Homeಮುಖಪುಟಸಾವಿರಕ್ಕೂ ಅಧಿಕ 'ನಕಲಿ ಮತದಾರರು' ಪತ್ತೆ : ಮಹತ್ವದ ಅಧ್ಯಯನ ವರದಿ ಬಿಡುಗಡೆ

ಸಾವಿರಕ್ಕೂ ಅಧಿಕ ‘ನಕಲಿ ಮತದಾರರು’ ಪತ್ತೆ : ಮಹತ್ವದ ಅಧ್ಯಯನ ವರದಿ ಬಿಡುಗಡೆ

- Advertisement -
- Advertisement -

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಶಾಸಕ ಮಗಂತಿ ಗೋಪಿನಾಥ್ ಅವರ ನಿಧನದಿಂದ ತೆರವಾದ ಹೈದರಾಬಾದ್‌ನ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ (ನ.11) ಉಪ ಚುನಾವಣೆ ನಡೆಯಿತು.

ಉಪ ಚುನಾವಣೆಗೆ ಬಿಆರ್‌ಎಸ್‌ ಪಕ್ಷ ಮಗಂತಿ ಗೋಪಿನಾಥ್ ಅವರ ಪತ್ನಿ ಮಗಂತಿ ಸುನಿತಾ ಅವರನ್ನು ಕಣಕ್ಕಿಳಿಸಿದ್ದು, ಅನುಕಂಪದ ಆಧಾರದಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಕಾಂಗ್ರೆಸ್ ವಿ. ನವೀನ್ ಯಾದವ್ ಅವರಿಗೆ ಟಿಕೆಟ್ ನೀಡಿದ್ದು, ಇವರಿಗೆ ಎಐಎಂಐಎಂ ಬೆಂಬಲ ಇದೆ ಎಂದು ವರದಿಯಾಗಿದೆ. ಇನ್ನು ಬಿಜೆಪಿಯಿಂದ ಲಂಕಲ ದೀಪಕ್ ರೆಡ್ಡಿ ಎಂಬವರು ಸ್ಪರ್ಧೆ ಮಾಡಿದ್ದಾರೆ.

ಮತದಾನಕ್ಕೂ ಮುನ್ನ ‘ಮತಗಳ್ಳತನ’ ಬಯಲು

ಜುಲಿಬಿ ಹಿಲ್ಸ್ ಉಪ ಚುನಾವಣೆಯ ಮತದಾನಕ್ಕೂ ಮುನ್ನಾದಿನ, ಅಂದರೆ ನವೆಂಬರ್ 10, 2025ರಂದು ‘ಪೊಲಿ ಇಂಟೆಲ್ ಲ್ಯಾಬ್’ ಎಂಬ ಸಂಸ್ಥೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 1,609 ನಕಲಿ ಮತದಾರರನ್ನು ಗುರುತಿಸಿರುವುದಾಗಿ ವೈಜ್ಞಾನಿಕ ಮತ್ತು ತಾಂತ್ರಿಕ ದಾಖಲೆಗಳೊಂದಿಗೆ ವರದಿ ಬಿಡುಗಡೆ ಮಾಡಿದೆ.

ಜುಬಿಲಿ ಹಿಲ್ಸ್ ಕ್ಷೇತ್ರದ 407 ಮತಗಟ್ಟೆಗಳಲ್ಲಿ 1,609 ನಕಲಿ ಮತದಾರರ ನೋಂದಣಿಗಳನ್ನು ಸಮಗ್ರ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಇದನ್ನು ಎಪಿಕ್ (ಮತದಾರರ ಗುರುತಿನ ಚೀಟಿ) ಹೊಂದಾಣಿಕೆ ಮತ್ತು ಹಸ್ತಚಾಲಿತ (ಮ್ಯಾನುಯೆಲ್) ಪರಿಶೀಲನೆಯ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ವರದಿ ಹೇಳಿದೆ.

407 ಮತಗಟ್ಟೆಗಳ ಪೈಕಿ 321 ಮತಗಟ್ಟೆಗಳಲ್ಲಿ (ಶೇ.79) ಕನಿಷ್ಠ 1ರಿಂದ ಗರಿಷ್ಠ 19ರವರೆಗೆ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಹಬೀಬ್ ಫಾತಿಮಾ ನಗರದ ಮತಗಟ್ಟೆ ಸಂಖ್ಯೆ-115ರಲ್ಲಿ ಗರಿಷ್ಠ 19, ಹಬೀಬ್ ಫಾತಿಮಾ ನಗರದ ಮತಗಟ್ಟೆ ಸಂಖ್ಯೆ -103ರಲ್ಲಿ 18 ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂದು ವರದಿ ವಿವರಿಸಿದೆ.

ಚುನಾವಣಾ ಆಯೋಗದ ಪ್ರಕಾರ, ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,01,379 ಮತದಾರರಿದ್ದಾರೆ. ಈ ಪೈಕಿ 2,08,558 ಪುರುಷರು ಮತ್ತು 1,92,795 ಮಹಿಳೆಯರು ಒಳಗೊಂಡಿದ್ದಾರೆ.

ಇವರಲ್ಲಿ, “ಒಂದು ಮತಗಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಅಥವಾ ಮಾಹಿತಿ ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಂಡಿರುವುದು, ಒಬ್ಬ ವ್ಯಕ್ತಿಯ ಮಾಹಿತಿ ವಿವಿಧ ಮತಗಟ್ಟೆಗಳಲ್ಲಿ ಪುನರಾವರ್ತನೆಯಾಗಿರುವುದು, ಒಬ್ಬರ ಹೆಸರು ಅಥವಾ ಮಾಹಿತಿ ಒಂದೇ ಮತಗಟ್ಟೆಯಲ್ಲಿ ಮೂರು ಬಾರಿ ದಾಖಲಾಗಿರುವುದು ಮತ್ತು ಒಬ್ಬ ವ್ಯಕ್ತಿಯ ಮಾಹಿತಿ ಹಲವು ವಿಭಿನ್ನ ಮತಗಟ್ಟೆಗಳಲ್ಲಿ ಹಲವು ಬಾರಿಗೆ ಕಾಣಿಸಿಕೊಂಡಿರುವುದು” ಹೀಗೆ ನಾಲ್ಕು ವಿಧದಲ್ಲಿ ನಕಲಿ ಮತದಾರರನ್ನು ಪತ್ತೆ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.

ಒಂದೇ ರೀತಿಯ ಹೆಸರುಗಳು, ತಂದೆ, ತಾಯಿ, ಗಂಡ, ಹೆಂಡತಿಯ ಸಂಬಂಧಗಳು ಒಂದೇ ರೀತಿ ಇರುವುದು, ಸಂಬಂಧಿಕರ ಹೆಸರು ಒಂದೇ ರೀತಿ ಇರುವುದು, ಮನೆ ಸಂಖ್ಯೆ, ವಯಸ್ಸು ಮತ್ತು ಲಿಂಗ ಒಂದೇ ರೀತಿ ಇರುವುದನ್ನು ನಕಲಿ ಮತದಾರರ ಪತ್ತೆಗೆ ಪರಿಗಣಿಸಲಾಗಿದೆ ಎಂದು ಹೇಳಿದೆ.

ಎಲ್ಲಾ ನಕಲಿ ಮತದಾರರ ವಿವರವಾದ ಮಾಹಿತಿ, ಒಂದೇ ರೀತಿಯ ಗುರುತಿನ ಚೀಟಿಗಳ ಹೋಲಿಕೆಯ ದಾಖಲೆ ಮತ್ತು ಸಂಬಂಧಗಳು ಒಂದೇ ರೀತಿ ಇರುವ ಮಾಹಿತಿಯ ದಾಖಲೆಗಳನ್ನು ಸಂಸ್ಥೆ ಬಹಿರಂಗಪಡಿಸಿದೆ.

ಪೈಥಾನ್ ಪ್ರೋಗ್ರಾಮ್, ಸುಧಾರಿತ ಅಕ್ಷರ ಗುರುತಿಸುವ ತಂತ್ರ (advanced text-recognition algorithm) ಮತ್ತು ಮತದಾರರ ಗುರುತಿನ ಚೀಟಿ ಹೋಲಿಕೆ ತಂತ್ರ (EPIC matching techniques) ಇವುಗಳ ಮೂಲಕ ವೈಜ್ಞಾನಿಕವಾಗಿ ನಕಲಿ ಮತಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲಿ ಇಂಟೆಲ್ ಲ್ಯಾಬ್ ಸಂಸ್ಥೆ ತಿಳಿಸಿದೆ.

ಹರಿಯಾಣ ಮತಗಳ್ಳತನ : ರಾಹುಲ್ ಗಾಂಧಿ ಮಾಡಿರುವ ಪ್ರಮುಖ ಆರೋಪಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...