HomeಅಂಕಣಗಳುKarnataka against SIRಕರ್ನಾಟಕದ ಒಂದೂವರೆ ಕೋಟಿ ಮತದಾರರನ್ನು ಬಾಧಿಸಿದ SIR

ಕರ್ನಾಟಕದ ಒಂದೂವರೆ ಕೋಟಿ ಮತದಾರರನ್ನು ಬಾಧಿಸಿದ SIR

- Advertisement -
- Advertisement -

ಎನ್ಯುಮರೇಷನ್ ಫಾರಂ (ಗಣತಿ ನಮೂನೆ) ಸಲ್ಲಿಕೆ ಹಂತ ಮುಗಿದ ಬಳಿಕ (ಆ.18-19ರ ಪ್ರಕಾರ) ದೊರೆತ ಮಾಹಿತಿ ಪ್ರಕಾರ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದ ಸುಮಾರು ಒಂದೂವರೆ ಕೋಟಿ ( 1,51,77,155) ಜನರ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ.

ಎಸ್‌ಐಆರ್ ಸಲುವಾಗಿ 16 ಜೂನ್ 2026ರಂದು ಕರ್ನಾಟಕದ ಮತದಾರರ ಪಟ್ಟಿಯನ್ನು ಫ್ರೀಝ್ ಮಾಡಲಾಗಿದೆ. ಈ ವೇಳೆಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 5,54,32,314 ಇತ್ತು. ಎಸ್‌ಐಆರ್‌ನ ಎನ್ಯುಮರೇಷನ್ ಹಂತ ಮುಗಿದ ಬಳಿಕ, ಚುನಾವಣಾ ಆಯೋಗ 1,07,96, 415 ಜನರನ್ನು ಎಎಸ್‌ಡಿಡಿಒ ಎಂದು ಪಟ್ಟಿ ಮಾಡಿದೆ.

1,07,96, 415 ಎಎಸ್‌ಡಿಡಿಒ ಡಿಲೀಟ್ ಜೊತೆಗೆ ಎನ್ಯುಮರೇಷನ್ ಫಾರಂ ಡಿಜಿಟಲೀಕರಣಗೊಂಡ 43, 80,740 ಮತದಾರರಿಗೆ ಅನ್‌ ಮ್ಯಾಪಿಂಗ್ ಮತ್ತು ಅನಾಮಲಿಸ್ (ಲಾಜಿಕಲ್ ಡಿಸ್ಕ್ರಿಪೆನ್ಸಿ) ಎಂಬ ಕಾರಣಕ್ಕೆ ನೋಟಿಸ್ ಬರಲಿದೆ. 23,45,428 ಮತದಾರರಿಗೆ ಅನ್‌ಮ್ಯಾಪಿಂಗ್ ಮತ್ತು 23,35,312 ಅನಾಮಲಿಸ್ ಕಾರಣಕ್ಕೆ ನೋಟಿಸ್ ನೀಡಲು ಚುನಾವಣಾ ಆಯೋಗ ಸಿದ್ದತೆ ನಡೆಸಿದೆ.

ಪ್ರಸ್ತುತ ಎಎಸ್‌ಡಿಒ ಪಟ್ಟಿಯಲ್ಲಿರುವ 1,07,96, 415 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಬರುವುದಿಲ್ಲ. ಇವರನ್ನು ಈಗಾಗಲೇ ಡಿಲಿಟ್ ಎಂದು ತೀರ್ಮಾನಿಸಲಾಗಿದೆ. ಇನ್ನು ನೋಟಿಸ್ ಪಡೆಯಲಿರುವ 43, 80,740 ಮತದಾರರಲ್ಲಿ ವಿಚಾರಣೆ ಹಾಜರಾಗಿ ದಾಖಲೆ ಸಲ್ಲಿಸದ ಕಾರಣಕ್ಕೆ ಎಷ್ಟು ಜನರು ತಮ್ಮ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ.

ಚುನಾವಣಾ ಆಯೋಗ ಎಎಸ್‌ಡಿಡಿಒ ಪಟ್ಟಿ ಮಾಡಿರುವವರಲ್ಲಿ ಅರ್ಹ ಮತದಾರರು ಒಳಗೊಂಡಿದ್ದರೆ, ಅವರು ತಮ್ಮ ಹಕ್ಕು ಉಳಿಸಿಕೊಳ್ಳಲು ಫಾರಂ-6 ಸಲ್ಲಿಸುವ ಅಗತ್ಯವಿದೆ. ಈ ಮೂಲಕ ಹೊಸ ಮತದಾರರೆಂದು ಅವರನ್ನು ಪರಿಗಣಿಸಲಾಗುತ್ತದೆ. ಫಾರಂ-6 ಜೊತೆಗೆ ಪ್ರೊಜೆನಿ ಮ್ಯಾಪಿಂಗ್ ಸ್ವಯಂ ದೃಢೀಕರಣ ಸಲ್ಲಿಸುವುದು ಕಡ್ಡಾಯವಾಗಿದೆ.

ಎಎಸ್‌ಡಿಡಿಒ, ಅನ್‌ ಮ್ಯಾಪಿಂಗ್ ಅಥವಾ ಲಾಜಿಕಲ್ ಡಿಸ್ಕ್ರಿಪೆನ್ಸಿ ಇವುಗಳಲ್ಲಿ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಬಿದ್ದರೂ, ಅವರ ಮುಂದಿರುವ ಅವಕಾಶ ಫಾರಂ-6 ಮಾತ್ರವಾಗಿದೆ. ಆದರೆ, ಫಾರಂ-6 ಸಲ್ಲಿಸುವುದಾದರೆ ಪ್ರೊಜೆನಿ ಮ್ಯಾಪಿಂಗ್ ಕಡ್ಡಾಯ ಎಂಬ ಆಯೋಗದ ಹೊಸ ನಿಯಮ ಮತ್ತೊಂದು ತಡೆಯಾಗುವ ಸಾಧ್ಯತೆ ಇದೆ.

ಎಸ್‌ಐಆರ್‌ ಕುರಿತು ಕಾರ್ಯ ಪ್ರವೃತ್ತವಾಗಿರುವ ನಾಗರಿಕ ಸಂಘಟನೆಗಳು ಚುನಾವಣಾ ಆಯೋಗದ ಎಎಸ್‌ಡಿಡಿಒ ಪಟ್ಟಿಯನ್ನು ಸಂಪೂರ್ಣ ಒಪ್ಪಿಕೊಂಡಿಲ್ಲ. ಚುನಾವಣಾ ಆಯೋಗ ಎಎಸ್‌ಡಿಡಿಒ ಪಟ್ಟಿ ಸಂಪೂರ್ಣ ಸರಿಯಾಗಿದೆ ಎಂದು ವಾದಿಸುತ್ತಿದೆ. ಆದರೆ, ಸಂಘಟನೆಗಳು ಲಕ್ಷಾಂತರ ಮಂದಿ ಅರ್ಹ ಮತದಾರರು ವ್ಯವಸ್ಥೆಯ ಲೋಪಕ್ಕೆ ಇನ್ನೂ ಡಿಲಿಟ್ ಪಟ್ಟಿಯಲ್ಲಿದ್ದಾರೆ ಎಂದು ಹೇಳುತ್ತಿವೆ.

ಎಸ್‌ಐಆರ್‌ನ ಎಎಸ್‌ಡಿಡಿಒ, ಅನ್‌ಮ್ಯಾಪ್, ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂಬ ಈ ಮೂರು ಕಾರಣಗಳಿಂದ ಕರ್ನಾಟಕದ ಒಂದೂವರೆ ಕೋಟಿ ಮತದಾರರು ಬಾದಿತರಾಗಿದ್ದಾರೆ ಎಂಬುವುದು ಸದ್ಯಕ್ಕೆ ಖಚಿತವಾಗಿದೆ. ಈ ಅಂಕಿ ಅಂಶಗಳಲ್ಲಿ ಕೊಂಚ ಬದಲಾವಣೆಯಾಗಬಹುದು.

ವ್ಯವಸ್ಥೆಯಲ್ಲಿ ಹಲವು ಲೋಪಗಳಿಗೆ. ಹಾಗಾಗಿ, ಕೇವಲ ನೋಟಿಸ್ ಪಡೆಯಲಿರುವವರನ್ನು ಮಾತ್ರ ಪರಿಗಣಿಸಿ, ಆಯೋಗ ಹೊರಗಿಟ್ಟ ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಅರ್ಹ ಮತದಾರರನ್ನು ನಾವು ಬದಿಗೊತ್ತಲು ಅಥವಾ ಮರೆತು ಬಿಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಅರ್ಹ ಮತದಾರರಿಗೂ ನ್ಯಾಯ ದೊರೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿ ಎಂಬುವುದು ನಾಗರಿಕ ಸಂಘಟನೆಗಳ ಆಗ್ರಹವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾರ್ವಜನಿಕರ ಉಪಸ್ಥಿತಿಯಿಲ್ಲದ ಮುಚ್ಚಿದ ಸ್ಥಳದಲ್ಲಿ ಜಾತಿ ನಿಂದನೆ: ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಸುಪ್ರೀಂ ಕೋರ್ಟ್ 

ಸಾರ್ವಜನಿಕ ಪ್ರವೇಶವಿಲ್ಲದ ಮತ್ತು ಸಾರ್ವಜನಿಕರ ಉಪಸ್ಥಿತಿಯಿಲ್ಲದ ನಾಲ್ಕು ಗೋಡೆಗಳ ನಡುವೆ ಅಥವಾ ಸುತ್ತುವರಿದ ಮುಚ್ಚಿದ ಜಾಗದಲ್ಲಿ ನಡೆದಿದೆ ಎನ್ನಲಾದ ಜಾತಿ ಆಧಾರಿತ ನಿಂದನೆ ಅಥವಾ ವಾಗ್ವಾದಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ...

ಮಹಾರಾಷ್ಟ್ರ: 8 ವರ್ಷದ ಬಾಲಕಿ ಶಾರ್ಟ್ಸ್ ಧರಿಸಿದ್ದಕ್ಕೆ ಕುಟುಂಬದ ಮೇಲೆ ಭೀಕರ ಹಲ್ಲೆ: ನೈತಿಕ ಪೊಲೀಸ್‌ಗಿರಿಗೆ ಸಾಕ್ಷಿಯಾದ ಸಿಂಹಗಢ ಕೋಟೆ

ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಸಿಂಹಗಢ ಕೋಟೆಯಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರವಾಸಿಗರ ಮೇಲೆ ನೈತಿಕ ಪೊಲೀಸ್‌ಗಿರಿ (ಮೊರಾಲ್ ಪೋಲಿಸಿಂಗ್) ನಡೆಸಿ ಭೀಕರ ಹಲ್ಲೆ ನಡೆಸಲಾಗಿದೆ. ಎಂಟು ವರ್ಷದ ಚಿಕ್ಕ ಬಾಲಕಿಯೊಬ್ಬಳು...

ಜೈಪುರದಲ್ಲಿ ಸರ್ಕಾರಿ ಶಾಲೆ ತಪಾಸಣೆ ವೇಳೆ ಭೀಕರ ಹಿಂಸಾಚಾರ: ‘ಸಿಜೆಪಿ’ನಾಯಕ ಅಶುತೋಷ್ ರಂಕಾ ತಂಡದ ಮೇಲೆ ದಾಳಿ, ಕಲ್ಲು ತೂರಾಟ, ಕಾರು ಧ್ವಂಸ

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರ ಸಮೀಪದ ಬಾಗ್ರು ವಿಧಾನಸಭಾ ಕ್ಷೇತ್ರದ ರಾಂಪುರ ಕನ್ವರ್‌ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ತೆರಳಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಕಾರ್ಯಕರ್ತರ ಮೇಲೆ ಉಗ್ರ...

BJP 40 ಕ್ಷೇತ್ರಗಳಲ್ಲಿ ಸೋಲಲು ಕಾಂಗ್ರೆಸ್ ಜಾಹೀರಾತೇ ಕಾರಣ: ಹೈಕೋರ್ಟ್‌ಗೆ ಬಿಜೆಪಿ ದೂರು

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಕಾಂಗ್ರೆಸ್ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ (Corruption Rate Card) ಜಾಹೀರಾತಿನಿಂದಾಗಿ ತಾನು 40 ಕ್ಷೇತ್ರಗಳಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಭಾರತೀಯ...

“ಎಫ್‌ಐಆರ್ ದಾಖಲಾಗದೆ ಇಲ್ಲಿಂದ ಕದಲಲ್ಲ” : ಡಿಸಿಪಿ ಕಚೇರಿ ಮುಂದೆ ಧರಣಿ ಕುಳಿತ ರಾಹುಲ್ ಗಾಂಧಿ

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್ ಗನ್‌ ಬಳಕೆ, ಲಾಠಿ ಚಾರ್ಜ್ ಸೇರಿದಂತೆ ಪೊಲೀಸರಿಂದ ವಿವಿಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಲೋಕಸಭೆಯ ವಿರೋಧ ಪಕ್ಷದ...

ಪೆಲೆಟ್ ಗನ್ ಫೈರಿಂಗ್ ವಿರುದ್ಧ FIR ದಾಖಲಿಸಲು ದೆಹಲಿ ಪೊಲೀಸರ ನಿರಾಕರಣೆ, ರಾಹುಲ್ ಗಾಂಧಿ ಧರಣಿ

ಜುಲೈ 20ರ ಸಂಸತ್ ಚಲೋ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ (ಅಗಸ್ಟ್ 20)...

ಎಸ್ಐಆರ್ ಹಗರಣದಂತೆ ಕಾಣುತ್ತಿದೆ: ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದ ನಟ ಕಿಶೋರ್ ಕುಮಾರ್: ಸಾರ್ವಜನಿಕ ಪ್ರತಿರೋಧಕ್ಕೆ ಕರೆ

ಬೆಂಗಳೂರು: ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪವಿತ್ರವೆನಿಸಿದ ಮತದಾನದ ಹಕ್ಕನ್ನು ಕಸಿಯುವ ಹುನ್ನಾರಗಳು ತೀವ್ರಗೊಳ್ಳುತ್ತಿದ್ದು, ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಬೇಕಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಇಂದು ಬಹುದೊಡ್ಡ ಹಗರಣದಂತೆ ಕಾಣಿಸುತ್ತಿದೆ ಎಂದು...

ಕರ್ನಾಟಕ SIR : 43.80 ಲಕ್ಷ ಜನರಿಗೆ ಬರಲಿದೆ ಚುನಾವಣಾ ಆಯೋಗದ ನೋಟಿಸ್!

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ಮತದಾರರು ತುಂಬಿ ಕೊಟ್ಟಿರುವ 4,46,35,899 ಎನ್ಯುಮರೇಷನ್ ಫಾರಂಗಳು (ಗಣತಿ ನಮೂನೆ) ಡಿಜಿಟಲೀಕರಣಗೊಂಡಿವೆ. ಈ ಪೈಕಿ 43,80,740 ಮತದಾರರಿಗೆ ದಾಖಲೆ ಕೇಳಿ...

ರಾಜಸ್ಥಾನ: ವರದಿಗಾರಿಕೆಯಲ್ಲಿ ನಿರತರಾಗಿದ್ದ ದಲಿತ ಪತ್ರಕರ್ತನ ಮೇಲೆ ಜಾತಿ ಆಧಾರಿತ ದಾಳಿ, ಭೀಕರ ಹಲ್ಲೆ, ಜಾತಿ ನಿಂದನೆ 

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಗೋಗುಂಡದಲ್ಲಿ ಕರ್ತವ್ಯನಿರತ ದಲಿತ ಪತ್ರಕರ್ತರೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಜಾತ್ಯಾತೀತ ಸಮಾಜ ತಲೆತಗ್ಗಿಸುವಂತೆ ಜಾತಿ ಆಧಾರಿತವಾಗಿ ನಿಂದಿಸಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಕುಂದುಕೊರತೆ ಆಲಿಕೆ ಕಾರ್ಯಕ್ರಮದ...

ನಕಲಿ ಔಷಧ ಮಾಫಿಯಾ: 5 ರಾಜ್ಯಗಳಿಗೆ ಹರಡಿದ ಜಾಲ, ತೀವ್ರ ಶೋಧ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ನಕಲಿ ಔಷಧ ತಯಾರಿಕೆ ಹಾಗೂ ವಿತರಣೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಈ ಅಕ್ರಮ ಜಾಲವು ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ಐದು ರಾಜ್ಯಗಳಿಗೂ ಹರಡಿರುವುದು ಬೆಳಕಿಗೆ...