವಿಎಚ್‌ಪಿಯ ಕಾಶಿ ಪ್ರಾಂತ್ ಕಾನೂನು ಘಟಕದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಸರ್ಕಾರಿ ವಕೀಲ ಎ.ಕೆ.ಸಾಂಡ್ ಮತ್ತು  ಅಲಹಾಬಾದ್‌ನ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷ  ಅನಿಲ್ ತಿವಾರಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಇದು ಆಯ್ದ ವ್ಯಕ್ತಿಗಳ ಸಭೆ  ಎಂದು ವಿಎಚ್‌ಪಿ ಮೂಲಗಳು ತಿಳಿಸಿವೆ.

ನ್ಯಾಯಾಧೀಶ ಯಾದವ್ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಈ ಹಿಂದೆ ಜನಮನವನ್ನು ಗಳಿಸಿದ್ದು, ನಿರ್ದಿಷ್ಟವಾಗಿ ಹಿಂದೂ ಧರ್ಮ ಮತ್ತು ಪುರಾಣದ ಅಂಶಗಳನ್ನು ಉಲ್ಲೇಖಿಸುವವರಾಗಿದ್ದಾರೆ.

2021ರಲ್ಲಿ, ಸಂಭಾಲ್‌ನ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಸಹಚರರೊಂದಿಗೆ ಹಸುವನ್ನು ಕದ್ದು, ಹತ್ಯೆ ಮಾಡಿದ ಆರೋಪಕ್ಕಾಗಿ ಜಾಮೀನು ನೀಡಲು ನಿರಾಕರಿಸಿದ್ದರು.  ಯಾದವ್ ಅವರು ಹಿಂದೂಗಳ ಮೂಲಭೂತ ಹಕ್ಕಾಗಿ ಗೋವನ್ನು “ರಾಷ್ಟ್ರೀಯ ಪ್ರಾಣಿ” ಎಂದು ಮತ್ತು ಗೋರಕ್ಷ (ಗೋ ರಕ್ಷಣೆ) ಅನ್ನು ಘೋಷಿಸಬೇಕೆಂದು ಹೇಳಿದ್ದರು.

ಪೌರಾಣಿಕ ಕಥೆಗಳೊಂದಿಗೆ ಹಿಂದಿಯಲ್ಲಿ ನ್ಯಾಯಮೂರ್ತಿ ಯಾದವ್ ಅವರು ಹಿಂದಿಯಲ್ಲಿ 12 ಪುಟಗಳಲ್ಲಿ ಬರೆದ ತನ್ನ ಆದೇಶದಲ್ಲಿ ಹಸು ಉಸಿರಾಟದಿಂದ ಆಮ್ಲಜನಕವನ್ನು ಹೊರಹಾಕುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ ಎಂದು ತೀರ್ಪು ನೀಡಿದ್ದರು.

ಗೋಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸತ್ತು ಕಾನೂನನ್ನು ಜಾರಿಗೆ ತರಬೇಕೆಂದು ಯಾದವ್ ಇದೇ ಆದೇಶದಲ್ಲಿ ವಾದಿಸಿದ್ದರು.  “ದೇಶದ ನಂಬಿಕೆ ಮತ್ತು ಸಂಸ್ಕೃತಿಗೆ ಹಾನಿಯಾದಾಗ, ದೇಶವು ದುರ್ಬಲಗೊಳ್ಳುತ್ತದೆ” ಎಂದು ಅವರು  ತೀರ್ಪಿತ್ತಿದ್ದರು.

ಅದೇ ವರ್ಷ, ಅಕ್ಟೋಬರ್‌ನಲ್ಲಿ, ನ್ಯಾಯಮೂರ್ತಿ ಯಾದವ್ ಅವರು ಆದೇಶವೊಂದರಲ್ಲಿ ಮತ್ತೊಂದು ಭಾವನಾತ್ಮಕ ತೀರ್ಪು ನೀಡಿದ್ದರು.  ಹಿಂದೂ ದೇವತೆಗಳಾದ ರಾಮ ಮತ್ತು ಕೃಷ್ಣ ಹಾಗೂ ಹಿಂದೂ ಪುರಾಣ ಗ್ರಂಥಗಳಾದ ರಾಮಾಯಣ ಮತ್ತುಭಗವದ್ಗಿತೆ ಮತ್ತು ಇವುಗಳ ಕರ್ತೃಗಳಾದ ವಾಲ್ಮೀಕಿ ಮತ್ತು ವೇದವ್ಯಾಸ್‌ ರಿಗೆ ಸಂಸತ್ತಿನಲ್ಲಿ ಕಾಯ್ದೆ ಮೂಲಕ ರಾಷ್ಟ್ರೀಯ ಗೌರವವನ್ನು ನೀಡಲಾಗುವುದು ಎಂದು ಹೇಳಿದ್ದರು.

ರಾಮ, ಕೃಷ್ಣ, ರಾಮಾಯಣ, ಭಗವದ್ಗೀತೆ, ವಾಲ್ಮೀಕಿ ಮತ್ತು ವೇದವ್ಯಾಸರು ದೇಶದ “ಸಂಸ್ಕೃತಿ ಮತ್ತು ಪರಂಪರೆಯ” ಭಾಗವಾಗಿದ್ದಾರೆ. ರಾಮ, ಕೃಷ್ಣರಿಗೆ ಅವಮಾನಿಸಿದ ಆರೋಪದ ಮೇಲೆ ಹಿಂದೂ ದಲಿತ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಯಾದವ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಹಿಂದೂ ಸಮಾಜದಲ್ಲಿ ಮತ್ತು ವಿಶ್ವ ಕಲ್ಯಾಣಕ್ಕಾಗಿ ಈ ದೇವತೆಗಳು ಮತ್ತು ಪೌರಾಣಿಕ ಮಹಾಕಾವ್ಯಗಳು ನಿರ್ವಹಿಸಿದ ಪಾತ್ರವನ್ನು ಯಾದವ್ ಶ್ಲಾಘಿಸಿದ್ದು,  ಈ ಅಂಶಗಳನ್ನು ದೇಶದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ಕಲಿಕಾ ವಿಷಯವನ್ನಾಗಿ ಮಾಡಬೇಕು ಎಂದು ಅವರು ಉಲ್ಲೇಖಿಸಿದ್ದರು ಮತ್ತು ಶಿಕ್ಷಣದ ಮೂಲಕ ಮಾತ್ರ ಒಬ್ಬ ವ್ಯಕ್ತಿಯು ಸುಸಂಸ್ಕೃತನಾಗುತ್ತಾನೆ ಮತ್ತು ಅವನು ಜೀವನ ಮೌಲ್ಯಗಳ ಬಗ್ಗೆ ಅರಿವು ಹೊಂದುತ್ತಾನೆ ಎಂದು ಯಾದವ್ ಹೇಳಿದರು.

“ರಾಮ ಮತ್ತು ಕೃಷ್ಣರು ಈ ಭಾರತದ ನೆಲದಲ್ಲಿ ಜನಿಸಿದ್ದಾರೆ ಮತ್ತು ಇಲ್ಲಿಯ ಜನರ ಕಲ್ಯಾಣದ ಬಗ್ಗೆ ಚಿಂತಿಸಿದ್ದರು ಮತ್ತು ತಮ್ಮ ಜೀವನದುದ್ದಕ್ಕೂ ಜೀವರಾಶಿಗಳ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದರು. ಇದರಿಂದ ಲೋಕಕಲ್ಯಾಣವಾಯಿತು. ವಿಶ್ವದ ಅನೇಕ ದೇಶಗಳ ಜನತೆ ರಾಮ ಮತ್ತು ಕೃಷ್ಣ ಮತ್ತು ಅವರ ಕಾರ್ಯಗಳು ಮತ್ತು ಆಲೋಚನೆಗಳನ್ನು ನಂಬಿದ್ದಾರೆ ಎಂದು ನ್ಯಾಯಾಧೀಶರು ಅಕ್ಟೋಬರ್ 2021ರಲ್ಲಿ ಹೇಳಿದರು.

2021ರ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ಯಾದವ್ ಅವರು, ರಾಜಕೀಯ ಪಕ್ಷಗಳ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ತಕ್ಷಣವೇ ನಿಷೇಧಿಸುವಂತೆ ಮತ್ತು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳನ್ನು ಕೋವಿಡ್-19 ರ  ರೂಪಾಂತರದ ಪ್ರಕರಣಗಳ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ  ಮುಂದೂಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗವನ್ನು ವಿನಂತಿಸಿದ್ದರು.

ಪ್ರಯಾಗರಾಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಎಚ್‌ಪಿಯ ಕಾನೂನು ಘಟಕದ ರಾಷ್ಟ್ರೀಯ ಸಹ ಸಂಚಾಲಕ ಅಭಿಷೇಕ್ ಅತ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಭಾಷಣ ಮಾಡಿದರು.

ಬಾಂಗ್ಲಾದೇಶದಲ್ಲಿ “ಎರಡನೇ ಕಾಶ್ಮೀರ” ವನ್ನು ಕಾಣಬಹುದು ಎಂದು ಹೇಳಿದ ಅತ್ರೇ, ಅಲ್ಲಿನ ಇತ್ತೀಚಿನ ರಾಜಕೀಯ ಕ್ರಾಂತಿಯ ನಂತರ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳನ್ನು ಗುರಿಯಾಗಿಸಲಾಗಿದೆ ಎಂದು ಉಲ್ಲೇಖಿಸಿದರು.

ನಮ್ಮ ಗುರುತನ್ನು ರಕ್ಷಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಅತ್ರೆ ಹೇಳಿದರು.

ಇದನ್ನೂಓದಿ….‘ಎಂವಿಎ’ ಮೈತ್ರಿಯಿಂದ ಹೊರಬಂದ ಸಮಾಜವಾದಿ ಪಾರ್ಟಿಯನ್ನು ‘ಬಿಜೆಪಿಯ ಬಿ ಟೀಮ್’ ಎಂದ ಆದಿತ್ಯ ಠಾಕ್ರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲ್ಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ (ಸೆಪ್ಟೆಂಬರ್ 2) ಸಿಬಿಐ ತನಿಖೆಗೆ ಆದೇಶಿಸಿದೆ. ಜೂನ್...

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...