Homeಮುಖಪುಟಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

- Advertisement -
- Advertisement -

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಶುಭಂಕರ್ ದಾಸ್ ಶರ್ಮಾ ಅವರು ಜುಲೈ 28 ರ ರಾತ್ರಿ ಅಗರ್‌ಪಾರ ರೈಲು ನಿಲ್ದಾಣದ ಬಳಿ, ತಮ್ಮ ಸಹ ರಂಗಭೂಮಿ ಕಲಾವಿದ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

ಶರ್ಮಾ ಪ್ರಕಾರ, ನಾಲ್ವರು ಯುವಕರು ದಾರಿಯಲ್ಲಿ ಅವರನ್ನು ತಡೆದು ಬಟ್ಟೆಗಳನ್ನು ಗಮನಿಸಿ ಅವರ ಧರ್ಮದ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದರು. ದಾಳಿಕೋರರು ಅವರನ್ನು ನೀವು ಮುಸ್ಲಿಂ ಎಂದು ಕೇಳಿದರು ಎಂದು ಅವರು ಹೇಳಿದರು.

“ನಾನು ಮುಸ್ಲಿಂ ಆದರೆ ನಿಮಗೇನು?” ಎಂದು ಅವರು ಪ್ರತಿಕ್ರಿಯಿಸಿದೆ ಎಂದು ಶರ್ಮಾ ಹೇಳಿದರು.

“ನಾನು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇನೆ, ಅಪರಿಚಿತರಿಗೆ ನನ್ನ ಧರ್ಮದ ಕುರಿತು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಅವರು ದಾಳಿಕೋರರಿಗೆ ಹೇಳಿದರು.

ರಂಗಭೂಮಿ ಕಲಾವಿದ ಶರ್ಮಾ ಅವರ ಪ್ರಕಾರ, ಅವರ ಪ್ರತಿಕ್ರಿಯೆಯು ಹಿಂದುತ್ವ ಗುಂಪನ್ನು ಕೆರಳಿಸಿದೆ. ನಂತರ ಗುಂಪು ಶರ್ಮಾ ಅವರನ್ನು ಪದೇ ಪದೇ ಹೊಡೆಯಲು ಪ್ರಾರಂಭಿಸಿದೆ.

ಶರ್ಮಾ ಅವರು ತಮ್ಮ ಮುಖ, ಕಣ್ಣು, ಕಿವಿ ಮತ್ತು ಎದೆಯ ಸುತ್ತಲೂ ಗುದ್ದಿ, ಒದ್ದು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಂತಿಮವಾಗಿ ಅವರನ್ನು ನೆಲಕ್ಕೆ ಕೆಡವಿದ್ದು, ಹಲ್ಲೆಯ ಸಮಯದಲ್ಲಿ ದಾಳಿಕೋರರು ಅವರ ಕುರ್ತಾವನ್ನು ಹರಿದು ಹಾಕಿದರು ಎಂದು ಹೇಳಿದ್ದಾರೆ.

ದಾಳಿಕೋರರು ತಮ್ಮನ್ನು ಹೊಡೆಯುವಾಗ ಹಿಂದೂ ಧಾರ್ಮಿಕ ಘೋಷಣೆಗಳನ್ನು ಕೂಗಿದರು ಎಂದು ಅವರು ಆರೋಪಿಸಿದ್ದಾರೆ..

ದಾಳಿಯ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಪ್ರಜ್ಞೆ ಕಳೆದುಕೊಂಡಿದ್ದಾಗಿ ಶರ್ಮಾ ಹೇಳಿದರು. ಪ್ರಜ್ಞೆ ಮರಳಿದ ನಂತರ, ಕಷ್ಟಪಟ್ಟು ಮನೆಗೆ ತಲುಪುವಲ್ಲಿ ಯಶಸ್ವಿಯಾದೆ ಎಂದು ಹೇಳಿದರು.

ತೀವ್ರವಾದ ದೈಹಿಕ ಗಾಯಗಳ ನಂತರ ಗಣನೀಯ ಮಾನಸಿಕ ಯಾತನೆ ಮತ್ತು ಭಯ ಉಂಟಾಗಿದೆ ಎಂದು ಅವರು ಹೇಳಿದರು. ಆರಂಭದಲ್ಲಿ, ನಾನು ಭಯಭೀತರಾಗಿದ್ದೆ. ದೊಡ್ಡ ವಿವಾದವಾಗದೆ ಸ್ಥಳೀಯವಾಗಿ ವಿಷಯವನ್ನು ಪರಿಹರಿಸಬಹುದೆಂದು ಆಶಿಸಿದ್ದರಿಂದ ನಾನು ಘಟನೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ ಎಂದಿದ್ದಾರೆ.

“ಈ ವಿಷಯವನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸಬೇಕೆಂದು ನಾನು ಬಯಸಿದ್ದೆ, ಅದು ದೊಡ್ಡದಾಗಲು ಬಯಸಲಿಲ್ಲ” ಎಂದು ಶರ್ಮಾ ಅವರು ಆರಂಭದಲ್ಲಿ ಘಟನೆಯ ಬಗ್ಗೆ ಮೌನವಾಗಿದ್ದಿದ್ದು ಏಕೆ ಎಂಬುದನ್ನು ವಿವರಿಸುತ್ತಾ ಹೇಳಿದರು.

ನಂತರ ಅವರು ಘಟನೆಯ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡರು. ಜೊತೆಗೆ, ಅವರ ಎಡಗಣ್ಣಿನ ಸುತ್ತ ಊತ ಮತ್ತು ಗಾಯಗೊಂಡ ಮುಖದ ಛಾಯಾಚಿತ್ರಗಳನ್ನು ಹಂಚಿಕೊಂಡರು.

ಶರ್ಮಾ ಅವರು ಆರಂಭದಲ್ಲಿ ದೂರವಾಣಿ ಮೂಲಕ ವೈದ್ಯಕೀಯ ಸಲಹೆ ಪಡೆದರು. ಸ್ಥಿತಿ ಸುಧಾರಿಸುತ್ತದೆ ಎಂದು ಆಶಿಸಿ ನೋವು ನಿವಾರಕಗಳನ್ನು ತೆಗೆದುಕೊಂಡೆ ಎಂದು ಹೇಳಿದರು.

ಆದರೆ ಅವರ ಸ್ಥಿತಿ ಸುಧಾರಿಸದಿದ್ದಾಗ, ಸ್ಥಳೀಯ ಆಸ್ಪತ್ರೆಯ ತುರ್ತು ವಿಭಾಗವನ್ನು ಸಂಪರ್ಕಿಸಿದೆ ಎಂದು ಹೇಳಿದ್ದಾರೆ.

ವೈದ್ಯರು ಅವರ ಕಣ್ಣು, ಕಿವಿ ಮತ್ತು ಪಕ್ಕೆಲುಬುಗಳಿಗೆ ಸಂಬಂಧಿಸಿದ ಗಾಯಗಳಾಗಿರುವ ಬಗ್ಗೆ ತಿಳಿಸಿದ್ದಾರೆ. ಹೆಚ್ಚಿನ ತಜ್ಞರ ಪರೀಕ್ಷೆಗಳಿಗೆ ಅವರನ್ನು ರೆಫರ್ ಮಾಡಿದ್ದಾರೆ.

ಆಗಸ್ಟ್ 3 ರಂದು, ಅವರ ಕಣ್ಣುಗಳು, ಮೂಳೆಗಳು ಮತ್ತು ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಪರೀಕ್ಷಿಸಲಾಯಿತು ಎಂದು ಶರ್ಮಾ ಹೇಳಿದರು.

ಶರ್ಮಾ ಅವರಿಗೆ ಕಿವಿಯ ಗಾಯವು ಗಂಭೀರವಾಗಿದೆ. ಹಲ್ಲೆ ಸಮಯದಲ್ಲಿ ಗಮಭೀರ ಗಾಯವಾಗಿದ್ದು, ವಿಶೇಷ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.

ನಾನು ಮುಸ್ಲಿಂ ಆದರೆ ನಿಮಗೇನು?

ದಾಳಿಕೋರರು ಮೊದಲು ಮುಸ್ಲಿಂ ಎಂದು ಪ್ರಶ್ನಿಸುವ ಮೊದಲು ಬಟ್ಟೆಯ ಮೇಲೆ ಕೇಂದ್ರೀಕರಿಸಿದರು ಎಂದು ಶರ್ಮಾ ಹೇಳುತ್ತಾರೆ. ಅಪರಿಚಿತರು ನಮ್ಮ ಧಾರ್ಮಿಕ ಗುರುತನ್ನು ಕೇಳುವ ಹಕ್ಕನ್ನು ಹೊಂದಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ನನ್ನ ಪ್ರತಿಕ್ರಿಯೆಯ ನಂತರ ಹಿಂಸಾಚಾರ ನಡೆಯಿತು ಎಂದು ಅವರು ಆರೋಪಿಸಿದ್ದಾರೆ.

ಯುವಕರ ಗುಂಪು ನನ್ನನ್ನು ಪ್ರಶ್ನಿಸುವುದನ್ನು ಮುಂದುವರಿಸಿದ ನಂತರವೂ ನಾನು ನನ್ನ ನಿಲುವನ್ನು ಬದಲಾಯಿಸಲು ನಿರಾಕರಿಸಿದೆ ಎಂದು ಶರ್ಮಾ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...

3ನೇ ಹಂತದ ‘SIR’ ಕರಡು ಮತದಾರರ ಪಟ್ಟಿ ಬಿಡುಗಡೆ: 12 ರಾಜ್ಯಗಳಲ್ಲಿ 1.58 ಕೋಟಿ ಮತದಾರರ ಹೆಸರು ಕೈಬಿಟ್ಟ ಆಯೋಗ, ಇನ್ನು ಕರ್ನಾಟಕ ಬಾಕಿ

3ನೇ ಹಂತದದಲ್ಲಿ ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈನಿಂದ ನಡೆಸಲಾದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಬಳಿಕ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಹೆಸರುಗಳು...