HomeಅಂಕಣಗಳುKarnataka against SIRSIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

- Advertisement -
- Advertisement -

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಪರಿಸ್ಥಿತಿಗೆ ಕರ್ನಾಟಕದ ಮುಖ್ಯ ಚುನಾವಣ ಆಯೋಗ ನೇರ ಹೊಣೆ ಎಂದು ನಾಗರೀಕ ಮತ ಕಾವಲು ಸಮಿತಿ ಆರೋಪಿಸಿದೆ.

ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನಾಗರಿಕ ಮತ ಕಾವಲು ಸಮಿತಿ, ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದೈನಂದಿನ ವರದಿಯ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (19.95%) ಹೆಸರುಗಳನ್ನು ASDDO (ಅನುಮಾನಾಸ್ಪದ/ಸ್ಥಳಾಂತರ) ಪಟ್ಟಿಗೆ ಸೇರಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಈ ಲೆಕ್ಕಾಚಾರ ಸಂಪೂರ್ಣ ತಲೆಬುಡವಿಲ್ಲದ್ದು ಎಂಬುದಕ್ಕೆ ಸಮಿತಿ ಈ ಕೆಳಗಿನ ಅಂಕಿ-ಅಂಶಗಳನ್ನು ಮುಂದಿಟ್ಟಿದೆ.

ಮತದಾರರಿಗೆ ‘ಅನುಮಾನಾಸ್ಪದ’ ಲೇಬಲ್

ದೇಶದಲ್ಲಿ ಸಾಮಾನ್ಯವಾಗಿ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪಟ್ಟಿ ಸ್ಥಿರವಾಗಿರುತ್ತದೆ ಮತ್ತು ಒಂದೇ ಒಂದು ಮತವನ್ನು ಡಿಲೀಟ್ ಮಾಡಲು ಸೂಕ್ತ ಕಾರಣ ನೀಡಬೇಕಿರುತ್ತದೆ. ಆದರೆ ಸಿಇಒ ವಿ. ಅನ್ಬುಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ SIRನಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಅನುಮಾನಾಸ್ಪದವಾಗಿ ನೋಡಲಾಗುತ್ತಿದ್ದು, ಪಟ್ಟಿಯಲ್ಲಿ ಉಳಿಯಲು ಅಧಿಕಾರಿಗಳಿಗೆ ಸಮಾಧಾನ ತರುವ ಸಾಕ್ಷ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಗುತ್ತಿದೆ.

ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಲು ಆಯೋಗ 4 ಕಠಿಣ ಹಂತಗಳನ್ನು ದಾಟಬೇಕಾದ ಪರಿಸ್ಥಿತಿ ಸೃಷ್ಟಿಸಿದೆ.

  1. ಬಿಎಲ್‌ಒ ಸಂಪರ್ಕ: ಬೂತ್ ಮಟ್ಟದ ಅಧಿಕಾರಿ ನೋಂದಾಯಿತ ವಿಳಾಸದಲ್ಲಿ ನಿಮ್ಮನ್ನು ಪತ್ತೆಹಚ್ಚಿ, ಎನ್ಯುಮುರೇಷನ್ ಫಾರಂ ಡಿಜಿಟಲೀಕರಿಸಬೇಕು.
  2. 2002ರ ಪಟ್ಟಿಯ ಮ್ಯಾಪಿಂಗ್: ನಿಮ್ಮ ಅಥವಾ ನಿಮ್ಮ ಪೋಷಕರ ಹೆಸರು 2002ರ ಕೊನೆಯ Intensive Revision ಪಟ್ಟಿಯೊಂದಿಗೆ ಲಿಂಕ್ ಆಗಬೇಕು.
  3. ಸ್ವಂತ ಹೆಸರಿನ ದಾಖಲೆ: ಪೂರಕ ದಾಖಲೆಗಳು ನಿಮ್ಮದೇ ಹೆಸರಿನಲ್ಲಿದ್ದು, ಪರಿಶೀಲಿಸುವ ಅಧಿಕಾರಿಯ ಮಾನದಂಡ ಪೂರೈಸಬೇಕು.
  4. ದೆಹಲಿಯ ಸಾಫ್ಟ್‌ವೇರ್ ಅಪ್ರೂವಲ್: ನಿಜವಾದ ದಾಖಲೆಗಳಿದ್ದರೂ, ಕಾಗುಣಿತ ಅಥವಾ ಲಿಪ್ಯಂತರದ (Spelling/Transliteration) ಸಣ್ಣ ವ್ಯತ್ಯಾಸ ಬಂದರೂ ದೆಹಲಿ ನಿಯಂತ್ರಣದಲ್ಲಿರುವ ಸಾಫ್ಟ್‌ವೇರ್ ‘Logical Discrepancy’ ನೆಪವೊಡ್ಡಿ ಹೆಸರುಗಳನ್ನು ತಿರಸ್ಕರಿಸುತ್ತಿದೆ.
ಗಣಿತಕ್ಕೇ ಸವಾಲು ಹಾಕಿದ ಆಯೋಗದ ಲೆಕ್ಕ’:

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದೈನಂದಿನ ವರದಿಯ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (19.95%) ಹೆಸರುಗಳನ್ನು ASDDO (ಅನುಮಾನಾಸ್ಪದ/ಸ್ಥಳಾಂತರ) ಪಟ್ಟಿಗೆ ಸೇರಿಸಲಾಗಿದೆ. ಆಯೋಗದ ಈ ಲೆಕ್ಕಾಚಾರ ಸಂಪೂರ್ಣ ತಲೆಬುಡವಿಲ್ಲದ್ದು ಎಂಬುದಕ್ಕೆ ಸಮಿತಿ ಈ ಕೆಳಗಿನ ಅಂಕಿ-ಅಂಶಗಳನ್ನು ಮುಂದಿಟ್ಟಿದೆ:

2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳಲ್ಲಿ 98.43 ಲಕ್ಷ ಮತದಾರರಿದ್ದು, 52.47 ಲಕ್ಷಕ್ಕೂ ಹೆಚ್ಚು (53.3%) ಜನರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದರು.

ಈಗಿನ ಸಿಇಒ ಕಚೇರಿಯ SIR ಅಂಕಿ-ಅಂಶಗಳನ್ನು ನಂಬುವುದಾದರೆ, ಬೆಂಗಳೂರಿನಲ್ಲಿ ಉಳಿಯುವುದು ಕೇವಲ 50 ಲಕ್ಷ ಮತದಾರರು ಮಾತ್ರ. ಅಂದರೆ, ಕಳೆದ ಚುನಾವಣೆಯಲ್ಲಿ ವೋಟ್ ಹಾಕಿದವರಿಗಿಂತಲೂ ಕಡಿಮೆ ಜನರು ಈಗ ಬೆಂಗಳೂರಿನಲ್ಲಿದ್ದಾರೆ ಎಂದಾಗುತ್ತದೆ. ಆಯೋಗದ ಈ ಲೆಕ್ಕಾಚಾರ ನಿಜವಾದರೆ, 2024ರಲ್ಲಿ ನಡೆದದ್ದು ಶೇ. 54 ರಷ್ಟು ಮತದಾನವಲ್ಲ, ಬರೋಬ್ಬರಿ ಶೇ. 105 ರಷ್ಟು ಮತದಾನವೇ ಎಂದು ನಾಗರಿಕ ಸಮಿತಿ ಪ್ರಶ್ನಿಸಿದೆ.

ಆಗಸ್ಟ್ 3, 2026 ರಂದು ಸಿಇಒ ಕಚೇರಿ ನೀಡಿದ ದೈನಂದಿನ ಪ್ರಕಟಣೆಯಂತೆ (No. DPAR 172 ChuMaPa 2026), ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (19.95%) ಮತದಾರರು ASDDO (Absent, Shifted, Dead, Duplicate, Other) ಪಟ್ಟಿಯಲ್ಲಿದ್ದಾರೆ.

ASDDO ಪಟ್ಟಿಯ ವರ್ಗೀಕರಣ ಹೀಗಿದೆ:

  • ಶಾಶ್ವತವಾಗಿ ಸ್ಥಳಾಂತರಗೊಂಡವರು (Shifted): 66,23,832 (ಶೇ. 11.95 | ASDDO ಯಲ್ಲಿ ಶೇ. 59.9)
  • ಮೃತರು (Dead): 16,21,446 (ಶೇ. 2.93 | ASDDO ಯಲ್ಲಿ ಶೇ. 14.7)
  • ಗೈರು / ಪತ್ತೆಯಾಗದವರು (Absent): 16,18,630 (ಶೇ. 2.92 | ASDDO ಯಲ್ಲಿ ಶೇ. 14.6)
  • ನಕಲಿ / ಈಗಾಗಲೇ ನೋಂದಾಯಿತರು (Duplicate): 6,78,213 (ಶೇ. 1.22 | ASDDO ಯಲ್ಲಿ ಶೇ. 6.1)
  • ಇತರೆ (Other): 5,17,167 (ಶೇ. 0.93 | ASDDO ಯಲ್ಲಿ ಶೇ. 4.7)

ಬೆಂಗಳೂರು ಬೆಳೆಯುತ್ತಿರುವ ನಗರ, ಪ್ರತಿವರ್ಷ 3-4 ಲಕ್ಷ ಜನರು ನಗರಕ್ಕೆ ಸೇರ್ಪಡೆಯಾಗುತ್ತಿದ್ದಾರೆ. 2022ರಿಂದ ಬಾಡಿಗೆ ದರಗಳು ಶೇ. 40 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಅನೌಪಚಾರಿಕ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದರಿಂದ ಸರ್ಕಾರ ‘Gig Workers Welfare Act, 2025’ ಜಾರಿಗೆ ತಂದಿದೆ.

ಜಿಲ್ಲಾವಾರು ವ್ಯತ್ಯಾಸದ ವೈರುಧ್ಯ:

ನಿಜವಾಗಿಯೂ ಕಾರ್ಮಿಕರ ಹೊರವಲಸೆ ಹೆಚ್ಚಿರುವ ಕಲ್ಯಾಣ ಕರ್ನಾಟಕದ ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕಡಿತದ ದರ ಶೇ. 16.5 ರಿಂದ 18.4 ರಷ್ಟಿದೆ (ರಾಜ್ಯದ ಸರಾಸರಿ ಶೇ. 19.95 ಗಿಂತ ಕಡಿಮೆ).ಆದರೆ, ದೇಶದ ಪ್ರಮುಖ ಒಳವಲಸೆ ತಾಣವಾದ ಬೆಂಗಳೂರಿನಲ್ಲಿ ಕಡಿತದ ದರ ಬರೋಬ್ಬರಿ ಶೇ. 48.41 (ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚು).

ಜನರು ನಿಜವಾಗಿಯೂ ನಗರ ಬಿಟ್ಟು ಹೋಗಿದ್ದಾರೋ ಅಥವಾ ಈಗ ವಾಸಿಸುತ್ತಿರುವ ವಿಳಾಸದಲ್ಲಿ ಅವರನ್ನು ಪತ್ತೆಹಚ್ಚಲು ವಿಫಲವಾಗಿರುವ ಸಿಇಒ ಕಚೇರಿಯ ಅಧಿಕಾರಿಗಳು, ಸುಲಭವಾಗಿ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ತಪ್ಪಾಗಿ ದಾಖಲಿಸುತ್ತಿದ್ದಾರೋ ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ.

ಮುಖ್ಯ ಚುನಾವಣಾಧಿಕಾರಿಗಳಿಗೆ ನಾಗರಿಕ ಸಮಿತಿಯ ಒತ್ತಾಯಗಳು:
  1. ಭಾನುವಾರ ವಿಶೇಷ ಬೂತ್ ಅಭಿಯಾನ: ಬೆಂಗಳೂರಿನ ಉದ್ಯೋಗಿಗಳು ಬೆಳಿಗ್ಗೆಯೇ ಕೆಲಸಕ್ಕೆ ತೆರಳಿ ತಡವಾಗಿ ಬರುವುದರಿಂದ, ಭಾನುವಾರಗಳಂದು ಪೂರ್ವಯೋಜಿತ ಬೂತ್ ಸಭೆಗಳನ್ನು ನಡೆಸಿ ಎನ್ಯುಮುರೇಷನ್ ಫಾರಂ ವಿತರಿಸಿ ಸ್ವೀಕರಿಸಬೇಕು.
  2. ಸ್ಥಳದಲ್ಲೇ ಫಾರಂ-8 ವಿತರಣೆ: ಕರ್ನಾಟಕದ ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ ಮನೆ ಬದಲಾಯಿಸಿದವರನ್ನು ‘ಡಿಲೀಟ್’ ಮಾಡಬಾರದು. ವಾಸಿಸುತ್ತಿರುವ ಸ್ಥಳದಲ್ಲೇ ಅವರಿಗೆ ಎನ್ಯುಮುರೇಷನ್ ಫಾರಂ ಹಾಗೂ ‘ಫಾರಂ ನಂಬರ್ 8’ ನೀಡಿ ಮತವನ್ನು ಹೊಸ ವಿಳಾಸಕ್ಕೆ ಸ್ಥಳಾಂತರಿಸಬೇಕು.
  3. ಸೆಪ್ಟೆಂಬರ್ ಅಂತ್ಯದವರೆಗೆ ಗಡುವು ವಿಸ್ತರಿಸಿ: ಕೇವಲ 10 ದಿನಗಳ ಕಣ್ಣೊರೆಸಿಕಾಯ ವಿಸ್ತರಣೆಯಿಂದ ಏನೂ ಪ್ರಯೋಜನವಿಲ್ಲ. ಹೊಸ ತಂತ್ರಜ್ಞಾನ ಮತ್ತು ಪಾರದರ್ಶಕ ಪ್ರಕ್ರಿಯೆಯೊಂದಿಗೆ ಎನ್ಯುಮುರೇಷನ್ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಕೊನೆಯ ವಾರದವರೆಗೆ ವಿಸ್ತರಿಸಬೇಕು ಎಂದು ನಾಗರಿಕ ಮತ ಕಾವಲು ಸಮಿತಿ ಒತ್ತಾಯಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು RTI ವಿನಾಯಿತಿ ಆದೇಶ ರದ್ದು ಮಾಡಿದ ತಮಿಳುನಾಡು ಸರ್ಕಾರ

ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಸರ್ಕಾರವು ಸಾರ್ವಜನಿಕರ ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ತನ್ನ ವಿವಾದಾತ್ಮಕ ನಿರ್ಧಾರವೊಂದನ್ನು ಹಿಂಪಡೆದುಕೊಂಡಿದೆ. ಸಾರ್ವಜನಿಕ (ಕಾನೂನು...

‘ಕೊಂದವರು ಯಾರು?’: ಧರ್ಮಸ್ಥಳ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹ, ಅ.2 ರಂದು ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ವ್ಯವಸ್ಥಿತ ಲೈಂಗಿಕ ದೌರ್ಜನ್ಯ, ನಿಗೂಢ ಕೊಲೆಗಳು ಹಾಗೂ ಸಂತ್ರಸ್ತ ಕುಟುಂಬಗಳ ಸುದೀರ್ಘ ನ್ಯಾಯದ ಹೋರಾಟಕ್ಕೆ ಬೆಂಬಲವಾಗಿ...

2016ರಲ್ಲೇ ತಮ್ಮನ್ನು ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ IAS ಜಿಜಿ ಥಾಮ್ಸನ್

ದೇಶದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗಲೇ ಬಿಜೆಪಿ ಪರವಾಗಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದರು ಎಂಬ ಕಟು ಸತ್ಯವೊಂದು ಈಗ ಬಹಿರಂಗವಾಗಿದೆ. ಅವರು ನನಗೆ...

ಚಿಕ್ಕಮಗಳೂರು : ಚುನಾವಣಾ ಆಯೋಗದ ವಿರುದ್ಧ ಜನಾಂದೋಲನಕ್ಕೆ ಪ್ರಕಾಶ್ ರಾಜ್ ಕರೆ

ನ್ಯಾಯಾಂಗದ ಮೂಲಕ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಕೆಳಗಿಳಿಸುವುದು ಸಾಧ್ಯವಾಗದಿರಬಹುದು, ಆದರೆ ಜನರ ಹಕ್ಕುಗಳಿಗಾಗಿ ಬೀದಿ ಚಳವಳಿ ನಡೆಯಬೇಕು ಎಂದು ಪ್ರಕಾಶ್ ರಾಜ್ ಕರೆ ನೀಡಿದರು. ಎಸ್‌ಐಆರ್ ಪರಿಶೋಧನೆ ಮತ್ತು...

ಬೆಳಗಾವಿ| ಕೂಲಿ ನೇಕಾರರಿಗೆ ಕಾರ್ಮಿಕ ಇಲಾಖೆ ನೀಡುವ ‘ಸ್ಮಾರ್ಟ್ ಕಾರ್ಡ್’ನಲ್ಲಿ ಲೋಪ, ಅನ್ಯಾಯ ಸರಿಪಡಿಸಲು ಆಗ್ರಹ

ಹಗಲಿರುಳೆನ್ನದೆ ಮಗ್ಗಗಳ ಮುಂದೆ ಕುಳಿತು ಬಟ್ಟೆ ನೇಯುವ ಬೆಳಗಾವಿ ಭಾಗದ ಲಕ್ಷಾಂತರ ಕೂಲಿ ನೇಕಾರರ ಬದುಕು ಇಂದು ಭರವಸೆಯಿಲ್ಲದ ತೂಗುಯ್ಯಾಲೆಯಲ್ಲಿದೆ. ಒಂದೆಡೆ ಕಳೆದ ಒಂದು ದಶಕದಿಂದ (10 ವರ್ಷ) ಮಾಲೀಕರಿಂದ ಶ್ರಮಕ್ಕೆ ತಕ್ಕಂತೆ...

ಅಧಿಕಾರಿಯ ಡೆತ್‌ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಹೆಸರು!: ಮತ್ತೆ ಮುನ್ನೆಲೆಗೆ ಬಂದ ಹಳೆ ಕೇಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿರುವ ಈ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ಹಿಂದೆ, ಮಲೇಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಗ್ಯಾನೇಶ್ ಕುಮಾರ್...

ಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ನೆಪದಲ್ಲಿ ಲಕ್ಷಾಂತರ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕೇವಲ ಮತದಾರರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ದೇಶದ ಸಂವಿಧಾನ...

SIR ರದ್ದುಗೊಳಿಸಿ, ಗ್ಯಾನೇಶ್ ಕುಮಾರ್‌ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ

ದೇಶಾದ್ಯಂತ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು...

ಗುವಾಹಟಿಯಲ್ಲಿ ಸಿಜೆಪಿ ಸಭೆಗೆ ಪೊಲೀಸರಿಂದ ಅಡ್ಡಿ; ಅಶುತೋಷ್ ರಾಂಕಾ ಮತ್ತು ತಂಡ ವಶಕ್ಕೆ

ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ಸಚಿವಾಲಯದ ಸಮೀಪದಲ್ಲಿ...

ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!

ಚುನಾವಣಾ ಆಯೋಗದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮತ ಕಡಿತ ಹಾಗೂ ಏಕಪಕ್ಷೀಯ ನಿರ್ಧಾರಗಳ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹಾಲಿ ಮುಖ್ಯ ಚುನಾವಣಾ ಆಯುಕ್ತ...