HomeಮುಖಪುಟBJP 40 ಕ್ಷೇತ್ರಗಳಲ್ಲಿ ಸೋಲಲು ಕಾಂಗ್ರೆಸ್ ಜಾಹೀರಾತೇ ಕಾರಣ: ಹೈಕೋರ್ಟ್‌ಗೆ ಬಿಜೆಪಿ ದೂರು

BJP 40 ಕ್ಷೇತ್ರಗಳಲ್ಲಿ ಸೋಲಲು ಕಾಂಗ್ರೆಸ್ ಜಾಹೀರಾತೇ ಕಾರಣ: ಹೈಕೋರ್ಟ್‌ಗೆ ಬಿಜೆಪಿ ದೂರು

- Advertisement -
- Advertisement -

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ (Corruption Rate Card) ಜಾಹೀರಾತಿನಿಂದಾಗಿ ತಾನು 40 ಕ್ಷೇತ್ರಗಳಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದೆ. ಬಿಜೆಪಿಯನ್ನು ಪ್ರತಿನಿಧಿಸಿದ ವಕೀಲ ವಿನೋದ್ ಕುಮಾರ್ ಎಂ ಅವರು, ಚುನಾವಣೆಗೆ ಐದು ದಿನಗಳ ಮೊದಲು ಕಾಂಗ್ರೆಸ್ ನಿರಂತರವಾಗಿ ಈ ಪತ್ರಿಕಾ ಜಾಹೀರಾತುಗಳನ್ನು ಪ್ರಕಟಿಸಿತು, ಈ ಜಾಹೀರಾತಿನ ದುಷ್ಪರಿಣಾಮದಿಂದಾಗಿಯೇ ನಾವು 40 ಕ್ಷೇತ್ರಗಳನ್ನು ಕಳೆದುಕೊಂಡೆವು” ಎಂದು ನ್ಯಾಯಪೀಠದ ಗಮನಕ್ಕೆ ತಂದರು.

2023ರಲ್ಲಿ ಬಿಜೆಪಿ ನೀಡಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಬಿಜೆಪಿ ಈ ವಾದವನ್ನು ಮಂಡಿಸಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಅಂದರೆ ಈ ಜಾಹೀರಾತು ಇಲ್ಲದಿದ್ದರೆ ನೀವು ಆ 40 ಕ್ಷೇತ್ರಗಳನ್ನು ಗೆಲ್ಲುತ್ತಿದ್ದಿರಾ? ಎಂದು ಪ್ರಶ್ನಿಸಿದಾಗ, ವಕೀಲರು ಹೌದು, ನಾವು ಗೆಲ್ಲುತ್ತಿದ್ದೆವು. ಕನಿಷ್ಠ ಶೇ.1 ರಷ್ಟೂ ಸತ್ಯವಿಲ್ಲದ ಈ ಮಾನನಷ್ಟ ಲೇಖನಗಳು ಚುನಾವಣೆಗೆ ಕೇವಲ ಮೂರು ದಿನಗಳ ಮೊದಲು ಪ್ರಕಟವಾದ ಕಾರಣ, ಇವು ಸುಳ್ಳು ಆರೋಪಗಳೆಂದು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಲು ನಮಗೆ ಸಮಯವೇ ಸಿಗಲಿಲ್ಲ. ಈ ಲೇಖನದ ಪ್ರಭಾವದಿಂದಾಗಿಯೇ ರಾಜ್ಯದಲ್ಲಿ ಸರ್ಕಾರವೇ ಬದಲಾಯಿತು” ಎಂದು ವಾದಿಸಿದರು.

ಇನ್ನೊಂದೆಡೆ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶಶಿ ಕಿರಣ್ ಶೆಟ್ಟಿ ಅವರು, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ದೂರನ್ನು ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠವು ಈಗಾಗಲೇ ರದ್ದುಗೊಳಿಸಿದೆ. ಹೀಗಾಗಿ ಅದೇ ರೀತಿಯ ಪರಿಹಾರವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ವಿಸ್ತರಿಸಬೇಕು ಎಂದು ಕೋರಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ವಕೀಲರು, ಇದು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿರುವ ಪ್ರಕರಣವಾದ್ದರಿಂದ ವಿಚಾರಣೆಯ ಮೂಲಕವೇ ಸತ್ಯಾಸತ್ಯತೆ ನಿರ್ಧಾರವಾಗಬೇಕು ಎಂದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದೆಲ್ಲವೂ ಕೇವಲ ಪರಸ್ಪರ ಕೆಸರೆರಚಾಟವಷ್ಟೇ, ನೀವೆಲ್ಲರೂ ರಾಜಕೀಯ ಬದಿಗಿಟ್ಟು ಜನರ ಕಲ್ಯಾಣ ಹಾಗೂ ನೀತಿಗಳ ಮೇಲೆ ಕೆಲಸ ಮಾಡಿದರೆ ಇಂತಹ ಪ್ರಕರಣಗಳು ಎದುರಾಗುವುದಿಲ್ಲ ಎಂದು ಖಾರವಾಗಿ ಮಾರ್ಮಿಕವಾಗಿ ನುಡಿದು, ತೀರ್ಪನ್ನು ಕಾಯ್ದಿರಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ವರ್ಗಾವಣೆಗೆ ನಿರ್ದಿಷ್ಟ ದರ ಹಾಗೂ ಕಮಿಷನ್ ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪತ್ರಿಕೆಗಳಲ್ಲಿ ‘ಪೇಸಿಎಂ’ ಹಾಗೂ ‘ರೇಟ್ ಕಾರ್ಡ್’ ಜಾಹೀರಾತುಗಳನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಆದರೆ, ಕಳೆದ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ವಿರುದ್ಧದ ದೂರನ್ನು ವಜಾಗೊಳಿಸಿದ್ದ ಹೈಕೋರ್ಟ್, ರಾಹುಲ್ ಗಾಂಧಿ ಅವರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ” ಎಂದು ಹೇಳಿ ಆ ಪ್ರಕರಣವನ್ನು ರದ್ದುಗೊಳಿಸಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: 8 ವರ್ಷದ ಬಾಲಕಿ ಶಾರ್ಟ್ಸ್ ಧರಿಸಿದ್ದಕ್ಕೆ ಕುಟುಂಬದ ಮೇಲೆ ಭೀಕರ ಹಲ್ಲೆ: ನೈತಿಕ ಪೊಲೀಸ್‌ಗಿರಿಗೆ ಸಾಕ್ಷಿಯಾದ ಸಿಂಹಗಢ ಕೋಟೆ

ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಸಿಂಹಗಢ ಕೋಟೆಯಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರವಾಸಿಗರ ಮೇಲೆ ನೈತಿಕ ಪೊಲೀಸ್‌ಗಿರಿ (ಮೊರಾಲ್ ಪೋಲಿಸಿಂಗ್) ನಡೆಸಿ ಭೀಕರ ಹಲ್ಲೆ ನಡೆಸಲಾಗಿದೆ. ಎಂಟು ವರ್ಷದ ಚಿಕ್ಕ ಬಾಲಕಿಯೊಬ್ಬಳು...

ಜೈಪುರದಲ್ಲಿ ಸರ್ಕಾರಿ ಶಾಲೆ ತಪಾಸಣೆ ವೇಳೆ ಭೀಕರ ಹಿಂಸಾಚಾರ: ‘ಸಿಜೆಪಿ’ನಾಯಕ ಅಶುತೋಷ್ ರಂಕಾ ತಂಡದ ಮೇಲೆ ದಾಳಿ, ಕಲ್ಲು ತೂರಾಟ, ಕಾರು ಧ್ವಂಸ

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರ ಸಮೀಪದ ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ತೆರಳಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಕಾರ್ಯಕರ್ತರ ಮೇಲೆ ಉಗ್ರ...

“ಎಫ್‌ಐಆರ್ ದಾಖಲಾಗದೆ ಇಲ್ಲಿಂದ ಕದಲಲ್ಲ” : ಡಿಸಿಪಿ ಕಚೇರಿ ಮುಂದೆ ಧರಣಿ ಕುಳಿತ ರಾಹುಲ್ ಗಾಂಧಿ

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್ ಗನ್‌ ಬಳಕೆ, ಲಾಠಿ ಚಾರ್ಜ್ ಸೇರಿದಂತೆ ಪೊಲೀಸರಿಂದ ವಿವಿಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ...

ಪೆಲೆಟ್ ಗನ್ ಫೈರಿಂಗ್ ವಿರುದ್ಧ FIR ದಾಖಲಿಸಲು ದೆಹಲಿ ಪೊಲೀಸರ ನಿರಾಕರಣೆ, ರಾಹುಲ್ ಗಾಂಧಿ ಧರಣಿ

ಜುಲೈ 20ರ ಸಂಸತ್ ಚಲೋ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (ಅಗಸ್ಟ್ 20)...

ಎಸ್ಐಆರ್ ಹಗರಣದಂತೆ ಕಾಣುತ್ತಿದೆ: ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದ ನಟ ಕಿಶೋರ್ ಕುಮಾರ್: ಸಾರ್ವಜನಿಕ ಪ್ರತಿರೋಧಕ್ಕೆ ಕರೆ

ಬೆಂಗಳೂರು: ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪವಿತ್ರವೆನಿಸಿದ ಮತದಾನದ ಹಕ್ಕನ್ನು ಕಸಿಯುವ ಹುನ್ನಾರಗಳು ತೀವ್ರಗೊಳ್ಳುತ್ತಿದ್ದು, ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಬೇಕಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಇಂದು ಬಹುದೊಡ್ಡ ಹಗರಣದಂತೆ ಕಾಣಿಸುತ್ತಿದೆ ಎಂದು...

ಕರ್ನಾಟಕ SIR : 43.80 ಲಕ್ಷ ಜನರಿಗೆ ಬರಲಿದೆ ಚುನಾವಣಾ ಆಯೋಗದ ನೋಟಿಸ್!

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಮತದಾರರು ತುಂಬಿ ಕೊಟ್ಟಿರುವ 4,46,35,899 ಎನ್ಯುಮರೇಷನ್ ಫಾರಂಗಳು (ಗಣತಿ ನಮೂನೆ) ಡಿಜಿಟಲೀಕರಣಗೊಂಡಿವೆ. ಈ ಪೈಕಿ 43,80,740 ಮತದಾರರಿಗೆ ದಾಖಲೆ ಕೇಳಿ...

ರಾಜಸ್ಥಾನ: ವರದಿಗಾರಿಕೆಯಲ್ಲಿ ನಿರತರಾಗಿದ್ದ ದಲಿತ ಪತ್ರಕರ್ತನ ಮೇಲೆ ಜಾತಿ ಆಧಾರಿತ ದಾಳಿ, ಭೀಕರ ಹಲ್ಲೆ, ಜಾತಿ ನಿಂದನೆ 

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಗೋಗುಂಡದಲ್ಲಿ ಕರ್ತವ್ಯನಿರತ ದಲಿತ ಪತ್ರಕರ್ತರೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಜಾತ್ಯಾತೀತ ಸಮಾಜ ತಲೆತಗ್ಗಿಸುವಂತೆ ಜಾತಿ ಆಧಾರಿತವಾಗಿ ನಿಂದಿಸಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಕುಂದುಕೊರತೆ ಆಲಿಕೆ ಕಾರ್ಯಕ್ರಮದ...

ನಕಲಿ ಔಷಧ ಮಾಫಿಯಾ: 5 ರಾಜ್ಯಗಳಿಗೆ ಹರಡಿದ ಜಾಲ, ತೀವ್ರ ಶೋಧ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ನಕಲಿ ಔಷಧ ತಯಾರಿಕೆ ಹಾಗೂ ವಿತರಣೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಈ ಅಕ್ರಮ ಜಾಲವು ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಐದು ರಾಜ್ಯಗಳಿಗೂ ಹರಡಿರುವುದು ಬೆಳಕಿಗೆ...

ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ, ನೇರ ವೇತನ ಪಾವತಿ ಜಾರಿಗೊಳಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಲು ಆಗ್ರಹಿಸಿ ಎಐಸಿಸಿಟಿಯು ಪ್ರತಿಭಟನೆ

ಬೆಂಗಳೂರು: ರಾಜ್ಯಾದ್ಯಂತ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಕಾರ್ಮಿಕರ ಶೋಷಣೆ ತಡೆಗಟ್ಟಿ, ಅವರಿಗೆ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ...

ಯುಜಿಸಿ ಇಕ್ವಿಟಿ ನಿಯಮಗಳು ಮರುಪರಿಶೀಲನೆಯಲ್ಲಿವೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಕುರಿತಾದ 2026 ರ ವಿಶ್ವವಿದ್ಯಾಲಯ ಅನುದಾನ ಆಯೋಗದ ಇಕ್ವಿಟಿ ನಿಯಮಗಳು ಮರುಪರಿಶೀಲನೆಯಲ್ಲಿವೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜನವರಿ 29 ರಂದು, ಸುಪ್ರೀಂ...