Homeಮುಖಪುಟದೆಹಲಿ ಪೊಲೀಸರಿಂದ AAP ಶಾಸಕನ ಅಪಹರಣ?: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ತುರ್ತು ವಿಚಾರಣೆಗೆ ಅಸ್ತು!

ದೆಹಲಿ ಪೊಲೀಸರಿಂದ AAP ಶಾಸಕನ ಅಪಹರಣ?: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ತುರ್ತು ವಿಚಾರಣೆಗೆ ಅಸ್ತು!

- Advertisement -
- Advertisement -

AAP ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಅವರ ಮನೆಯಿಂದ ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಒಪ್ಪಿಗೆ ನೀಡಿದೆ. ಹಿರಿಯ ವಕೀಲ ಶಾದಾನ್ ಫರಾಸತ್ ಅವರು ಮುಖ್ಯನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠದ ಎದುರು ಈ ವಿಷಯವನ್ನು ಪ್ರಸ್ತಾಪಿಸಿ, ಅರ್ಜಿಯ ತಕ್ಷಣದ ವಿಚಾರಣೆಗೆ ಮನವಿ ಮಾಡಿದರು.

ಸ್ವಚ್ಛತಾ ಕಾರ್ಮಿಕನೊಬ್ಬನ ಸಾವು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕೊಂಡ್ಲಿ ಕ್ಷೇತ್ರದ ಎಎಪಿ ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಬೆಳಗಿನ ಜಾವ 4:30ರ ಸುಮಾರಿಗೆ ಯಾವುದೇ ಸಮವಸ್ತ್ರ ಧರಿಸದ ಸುಮಾರು 20 ರಹಸ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಅವರ ಸುಳಿವು ಸಿಗುತ್ತಿಲ್ಲ ಎಂದು ಫರಾಸತ್ ಕೋರ್ಟ್‌ಗೆ ತಿಳಿಸಿದರು. ದೆಹಲಿ ಪೊಲೀಸರು ಶಾಸಕರ ಮನೆಗೆ ನುಗ್ಗಿ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಡಿವಿಆರ್ (DVR) ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಈ ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಪ್ರಧಾನಿ ಮೋದಿ ಅವರೇ, ನಮ್ಮ ಶಾಸಕ ಕುಲ್ದೀಪ್ ಕುಮಾರ್ ಎಲ್ಲಿದ್ದಾರೆ? ಬೆಳಗಿನ ಜಾವ 4 ಗಂಟೆಗೆ ನಿಮ್ಮ ದೆಹಲಿ ಪೊಲೀಸರು ಅವರನ್ನು ಮನೆಯಿಂದ ಕರೆದೊಯ್ದಿದ್ದಾರೆ, ಸಿಸಿಟಿವಿಗಳನ್ನು ಒಡೆದು ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಜನಪ್ರತಿನಿಧಿಯೊಬ್ಬರನ್ನೇ ಈ ರೀತಿ ಯಾವುದೇ ಕಾರಣವಿಲ್ಲದೆ ಕರೆದೊಯ್ದರೆ ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿದೆ? ಇಂತಹ ಗೂಂಡಾಗಿರಿಯನ್ನು ದೇಶ ಸಹಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದ ಮಾಜಿ ಮುಖ್ಯಮಂತ್ರಿ ಅತಿಶಿ ಹಾಗೂ ದೆಹಲಿ ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್, ಪೊಲೀಸರು ಕಮಿಷನರ್ ಮಟ್ಟದ ಅಧಿಕಾರಿಗಳ ಫೋನ್ ಕ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಲ್ಯಾಣಪುರಿಯಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅನಿಲ್ ಎಂಬ ಸ್ವಚ್ಛತಾ ಕಾರ್ಮಿಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಸರ್ಕಾರಿ ಕೆಲಸಕ್ಕೆ ಆಗ್ರಹಿಸಿ ಶಾಸಕ ಕುಲ್ದೀಪ್ ಕುಮಾರ್ ಪ್ರತಿಭಟನೆ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಎಪಿ ನಾಯಕರು ದೂರಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಾತ್ಮ ಗಾಂಧಿ – ವಾಜಪೇಯಿ ಹಾಡಿದ್ದನ್ನೇ ನಾವು ಹಾಡಿದ್ದೇವೆ..’; ವಂದೇ ಮಾತರಂ ವಿವಾದದ ಕುರಿತು ಖರ್ಗೆ ಸ್ಪಷ್ಟನೆ

ಪಕ್ಷದ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ಬಗ್ಗೆ ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್...

ಅದಾನಿ-ಎಲ್‌ಐಸಿ ತನಿಖಾ ವರದಿ: ಪತ್ರಕರ್ತ ರವಿ ನಾಯರ್ ಮನೆಗಳ ಮೇಲೆ ಗುಜರಾತ್ ಪೊಲೀಸರ ದಾಳಿ, ಡಿಜಿಟಲ್ ಉಪಕರಣಗಳ ವಶ

ಅದಾನಿ ಸಮೂಹ ಹಾಗೂ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ನಡುವಿನ ಹೂಡಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ತನಿಖಾ ವರದಿ ಪ್ರಕಟಿಸಿದ್ದ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರ ದೆಹಲಿ ಮತ್ತು ಕೇರಳದಲ್ಲಿರುವ...

ಗುಜರಾತ್ | ನಕಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿ ಸರ್ಕಾರದ ಅನುದಾನ ಲೂಟಿ; ಬೃಹತ್ ಹಗರಣ ಬಯಲು

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಸರಿನಲ್ಲಿ 6 ನಕಲಿ ಸರ್ಕಾರಿ ಕಚೇರಿಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ...

ಎನ್‌ಎಎಲ್‌ಎಸ್‌ಎಆರ್‌ ಘಟಿಕೋತ್ಸವದ ಆಹ್ವಾನವನ್ನು ನಾನು ಸ್ವೀಕರಿಸಿರಲೇ ಇಲ್ಲ: ಸಿಜೆಐ ಸೂರ್ಯ ಕಾಂತ್

ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ಮುಂಬರುವ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ನಾನು ಎಂದಿಗೂ ಒಪ್ಪಿಗೆ ನೀಡಿರಲಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ವಿರೋಧದ ನಡುವೆಯೂ...

ಎರಡು ವರ್ಷಗಳ ವಿಳಂಬದ ನಂತರ ಹಣಕಾಸು ವರದಿ ಬಿಡುಗಡೆ ಮಾಡಿದ ಪಿಎಂ ಕೇರ್ಸ್

ಎರಡು ವರ್ಷಗಳ ವಿಳಂಬದ ನಂತರ ಪಿಎಂ ಕೇರ್ಸ್ ನಿಧಿಯು ತನ್ನ 2023-24 ಮತ್ತು 2024-25ರ ಹಣಕಾಸು ವರ್ಷಗಳ ಆಡಿಟ್ ವರದಿಗಳನ್ನು (ಲೆಕ್ಕಪರಿಶೋಧನಾ ವರದಿ) ಆಗಸ್ಟ್ 17ರಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಪಿಎಂ...

ಭಾರತ ಚುನಾವಣಾ ವ್ಯವಸ್ಥೆಯನ್ನು ಹೊಗಳಿದ ಟ್ರಂಪ್: ಜ್ಞಾನೇಶ್ ಕುಮಾರ್ ಜೊತೆಗೆ EVMಅನ್ನು ತೆಗೆದುಕೊಂಡು ಹೋಗಿ ಎಂದು ಕಾಲೆಳೆದ ಕಾಂಗ್ರೆಸ್

ಭಾರತದ ಚುನಾವಣಾ ವ್ಯವಸ್ಥೆ ಹಾಗೂ ಮತದಾರರ ಫೋಟೋ ಗುರುತಿನ ಚೀಟಿ (Voter ID) ಕಡ್ಡಾಯ ನಿಯಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಟ್ರಂಪ್ ಅವರ ಈ ಹೇಳಿಕೆಯನ್ನು ಇಟ್ಟುಕೊಂಡು...

ಬಿಜೆಪಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ತ್ರಿಪುರ ಮಾಜಿ ಸಿಎಂ ಮಾಣಿಕ್ ಸರ್ಕಾರ್ ವಿರುದ್ಧ ಪ್ರಕರಣ ದಾಖಲು: ಬಿಜೆಪಿಯ ಕೀಳು ಮಟ್ಟದ ರಾಜಕೀಯ ಎಂದ ಸಿಪಿಐ(ಎಂ)

ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಪಾಲಿಟ್‌ಬ್ಯೂರೋ ಹಿರಿಯ ಸದಸ್ಯ ಮಾಣಿಕ್ ಸರ್ಕಾರ್ ಅವರು ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯೊಂದರಲ್ಲಿ ನೀಡಿದ್ದ ಹೇಳಿಕೆಯನ್ನು ಆಧರಿಸಿ, ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ...

ಮುಹಮ್ಮದ್ ದೀಪಕ್‌ಗೆ 2026 ನೇ ಸಾಲಿನ ‘ರೆಹಮತ್-ಎ-ಆಲಂ ಶಾಂತಿ ಪ್ರಶಸ್ತಿ’

ಆಲ್ ಇಂಡಿಯಾ ಬಾಜ್ಮ್-ಎ-ರೆಹಮತ್-ಎ-ಆಲಂ ಸಂಘಟನೆಯು, ಮುಹಮ್ಮದ್ ದೀಪಕ್ ಎಂದೇ ಜನಪ್ರಿಯರಾಗಿರುವ ದೀಪಕ್ ಕುಮಾರ್ ಅವರಿಗೆ 2026 ರ ರೆಹಮತ್-ಎ-ಆಲಂ ಶಾಂತಿ ಪ್ರಶಸ್ತಿಯನ್ನು ಘೋಷಿಸಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಾದ ಮಿಲಾದ್-ಉನ್-ನಬಿಯನ್ನು ಗುರುತಿಸಲು ಆಯೋಜಿಸಲಾದ...

ಸ್ವಾತಂತ್ರ್ಯ ದಿನಾಚರಣೆಯಲ್ಲಿ ದಲಿತರಿಗೆ ಅವಮಾನ; ಬಲವಂತವಾಗಿ ನೆಲದ ಮೇಲೆ ಕೂರಿಸಿದ ಐವರ ವಿರುದ್ಧ ಪ್ರಕರಣ ದಾಖಲು

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದಲಿತ ಸಮುದಾಯದ ಇಬ್ಬರಿಗೆ ಜಾತಿ ನಿಂದನೆ ಮಾಡಿದ್ದು, ಅವರು ಕುಳಿತಿದ್ದ ಕುರ್ಚಿಗಳನ್ನು ಖಾಲಿ ಮಾಡಿಸಿ ನೆಲದ ಮೇಲೆ ಕೂರಿಸಿದ್ದಾರೆ. ಈ ಬಗ್ಗೆ...

ಬಿಹಾರ NEET ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ಧ AK-47 ಬಳಸಿದ್ದನ್ನು ಸುಪ್ರೀಂನಲ್ಲಿ ಒಪ್ಪಿಕೊಂಡ ಬಿಹಾರ ಸರ್ಕಾರ

ಬಿಹಾರದಲ್ಲಿ ನಡೆದ NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು AK-47 ರೈಫಲ್‌ನಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿರುವುದಾಗಿ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ...