Homeಮುಖಪುಟಪೆಲೆಟ್ ಗನ್ ಫೈರಿಂಗ್ ವಿರುದ್ಧ FIR ದಾಖಲಿಸಲು ದೆಹಲಿ ಪೊಲೀಸರ ನಿರಾಕರಣೆ, ರಾಹುಲ್ ಗಾಂಧಿ ಧರಣಿ

ಪೆಲೆಟ್ ಗನ್ ಫೈರಿಂಗ್ ವಿರುದ್ಧ FIR ದಾಖಲಿಸಲು ದೆಹಲಿ ಪೊಲೀಸರ ನಿರಾಕರಣೆ, ರಾಹುಲ್ ಗಾಂಧಿ ಧರಣಿ

- Advertisement -
- Advertisement -

ಜುಲೈ 20ರ ಸಂಸತ್ ಚಲೋ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (ಅಗಸ್ಟ್ 20) ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ, ದೆಹಲಿ ಪೊಲೀಸರು FIR ದಾಖಲಿಸಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ರಾಹುಲ್ ಗಾಂಧಿ, ನವದೆಹಲಿಯ ಡಿಸಿಪಿ (DCP) ಕಚೇರಿಯ ಹೊರಗೆ ಧರಣಿ ಕುಳಿತರು.

ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪೆಲೆಟ್ ಗನ್ ದಾಳಿಗೊಳಗಾಗಿ ಗಾಯಗೊಂಡ ಸಾಹಿಲ್ ಲೋಚಾವ್ ಎಂಬ ವಿದ್ಯಾರ್ಥಿಯೊಂದಿಗೆ ರಾಹುಲ್ ಗಾಂಧಿ ಆಗಮಿಸಿದ್ದರು. ಅವರು ಮೊದಲು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ತೆರಳಿ, ನಂತರ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿರುವ ಸೆಂಟ್ರಲ್ ದೆಹಲಿ ಉಪ ಪೊಲೀಸ್ ಕಮಿಷನರ್ (DCP) ಕಚೇರಿಗೆ ತೆರಳಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ರಾಹುಲ್ ಗಾಂಧಿ ಅವರು ಮೊದಲು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಹೋಗಿದ್ದರು. ಅಲ್ಲಿ ಪ್ರಕರಣ ದಾಖಲಾಗದ ಕಾರಣ ಅವರು ಡಿಸಿಪಿ (ಸೆಂಟ್ರಲ್) ಭೇಟಿಯಾಗಲು ತೆರಳಿದರು. ಪ್ರಕರಣ ದಾಖಲಾಗುವವರೆಗೆ ಅವರು ಹಿಂತಿರುಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ನಜಾಫ್‌ಗಢದ 19 ವರ್ಷದ ನಿವಾಸಿ ಸಾಹಿಲ್ ಲೋಚಾವ್ ಜುಲೈ 20ರ ಮೆರವಣಿಗೆಯ ವೇಳೆ ಬಲಗಣ್ಣಿಗೆ ಪೆಲೆಟ್ ಗನ್‌ನಿಂದ ಗಂಭೀರ ಗಾಯಗೊಂಡಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದ್ದರೂ ಕಣ್ಣಿನೊಳಗೆ ಚೂರುಗಳು (shrapnel) ಇನ್ನು ಹಾಗೆಯೇ ಉಳಿದುಕೊಂಡಿವೆ. ಸಾಹಿಲ್ ಆಗಸ್ಟ್ 14 ರಂದು ದೆಹಲಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದರೂ, ತನಿಖಾಧಿಕಾರಿಯ (Investigating Officer) ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದರು. ನಂತರ ಆಗಸ್ಟ್ 17 ರಂದು ಇಮೇಲ್ ಮತ್ತು ಫೋನ್ ಮೂಲಕ ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಇದು ಜ್ಞಾನಾರ್ಹ ಅಪರಾಧ (Cognisable offence) ಆಗಿರುವುದರಿಂದ ಎಫ್‌ಐಆರ್ ದಾಖಲಿಸುವುದು ಕಡ್ಡಾಯ, ಆದರೆ ದೆಹಲಿ ಪೊಲೀಸರು ಅದನ್ನು ಮಾಡುತ್ತಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಸಂತ್ರಸ್ತ ವಿದ್ಯಾರ್ಥಿಯ ನೆರವಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಜುಲೈ 20ರ ಸಂಸತ್ ಚಲೋ ವೇಳೆ ಪೆಲೆಟ್ ಗನ್ ಬಳಸಿರುವುದು ತೀವ್ರ ಪರಿಶೀಲನೆಗೆ ಒಳಪಟ್ಟಿದೆ. ರಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿಯೊಬ್ಬರು ಪೆಲೆಟ್ ಗನ್‌ನಿಂದ 7 ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ 5 ಗುಂಡುಗಳು ಪ್ರತಿಭಟನಾಕಾರರಿಗೆ ತಗಲಿವೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಕಂಡುಕೊಂಡಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದ ವಿಪಕ್ಷಗಳು ಕೇಂದ್ರ ಸರ್ಕಾರವನ್ನು, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡಿವೆ. ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಉಸ್ತುವಾರಿ ವಹಿಸಿರುವ ಅಮಿತ್ ಶಾ ಅವರ ರಾಜೀನಾಮೆಗೆ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದು, ಈ ವಿಷಯವು ಸಂಸತ್ತಿನ ಮುಂಗಾರು ಅಧಿವೇಶನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಪುರದಲ್ಲಿ ಸರ್ಕಾರಿ ಶಾಲೆ ತಪಾಸಣೆ ವೇಳೆ ಭೀಕರ ಹಿಂಸಾಚಾರ: ‘ಸಿಜೆಪಿ’ನಾಯಕ ಅಶುತೋಷ್ ರಂಕಾ ತಂಡದ ಮೇಲೆ ದಾಳಿ, ಕಲ್ಲು ತೂರಾಟ, ಕಾರು ಧ್ವಂಸ

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರ ಸಮೀಪದ ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ತೆರಳಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಕಾರ್ಯಕರ್ತರ ಮೇಲೆ ಉಗ್ರ...

BJP 40 ಕ್ಷೇತ್ರಗಳಲ್ಲಿ ಸೋಲಲು ಕಾಂಗ್ರೆಸ್ ಜಾಹೀರಾತೇ ಕಾರಣ: ಹೈಕೋರ್ಟ್‌ಗೆ ಬಿಜೆಪಿ ದೂರು

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ (Corruption Rate Card) ಜಾಹೀರಾತಿನಿಂದಾಗಿ ತಾನು 40 ಕ್ಷೇತ್ರಗಳಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಭಾರತೀಯ...

“ಎಫ್‌ಐಆರ್ ದಾಖಲಾಗದೆ ಇಲ್ಲಿಂದ ಕದಲಲ್ಲ” : ಡಿಸಿಪಿ ಕಚೇರಿ ಮುಂದೆ ಧರಣಿ ಕುಳಿತ ರಾಹುಲ್ ಗಾಂಧಿ

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್ ಗನ್‌ ಬಳಕೆ, ಲಾಠಿ ಚಾರ್ಜ್ ಸೇರಿದಂತೆ ಪೊಲೀಸರಿಂದ ವಿವಿಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ...

ಎಸ್ಐಆರ್ ಹಗರಣದಂತೆ ಕಾಣುತ್ತಿದೆ: ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದ ನಟ ಕಿಶೋರ್ ಕುಮಾರ್: ಸಾರ್ವಜನಿಕ ಪ್ರತಿರೋಧಕ್ಕೆ ಕರೆ

ಬೆಂಗಳೂರು: ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪವಿತ್ರವೆನಿಸಿದ ಮತದಾನದ ಹಕ್ಕನ್ನು ಕಸಿಯುವ ಹುನ್ನಾರಗಳು ತೀವ್ರಗೊಳ್ಳುತ್ತಿದ್ದು, ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಬೇಕಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಇಂದು ಬಹುದೊಡ್ಡ ಹಗರಣದಂತೆ ಕಾಣಿಸುತ್ತಿದೆ ಎಂದು...

ಕರ್ನಾಟಕ SIR : 43.80 ಲಕ್ಷ ಜನರಿಗೆ ಬರಲಿದೆ ಚುನಾವಣಾ ಆಯೋಗದ ನೋಟಿಸ್!

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಮತದಾರರು ತುಂಬಿ ಕೊಟ್ಟಿರುವ 4,46,35,899 ಎನ್ಯುಮರೇಷನ್ ಫಾರಂಗಳು (ಗಣತಿ ನಮೂನೆ) ಡಿಜಿಟಲೀಕರಣಗೊಂಡಿವೆ. ಈ ಪೈಕಿ 43,80,740 ಮತದಾರರಿಗೆ ದಾಖಲೆ ಕೇಳಿ...

ರಾಜಸ್ಥಾನ: ವರದಿಗಾರಿಕೆಯಲ್ಲಿ ನಿರತರಾಗಿದ್ದ ದಲಿತ ಪತ್ರಕರ್ತನ ಮೇಲೆ ಜಾತಿ ಆಧಾರಿತ ದಾಳಿ, ಭೀಕರ ಹಲ್ಲೆ, ಜಾತಿ ನಿಂದನೆ 

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಗೋಗುಂಡದಲ್ಲಿ ಕರ್ತವ್ಯನಿರತ ದಲಿತ ಪತ್ರಕರ್ತರೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಜಾತ್ಯಾತೀತ ಸಮಾಜ ತಲೆತಗ್ಗಿಸುವಂತೆ ಜಾತಿ ಆಧಾರಿತವಾಗಿ ನಿಂದಿಸಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಕುಂದುಕೊರತೆ ಆಲಿಕೆ ಕಾರ್ಯಕ್ರಮದ...

ನಕಲಿ ಔಷಧ ಮಾಫಿಯಾ: 5 ರಾಜ್ಯಗಳಿಗೆ ಹರಡಿದ ಜಾಲ, ತೀವ್ರ ಶೋಧ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ನಕಲಿ ಔಷಧ ತಯಾರಿಕೆ ಹಾಗೂ ವಿತರಣೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಈ ಅಕ್ರಮ ಜಾಲವು ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಐದು ರಾಜ್ಯಗಳಿಗೂ ಹರಡಿರುವುದು ಬೆಳಕಿಗೆ...

ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ, ನೇರ ವೇತನ ಪಾವತಿ ಜಾರಿಗೊಳಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಲು ಆಗ್ರಹಿಸಿ ಎಐಸಿಸಿಟಿಯು ಪ್ರತಿಭಟನೆ

ಬೆಂಗಳೂರು: ರಾಜ್ಯಾದ್ಯಂತ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಕಾರ್ಮಿಕರ ಶೋಷಣೆ ತಡೆಗಟ್ಟಿ, ಅವರಿಗೆ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ...

ಯುಜಿಸಿ ಇಕ್ವಿಟಿ ನಿಯಮಗಳು ಮರುಪರಿಶೀಲನೆಯಲ್ಲಿವೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಕುರಿತಾದ 2026 ರ ವಿಶ್ವವಿದ್ಯಾಲಯ ಅನುದಾನ ಆಯೋಗದ ಇಕ್ವಿಟಿ ನಿಯಮಗಳು ಮರುಪರಿಶೀಲನೆಯಲ್ಲಿವೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜನವರಿ 29 ರಂದು, ಸುಪ್ರೀಂ...

ಅಲ್ಪಸಂಖ್ಯಾತರ ಮೇಲಿನ ದಾಳಿ ಹಿನ್ನೆಲೆ: ಭಾಗವತ್ ಭೇಟಿಗೂ ಮುನ್ನ ಆರ್‌ಎಸ್‌ಎಸ್ ನಾಯಕರನ್ನು ದೂರವಿಡುವಂತೆ ವಾಷಿಂಗ್ಟನ್‌ಗೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ ಒತ್ತಾಯ

ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಅಮೆರಿಕ ಭೇಟಿಗೆ ಮುನ್ನ, ಅವರೊಂದಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳನ್ನು ತಡೆಹಿಡಿಯಬೇಕು ಮತ್ತು ಸಂಘದ ಪ್ರಮುಖ ನಾಯಕರ ವಿರುದ್ಧ ನಿರ್ಬಂಧಗಳನ್ನು...