HomeಅಂಕಣಗಳುKarnataka against SIRಎಸ್ಐಆರ್ ಹಗರಣದಂತೆ ಕಾಣುತ್ತಿದೆ: ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದ ನಟ ಕಿಶೋರ್ ಕುಮಾರ್: ಸಾರ್ವಜನಿಕ ಪ್ರತಿರೋಧಕ್ಕೆ...

ಎಸ್ಐಆರ್ ಹಗರಣದಂತೆ ಕಾಣುತ್ತಿದೆ: ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದ ನಟ ಕಿಶೋರ್ ಕುಮಾರ್: ಸಾರ್ವಜನಿಕ ಪ್ರತಿರೋಧಕ್ಕೆ ಕರೆ

- Advertisement -
- Advertisement -

ಬೆಂಗಳೂರು: ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪವಿತ್ರವೆನಿಸಿದ ಮತದಾನದ ಹಕ್ಕನ್ನು ಕಸಿಯುವ ಹುನ್ನಾರಗಳು ತೀವ್ರಗೊಳ್ಳುತ್ತಿದ್ದು, ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಬೇಕಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಇಂದು ಬಹುದೊಡ್ಡ ಹಗರಣದಂತೆ ಕಾಣಿಸುತ್ತಿದೆ ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ‘ನಾಗರಿಕ ಮತ ಕಾವಲು ಸಮಿತಿ’ ಆಯೋಜಿಸಿದ್ದ ‘ಮತಹರಣದ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ’ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತನವನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ನಾಗರಿಕರು ತಕ್ಷಣವೇ ಜಾಗೃತರಾಗಿ ಪ್ರತಿರೋಧ ಒಡ್ಡಬೇಕೆಂದು ಕರೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಚುನಾವಣಾ ವ್ಯವಸ್ಥೆಯ ಇತ್ತೀಚಿನ ನಡೆಗಳನ್ನು ಕಟುವಾಗಿ ವಿಮರ್ಶಿಸಿದ ಕಿಶೋರ್, ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳ ಮೇಲಿನ ಸಾರ್ವಜನಿಕರ ನಂಬಿಕೆ ಸಂಪೂರ್ಣವಾಗಿ ಕುಸಿಯುತ್ತಿದೆ ಎಂದರು. ಹಿಂದೆ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಭಾಗಿಯಾಗುತ್ತಿದ್ದರು. ಆದರೆ, ತದನಂತರದ ಕಾನೂನು ತಿದ್ದುಪಡಿಗಳ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಯಿತು. ಈ ನಿರ್ಧಾರವೇ ದೇಶದಲ್ಲಿ ಚುನಾವಣಾ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆಯಿತು ಮತ್ತು ಇದು ಸಂವಿಧಾನಕ್ಕೆ ಎಸಗಿದ ಗಂಭೀರ ದ್ರೋಹವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ದೇಶದ ನಾನಾ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಈಗಾಗಲೇ ಮತ ಕಳವು ಅಥವಾ ಮತದಾರರ ಪಟ್ಟಿಯಿಂದ ಅಳಿಸಿಹಾಕುವಿಕೆ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಆಡಳಿತಾರೂಢ ಪಕ್ಷಕ್ಕೆ ಮತ ನೀಡದಿರುವ ಸಾಧ್ಯತೆ ಇರುವ ನಿಶ್ಚಿತ ಸಮುದಾಯ ಅಥವಾ ಮತದಾರರನ್ನು ಗುರಿಯಾಗಿಸಿಕೊಂಡು, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಅವರನ್ನು ಮತದಾರರ ಪಟ್ಟಿಯಿಂದಲೇ ಅಳಿಸಿ ಹಾಕುವ ವ್ಯವಸ್ಥಿತ ಕೆಲಸಗಳು ನಡೆಯುತ್ತಿವೆ. ನ್ಯಾಯಾಂಗವೂ ಕೂಡ ಇದನ್ನು ಕೇವಲ ಕಾನೂನು ಚೌಕಟ್ಟಿನೊಳಗಿನ ಪ್ರಕ್ರಿಯೆ ಎಂದು ಪರಿಗಣಿಸುತ್ತಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ. ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಅಧಿಕಾರವನ್ನು ರಕ್ಷಿಸಲು ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುತ್ತಿರುವಾಗ, ನಾಗರಿಕರು ಇವರಿಂದ ಪಾರದರ್ಶಕತೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಕಿಶೋರ್ ಪ್ರಶ್ನಿಸಿದರು.

ಇತ್ತೀಚೆಗಷ್ಟೇ ನಟ ಪ್ರಕಾಶ್ ರಾಜ್ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಲೋಪಗಳನ್ನು ಎತ್ತಿಹಿಡಿದು, ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅಳಿಸಿಹಾಕಿದ್ದನ್ನು ಬಹಿರಂಗಪಡಿಸಿದ್ದರು. ಇದೀಗ ಪ್ರಕಾಶ್ ರಾಜ್ ಅವರ ಸಾಲಿನಲ್ಲಿ ನಿಂತು ಎಸ್‌ಐಆರ್ ಲೋಪಗಳ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ ಎರಡನೇ ಪ್ರಮುಖ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಕಿಶೋರ್ ಪಾತ್ರರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಆಡಳಿತಾತ್ಮಕ ಲೋಪಗಳ ಹೆಸರಿನಲ್ಲಿ ನಾಗರಿಕರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಇದನ್ನು ಯಾರೊಬ್ಬರೂ ಸುಮ್ಮನೆ ಸಹಿಸಬಾರದು ಎಂದು ಅವರು ಪ್ರತಿಪಾದಿಸಿದರು.

ನಾಗರಿಕ ಮತ ಕಾವಲು ಸಮಿತಿ ಆಯೋಜಿಸಿದ್ದ ಈ ಪ್ರಮುಖ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರಾದ ಜೆ.ಎಂ.ವೀರಸಂಗಯ್ಯ, ಕಲಾವಿದೆ ಮಂಜುಳಾ, ಶಶಿರಾಜ್, ಸಿರಿ ಗೌರಿ ಹಾಗೂ ಚಂದ್ರಶೇಖರ್ ಸೊರಪಲ್ಲಿ ಸೇರಿದಂತೆ ಹಲವಾರು ಪ್ರಜಾಸತ್ತಾತ್ಮಕ ಚಿಂತಕರು ಮತ್ತು ಸಮಾಜಮುಖಿ ಹೋರಾಟಗಾರರು ಉಪಸ್ಥಿತರಿದ್ದರು. ಪ್ರಜಾಪ್ರಭುತ್ವವನ್ನು ಜೀವಂತವಾಗಿಡಲು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಯಾರು ನಡೆಸುತ್ತಿದ್ದಾರೆ, ಯಾರ ಲಾಭಕ್ಕಾಗಿ ನಡೆಸುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಪ್ರಜೆಯೂ ಪ್ರಶ್ನಿಸುವ ಕಾಲ ಬಂದಿದೆ ಎಂದು ಸಭೆಯು ಒಗ್ಗಟ್ಟಿನಿಂದ ಪ್ರತಿರೋಧಕ್ಕೆ ಕರೆ ನೀಡಿದರು. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಎಫ್‌ಐಆರ್ ದಾಖಲಾಗದೆ ಇಲ್ಲಿಂದ ಕದಲಲ್ಲ” : ಡಿಸಿಪಿ ಕಚೇರಿ ಮುಂದೆ ಧರಣಿ ಕುಳಿತ ರಾಹುಲ್ ಗಾಂಧಿ

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್ ಗನ್‌ ಬಳಕೆ, ಲಾಠಿ ಚಾರ್ಜ್ ಸೇರಿದಂತೆ ಪೊಲೀಸರಿಂದ ವಿವಿಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ...

ಪೆಲೆಟ್ ಗನ್ ಫೈರಿಂಗ್ ವಿರುದ್ಧ FIR ದಾಖಲಿಸಲು ದೆಹಲಿ ಪೊಲೀಸರ ನಿರಾಕರಣೆ, ರಾಹುಲ್ ಗಾಂಧಿ ಧರಣಿ

ಜುಲೈ 20ರ ಸಂಸತ್ ಚಲೋ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (ಅಗಸ್ಟ್ 20)...

ಕರ್ನಾಟಕ SIR : 43.80 ಲಕ್ಷ ಜನರಿಗೆ ಬರಲಿದೆ ಚುನಾವಣಾ ಆಯೋಗದ ನೋಟಿಸ್!

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಮತದಾರರು ತುಂಬಿ ಕೊಟ್ಟಿರುವ 4,46,35,899 ಎನ್ಯುಮರೇಷನ್ ಫಾರಂಗಳು (ಗಣತಿ ನಮೂನೆ) ಡಿಜಿಟಲೀಕರಣಗೊಂಡಿವೆ. ಈ ಪೈಕಿ 43,80,740 ಮತದಾರರಿಗೆ ದಾಖಲೆ ಕೇಳಿ...

ರಾಜಸ್ಥಾನ: ವರದಿಗಾರಿಕೆಯಲ್ಲಿ ನಿರತರಾಗಿದ್ದ ದಲಿತ ಪತ್ರಕರ್ತನ ಮೇಲೆ ಜಾತಿ ಆಧಾರಿತ ದಾಳಿ, ಭೀಕರ ಹಲ್ಲೆ, ಜಾತಿ ನಿಂದನೆ 

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಗೋಗುಂಡದಲ್ಲಿ ಕರ್ತವ್ಯನಿರತ ದಲಿತ ಪತ್ರಕರ್ತರೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಜಾತ್ಯಾತೀತ ಸಮಾಜ ತಲೆತಗ್ಗಿಸುವಂತೆ ಜಾತಿ ಆಧಾರಿತವಾಗಿ ನಿಂದಿಸಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಕುಂದುಕೊರತೆ ಆಲಿಕೆ ಕಾರ್ಯಕ್ರಮದ...

ನಕಲಿ ಔಷಧ ಮಾಫಿಯಾ: 5 ರಾಜ್ಯಗಳಿಗೆ ಹರಡಿದ ಜಾಲ, ತೀವ್ರ ಶೋಧ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ನಕಲಿ ಔಷಧ ತಯಾರಿಕೆ ಹಾಗೂ ವಿತರಣೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಈ ಅಕ್ರಮ ಜಾಲವು ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಐದು ರಾಜ್ಯಗಳಿಗೂ ಹರಡಿರುವುದು ಬೆಳಕಿಗೆ...

ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ, ನೇರ ವೇತನ ಪಾವತಿ ಜಾರಿಗೊಳಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಲು ಆಗ್ರಹಿಸಿ ಎಐಸಿಸಿಟಿಯು ಪ್ರತಿಭಟನೆ

ಬೆಂಗಳೂರು: ರಾಜ್ಯಾದ್ಯಂತ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಕಾರ್ಮಿಕರ ಶೋಷಣೆ ತಡೆಗಟ್ಟಿ, ಅವರಿಗೆ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ...

ಯುಜಿಸಿ ಇಕ್ವಿಟಿ ನಿಯಮಗಳು ಮರುಪರಿಶೀಲನೆಯಲ್ಲಿವೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ

ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟುವ ಕುರಿತಾದ 2026 ರ ವಿಶ್ವವಿದ್ಯಾಲಯ ಅನುದಾನ ಆಯೋಗದ ಇಕ್ವಿಟಿ ನಿಯಮಗಳು ಮರುಪರಿಶೀಲನೆಯಲ್ಲಿವೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜನವರಿ 29 ರಂದು, ಸುಪ್ರೀಂ...

ಅಲ್ಪಸಂಖ್ಯಾತರ ಮೇಲಿನ ದಾಳಿ ಹಿನ್ನೆಲೆ: ಭಾಗವತ್ ಭೇಟಿಗೂ ಮುನ್ನ ಆರ್‌ಎಸ್‌ಎಸ್ ನಾಯಕರನ್ನು ದೂರವಿಡುವಂತೆ ವಾಷಿಂಗ್ಟನ್‌ಗೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ ಒತ್ತಾಯ

ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಅಮೆರಿಕ ಭೇಟಿಗೆ ಮುನ್ನ, ಅವರೊಂದಿಗೆ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳನ್ನು ತಡೆಹಿಡಿಯಬೇಕು ಮತ್ತು ಸಂಘದ ಪ್ರಮುಖ ನಾಯಕರ ವಿರುದ್ಧ ನಿರ್ಬಂಧಗಳನ್ನು...

ಮೋಹನ್ ಭಾಗವತ್‌ ಅಮೆರಿಕ ಪ್ರವಾಸಕ್ಕೆ ವಿರೋಧ: RSSಗೆ ನಿರ್ಬಂಧದ ಭೀತಿ

ಆರ್‌ಎಸ್‌ಎಸ್ (RSS) ಸಂಘಟನೆಯ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕುರಿತ ಸಲಹಾ ಮಂಡಳಿಯ (USCIRF) ಅಧಿಕಾರಿಗಳು ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಅಮೆರಿಕಕ್ಕೆ ಭೇಟಿ ನೀಡಲಿರುವ RSS ಸರಸಂಘಚಾಲಕ ಮೋಹನ್ ಭಾಗವತ್...

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಕೇರಳದ ಟ್ರಾನ್ಸ್ ಜೆಂಡರ್ ಮೇಕಪ್ ಕಲಾವಿದೆ ಜಾನ್ಮೋನಿ ದಾಸ್ ಬಂಧನ

ಕೋಝಿಕ್ಕೋಡ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸಾರ್ವಜನಿಕವಾಗಿ ಅವಮಾನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇರೆಗೆ ಕೇರಳದ ಪ್ರಸಿದ್ಧ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಾಗೂ ಬಿಗ್ ಬಾಸ್ ಮಾಜಿ...