HomeಅಂಕಣಗಳುSIR2016ರಲ್ಲೇ ತಮ್ಮನ್ನು ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ IAS ಜಿಜಿ ಥಾಮ್ಸನ್

2016ರಲ್ಲೇ ತಮ್ಮನ್ನು ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ IAS ಜಿಜಿ ಥಾಮ್ಸನ್

- Advertisement -
- Advertisement -

ದೇಶದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗಲೇ ಬಿಜೆಪಿ ಪರವಾಗಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದರು ಎಂಬ ಕಟು ಸತ್ಯವೊಂದು ಈಗ ಬಹಿರಂಗವಾಗಿದೆ. ಅವರು ನನಗೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವಂತೆ ಹಾಗೂ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು ಎಂದು ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಮಾನ ಪ್ರಯಾಣದ ವೇಳೆ ನಡೆದಿದ್ದ ಆ ಸಂಭಾಷಣೆ

ಜಿಜಿ ಥಾಮ್ಸನ್ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, 2016ರಲ್ಲಿ ಕೇರಳದಿಂದ ದೆಹಲಿಗೆ ಇಬ್ಬರೂ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಆಘಾತಕಾರಿ ಸಂಭಾಷಣೆ ನಡೆದಿತ್ತು. ಆ ಸಮಯದಲ್ಲಿ ಥಾಮ್ಸನ್ ಅವರು ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ನಿವೃತ್ತಿಯಂಚಿನಲ್ಲಿದ್ದರು. ಅದೇ ವೇಳೆ ಗ್ಯಾನೇಶ್ ಕುಮಾರ್ ಕೂಡ ಕೇರಳ ಕೆಡರ್‌ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದರು. ಪ್ರಯಾಣದ ವೇಳೆ ಥಾಮ್ಸನ್ ಅವರ ನಿವೃತ್ತಿಯ ನಂತರದ ಯೋಜನೆಗಳ ಕುರಿತು ಗ್ಯಾನೇಶ್ ಕುಮಾರ್ ವಿಚಾರಿಸಿದ್ದರು.

ಆ ಸಂದರ್ಭದಲ್ಲಿ ಗ್ಯಾನೇಶ್ ಕುಮಾರ್ ಅವರು, ಥಾಮ್ಸನ್ ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ಪತ್ತನಂತಿಟ್ಟ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದರು. “ನೀವು ಉತ್ತಮ ವಾಗ್ಮಿ, ರಾಜಕೀಯಕ್ಕೆ ಬಂದರೆ ಗೆಲ್ಲುವ ಅವಕಾಶ ಹೆಚ್ಚಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಂಸದರಾಗಿ ಆಯ್ಕೆಯಾದ ನಂತರ ಕೇಂದ್ರ ಸಚಿವರಾಗುವ ಅವಕಾಶವೂ ಒದಗಿ ಬರಬಹುದು” ಎಂದು ಗ್ಯಾನೇಶ್ ಕುಮಾರ್ ಪ್ರಚೋದಿಸಿದ್ದರು ಎಂದು ಥಾಮ್ಸನ್ ತಿಳಿಸಿದ್ದಾರೆ. ಆದರೆ, ಚುನಾವಣಾ ರಾಜಕೀಯದಲ್ಲಿ ತಮಗೆ ಆಸಕ್ತಿಯಿಲ್ಲದ ಕಾರಣ ಈ ಆಫರ್ ಅನ್ನು ತಾವು ತಕ್ಷಣವೇ ನಿರಾಕರಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದಿನ ಈ ರಹಸ್ಯ ಸಂಭಾಷಣೆಯನ್ನು ಥಾಮ್ಸನ್ ಈಗ ಬಹಿರಂಗಪಡಿಸಿರುವುದು ಕೇಂದ್ರ ಚುನಾವಣಾ ಆಯೋಗದ ಸುತ್ತಲೂ ಹೆಣೆದುಕೊಂಡಿರುವ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ. ಒಂದೆಡೆ ಮತದಾರರ ಪಟ್ಟಿಗಳ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಇತರೆ ಇಬ್ಬರು ಚುನಾವಣಾ ಆಯುಕ್ತರ ನಡುವಿನ ಭಿನ್ನಾಭಿಪ್ರಾಯಗಳು ಈಗಾಗಲೇ ಬಹಿರಂಗವಾಗಿವೆ. ಇದರ ಬೆನ್ನಲ್ಲೇ ಈ ಹೊಸ ಸ್ಫೋಟಕ ವಿಷಯ ಹೊರಬಿದ್ದಿರುವುದು ಆಯೋಗದ ನಿಷ್ಪಕ್ಷಪಾತತನವನ್ನು ಸಂಪೂರ್ಣವಾಗಿ ಪ್ರಶ್ನಿಸುವಂತೆ ಮಾಡಿದೆ.

ಈ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಐಎಎಸ್ ಅಧಿಕಾರಿಯಾಗಿ ಅಧಿಕಾರದಲ್ಲಿದ್ದಾಗಲೇ ಬಿಜೆಪಿಗೆ ಅಭ್ಯರ್ಥಿಗಳನ್ನು ಕರೆತರಲು ಗ್ಯಾನೇಶ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗಿತ್ತು. ಈಗ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮಾಡಿ ದೇಶದಲ್ಲಿ ಚುನಾವಣಾ ‘ಮ್ಯಾಚ್ ಫಿಕ್ಸಿಂಗ್’ ಮಾಡಲಾಗುತ್ತಿದೆ” ಎಂದು ನೇರವಾಗಿ ಆರೋಪಿಸಿದ್ದಾರೆ.

ಐಎಎಸ್ ಅಧಿಕಾರಿಯಾಗಿದ್ದಾಗ ರಾಜಕೀಯ ಪಕ್ಷವೊಂದರ ಪರ ಅಭ್ಯರ್ಥಿಗಳನ್ನು ಸೆಳೆಯಲು ಇವರಿಗೆ ಯಾರು ಅಧಿಕಾರ ಕೊಟ್ಟಿದ್ದರು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಗ್ಯಾನೇಶ್ ಕುಮಾರ್ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2ನೇ ದಿನಕ್ಕೆ ಕಾಲಿಟ್ಟ ದೆಹಲಿ ಪ್ರತಿಭಟನೆ; 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ದೆಹಲಿ ಪೊಲೀಸರು

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಯು ದೆಹಲಿಯಾದ್ಯಂತ ಭಾರಿ ಭದ್ರತೆಯ ನಡುವೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ (ಅ.11) ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗುತ್ತಿದ್ದ 100...

ಪೊಲೀಸರಿಂದ ಗಂಭೀರ ಹಲ್ಲೆ ಆರೋಪ : CPIM ಸಂಸದ ಜಾನ್ ಬ್ರಿಟ್ಟಾಸ್ ಆಸ್ಪತ್ರೆಗೆ ದಾಖಲು

ಭಾನುವಾರ (ಅಕ್ಟೋಬರ್ 11, 2026) ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದು...

ಫಾರಂ-7: ಎಫ್‌ಐಆರ್ ಮುಂದುವರಿಸಿದರೆ ಪೊಲೀಸ್ ಠಾಣೆ ಮುತ್ತಿಗೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಎಸ್ಐಆರ್ (SIR) ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ವ್ಯವಸ್ಥಿತವಾಗಿ ಗೊಂದಲಗಳನ್ನು ಸೃಷ್ಟಿಸಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಅನ್ಯಾಯವಾಗಿ ಎಫ್‌ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪೊಲೀಸ್ ಠಾಣೆಗಳು ಹಾಗೂ ಎಸ್‌ಪಿ ಕಚೇರಿಗಳಿಗೂ...

ಗ್ಯಾನೇಶ್ ಅವರನ್ನು ರಕ್ಷಿಸಲು ಮೋದಿ-ಶಾ ಎಲ್ಲವನ್ನೂ ಮಾಡುತ್ತಾರೆ: ಸಿಜೆಪಿ

"ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ; ತನ್ನದೇ ನಾಗರಿಕರ ವಿರುದ್ಧ ಯುದ್ಧ ಸಾರಿದೆ" ಎಂದು ಪೊಲೀಸರ ಬಂಧನದಿಂದ ಬಿಡುಗಡೆಯಾದ ತಕ್ಷಣ ಮಾಧ್ಯಮಗಳೊಂದಿಗೆ ನಡೆಸಿದ ತಮ್ಮ ಮೊದಲ ಸಂವಾದದಲ್ಲಿ...

ದೆಹಲಿ ಪ್ರತಿಭಟನೆ ವೇಳೆ ಇಂಟರ್ನೆಟ್ ಸ್ಥಗಿತ : ನ್ಯಾಯಾಂಗ ಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಅಕ್ಟೋಬರ್ 9 ಮತ್ತು 10 ರಂದು ಮಧ್ಯ ದೆಹಲಿಯ ಜನಪಥ್-ಕರ್ತವ್ಯ ಪಥ್ ಜಂಕ್ಷನ್‌ನ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು...

ಸಿಜೆಪಿ ಪ್ರತಿಭಟನೆ: ‘ಬ್ಯಾರಿಕೇಡ್‌ ತೆರವುಗೊಳಿಸಿ, ಇಂಟರ್‌ನೆಟ್ ತಡೆಯಬೇಡಿ, ಮೆಟ್ರೋ ಸೇವೆ ಸಹಜವಾಗಿರಲಿ..’; ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾಕಲಾಗಿರುವ ಎಲ್ಲಾ ಬ್ಯಾರಿಕೇಡ್‌ಗಳನ್ನು, ಅತ್ಯಂತ ಅಗತ್ಯವಿದ್ದ ಕಾರಣಕ್ಕೆ ಹೊರತುಪಡಿಸಿ ತಕ್ಷಣವೇ ತೆರವುಗೊಳಿಸಬೇಕು; ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಸೇವೆಗಳು ಸಹಜವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಹಾಗೂ ಇಂಟರ್‌ನೆಟ್...

‘ನನ್ನನ್ನು ಬಂಧಿಸಿರಲಿಲ್ಲ, ಕಿಡ್ನಾಪ್ ಮಾಡಿದ್ದರು’ ದೆಹಲಿ ಪೊಲೀಸರ ವಿರುದ್ಧ ಧೃವ್ ರಾಠೀ ಆರೋಪ

ಸಿಜೆಪಿ (CJP) ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯಲು ಶನಿವಾರ ಮುಂಜಾನೆ ಗುರುಗ್ರಾಮದ ನಿವಾಸದಿಂದಲೇ ಪೊಲೀಸರಿಂದ ಬಲವಂತವಾಗಿ ವಶಕ್ಕೆ ಪಡೆದುಕೊಳ್ಳಲ್ಪಟ್ಟಿದ್ದ ಖ್ಯಾತ ಯೂಟ್ಯೂಬರ್ ಧೃವ್ ರಾಠೀ ಅವರು ಭಾನುವಾರ...

ದೆಹಲಿ ಪ್ರತಿಭಟನೆ: ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ 4 ಹಿಂದುತ್ವವಾದಿಗಳ ಬಂಧನ!

ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಶಾಂತಿಯುತವಾಗಿ ಸಾಗುತ್ತಿದ್ದ ಯುವ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಎಳೆದಾಡಿ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ 'ಹಿಂದೂ ರಕ್ಷಾ ದಳ'ದ ನಾಲ್ವರು...

ಅಭಿಜಿತ್ ದೀಪ್ಕೆ, ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ಬಿಡುಗಡೆ: ಮಧ್ಯಾಹ್ನ 2ಕ್ಕೆ CJP ಪತ್ರಿಕಾಗೋಷ್ಠಿ

ಚುನಾವಣಾ ಆಯೋಗದ ವಿವಾದಾತ್ಮಕ ಧೋರಣೆ ಹಾಗೂ ಮತದಾರರ ಪಟ್ಟಿ ಅಕ್ರಮಗಳನ್ನು ಖಂಡಿಸಿ ದೆಹಲಿಯಲ್ಲಿ ನಿಗದಿತ ಪ್ರತಿಭಟನೆಗೂ ಮುನ್ನ ಮುನ್ನೆಚ್ಚರಿಕೆ ಕ್ರಮವೆಂಬ ನೆಪದಲ್ಲಿ ದೆಹಲಿ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟಿದ್ದ ಸಿಜೆಪಿ ಸಂಘಟನೆಯ ಪ್ರಮುಖ...

ದೆಹಲಿ ಹೋರಾಟಕ್ಕೆ ಬೆಂಬಲ: ಫ್ರೀಡಂಪಾರ್ಕ್ನಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು, ಅ.10: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಶನಿವಾರ ಎಐಡಿಎಸ್‌ಒ, ಕೆವಿಎಸ್, ಎಐಎಸ್‌ಎಫ್, ಎಸ್‌ಎಫ್‌ಐ, ಎಐಎಸ್‌ಎ ಸೇರಿದಂತೆ ಇನ್ನಿತರೆ ಎಡ ವಿದ್ಯಾರ್ಥಿ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ...