Homeಅಂತರಾಷ್ಟ್ರೀಯಇಸ್ರೇಲ್‌-ಹಮಾಸ್‌ನಿಂದ ಬಂಧಿತರು, ಒತ್ತೆಯಾಳುಗಳ ಹಸ್ತಾಂತರ: ಇಸ್ರೇಲ್‌ ಸಂಸತ್‌ನಲ್ಲಿ ಟ್ರಂಪ್ ಭಾಷಣ

ಇಸ್ರೇಲ್‌-ಹಮಾಸ್‌ನಿಂದ ಬಂಧಿತರು, ಒತ್ತೆಯಾಳುಗಳ ಹಸ್ತಾಂತರ: ಇಸ್ರೇಲ್‌ ಸಂಸತ್‌ನಲ್ಲಿ ಟ್ರಂಪ್ ಭಾಷಣ

- Advertisement -
- Advertisement -

ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್-ಹಮಾಸ್ ನಡುವೆ ಬಂಧಿತರು ಮತ್ತು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.

ಭಾರತೀಯ ಕಾಲಮಾನ ಸೋಮವಾರ (ಅ.13) ಪೂರ್ವಾಹ್ನ 12 ಗಂಟೆಯ ಸುಮಾರಿಗೆ ಮೊದಲ ಹಂತದಲ್ಲಿ ಏಳು ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಅಂತಾರಾಷ್ಟೀಯ ಸಮಿತಿ ಮೂಲಕ ಹಮಾಸ್ ಇಸ್ರೇಲ್‌ಗೆ ಹಸ್ತಾಂತರಿಸಿದೆ. .

ನಂತರ, ಎರಡನೇ ಹಂತದಲ್ಲಿ, 13 ಒತ್ತೆಯಾಳುಗಳನ್ನು ಹಸ್ತಾಂತರ ಮಾಡಿದೆ. ಈ ಮೂಲಕ ಜೀವಂತ ಇದ್ದ ಎಲ್ಲಾ 20 ಒತ್ತೆಯಾಳುಗಳನ್ನು ಹಮಾಸ್ ಹಸ್ತಾಂತರಿಸಿದೆ. ಗಾಝಾದ ಖಾನ್ ಯೂನಿಸ್ ನಗರದಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ.

ಇದಕ್ಕೆ ಬದಲಾಗಿ, ಜೈಲು ಶಿಕ್ಷೆಗೆ ಗುರಿಯಾದ ಸುಮಾರು 250ಕ್ಕೂ ಹೆಚ್ಚು ಅಪರಾಧಿಗಳು ಮತ್ತು 2023ರ ಅಕ್ಟೋಬರ್ 7ರ ನಂತರ ಬಂಧಿಸಲ್ಪಟ್ಟವರು ಸೇರಿದಂತೆ ಒಟ್ಟು 2000 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಬಿಡುಗಡೆ ಮಾಡುತ್ತಿದೆ.

ವರದಿಗಳ ಪ್ರಕಾರ, ಪ್ಯಾಲೆಸ್ತೀನಿಯರನ್ನು ಹೊತ್ತ ಮೊದಲ ಕೆಲ ಬಸ್‌ಗಳು ಆಕ್ರಮಿತ ಪಶ್ಚಿಮ ದಂಡೆಯ ರಾಮಲ್ಲಾ ತಲುಪಿದೆ. ಅಲ್ಲಿ ಸಾವಿರಾರು ಜನರು ತಮ್ಮವರನ್ನು ಸ್ವಾಗತಿಸಿದ್ದಾರೆ. ಬಿಡುಗಡೆಗೊಂಡವರನ್ನು ರಾಮಲ್ಲಾದಿಂದ ಗಾಝಾಕ್ಕೆ ಕರೆ ತರಲಾಗುತ್ತದೆ. ನಂತರ ದಕ್ಷಿಣ ಗಾಝಾದ ಖಾನ್ ಯೂನಿಸ್‌ನ ಯುರೋಪಿಯನ್ ಆಸ್ಪತ್ರೆ ಅಥವಾ ಕೇಂದ್ರ ಗಾಝಾದ ಅಲ್‌-ನಸರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.

2000 ಪ್ಯಾಲೆಸ್ತೀನಿಯರು ಇಸ್ರೇಲ್‌ನ ಓಫರ್ ಮಿಲಿಟರಿ ಜೈಲು, ಮೆಗಿದ್ದೋ ಸೆರೆಮನೆ, ಗಿಲ್ಬೋವಾ ಜೈಲು, ಕೆಟ್ಜಿಯೊಟ್ ಜೈಲು ಮತ್ತು ಐಡಿಎಫ್ ಕಸ್ಟಡಿ ಸೌಲಭ್ಯಗಳಿಂದ ಬಿಡುಗಡೆಯಾಗಲಿದ್ದಾರೆ. ಹಮಾಸ್ ಒತ್ತೆಯಾಳುಗಳನ್ನು ಇದುವರೆಗೆ ಎಲ್ಲಿ ಬಚ್ಚಿಟ್ಟಿತ್ತು ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಬಿಡುಗಡೆ ಮಾತ್ರ ಖಾನ್ ಯೂನಿಸ್‌ನಲ್ಲಿ ನಡೆದಿದೆ.

ಜೀವಂತ ಇದ್ದ 20 ಇಸ್ರೇಲಿ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಇಸ್ರೇಲ್‌ನ ಟೆಲ್ ಅವೀವ್ ನಗರದ ತಲುಪಿದ ಅವರನ್ನು ಸಂಬಂಧಿಕರು ಸ್ವಾಗತಿಸಿದ್ದಾರೆ. ಇನ್ನು 28 ಮೃತ ಒತ್ತೆಯಾಳುಗಳ ದೇಹಗಳನ್ನು ಹಸ್ತಾಂತರಿಸಬೇಕಿದೆ.

ವರದಿಗಳ ಪ್ರಕಾರ, ಹಮಾಸ್ ಇಂದು (ಸೋಮವಾರ) 28 ಮೃತದೇಹಗಳ ಪೈಕಿ 4 ದೇಹಗಳನ್ನು ಹಸ್ತಾಂತರಿಸಿದೆ. ಇನ್ನುಳಿದ 24 ದೇಹಗಳ ಹಸ್ತಾಂತರ ಆಗಬೇಕಿದೆ. ಟೆಲ್‌ ಅವೀವ್‌ನಲ್ಲಿ ಜೀವಂತವಾಗಿ ತಲುಪಿದ ಒತ್ತೆಯಾಳುಗಳ ಸಂಬಂಧಿಕರು ಖುಷಿಯಿಂದ ಕುಣಿದಾಡಿದರೆ, ಮರಣ ಹೊಂದಿದವರ ಸಂಬಂಧಿಕರು ದುಖಃ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ರೇಲಿ ಸಂಸತ್ತಿನಲ್ಲಿ ಟ್ರಂಪ್ ಭಾಷಣ

ಇತ್ತ ಗಡಿಯಲ್ಲಿ ಬಂಧಿತರು ಒತ್ತೆಯಾಳುಗಳ ಹಸ್ತಾಂತರ ಕಾರ್ಯ ನಡೆಯುತ್ತಿದ್ದರೆ, ಅತ್ತ ಪಶ್ಚಿಮ ಜೆರುಸಲೆಮ್‌ನ ಇಸ್ರೇಲಿ ಸಂಸತ್‌ನಲ್ಲಿ (ನೆಸೆಟ್‌) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದ್ದಾರೆ.

“ಎರಡು ವರ್ಷಗಳ ಕತ್ತಲೆಯ ಸೆರೆವಾಸದ ಬಳಿಕ, 20 ಒತ್ತೆಯಾಳುಗಳು ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲು ಹಮಾಸ್ ಮೇಲೆ ಒತ್ತಡೆ ಹೇರಿದ ಅರಬ್ ಮುಸ್ಲಿಂ ದೇಶಗಳಿಗೆ ಇದೇ ವೇಳೆ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟ್ರಂಪ್ ಕೊಂಡಾಡಿದ್ದಾರೆ. ಅಲ್ಲದೆ, ಕದನ ವಿರಾಮ ಜಾರಿಯಾಗುವಲ್ಲಿ ಅಮೆರಿಕದ ತನ್ನ ಆಡಳಿತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.

ಲೆಬನಾನ್‌ನ ಹಿಜ್ಬುಲ್ಲಾ ಗುಂಪಿನ ವಿರುದ್ದ ಗುಡುಗಿದ ಟ್ರಂಪ್, ಹಿಜ್ಬುಲ್ಲಾ ಇಸ್ರೇಲ್‌ಗೆ ಯಾವತ್ತೂ ಅಪಾಯಕಾರಿ ಎಂದಿದ್ದಾರೆ. ಲೆಬನಾನ್‌ನ ಹೊಸ ಅಧ್ಯಕ್ಷ ಶಾಶ್ವತವಾಗಿ ಹಿಜ್ಬುಲ್ಲಾವನ್ನು ನಿಶಸ್ತ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾವು ನೀವು ಅವರನ್ನು ಬೆಂಬಲಿಸಬೇಕು ಎಂದು ಟ್ರಂಪ್ ಇಸ್ರೇಲ್‌ ನಾಯಕರಿಗೆ ಕರೆ ನೀಡಿದ್ದಾರೆ.

ಟ್ರಂಪ್ ಕೊಂಡಾಡಿದ ನೆತನ್ಯಾಹು

ಟ್ರಂಪ್‌ಗೂ ಮೊದಲು ಭಾಷಣ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ನಮ್ಮ ಜನರ ಇತಿಹಾಸದಲ್ಲಿ ಕೆತ್ತಲಾಗುವ ಭಾವನೆಗಳಿಂದ ತುಂಬಿರುವ ಈ ದಿನದಂದು, ನಿಮ್ಮ ಹೆಸರು ನಮ್ಮ ರಾಷ್ಟ್ರದ ಪರಂಪರೆಯಲ್ಲಿ ಕೆತ್ತಲ್ಪಡುತ್ತದೆ” ಎಂದು ಟ್ರಂಪ್ ಅವರನ್ನು ಕೊಂಡಾಡಿದ್ದಾರೆ.

ಶ್ವೇತ ಭವನದಲ್ಲಿ ಇಸ್ರೇಲ್ ಹೊಂದಿರುವ ‘ಶ್ರೇಷ್ಠ ಸ್ನೇಹಿತ’ ಟ್ರಂಪ್ ಎಂದ ನೆತನ್ಯಾಹು, ಯಾವ ಅಮೆರಿಕನ್ ಅಧ್ಯಕ್ಷರೂ ಇಸ್ರೇಲ್‌ಗೆ ಇದಕ್ಕಿಂತ ಹೆಚ್ಚಿನದನ್ನು ಮಾಡಿಲ್ಲ ಎಂದು ಟ್ರಂಪ್ ಅವರನ್ನು ಈ ಕೆಳಗಿನವುಗಳಿಗಾಗಿ ಶ್ಲಾಘಿಸಿದ್ದಾರೆ.

1.2018 ರಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಜೆರುಸಲೆಮ್‌ಗೆ ಸ್ಥಳಾಂತರಿಸುವುದು.
2.ಅಬ್ರಹಾಂ ಒಪ್ಪಂದಗಳಲ್ಲಿ ಮಧ್ಯಸ್ಥಿಕೆ ವಹಿಸಿರುವುದು
3. ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ಇಸ್ರೇಲ್‌ನ ‘ಸಾರ್ವಭೌಮತ್ವ’ ವನ್ನು ಗುರುತಿಸಿರುವುದು

ಗಾಝಾ ಕದನ ವಿರಾಮ ಒಪ್ಪಂದಕ್ಕೆ ‘ಬಹುತೇಕ ಇಡೀ ಪ್ರಪಂಚದ ಬೆಂಬಲ’ ಸಿಕ್ಕಿದ್ದು ಟ್ರಂಪ್ ಅವರ ‘ಪ್ರಮುಖ ನಾಯಕತ್ವ ಎಂದು ನೆತನ್ಯಾಹು ಕೊಂಡಾಡಿದ್ದಾರೆ. ಇದೇ ವೇಳೆ ಇಸ್ರೇಲ್ ವಿರುದ್ದವಾಗಿ ನಿಂತಿದ್ದ ರಾಷ್ಟ್ರಗಳ ಹೆಸರನ್ನು ಉಲ್ಲೇಖಿಸದೆ ಅವರು ಟೀಕಿಸಿದ್ದಾರೆ.

ಟ್ರಂಪ್ ಭಾಷಣಕ್ಕೆ ಅಡ್ಡಿಪಡಿಸಿದ ಸಂಸತ್ ಸದಸ್ಯರು

ಅಯ್ಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಎಂಬ ಇಬ್ಬರು ಸಂಸತ್ ಸದಸ್ಯರು ಟ್ರಂಪ್ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನೆಸೆಟ್‌ನಲ್ಲಿ ನಡೆಯಿತು. ಇವರಿಬ್ಬರು ಟ್ರಂಪ್ ಭಾಷಣದ ವೇಳೆ ‘ನರಮೇಧ’ ಎಂದು ಘೋಷಣೆಗಳನ್ನು ಕೂಗಿ ಗಾಝಾ ಆಕ್ರಮಣವನ್ನು ಖಂಡಿಸಿದ್ದಾರೆ. ನಂತರ ಅವರಿಬ್ಬರನ್ನು ಸಂಸತ್‌ನಿಂದ ಹೊರಗೆ ಕಳಿಸಲಾಗಿದೆ ಎಂದು ವರದಿಯಾಗಿದೆ.

ಇರಾನ್ ಜೊತೆ ಶಾಂತಿ ಒಪ್ಪಂದಕ್ಕೆ ಸಿದ್ದ

ನೇರ ಶತ್ರು ಇರಾನ್ ಜೊತೆಯೂ ಶಾಂತಿ ಒಪ್ಪಂದ ಮಾಡಿಕೊಳ್ಳುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಇರಾನ್‌ ಶಾಂತಿ ಒಪ್ಪಂದಕ್ಕೆ ಮುಂದಾದರೆ ತುಂಬಾ ಒಳ್ಳೆಯದು. ಏಕೆಂದರೆ, ಅಲ್ಲಿನ ಜನತೆ ಬದುಕಲು ಬಯಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಈಜಿಪ್ಟ್‌ನಲ್ಲಿ ಗಾಝಾ ಶಾಂತಿ ಶೃಂಗ 

ಇಸ್ರೇಲ್‌ ನೆಸೆಟ್‌ನಲ್ಲಿ ಭಾಷಣ ಮಾಡಿದ ಬಳಿಕ ಈಜಿಪ್ಟ್‌ನ ಶರ್ಮ್‌ ಅಲ್ ಶೇಕ್‌ನಲ್ಲಿ ನಡೆಯಲಿರುವ ‘ಗಾಝಾ ಶಾಂತಿ ಶೃಂಗ’ ದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ. ಈಜಿಪ್ಟ್‌ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಮತ್ತು ಡೊನಾಲ್ಟ್ ಟ್ರಂಪ್ ಜಂಟಿಯಾಗಿ ಈ ಶೃಂಗಸಭೆಯ ನೇತೃತ್ವವಹಿಸಲಿದ್ದಾರೆ.

ಭಾರತ ಸೇರಿದಂತೆ ಸುಮಾರು 20 ದೇಶಗಳ ಪ್ರಮುಖರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಭಾರತ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು. ಆದರೆ, ಭಾರತ ಸರ್ಕಾರ ಪ್ರಧಾನಿ ಬದಲಾಗಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರನ್ನು ಕಳಿಸಿಕೊಟ್ಟಿದೆ ಎಂದು ತಿಳಿದು ಬಂದಿದೆ.

ಕದನ ವಿರಾಮ: ಮೊದಲ ಹಂತದಲ್ಲಿ 7 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...