HomeಅಂಕಣಗಳುKarnataka against SIRMysore| SIR ವಿರುದ್ಧ ಸರ್ಕಾರ ವಿಶೇಷ ಅಧಿವೇಶನ ನಡೆಸಲಿ: ಪ್ರಕಾಶ್ ರಾಜ್

Mysore| SIR ವಿರುದ್ಧ ಸರ್ಕಾರ ವಿಶೇಷ ಅಧಿವೇಶನ ನಡೆಸಲಿ: ಪ್ರಕಾಶ್ ರಾಜ್

- Advertisement -
- Advertisement -

ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಬಡ ಹಾಗೂ ಅರ್ಹ ಮತದಾರರ ಹಕ್ಕು ಕಸಿಯಲಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ನಾಗರಿಕ ಸಂಘಟನೆಗಳು ಸಂಗ್ರಹಿಸಿರುವ ‘ಎಸ್‌ಐಆರ್ ಪರಿಶೋಧನಾ ವರದಿ’ಯನ್ನು ಬುಧವಾರ ಮುಖ್ಯಮಂತ್ರಿಗಳಿಗೆ ಒಪ್ಪಿಸಿ, ತಕ್ಷಣವೇ ರಾಜ್ಯ ಶಾಸನಸಭೆಯ ವಿಶೇಷ ಅಧಿವೇಶನ ಕರೆಯಲು ಒತ್ತಾಯಿಸಲಾಗುವುದು ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ತಿಳಿಸಿದ್ದಾರೆ.

ಮೈಸೂರಿನ ‘ಎಸ್‌ಐಆರ್‌ ವಿರೋಧಿ ಕರ್ನಾಟಕ’ ಸಂಘಟನೆಯು ರಮಾಗೋವಿಂದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಎಸ್‌ಐಆರ್‌ ಸಂತ್ರಸ್ತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾಗರಿಕ ಸಂಘಟನೆಗಳು 100ಕ್ಕೂ ಹೆಚ್ಚು ಬೂತ್‌ಗಳನ್ನು ನೇರವಾಗಿ ಸಂಪರ್ಕಿಸಿ, ಎಸ್‌ಐಆರ್‌ನಿಂದ ತೊಂದರೆಗೆ ಒಳಗಾದವರ ನೋವನ್ನು ದಾಖಲಿಸಿವೆ. ಹಲವು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನರ ಕಣ್ಣೀರ ಕಥೆಗಳು ಕೇಳಿಸಿದವು. ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಈ ಕುರಿತು ಸಾಮಾಜಿಕ ಪರಿಶೋಧನೆ ನಡೆಸಿ, ಸಂತ್ರಸ್ತರ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರಿನ ಕುವೆಂಪುನಗರದ ರಮಗೋವಿಂದ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಂವಾದ

ಚುನಾವಣಾ ಆಯೋಗದ ಸರ್ವಾಧಿಕಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಪ್ರಕಾಶ್ ರಾಜ್, “ಇಂದು ಗಣೇಶ ವಿಸರ್ಜನೆ ಬದಲು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ವಿಸರ್ಜನೆ ನಡೆಯಬೇಕಿದೆ. ನವೆಂಬರ್‌ನ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ವಿರೋಧ ಪಕ್ಷಗಳು ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೋಷಾರೋಪಣ ಚಳವಳಿ ನಡೆಸಬೇಕು. ದೇಶದಲ್ಲಿ ಸರ್ಕಾರಿ ಫೈಲ್‌ಗಳು ಸುಟ್ಟುಹೋಗುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ, 2023ರ ನಂತರ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಧಾರಗಳು ಹಾಗೂ ನೀತಿಗಳ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ ತಕ್ಷಣವೇ ತನ್ನ ವಶಕ್ಕೆ ಪಡೆದು ತುರ್ತು ಪರಿಶೀಲನೆ ನಡೆಸಬೇಕು” ಎಂದು ಆಗ್ರಹಿಸಿದರು.

“ನ್ಯಾಯಾಲಯವು ಎಸ್‌ಐಆರ್‌ ಮೂಲಕ ನಡೆದಿರುವ ಅಕ್ರಮ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ದೇಶದ 13 ಕೋಟಿ ಮತದಾರರನ್ನು ವಾಪಸ್‌ ಪಟ್ಟಿಗೆ ಸೇರಿಸಿ ಮತ್ತೆ ಪ್ರಕ್ರಿಯೆ ಆರಂಭಿಸಬೇಕು. ಬೀದಿಗೆ ಇಳಿದು ಹೋರಾಡುವುದೊಂದೇ ನಮಗಿರುವ ದಾರಿ. ಅಂಬೇಡ್ಕರ್ ಅವರ ಸಂವಿಧಾನವನ್ನು ಕೊಲ್ಲಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾರನ್ನು ನೆಮ್ಮದಿಯಾಗಿ ತಪ್ಪಿಸಿಕೊಳ್ಳಲು ಬಿಡಬಾರದು. ಈ ಜನಪರ ಹೋರಾಟಕ್ಕೆ ಯಾವ ಪಕ್ಷ ಬಂದರೂ ಸೇರಿಸಿಕೊಳ್ಳುತ್ತೇವೆ, ಬಿಜೆಪಿಯ ಪ್ರತಾಪ ಸಿಂಹ ಬಂದರೂ ಸ್ವಾಗತ” ಎಂದು ಕರೆ ನೀಡಿದರು.

ಸಂವಾದದಲ್ಲಿ ಮತದಾರರ ಪಟ್ಟಿಯಿಂದ ವಂಚಿತರಾದ ಹಾಗೂ ಹಲವು ಸಂಘಟನೆಗಳು ಭಾಗಿಯಾಗಿದ್ದವು. ಚಿಂತಕ ಕೊಡಗನಹಳ್ಳಿ ರಾಮಯ್ಯ, ಬಡಗಲಾಪುರ ನಾಗೇಂದ್ರ. ಮಹಿಳಾ ಹೋರಾಟಗಾರ್ತಿ ರತಿ ರಾವ್, ಮುಕ್ತಾರ್ ಅಹಮ್ಮದ್, ನೂರ್ ಜಾಹಿರ್ ಖಾನ್, ಜಯಪುರದ ಮಹಮ್ಮದ್ ಆಲಿ, ಮಾಜಿ ಆಯುಕ್ತ ಇಬ್ರಾಹಿಂ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯರೇ ಪರಿಸ್ಥಿತಿ ಬದಲಿಸುತ್ತಾರೆ’: ಸುರಕ್ಷತೆ ಹೆಸರಿನಲ್ಲಿ ನಿರ್ಬಂಧ, ಅತ್ಯಾಚಾರ, ಲಿಂಗಾಧಾರಿತ ಹಿಂಸೆ ವಿರುದ್ಧ ದೆಹಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ನವದೆಹಲಿ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವ ಬೆನ್ನಲ್ಲೇ, ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯ ಮತ್ತು ಚಲನವಲನದ ಮೇಲೆಯೇ ನಿರ್ಬಂಧ ಹೇರುವ ಕ್ರಮಗಳ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಬೀದಿಗಿಳಿದು...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಅವರ ಮೂರನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು...

SIR: ‘ಫಾರ್ಮ್ 6’ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!

ಹೊಸ ಮತದಾರರ ನೋಂದಣಿಗೆ ಕಾಗದಪತ್ರಗಳ ಅಡೆತಡೆ ಒಡ್ಡುತ್ತಿದ್ದ ತನ್ಮೂಲಕ ಹಕ್ಕು ವಂಚಿತಗೊಳಿಸುತ್ತಿದ್ದ ಆರೋಪ ಎದುರಿಸುತ್ತಿದ್ದ ಕೇಂದ್ರ ಚುನಾವಣಾ ಆಯೋಗವು ಸಾರ್ವಜನಿಕ ಮತ್ತು ಕಾನೂನಾತ್ಮಕ ಒತ್ತಡದ ಹಿನ್ನೆಲೆಯಲ್ಲಿ ಭಾಗಶಃ ಹಿಂದೆ ಸರಿದಿದೆ. 'ವಿಶೇಷ ತೀವ್ರ...

ಹೈದರಾಬಾದ್ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ : ABVPಗೆ ಸೋಲು; ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಆಯ್ಕೆ

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ASA), ದಲಿತ ಸ್ಟೂಡೆಂಟ್ಸ್ ಯೂನಿಯನ್ (DSU), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಟ್ರೈಬಲ್ ಸ್ಟೂಡೆಂಟ್ಸ್ ಫೋರಂ (TSF) ಒಳಗೊಂಡ...

CWC ಸಭೆಯಲ್ಲಿ ನಿತೀಶ್ ಕುಮಾರ್ ವಿಚಾರ ಪ್ರಸ್ತಾಪ: ಸೋನಿಯಾ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ನಡುವೆ ಭಿನ್ನಾಭಿಪ್ರಾಯ

ಜೆಡಿಯು ನಾಯಕ ನಿತೀಶ್ ಕುಮಾರ್ 2024ರಲ್ಲಿ 'ಇಂಡಿಯಾ' (INDIA) ಮೈತ್ರಿಕೂಟದಿಂದ ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಂತರಿಕ ಸಭೆಯಲ್ಲಿ ನಾಯಕರ ನಡುವೆ ಗಂಭೀರ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ...

‘ಇಸಿಐನೆಟ್’ ಸಾಫ್ಟ್‌ವೇರ್ ಲೋಪ: ಸ್ಥಳೀಯ ಅಧಿಕಾರಿಗಳ ಶಾಸನಬದ್ಧ ಅಧಿಕಾರ ಹರಣ ಆರೋಪಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಹಾರಾಷ್ಟ್ರ ಸಿಇಒ ಸುದೀರ್ಘ ಪತ್ರ!

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಜಾರಿಗೆ ತಂದಿರುವ 'ಇಸಿಐನೆಟ್' (ECINet) ಕೇಂದ್ರೀಕೃತ ಸಾಫ್ಟ್‌ವೇರ್, ಕಾನೂನುಬದ್ಧವಾಗಿ ಸ್ಥಳೀಯ ಮತದಾರ ನೋಂದಣಿ ಅಧಿಕಾರಿಗಳಿಗೆ (ERO) ನೀಡಲಾಗಿರುವ ಶಾಸನಬದ್ಧ ಅಧಿಕಾರಗಳನ್ನು ಕಸಿಯುತ್ತಿದೆ ಎಂಬ ಗಂಭೀರ ಆರೋಪ ಎದುರಾಗಿದೆ....

ಸಂಭಾಲ್ ಹಿಂಸಾಚಾರ ಪ್ರಕರಣ: ಮುಸ್ಲಿಂ ವ್ಯಕ್ತಿಯ NSA ಬಂಧನ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಯುಪಿ ಸರ್ಕಾರಕ್ಕೆ ₹10 ಲಕ್ಷ ದಂಡ

ನವದೆಹಲಿ: ಸಂಭಾಲ್‌ನಲ್ಲಿ 2024ರ ನವೆಂಬರ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಲಾ ಅಫ್ರೋಜ್ ಎಂಬುವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ತಡೆಗಟ್ಟುವ...

ಸಂಭಾಲ್ ಹಿಂಸಾಚಾರ | ಮುಲ್ಲಾ ಅಫ್ರೋಝ್ ಎನ್‌ಎಸ್‌ಎ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ; ಯುಪಿ ಸರ್ಕಾರಕ್ಕೆ 10 ಲಕ್ಷ ರೂ. ದಂಡ

2024ರ ಸಂಭಾಲ್ ಹಿಂಸಾಚಾರದ ರೂವಾರಿ ಎಂದು ಆರೋಪಿಸಲಾದ ಮುಲ್ಲಾ ಅಫ್ರೋಝ್ ಅವರನ್ನು 'ರಾಷ್ಟ್ರೀಯ ಭದ್ರತಾ ಕಾಯ್ದೆ, 1980'ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 29) ರದ್ದುಗೊಳಿಸಿದೆ....

ಔಷಧ ಬೆಲೆಗಳ ಹೆಸರಲ್ಲಿ ನಡೆಯುತ್ತಿದೆ ಲೂಟಿ: ಆಸ್ಪತ್ರೆ-ಮೆಡಿಕಲ್‌ಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ

ದೇಶದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (MRP) ಹೆಸರಿನಲ್ಲಿ ಔಷಧಗಳ ಬೆಲೆಯನ್ನು ಮನಬಂದಂತೆ ಹೆಚ್ಚಿಸಿ ಸಾಮಾನ್ಯ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ 'ಅಮಾನವೀಯ ಲೂಟಿ' ಎಂದು ತೀವ್ರವಾಗಿ ಖಂಡಿಸಿದೆ. ಔಷಧಗಳ ನೈಜ ಖರೀದಿ...

ಬಂಗಾಳ ಎಸ್‌ಐಆರ್‌ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ‘ಇವು ಕೇವಲ ಉಪಚುನಾವಣೆಗಳು’ ಎಂದ ಸಿಜೆಐ ಸೂರ್ಯಕಾಂತ್ ವಿರುದ್ಧ ಜನಾಕ್ರೋಶ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೊರಗಿಡಲಾದ ಮತದಾರರಿಗೆ ಸಂಬಂಧಿಸಿದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಅರ್ಜಿದಾರರು ಅಕ್ಟೋಬರ್...