HomeಮುಖಪುಟTMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

- Advertisement -
- Advertisement -

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ ಮೇಲ್ಮನೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಟಿಎಂಸಿಗೆ ಹಾಗೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುಸ್ಮಿತಾ ದೇವ್, ಸುಖೇಂದು ಶೇಖರ್ ರಾಯ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಗುರುವಾರ ಅಧಿಕೃತವಾಗಿ ಕಮಲ ಪಾಳಯ ಸೇರಿದ್ದಾರೆ. ಅವರು ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ, ಅವರು ಖಾಲಿ ಮಾಡಿದ್ದ ಅದೇ ಮೂರು ಸ್ಥಾನಗಳ ಮುಂಬರುವ ಉಪಚುನಾವಣೆಗೆ ಬಿಜೆಪಿಯು ಅವರನ್ನೇ ತನ್ನ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ! ಈ ಸ್ಥಾನಗಳಿಗೆ ಜುಲೈ 24 ರಂದು ಮರುಚುನಾವಣೆ ನಡೆಯಲಿದೆ.

TMC ಯನ್ನು ಮುಗಿಸುವ ಬಿಜೆಪಿಯ ‘ಆಪರೇಷನ್’ ಇನ್ನೂ ಮುಗಿದಿಲ್ಲ ಎಂದು ದೆಹಲಿಯ ರಾಜಕೀಯ ಮೂಲಗಳು ತಿಳಿಸಿವೆ. ಮತ್ತೊಬ್ಬ ಟಿಎಂಸಿ ಸಂಸದೆ ರುಕ್ಮಿಣಿ ಮಲ್ಲಿಕ್ ಈಗಾಗಲೇ ಇಮೇಲ್ ಮೂಲಕ ರಾಜ್ಯಸಭಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದು, ಶೀಘ್ರದಲ್ಲೇ ಖುದ್ದಾಗಿ ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ. ಇನ್ನುಳಿದ ಒಂಬತ್ತು ಟಿಎಂಸಿ ರಾಜ್ಯಸಭಾ ಸಂಸದರ ಪೈಕಿ ಇಬ್ಬರು ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

TMC ನಾಯಕರು ಭ್ರಷ್ಟಾಚಾರ ಮತ್ತು ಗೂಂಡಾಗಿರಿಯಲ್ಲಿ ತೊಡಗಿದ್ದಾರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಬಿಜೆಪಿಯ ಸಾರ್ವಜನಿಕ ನಿಲುವಿಗೆ ಈ ಬೆಳವಣಿಗೆ ಸಂಪೂರ್ಣ ವಿರುದ್ಧವಾಗಿದೆ. ಆದರೆ, ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಇದನ್ನು “ಅಪವಾದ” ಎಂದು ಕರೆದು ಸಮರ್ಥಿಸಿಕೊಂಡಿದ್ದಾರೆ. ಅವರು ‘ಒಳ್ಳೆಯ ಟಿಎಂಸಿ ಮತ್ತು ಕೆಟ್ಟ ಟಿಎಂಸಿ’ ಎಂಬ ಹೊಸ ಸಿದ್ಧಾಂತವನ್ನು ಮಂಡಿಸಿದ್ದು, ‘ಭಾಲೋ’ (ಒಳ್ಳೆಯ) ಟಿಎಂಸಿ ನಾಯಕರನ್ನು ಪಕ್ಷಕ್ಕೆ ಕರೆತರಲು ನಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ, “ಇದು ಒಂದು ವಿಶಿಷ್ಟ ಪ್ರಕರಣವಾಗಿದ್ದು, ಪಕ್ಷದ ಹಳೆಯ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾದ ಟಿಎಂಸಿ ನಾಯಕರಿಗೆ ನಮ್ಮ ಪಕ್ಷದ ಬಾಗಿಲು ಎಂದಿಗೂ ಮುಚ್ಚಿರುತ್ತದೆ. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಳ್ಳದ ಮತ್ತು ಭ್ರಷ್ಟಾಚಾರ ರಹಿತ ನಾಯಕರು ಟಿಎಂಸಿ ವಿರುದ್ಧದ ಹೋರಾಟಕ್ಕೆ ಹಾಗೂ ಬಂಗಾಳದ ಮರುನಿರ್ಮಾಣಕ್ಕೆ ನಮ್ಮೊಂದಿಗೆ ಕೈಜೋಡಿಸಲು ಯಾವಾಗಲೂ ಮುಕ್ತ ಅವಕಾಶವಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಯ ನಂತರ ತಮ್ಮ ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದ ವಿರೋಧ ಪಕ್ಷದ ನಾಯಕರಿಗೆ, ಬಿಜೆಪಿಗೆ ಬಂದರೆ ಕೇವಲ ಆಶ್ರಯ ಮಾತ್ರವಲ್ಲ, ತಕ್ಕ ಗೌರವ ಮತ್ತು ಸ್ಥಾನಮಾನವೂ ಸಿಗುತ್ತದೆ ಎಂಬ ಬಲವಾದ ಸಂದೇಶ ರವಾನೆಯಾದಂತಾಗಿದೆ.

ವಿಭಜನೆಗೂ ಮುನ್ನ ರಾಜ್ಯಸಭೆಯಲ್ಲಿ ಟಿಎಂಸಿ 13 ಸಂಸದರನ್ನು ಹೊಂದಿತ್ತು. ಕಾನೂನುಬದ್ಧವಾಗಿ ಪಕ್ಷ ಒಡೆದು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಲು ಕನಿಷ್ಠ 9 ಸಂಸದರ (ಮೂರನೇ ಎರಡರಷ್ಟು) ಅಗತ್ಯವಿತ್ತು. ಸದ್ಯಕ್ಕೆ ಆ ಸಂಖ್ಯೆ ಹೊಂದಿಸಲು ಸಾಧ್ಯವಾಗದ ಕಾರಣ, ಬಿಜೆಪಿ ಹೊಸ ತಂತ್ರ ಅನುಸರಿಸಿದೆ. ಮೊದಲು ಸಂಸದರಿಂದ ರಾಜೀನಾಮೆ ಕೊಡಿಸುವುದು, ನಂತರ ತಮ್ಮದೇ ಚಿಹ್ನೆಯಡಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಈ ಪ್ಲಾನ್. ಇದರಿಂದ ಟಿಎಂಸಿ ಬಲ ಕುಗ್ಗುವುದರ ಜೊತೆಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಲಿದೆ.

ಜುಲೈ 24 ರ ನಂತರ ರಾಜ್ಯಸಭೆಯಲ್ಲಿ ಬಿಜೆಪಿಯ ಸ್ವಂತ ಬಲ 117 ಕ್ಕೆ ಏರಲಿದ್ದು, ಇದು ಪಕ್ಷದ ಇತಿಹಾಸದಲ್ಲೇ ಗರಿಷ್ಠ ಸೀಟುಗಳಾಗಿವೆ. ಇದರೊಂದಿಗೆ ಬಿಜೆಪಿ ಸ್ವಂತ ಬಲದ ಸರಳ ಬಹುಮತಕ್ಕೆ (123) ಕೇವಲ ಆರು ಸ್ಥಾನಗಳಷ್ಟೇ ಬಾಕಿ ಇರಲಿದೆ. ನಾಮನಿರ್ದೇಶಿತ, ಪಕ್ಷೇತರರು ಹಾಗೂ ಮೈತ್ರಿಪಕ್ಷಗಳ (TDP, AIADMK, JDU, NCP ಇತ್ಯಾದಿ) ಬೆಂಬಲದೊಂದಿಗೆ ಎನ್‌ಡಿಎ (NDA) ಮೈತ್ರಿಕೂಟದ ಒಟ್ಟು ಬಲ 153 ಕ್ಕೆ ತಲುಪಲಿದ್ದು, ಮೂರನೇ ಎರಡರಷ್ಟು ಬಹುಮತಕ್ಕೆ (164) ಕೇವಲ 11 ಸ್ಥಾನಗಳಷ್ಟೇ ಬಾಕಿ ಉಳಿಯಲಿವೆ.

ಕೇವಲ ರಾಜ್ಯಸಭೆ ಮಾತ್ರವಲ್ಲದೇ, ಲೋಕಸಭೆಯಲ್ಲೂ ಟಿಎಂಸಿಯನ್ನು ಒಡೆಯಲು ಬಿಜೆಪಿ ಭಿನ್ನ ತಂತ್ರ ಹೂಡಿದೆ. ಪಕ್ಷದ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಈಗಾಗಲೇ ಮಮತಾ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದಾರೆ. ಅವರು ‘ಎನ್‌ಸಿಪಿಐ’ (NCPI) ಎಂಬ ಅಷ್ಟಾಗಿ ಪರಿಚಿತವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ಇದಕ್ಕೆ ಈಗ ಲೋಕಸಭಾ ಸ್ಪೀಕರ್ ಅವರ ಅಧಿಕೃತ ಅನುಮೋದನೆ ಬಾಕಿಯಿದೆ.

ಮಮತಾ ಬ್ಯಾನರ್ಜಿ ಅವರಿಂದ ಟಿಎಂಸಿ ಪಕ್ಷವನ್ನೇ ಕಸಿದುಕೊಳ್ಳಲು ದೆಹಲಿಯಿಂದ ಕೋಲ್ಕತ್ತಾವರೆಗೆ ವ್ಯವಸ್ಥಿತ ಚಕ್ರವ್ಯೂಹ ರಚಿಸಲಾಗಿದೆ. ಕೋಲ್ಕತ್ತಾದಲ್ಲಿ 60 ಕ್ಕೂ ಹೆಚ್ಚು ಶಾಸಕರು ಋತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಬಂಡಾಯ ಎದ್ದಿದ್ದು, ಅಲ್ಲಿನ ವಿಧಾನಸಭೆ ಸ್ಪೀಕರ್ ಈಗಾಗಲೇ ಋತಬ್ರತ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಗುರುತಿಸಿದ್ದಾರೆ! ಈ ಬಂಡಾಯ ಬಣವೇ ‘ನೈಜ ಟಿಎಂಸಿ’ ಎಂದು ಚುನಾವಣಾ ಆಯೋಗದ ಮುಂದೆ ಪಕ್ಷದ ಚಿಹ್ನೆಗಾಗಿ ಹಕ್ಕು ಮಂಡಿಸಿದೆ.

ಹೀಗಾಗಿ ದೀದಿ ಈಗ ಏಕಕಾಲದಲ್ಲಿ ಎರಡು ರೀತಿಯ ಕಠಿಣ ಕಾನೂನು ಹೋರಾಟ ನಡೆಸಬೇಕಿದೆ. ಮೊದಲನೆಯದ್ದು ತಮ್ಮದೇ ಬಣ ‘ನೈಜ ಟಿಎಂಸಿ’ ಮತ್ತು ಪಕ್ಷದ ಚಿಹ್ನೆ ತಮಗೆ ಸೇರಬೇಕು ಎಂದು ಚುನಾವಣಾ ಆಯೋಗದ ಮುಂದೆ ಸಾಬೀತುಪಡಿಸುವುದು. ಎರಡನೆಯದ್ದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಲೋಕಸಭೆಯ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಮುಂದೆ ಹೋರಾಡುವುದು. ಆದರೆ ಸದ್ಯಕ್ಕೆ ಮಮತಾ ಬಳಲಿದಂತೆ ಕಾಣುತ್ತಿದ್ದು ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    20 ಬಂಡಾಯ ಸಂಸದರ ಅನರ್ಹತೆಗೆ ಒತ್ತಾಯ: ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

    ತಮ್ಮ ಪಕ್ಷದಿಂದ ಪ್ರತ್ಯೇಕಗೊಂಡಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ತೃಣಮೂಲ ಕಾಂಗ್ರೆಸ್...

    ದೆಹಲಿ, ಬಿಹಾರದಲ್ಲಿ ನೀಟ್ ಪ್ರತಿಭಟನಾಕಾರರ ಮೇಲೆ ಪೆಲೆಟ್, ಅಶ್ರುವಾಯು, ವಿದ್ಯುತ್ ಶಾಕ್ ಲಾಠಿ ಪ್ರಹಾರ ನಡೆದಿರುವುದು ಸತ್ಯ: ಅಮ್ನೆಸ್ಟಿ ವರದಿಯಲ್ಲಿ ಕಳವಳಕಾರಿ ವಿಷಯಗಳು ಬಹಿರಂಗ

    ದೆಹಲಿ ಮತ್ತು ಬಿಹಾರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ನೇತೃತ್ವದಲ್ಲಿ ನಡೆದ ನೀಟ್ (NEET) ಪರೀಕ್ಷಾ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಭಾರತೀಯ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಮತ್ತು ಅತಿಯಾದ ಬಲಪ್ರಯೋಗ ಮಾಡಿದ್ದಾರೆ...

    ರಾಜ್ಯ ಚುನಾವಣಾ ಆಯೋಗದಿಂದ ಎಸ್‌ಐಆರ್ ಕರಡು ಪಟ್ಟಿ ಪ್ರಕಟ; ದಾವಣಗೆರೆಯಲ್ಲಿ ಅತಿ ಕಡಿಮೆ- ಬೆಂಗಳೂರು ನಗರದಲ್ಲಿ 9.46 ಲಕ್ಷ ಜನರಿಗೆ ನೋಟಿಸ್‌!

    ರಾಜ್ಯ ಚುನಾವಣಾ ಆಯೋಗವು ಇಂದು ಎಸ್‌ಐಆರ್ ಕರಡು ಪಟ್ಟಿ ಪ್ರಕಟಿಸಿದ್ದು, 'ಲಾಜಿಕಲ್ ಡಿಸ್ಕ್ರಿಪೆನ್ಸಿ' ಹೆಸರಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ, ಅಂದರೆ 7,088 ಜನರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ...

    ಮಹಾರಾಷ್ಟ್ರದ ಅಮರಾವತಿಯಲ್ಲಿ ದಾರುಣ ದುರಂತ: ಸರ್ಕಾರಿ ಆಸ್ಪತ್ರೆಯ ವೆಂಟಿಲೇಟರ್ ಸ್ಫೋಟಗೊಂಡು ಮೂವರು ನವಜಾತ ಶಿಶುಗಳ ಸಾವು

    ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಸರ್ಕಾರಿ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ವೆಂಟಿಲೇಟರ್‌ನಲ್ಲಿ ಉಂಟಾದ ಸ್ಫೋಟದಿಂದಾಗಿ ಬೆಂಕಿ ಮತ್ತು ದಟ್ಟ...

    ‘ಮೋದಿ ಅವರ ‘ದಿಮಾಗಿ ನಕ್ಸಲ್’ ಹೇಳಿಕೆಯು ಮುಂಬರುವ ಯುವ ಭಿನ್ನಾಭಿಪ್ರಾಯದ ಅಲೆಯನ್ನು ‘ರಾಷ್ಟ್ರವಿರೋಧಿ’ ಎಂದು ಬಿಂಬಿಸುವ ಪ್ರಯತ್ನವಾಗಿದೆ’: ಆನಂದ್ ತೇಲ್ತುಂಬ್ಡೆ

    ಜೆನ್ ಝೀ ಅಲೆಯ ಹೊಸ ರೀತಿಯ ಪ್ರತಿಭಟನೆಗೆ ಬೆಚ್ಚಿಬಿದ್ದಿರುವ ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಯ ಮುಖವಾಡವನ್ನು 'ದಿ ವೈರ್' ಲೇಖನದಲ್ಲಿ ಪ್ರಸಿದ್ಧ ಚಿಂತಕ ಡಾ. ಆನಂದ್ ತೇಲ್ತುಂಬ್ಡೆ ಬಿಚ್ಚಿಟ್ಟಿದ್ದಾರೆ. ಆಡಳಿತದ ವಿಫಲ...

    SIR : ಮೂರು ದೇಶಗಳಿಗೆ ಭಾರತದ ರಾಯಭಾರಿಯಾಗಿದ್ದ ನವದೀಪ್ ಸೂರಿಗೆ ಪೌರತ್ವ ಸಾಬೀತುಪಡಿಸುವ ಸವಾಲು!

    ಪಂಜಾಬ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪೌರತ್ವ ಸಾಬೀತುಪಡಿಸುವ ವಿಧಾನದ ಕುರಿತು ಮಾಜಿ ರಾಜತಾಂತ್ರಿಕ ನವದೀಪ್ ಸೂರಿ ಅವರು ಭಾನುವಾರ (ಆ.23) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ....

    ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ : 22 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಹೋದರ

    ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬಿ ಹಾಗೂ ಆಪ್ತ ತುಳಸಿರಾಮ್ ಪ್ರಜಾಪತಿ ಅವರ 2005ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಒಟ್ಟು...

    ಉತ್ತರ ಪ್ರದೇಶ| ಚಲಿಸುವ ರೈಲಿನಲ್ಲಿ ಮದರಸಾ ವಿದ್ಯಾರ್ಥಿ ಮೇಲೆ ಹಲ್ಲೆ; ಬಲವಂತವಾಗಿ ಮದ್ಯ ಕುಡಿಸಿದ ದುಷ್ಕರ್ಮಿಗಳು

    ಪಶ್ಚಿಮ ಉತ್ತರ ಪ್ರದೇಶದಲ್ಲಿ ಶನಿವಾರ ರಾತ್ರಿ ಚಲಿಸುತ್ತಿದ್ದ ರೈಲಿನಲ್ಲಿ ಮದರಸಾ ವಿದ್ಯಾರ್ಥಿಯೊಬ್ಬನ ಮೇಲೆ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿ, ಆತನ ಧಾರ್ಮಿಕ ಗುರುತನ್ನು ನಿಂದಿಸಿ, ಬಲವಂತವಾಗಿ ಮದ್ಯ ಕುಡಿಸಿರುವ ಘಟನೆ...

    ಶೈಕ್ಷಣಿಕ ಬೇಡಿಕೆಗಳಿಗಾಗಿ ವಾರ್ಧಾ ಎಂಜಿಎಎಚ್‌ವಿಯಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಸತ್ಯಾಗ್ರಹ: 47ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, 6 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್

    ವಾರ್ಧಾ (ಮಹಾರಾಷ್ಟ್ರ): ಮಹಾರಾಷ್ಟ್ರದ ವಾರ್ಧಾದಲ್ಲಿರುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ (ಎಂಜಿಎಎಚ್‌ವಿ) ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸತ್ಯಾಗ್ರಹವು...

    ಮೀಸಲಾತಿ ವಿರೋಧಿ ಬೇಡಿಕೆಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕೇಂದ್ರ ಸಚಿವ ಅಠಾವಳೆ ಆಗ್ರಹ

    ಮೀಸಲಾತಿಯನ್ನು ವಿರೋಧಿಸುವ ಅಥವಾ ಅದನ್ನು ರದ್ದುಗೊಳಿಸಲು ಆಗ್ರಹಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕೆಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಅಧ್ಯಕ್ಷ ರಾಮದಾಸ್ ಅಠಾವಳೆ ಭಾನುವಾರ ಆಗ್ರಹಿಸಿದ್ದಾರೆ. ಮೀಸಲಾತಿ ವಿರೋಧಿಸಿ...