HomeಅಂಕಣಗಳುKarnataka against SIRಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

ಹಾಸನ| SIR ಅಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತನಿಖೆಗೆ ನಟ ಪ್ರಕಾಶ್ ರಾಜ್ ಪಟ್ಟು

- Advertisement -
- Advertisement -

ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ನೆಪದಲ್ಲಿ ಲಕ್ಷಾಂತರ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕೇವಲ ಮತದಾರರ ವೈಯಕ್ತಿಕ ಸಮಸ್ಯೆಯಲ್ಲ, ಬದಲಿಗೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೊಲೆ ಮಾಡುವ ಸನ್ನಾಹ” ಎಂದು ಖ್ಯಾತ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಏಕಪಕ್ಷೀಯ ಕಾರ್ಯವೈಖರಿ ಮತ್ತು ರಾಜ್ಯ ಸರ್ಕಾರದ ಮೌನದ ಆಕ್ರೋಶ ವ್ಯಕ್ತಪಡಿಸಿದರು.

“ಇದು ಕೇವಲ ನಾನೊಬ್ಬನೇ ಎತ್ತುತ್ತಿರುವ ವಿಚಾರವಲ್ಲ, ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡು ನೊಂದಿರುವ ಸಾವಿರಾರು ಸಾರ್ವಜನಿಕರು ಮಾಧ್ಯಮಗಳ ಮೂಲಕ ಧ್ವನಿ ಎತ್ತುತ್ತಿದ್ದಾರೆ. ನಾವು ಸುಮಾರು 100 ಬೂತ್‌ಗಳ ಸ್ಪಷ್ಟ ದಾಖಲೆ ಹಾಗೂ ಎವಿಡೆನ್ಸ್‌ಗಳನ್ನು ಕೈಯಲ್ಲಿಟ್ಟುಕೊಂಡೇ ಆಯೋಗವನ್ನು ಪ್ರಶ್ನಿಸುತ್ತಿದ್ದೇವೆ. ಕರ್ನಾಟಕದ ಜನರಿಗೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಶಾಸಕರು ಮತ್ತು ಸರ್ಕಾರ ತಕ್ಷಣವೇ ‘ಸೋಷಿಯಲ್ ಆಡಿಟ್’ ನಡೆಸಿ, ಸಂತ್ರಸ್ತ ಮತದಾರರ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯದ ಮೊರೆ ಹೋಗಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಜನಚಳವಳಿ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.

“ಈ ದೇಶದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದು, ದಶಕಗಳಿಂದ ಸಕ್ರಿಯವಾಗಿ ಮತ ಚಲಾಯಿಸುತ್ತಿರುವ ನಾನೇ ಏಕೆ ಹೊಸದಾಗಿ ‘ಫಾರ್ಮ್ ನಂ. 6’ ತುಂಬಬೇಕು? ಕೇವಲ ಮನೆ ಬದಲಾವಣೆಯಾಗಿದ್ದರೆ ‘ಫಾರ್ಮ್ ನಂ. 8’ ನೀಡಲು ಅವಕಾಶವಿದೆ. ಅದನ್ನು ಬಿಟ್ಟು ‘ನಾನು ಹೊಸ ಮತದಾರ, ಹಿಂದೆ ಎಲ್ಲೂ ವೋಟ್ ಮಾಡಿಲ್ಲ’ ಎಂದು ಸುಳ್ಳು ಡಿಕ್ಲರೇಶನ್ ನೀಡುವಂತೆ ಜನರನ್ನು ಒತ್ತಾಯಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ 85 ವರ್ಷದ ಹಿರಿಯ ನಾಗರಿಕರು ಪರಿಶೀಲನೆ ವೇಳೆ ಮನೆಯಲ್ಲಿ ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ‘ಆಬ್ಸೆಂಟ್’ ಎಂದು ಪಟ್ಟಿಯಿಂದ ತೆಗೆದುಹಾಕಿ, ಹೊಸ ಮತದಾರರನ್ನಾಗಿ ಅರ್ಜಿ ಸಲ್ಲಿಸಲು ಹೇಳುವುದು ಎಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆ?” ಎಂದು ತೀವ್ರವಾಗಿ ಪ್ರಶ್ನಿಸಿದರು.

“ಕೊಲೆಗಾರ ಕೊಲೆ ಮಾಡುವಾಗ ಸಿಕ್ಕಿಬೀಳುವುದಿಲ್ಲ, ಸಾಕ್ಷಿಗಳನ್ನು ಅಳಿಸುವಾಗ ಸಿಕ್ಕಿಬೀಳುತ್ತಾನೆ. ಅದೇ ರೀತಿಯಲ್ಲಿ ಇಡೀ ದೇಶದಲ್ಲಿ 13 ಕೋಟಿ ಮತದಾರರನ್ನು ಕೈಬಿಟ್ಟು ಕಳ್ಳತನ ಮಾಡಿದ ಮೇಲೆ, ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ಚುನಾವಣಾ ಆಯೋಗವು ನಿಯಮ ಸರಿಪಡಿಸುವ ಮಾತನಾಡುತ್ತಿದೆ. ಆಯೋಗ ನೀಡಿರುವ ಇತ್ತೀಚಿನ ಸ್ಪಷ್ಟನೆಯು ಅವರ ಕಾರ್ಯವೈಖರಿಯ ಸಮರ್ಥನೆಯಲ್ಲ, ಬದಲಿಗೆ ಅವರು ಎಸಗಿರುವ ಅಪರಾಧದ ‘ತಪ್ಪೊಪ್ಪಿಗೆ’ (Confession)” ಎಂದರು.

“ದೇಶದಲ್ಲಿ 4 ಲಕ್ಷ ನುಸುಳುಕೋರರನ್ನು ಹುಡುಕುತ್ತೇವೆ ಎಂದು ಹೊರಟು, ಕೇವಲ ಕರ್ನಾಟಕ ಒಂದರಲ್ಲೇ ಸುಮಾರು ಒಂದೂವರೆ ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಈ ಪ್ರಕ್ರಿಯೆಯನ್ನು ಮತದಾರರ ಹೆಸರನ್ನು ಸೇರಿಸಲು ಮಾಡಿದಿರಾ, ವ್ಯವಸ್ಥೆಯನ್ನು ಶುದ್ಧೀಕರಿಸಲು ಮಾಡಿದಿರಾ ಅಥವಾ ಇಡೀ ಪ್ರಜಾಪ್ರಭುತ್ವವನ್ನೇ ಸಾಯಿಸಲು ಮಾಡಿದಿರಾ?” ಎಂದು ಅವರು ಆಕ್ರೋಶ ಹೊರಹಾಕಿದರು.

“ರಾಜಕಾರಣಿಗಳ ಕಣ್ಣಿಗೆ ಸಾಮಾನ್ಯ ಜನರು ಕೇವಲ ‘ವೋಟ್ ಮಷಿನ್’ ಆಗಿ ಕಾಣಿಸುತ್ತಿದ್ದಾರೆ. ನೋಟು ರದ್ದತಿಯ ಸಮಯದಲ್ಲಿ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ನೊಂದವರು ಇದೇ ಸಾಮಾನ್ಯ ಜನರು. ಚುನಾವಣೆ ಬಂದಾಗ ಲಾರಿ-ಬಸ್‌ಗಳಲ್ಲಿ ಜನರನ್ನು ಕರೆದೊಯ್ಯುವ ನಾಯಕರು, ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಬಡವರ ನೆರವಿಗೆ ಬರಲಿಲ್ಲ. ಪ್ರಜಾಪ್ರಭುತ್ವದ ಉಳಿವಿಗಾಗಿ, ಕಳೆದ ಮೂರು ವರ್ಷಗಳಲ್ಲಿ ಚುನಾವಣಾ ಆಯೋಗ ತೆಗೆದುಕೊಂಡಿರುವ ಎಲ್ಲಾ ನಿರ್ಧಾರಗಳು, ಕಡತಗಳು ಹಾಗೂ ಆಂತರಿಕ ಸಭೆಗಳ ದಾಖಲೆಗಳನ್ನು ಸುಪ್ರೀಂ ಕೋರ್ಟ್ ತನ್ನ ನೇರ ಸುಪರ್ದಿಗೆ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸಬೇಕು” ಎಂದು ಪ್ರಕಾಶ್ ರಾಜ್ ಪಟ್ಟು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ K.L ಅಶೋಕ್, ಗಿರಿಜಾ ಸೇರಿದಂತೆ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಧಿಕಾರಿಯ ಡೆತ್‌ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಹೆಸರು!: ಮತ್ತೆ ಮುನ್ನೆಲೆಗೆ ಬಂದ ಹಳೆ ಕೇಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ದೇಶದಾದ್ಯಂತ ಆಕ್ರೋಶದ ಅಲೆ ಎದ್ದಿರುವ ಈ ಸಂದರ್ಭದಲ್ಲಿ, ಸುಮಾರು ಎರಡು ದಶಕಗಳ ಹಿಂದೆ, ಮಲೇಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಗ್ಯಾನೇಶ್ ಕುಮಾರ್...

SIR ರದ್ದುಗೊಳಿಸಿ, ಗ್ಯಾನೇಶ್ ಕುಮಾರ್‌ನನ್ನು ವಜಾಗೊಳಿಸುವಂತೆ ಆಗ್ರಹಿಸಿ ಎಡಪಕ್ಷಗಳಿಂದ ಪ್ರತಿಭಟನೆ

ದೇಶಾದ್ಯಂತ ನಡೆಯುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದ್ದು, ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಅವರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಎಡಪಕ್ಷಗಳು ಆರೋಪಿಸಿವೆ. ಈ ಪ್ರಕ್ರಿಯೆಯನ್ನು...

ಗುವಾಹಟಿಯಲ್ಲಿ ಸಿಜೆಪಿ ಸಭೆಗೆ ಪೊಲೀಸರಿಂದ ಅಡ್ಡಿ; ಅಶುತೋಷ್ ರಾಂಕಾ ಮತ್ತು ತಂಡ ವಶಕ್ಕೆ

ಅಸ್ಸಾಂ ಪೊಲೀಸರು ಭಾನುವಾರ (ಸೆ.27) ಬೆಳಿಗ್ಗೆ ಗುವಾಹಟಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ'ಯ (ಸಿಜೆಪಿ) ಸಹ-ಸಂಯೋಜಕ ಅಶುತೋಷ್ ರಾಂಕಾ ಮತ್ತು ಸಂಘಟನೆಯ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂ ಸಚಿವಾಲಯದ ಸಮೀಪದಲ್ಲಿ...

ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!

ಚುನಾವಣಾ ಆಯೋಗದಲ್ಲಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಮತ ಕಡಿತ ಹಾಗೂ ಏಕಪಕ್ಷೀಯ ನಿರ್ಧಾರಗಳ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಹಾಲಿ ಮುಖ್ಯ ಚುನಾವಣಾ ಆಯುಕ್ತ...

ಕರ್ನಾಟಕ ಎಸ್ಐಆರ್: ಅಳಿಸುವಿಕೆಗೆ ಸಂಬಂಧಿಸಿದ ದತ್ತಾಂಶದಿಂದ ಸುಮಾರು 6000 ಮತದಾರರು ನಾಪತ್ತೆ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಂಕಿಅಂಶಗಳ ವ್ಯತ್ಯಾಸ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ, ಚುನಾವಣಾ ಆಯೋಗದ ಅಂಕಿಅಂಶಗಳಲ್ಲೇ ಸುಮಾರು 6 ಸಾವಿರ ಮತದಾರರ ಅಳಿಸುವಿಕೆಗೆ ಸಂಬಂಧಿಸಿದ ವ್ಯತ್ಯಾಸ ಬೆಳಕಿಗೆ ಬಂದಿದೆ. ಮತದಾರರ...

Breaking News: ಎಸ್‌ಐಆರ್‌ನಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್: ಕರ್ನಾಟಕದ ಅಂಕಿಅಂಶಗಳು ಎತ್ತಿದ ಗಂಭೀರ ಪ್ರಶ್ನೆಗಳು

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕರ್ನಾಟಕದಲ್ಲಿ ಮುಂದುವರಿಯುತ್ತಿರುವ ಬೆನ್ನಲ್ಲೇ, ಅದರ ಲಿಂಗಾನುಪಾತದ ಅಂಕಿಅಂಶಗಳು ಗಂಭೀರವಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಲಭ್ಯವಿರುವ 34 ಜಿಲ್ಲೆ/ನಗರ ಆಡಳಿತ ಘಟಕಗಳ...

ಎಸ್ಐಆರ್‌ನಲ್ಲಿ ಬದುಕಿದ್ದರೂ ‘ಮೃತ’, ಮನೆಯಲ್ಲಿದ್ದರೂ ‘ಸ್ಥಳಾಂತರ’: ಚಿಕ್ಕಬಳ್ಳಾಪುರದ ಸಂತ್ರಸ್ತರನ್ನು ಭೇಟಿಯಾದ ಪ್ರಕಾಶ್ ರಾಜ್ 

ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದುಕಿರುವ ಮತದಾರರನ್ನೇ ಮೃತಪಟ್ಟವರು ಎಂದು ಗುರುತಿಸಿರುವ ಆರೋಪಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕೇಳಿಬಂದಿವೆ. ಎಸ್ಐಆರ್ ಪರಿಶೋಧನೆ-ಪ್ರತಿರೋಧ ಜಾಥಾದ ಭಾಗವಾಗಿ ಗುಡಿಬಂಡೆ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದ...

“ಚುನಾವಣಾ ಆಯೋಗದ ‘ಕೊಳೆತ ವ್ಯವಸ್ಥೆ’ ಗ್ಯಾನೇಶ್ ಕುಮಾರ್ ಅವರಿಂದಷ್ಟೇ ಶುರುವಾಗಿದ್ದಲ್ಲ!” – ಬಂಗಾಳ ಚುನಾವಣೆಯ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ಕಿಶೋರ್

ಭಾರತೀಯ ಚುನಾವಣಾ ಆಯೋಗದ ಒಳಗಿನ 'ಸರ್ವಾಧಿಕಾರಿ' ಧೋರಣೆ, ಇಬ್ಬರು ಆಯುಕ್ತರ ಬಂಡಾಯ ಮತ್ತು ನಿಯಮಬಾಹಿರ ನಿರ್ಧಾರಗಳ ಕುರಿತು ಇಡೀ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಖ್ಯಾತ ಚುನಾವಣಾ ತಂತ್ರಜ್ಞ ಹಾಗೂ 'ಜನ್...

ಎಸ್ಐಆರ್ ಅಕ್ರಮ: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಪೊಲೀಸರಿಂದ ಹಲವೆಡೆ ಅಶ್ರುವಾಯು, ಜಲಫಿರಂಗಿ ಪ್ರಯೋಗ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದು, ಕನಿಷ್ಠ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಚುನಾವಣಾ...

ಶೀಘ್ರವೇ ಪೌರಕಾರ್ಮಿಕರ ಉಪಹಾರ ಭತ್ಯೆ ₹70 ಕ್ಕೆ ಹೆಚ್ಚಿಸುವೆ: ಸಿಎಂ ಡಿ.ಕೆ. ಶಿವಕುಮಾರ್

ಪೌರಕಾರ್ಮಿಕರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಪೌರಕಾರ್ಮಿಕರ ಉಪಹಾರ ಭತ್ಯೆಯನ್ನು ₹35 ರಿಂದ ₹70 ಕ್ಕೆ ಏರಿಕೆ ಮಾಡಿ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು...