Homeಮುಖಪುಟಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ 'ಬಿಟ್ಟು ಬಜರಂಗಿ'

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

- Advertisement -
- Advertisement -

ಹರಿಯಾಣದಲ್ಲಿ “ಲವ್ ಜಿಹಾದ್” ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ ಕಲ್ಪನೆಯೇ ಇರಲಿಲ್ಲವೇನೊ.

ಬಿಟ್ಟು ಬಜರಂಗಿ “ಗೋ ರಕ್ಷಾ ಬಜರಂಗ್ ಫೋರ್ಸ್” ಸಂಘಟನೆಯ ಸಂಸ್ಥಾಪಕನಾಗಿದ್ದು, 2023ರ ನುಹ್ ಕೋಮು ಗಲಭೆ ಪ್ರಕರಣದ ಪ್ರಮುಖ ಆರೋಪಿಯಾಗಿ ದೇಶದಾದ್ಯಂತ ಸುದ್ದಿಯಾಗಿದ್ದ ಈ 48 ವರ್ಷದ ವ್ಯಕ್ತಿ, ತಾನು ನಕಲಿ ಮದುವೆ ದಂಧೆಯ ಜಾಲಕ್ಕೆ ಸಿಲುಕಿ ವಂಚನೆಗೊಳಗಾಗಿದ್ದೇನೆ ಎಂದು ಕೆಲವು ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.

ನುಹ್ ಪ್ರದೇಶದ ಹಳೆಯ ಚಿತ್ರ. | ಕೃಪೆ: ದಿ ಪ್ರಿಂಟ್

ಕಳೆದ ಸೆಪ್ಟೆಂಬರ್‌ನಲ್ಲಿ ತನಗೆ ವಧುವನ್ನು ಹುಡುಕಿಕೊಡುವುದಾಗಿ ನಂಬಿಸಿ ಈ ಗ್ಯಾಂಗ್ ₹41,000 ವಂಚಿಸಿದೆ ಎಂದು ಅವರು ಆರೋಪಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದಾಬಾದ್ ಪೊಲೀಸರ ಅಪರಾಧ ವಿಭಾಗವು ಐದು ಜನರನ್ನು ಬಂಧಿಸಿದೆ. ಬಂಧಿತರನ್ನು ಅಲಿಗಢದ ನಿವಾಸಿಗಳಾದ ದಾನಿಶ್ ಚಮನ್ (35), ಆತನ ಪತ್ನಿ ಮಹಾವಿಶ್ ದಾನಿಶ್ (27), ಸಚಿನ್ (27), ಸಂಜೀವ್ (52) ಮತ್ತು ಬುಲಂದ್‌ಶಹರ್‌ನ ಪ್ರದೀಪ್ (34) ಎಂದು ಗುರುತಿಸಲಾಗಿದೆ. ಇವರೆಲ್ಲರನ್ನೂ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಿಟ್ಟು ಬಜರಂಗಿ ಸರಾಯ್ ಖ್ವಾಜಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ಬಂಟು ಅಲಿಯಾಸ್ ಅವಿನಾಶ್ ಎಂಬ ಪರಿಚಯಸ್ಥನ ಮೂಲಕ ಅವರಿಗೆ ಈ ಗ್ಯಾಂಗ್‌ನ ಸಂಪರ್ಕ ಸಿಕ್ಕಿತ್ತು. ಫರೀದಾಬಾದ್‌ನ ಸಂಜಯ್ ಎನ್‌ಕ್ಲೇವ್ ನಿವಾಸಿಯಾದ ಬಜರಂಗಿ, ತನಗೆ ಮದುವೆಯಾಗಲು ಹುಡುಗಿಯನ್ನು ಹುಡುಕುವಂತೆ ಬಂಟುಗೆ ತಿಳಿಸಿದ್ದರು. ಬಂಟು ಅವರನ್ನು ರಾಣಿ ಅಲಿಯಾಸ್ ಲಕ್ಷ್ಮಿ ಎಂಬ ಮಹಿಳೆಗೆ ಪರಿಚಯಿಸಿದ್ದನು. ಆಕೆ ತಾನು ಮದುವೆ ಸಂಬಂಧಗಳನ್ನು ಕುದುರಿಸುವ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಳು. ವಧುವನ್ನು ನೋಡಲು ಬಜರಂಗಿ ಅವರನ್ನು ಎರಡು ಮೂರು ಬಾರಿ ಅಲಿಗಢಕ್ಕೆ ಕರೆಯಿಸಲಾಗಿದ್ದರೂ, ಅವರಿಗೆ ಯಾವುದೇ ಹುಡುಗಿ ಇಷ್ಟವಾಗಿರಲಿಲ್ಲ. ಕೊನೆಗೆ ಅವರ ಮೊಬೈಲ್‌ಗೆ “ಪೂಜಾ” ಎಂಬಾಕೆಯ ಫೋಟೋ ಕಳುಹಿಸಲಾಗಿದ್ದು, ಬಿಟ್ಟು ಬಜರಂಗಿ ಆ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ 5 ರಂದು ರಾಣಿ, ವಧು ಪೂಜಾ ಸೋಗಿನಲ್ಲಿದ್ದ ಮಹಾವಿಶ್ ದಾನಿಶ್ ಮತ್ತು ಆಕೆಯ ಕುಟುಂಬದವರೆಂದು ಹೇಳಿಕೊಂಡ ಇತರರು ಅಲಿಗಢದಿಂದ ಫರೀದಾಬಾದ್‌ನಲ್ಲಿರುವ ಬಜರಂಗಿ ಮನೆಗೆ ಬಂದು, ನಿಶ್ಚಿತಾರ್ಥದ ಶಾಸ್ತ್ರಕ್ಕಾಗಿ ₹11,000 ಹಣ ಪಡೆದಿದ್ದರು. ಮರುದಿನವೇ ಮದುವೆಯ ಖರ್ಚುಗಳಿಗಾಗಿ ಎಂದು ಮತ್ತೊಮ್ಮೆ ₹30,000 ಪಡೆದು, ಸೆಪ್ಟೆಂಬರ್ 7, 2025 ರಂದು ಅಲಿಗಢದ ದೇವಸ್ಥಾನವೊಂದರಲ್ಲಿ ಮದುವೆ ಮುಹೂರ್ತ ನಿಗದಿಪಡಿಸಿದ್ದರು. ಆದರೆ ನಿಗದಿತ ದಿನದಂದು ಬಜರಂಗಿ ದೇವಸ್ಥಾನಕ್ಕೆ ತಲುಪಿದಾಗ, ವಧುವಿನ ಕಡೆಯಿಂದ ಯಾರೊಬ್ಬರೂ ಅಲ್ಲಿಗೆ ಬಂದಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಬಜರಂಗಿ ಮನೆಗೆ ಭೇಟಿ ನೀಡಿದ್ದ ಇಡೀ “ಕುಟುಂಬ”ವೇ ನಕಲಿಯಾಗಿತ್ತು ಮತ್ತು ಯೋಜಿತವಾಗಿಯೇ ಈ ವಂಚನೆ ನಡೆದಿತ್ತು. ಮಹಾವಿಶ್ ದಾನಿಶ್ ವಧು “ಪೂಜಾ” ಪಾತ್ರ ಮಾಡಿದ್ದರೆ, ಪ್ರದೀಪ್ ಆಕೆಯ ಚಿಕ್ಕಪ್ಪನಾಗಿ, ಸಂಜೀವ್ ಮತ್ತೊಬ್ಬ ಸಂಬಂಧಿಯಾಗಿ, ಸಚಿನ್ ಮಧ್ಯವರ್ತಿಯಾಗಿ ಮತ್ತು ದಾನಿಶ್ ಚಮನ್ ವಧುವಿನ ಸಹೋದರನಾಗಿ ನಟಿಸಿದ್ದರು. ಈ ತಂಡ ಈ ಹಿಂದೆಯೂ ಇಂತಹದೇ ವಂಚನೆಗಳನ್ನು ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಮಹಾವಿಶ್ ದಾನಿಶ್ ಈಗಾಗಲೇ ಇಂತಹದೇ ಎರಡು ವಂಚನೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದು, ಪ್ರದೀಪ್ ಕೂಡ ಮದುವೆ ಹೆಸರಿನಲ್ಲಿ ಜನ ವಂಚಿಸಿದ ಆರೋಪದ ಮೇಲೆ ಅಲಿಗಢ ಮತ್ತು ದಾಸ್ನಾ (ನೋಯ್ಡಾ) ಜೈಲುಗಳಲ್ಲಿದ್ದನು. ಈ ಜಾಲವು ಹರಿಯಾಣ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಕಳೆದ ಹಲವು ವರ್ಷಗಳಿಂದ ಈ ನಕಲಿ ಮದುವೆ ದಂಧೆ ನಡೆಸುತ್ತಿದ್ದು, ಇದರ ಸಂಪೂರ್ಣ ಆಳವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಧೆಯ ಸೂತ್ರಧಾರಿ ಎನ್ನಲಾದ ರಾಣಿ ಅಲಿಯಾಸ್ ಲಕ್ಷ್ಮಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ಫರೀದಾಬಾದ್ ಪೊಲೀಸ್ ವಕ್ತಾರ ಯಶ್‌ಪಾಲ್ ತಿಳಿಸಿದ್ದಾರೆ.

ಬಿಟ್ಟು ಬಜರಂಗಿಯ ಅಸಲಿ ಹೆಸರು ರಾಜ್ ಕುಮಾರ್ ಪಾಂಚಾಲ್. ಫರೀದಾಬಾದ್‌ನ ಪಾರ್ವತಿಯಾ ಕಾಲೋನಿಯ ತರಕಾರಿ ವ್ಯಾಪಾರಿಯಾಗಿದ್ದ ಈತ, ನಂತರ ಸ್ವಯಂ ಘೋಷಿತ ಗೋರಕ್ಷಕನಾಗಿ ಬದಲಾಗಿದ್ದನು. ಈತನ ನೇತೃತ್ವದ “ಗೌರಕ್ಷಾ ಬಜರಂಗ್ ಫೋರ್ಸ್” ಸಂಘಟನೆಯು ಈ ಭಾಗದಲ್ಲಿ ಅಂತರ್ಧರ್ಮೀಯ ಸಂಬಂಧಗಳು ಮತ್ತು ಧರ್ಮ ಮತಾಂತರಗಳನ್ನು ತಡೆಯುವ ಕೆಲಸ ಮಾಡುತ್ತಿತ್ತು.

ಡಿಸೆಂಬರ್ 2022 ರಲ್ಲಿ ಮುಸ್ಲಿಂ ನೆರೆಹೊರೆಯವನೊಂದಿಗೆ ಓಡಿಹೋಗಿದ್ದ ಯುವತಿಯ ತಂದೆಗೆ ಹರಿಯಾಣದ ಮತಾಂತರ ವಿರೋಧಿ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಿಸಲು ಸಹಾಯ ಮಾಡಿದ ನಂತರ ಈತನಿಗೆ ದೊಡ್ಡ ಬೆಂಬಲಿಗರ ಬಳಗ ಸೃಷ್ಟಿಯಾಗಿತ್ತು. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಜಾವೇದ್ ಖಾನ್ ಎಂಬಾತನನ್ನು ವಿವಾಹವಾಗಿದ್ದ ಸಂಸ್ಕೃತಿ ಶುಕ್ಲಾ ಮತ್ತು ಆಕೆಯ ಪತಿ, ಬಿಟ್ಟು ಬಜರಂಗಿ ಸಂಘಟನೆಯ ಬೆದರಿಕೆಯಿಂದಾಗಿ ಅಡಗಿಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ನಂತರ ಸಂಸ್ಕೃತಿ ತಂದೆ ಡಿ.ಕೆ. ಶುಕ್ಲಾ ಅವರು ಜಾವೇದ್ ವಿರುದ್ಧ ಬಲವಂತದ ಮತಾಂತರದ ದೂರು ದಾಖಲಿಸಿದ್ದು, ಈ ಹೋರಾಟಕ್ಕೆ ಹಿಂದುತ್ವ ಸಂಘಟನೆಗಳು ಮತ್ತು ಬಜರಂಗಿ ಬೆಂಬಲ ನೀಡಿದ್ದರು ಎಂದು ಹೇಳಿಕೊಂಡಿದ್ದರು.

ಜುಲೈ 31, 2023 ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಶೋಭಾ ಯಾತ್ರೆಯು ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಸಾಗುತ್ತಿದ್ದಾಗ ನಡೆದ ನುಹ್ ಕೋಮು ಹಿಂಸಾಚಾರದಲ್ಲಿ ಬಿಟ್ಟು ಬಜರಂಗಿ ಪ್ರಮುಖ ಆರೋಪಿಯಾಗಿದ್ದನು. ಆ ಗಲಭೆಯಲ್ಲಿ ಆರು ಜನರು ಸಾವನ್ನಪ್ಪಿ, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೆರವಣಿಗೆಯ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದ ಮತ್ತು ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಈತನ ಮೇಲಿತ್ತು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸಿಕ್ಕಿಬಿದ್ದು ಜೈಲು ಸೇರಿದ್ದ ಈತ ನಂತರ ಜಾಮೀನಿನ ಮೇಲೆ ಹೊರಬಂದಿದ್ದನು. ಸೆಪ್ಟೆಂಬರ್ 2024 ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಫರೀದಾಬಾದ್ ಎನ್‌ಐಟಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಿಟ್ಟು ಬಜರಂಗಿ, ನಂತರ ಸ್ಪರ್ಧೆಯಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಫಾಗ್ನಾ ಅವರಿಗೆ ಬೆಂಬಲ ಘೋಷಿಸಿದ್ದರು. ಆ ಚುನಾವಣೆಯಲ್ಲಿ ಫಾಗ್ನಾ ಅವರು 33,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು.

ಕೃಪೆ: ದಿ ಪ್ರಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...