Homeಮುಖಪುಟಅಯೋಧ್ಯ ತೀರ್ಪು: ಶಹಾಪುರ ನ್ಯಾಯವೋ, ಹಾವೇರಿ ನ್ಯಾಯವೋ?

ಅಯೋಧ್ಯ ತೀರ್ಪು: ಶಹಾಪುರ ನ್ಯಾಯವೋ, ಹಾವೇರಿ ನ್ಯಾಯವೋ?

ಬಾಬರಿ ಮಸೀದಿಯ ಕಟ್ಟಡ ಧ್ವಂಸ ಹಾಗೂ ರಾಮಲಲ್ಲಾನ ಮೂರ್ತಿ ಇಟ್ಟ ಪ್ರಕರಣಗಳನ್ನು ಕಾನೂನುಬಾಹಿರ ಎಂದು ಕರೆದಿರುವ ತೀರ್ಪು ಅದರ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ’ಮನಸ್ಸು’ ಮಾಡಬಹುದೇ? ಅಂತಹ ಮನಸ್ಸು ಇದೆಯೇ?

- Advertisement -
- Advertisement -

 

 

| ದೇವು ಪತ್ತಾರ್ |

ಬಾಬರಿ ಮಸೀದಿ ಧ್ವಂಸ ಹಾಗೂ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ’ನ್ಯಾಯ’ ನೀಡುವುದಕ್ಕಿಂತ ಹೆಚ್ಚಿನದನ್ನು ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಹೈದರಾಬಾದ್ ಕರ್ನಾಟಕದಲ್ಲಿ ‘ಶಹಾಪುರ ನ್ಯಾಯ’ ಎಂಬ ಮಾತೊಂದು ಚಾಲ್ತಿಯಲ್ಲಿದೆ. ‘ಶಹಾಪುರ ನ್ಯಾಯ’ ಮಾಡುವ ವ್ಯಕ್ತಿಯನ್ನು ನಿಂದಾತ್ಮಕ ರೀತಿಯಲ್ಲಿ ಗುರುತಿಸಲಾಗುತ್ತದೆ. ಹಾಗಂತ ಅದು ಅನ್ಯಾಯವೇನಲ್ಲ.

ಏನಿದು ಶಹಾಪುರ ನ್ಯಾಯ?

ಧಾನ್ಯ ಅಳೆಯಲು ಸೇರು ಅಥವಾ ಬಳ್ಳ ಬಳಸಲಾಗುತ್ತದೆ. ಸೇರಿನ ಬಾಯನ್ನು ಮೇಲ್ಮುಖವಾಗಿ ಇಟ್ಟು ಅಳೆದರೆ ಅದು ನ್ಯಾಯ. ಸೇರನ್ನು ಬೋರಲಾಗಿ ಹಾಕಿ ಅಳೆದರೆ ಅನ್ಯಾಯ. ಶಹಾಪುರ ನ್ಯಾಯ ಅದೆರಡನ್ನೂ ಮಾಡುವುದಿಲ್ಲ. ಬದಲಿಗೆ ಸೇರನ್ನು ಅಡ್ಡಲಾಗಿ ಮಲಗಿಸಿ ಅದರ ಮೇಲೆ ಧಾನ್ಯ ಸುರಿಯುತ್ತ ಹೋಗುತ್ತದೆ. ಸೇರಿನ ಎರಡೂ ಬದಿಯಲ್ಲಿ ಬೀಳುವ ಧಾನ್ಯವನ್ನು ಎರಡೂ ಪಕ್ಷಗಳಿಗೆ ಹಂಚಲಾಗುತ್ತದೆ. ಮೇಲ್ನೋಟಕ್ಕೆ ಹಾಗೂ ತಾರ್ಕಿಕವಾಗಿ ಸರಿ ಎನ್ನಿಸುವ ಈ ವಿಧಾನವನ್ನು ’ನ್ಯಾಯ’ ಎಂದು ಯಾರೂ ಪರಿಗಣಿಸಲು ಸಾಧ್ಯವಿಲ್ಲ.

ಮತ್ತೊಂದು ಉದಾಹರಣೆ
ಇಬ್ಬರು ನೆರೆಹೊರೆಯವರ ನಡುವೆ ತಮ್ಮ ಮನೆಯ ನಡುವಿನ ಮರವೊಂದಕ್ಕೆ ಸಂಬಂಧಿಸಿದಂತೆ ಜಗಳ-ಭಿನ್ನಾಭಿಪ್ರಾಯ ಉಂಟಾಯಿತು. ಒಬ್ಬರು ಮರ ಇರುವ ನೆಲ (ಜಾಗ) ನನಗೆ ಸೇರಿದ್ದು ಎಂದು ವಾದಿಸಿದ. ಆದರೆ, ಮತ್ತೊಬ್ಬ ಮರ ಹಚ್ಚಿ, ನೀರೆರೆದು ಬೆಳೆಸಿದ್ದರಿಂದ ಅದು ನನ್ನದು ಹಾಗೂ ಅಷ್ಟೇ ಅಲ್ಲ ಮರ ಇರುವ ಪ್ರದೇಶ ನನಗೇ ಸೇರಿದ್ದು ಎಂದುಕೊಂಡು ಅದನ್ನು ಬೆಳೆಸಿದೆ. ಬೇರೆಯವರ ಜಾಗದಲ್ಲಿರುವ ಮರವನ್ನ ನಾನೇಕೆ ನೀರು ಹಾಕಿ ಬೆಳೆಸಲಿ? ಎಂಬ ಆಕ್ಷೇಪ ವ್ಯಕ್ತಪಡಿಸಿದ. ’ಶಹಾಪುರ ನ್ಯಾಯ ಮಾಡಿದ ಹಿರಿಯ, ಮರವನ್ನು ಎರಡನೆಯವನಿಗೂ ಜಾಗವನ್ನೂ ಮೊದಲನೆಯವನಿಗೂ ಹಂಚಿ ತೀರ್ಪು ನೀಡಿದ. ಊರವರೆಲ್ಲ ಇಬ್ಬರೂ ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚು ಎಂದು ಭಾವಿಸಿ ಸಂಭ್ರಮಿಸಿದರು.

ಯಾವುದೇ ರೀತಿಯ ತಗಾದೆ, ಜಗಳ, ಭಿನ್ನಾಭಿಪ್ರಾಯ ಉಂಟಾದರೆ ಮಧ್ಯಸ್ಥಿಕೆ ವಹಿಸಿ ಮಾತನಾಡುವವರನ್ನು ‘ನೀ ಇಲ್ಲಿ ಶಾಪುರ ನ್ಯಾಯ ಮಾಡಾಕ ಬರಬ್ಯಾಡ’ ಎಂದು ಪ್ರತಿಕ್ರಿಯಿಸುತ್ತಾರೆ. ‘ನ್ಯಾಯ’ ಪ್ರಕ್ರಿಯೆಯ ಅಣಕದಂತಿರುವ ಈ ನ್ಯಾಯವನ್ನು ಅನ್ಯಾಯ ಎಂದು ತಿರಸ್ಕರಿಸಲಾಗುವುದಿಲ್ಲ. ಹಾಗೆಯೇ ನ್ಯಾಯ ಎಂದು ಒಪ್ಪಿಕೊಳ್ಳುವುದು ಕೂಡ ಕಷ್ಟ.

ಈ ರೀತಿಯ ನ್ಯಾಯ ನೀಡುವ ಪ್ರಕ್ರಿಯೆಯನ್ನು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಮುಂಬೈ ಕರ್ನಾಟಕದಲ್ಲಿ ‘ಹಾವೇರಿ ನ್ಯಾಯ’ ಎಂದು ಗುರುತಿಸಲಾಗುತ್ತದೆ. ಹಾವೇರಿ ನ್ಯಾಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಮನಿಸಬೇಕು. ಕೆಲವು ಕಡೆ ಇದನ್ನು ’ಕಾಜಿ ನ್ಯಾಯ’ ಎಂದೂ ಕರೆಯಲಾಗುತ್ತದೆ. ಪತ್ನಿಯ ತಕರಾರು ಇಲ್ಲದ ಕಾರಣ ನೀಡಿ ಪತಿಗೆ ನಾಲ್ಕಕ್ಕಿಂತ ಹೆಚ್ಚು ಮದುವೆಗೆ ಅವಕಾಶ ನೀಡುವ ಪದ್ಧತಿಯಿದು. ಕೆಲವೆಡೆ ಖಾಪ್ ಪಂಚಾಯ್ತಿ ಎಂದೂ ಕರೆಯಲಾಗುತ್ತದೆ. ’ಜಿಸ್ ಲಾಠಿ ಉಸ್ ಕಾ ಭೈಂಸ್’ ಎಂಬ ಮಾತು ಕೂಡ ಇಂತಹ ನ್ಯಾಯಿಕ ಪ್ರಕ್ರಿಯೆಯ ಕಾರಣದಿಂದಾಗಿ ಹುಟ್ಟಿಕೊಂಡದ್ದು.

ನ್ಯಾಯಾಂಗದ ಬಗ್ಗೆ ಇರುವ ಎರಡು ಪ್ರಮುಖ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಬಹುದು. ನ್ಯಾಯ ನೀಡುವುದು ಮಾತ್ರವಲ್ಲ. ನೀಡಿದ್ದು ನ್ಯಾಯ ಎಂದು ಖಚಿತಪಡಿಸುವ ಹಾಗಿರಬೇಕು. ಮತ್ತೊಂದು ನೂರು ಅಪರಾಧಿಗಳು ತಪ್ಪಿಸಿಕೊಂಡರು ಪರವಾಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು. ಈ ಎರಡೂ ಮಾತುಗಳು ನ್ಯಾಯಾಂಗದ ಘನತೆ ಮತ್ತು ಅದಕ್ಕಿರುವ ಮಹತ್ವವನ್ನು ವಿವರಿಸುತ್ತವೆ.

ಬಾಬರಿ ಮಸೀದಿಯ ಕಟ್ಟಡ ಧ್ವಂಸ ಹಾಗೂ ರಾಮಲಲ್ಲಾನ ಮೂರ್ತಿ ಇಟ್ಟ ಪ್ರಕರಣಗಳನ್ನು ಕಾನೂನುಬಾಹಿರ ಎಂದು ಕರೆದಿರುವ ತೀರ್ಪು ಅದರ ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ’ಮನಸ್ಸು’ ಮಾಡಬಹುದೇ? ಅಂತಹ ಮನಸ್ಸು ಇದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...