HomeಮುಖಪುಟSIR ನಿರ್ಧಾರಗಳ ಕುರಿತು 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಇಂಡಿಯಾ ಒಕ್ಕೂಟ ಅರ್ಜಿ :...

SIR ನಿರ್ಧಾರಗಳ ಕುರಿತು 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಇಂಡಿಯಾ ಒಕ್ಕೂಟ ಅರ್ಜಿ : ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

- Advertisement -
- Advertisement -

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ‘ಇಂಡಿಯಾ’ ಒಕ್ಕೂಟದ ನಾಯಕರು, ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಇಂದು (ನವೆಂಬರ್ 17) ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ.

ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡು ಚುನಾವಣಾ ಆಯೋಗ ಸಲ್ಲಿಸಿರುವ ಪ್ರತಿ-ಅಫಿಡವಿಟ್‌ಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು ಅನುಮೋದನೆ ನೀಡಿದ್ದಾರೆಯೇ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಅರ್ಜಿದಾರರು ಕೇಳಿದ್ದಾರೆ.

ಈ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅ. 26ರಂದು ಚುನಾವಣಾ ಆಯೋಗ ಸಲ್ಲಿಸಿರುವ ಪ್ರತಿ-ಅಫಿಡವಿಟ್‌ನಲ್ಲಿ, ಸರ್ವಾನುಮತದ ನಿರ್ಧಾರಗಳು ಮತ್ತು ಅನುಮೋದನೆಗಳ ಬಗ್ಗೆ ಹೇಳಲಾಗಿದೆಯೇ ಹೊರತು, ಅದಕ್ಕೆ ಸಂಬಂಧಿಸಿದ ದಿನಾಂಕಗಳು, ಕಡತದ ಟಿಪ್ಪಣಿಗಳು, ದಾಖಲೆಗಳು ಅಥವಾ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಅರ್ಜಿಯಲ್ಲಿ ವಾದಿಸಿರುವುದಾಗಿ ಹಿರಿಯ ವಕೀಲ ಕಪಿಲ್ ಸಿಬಲ್ (ರಾಹುಲ್ ಗಾಂಧಿ ಪರ) ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದ್ದರಿಂದ, ತಾವು ಪ್ರಶ್ನಾವಳಿಗಳನ್ನು (ಇಂಟರೋಗೇಟರೀಸ್) ಕೇಳಿದ್ದು, ಈ ಕುರಿತು ನೋಟಿಸ್ ಜಾರಿ ಮಾಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಈ ಅರ್ಜಿಯ ಕುರಿತು ಚುನಾವಣಾ ಆಯೋಗಕ್ಕೆ ಗಂಭೀರ ಆಕ್ಷೇಪಗಳಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಂತಿಮವಾಗಿ, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಡಿ. 9ಕ್ಕೆ ಮುಂದೂಡಿದೆ. ತನ್ನ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ ಪೀಠ, ಪ್ರಶ್ನಾವಳಿಗಳ ಕುರಿತು ಅರ್ಜಿದಾರರ ವಾದವನ್ನು ಆಲಿಸಿದ ನಂತರ ಆದೇಶ ಹೊರಡಿಸುವುದಾಗಿ ತಿಳಿಸಿದೆ.

ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ್ ಯೆತೂರು ಅವರು ಸಲ್ಲಿಸಿರುವ ಅಫಿಡವಿಟ್‌ಗೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಅನುಮೋದನೆ ನೀಡಿದ್ದಾರೆಯೇ ಎಂದು ಇಂಡಿಯಾ ಒಕ್ಕೂಟದ ನಾಯಕರು ಸಲ್ಲಿಸಿರುವ ಅರ್ಜಿಯಲ್ಲಿ ನಿರ್ದಿಷ್ಟವಾಗಿ ಪ್ರಶ್ನಿಸಲಾಗಿದೆ. ಅಫಿಡವಿಟ್‌ಗೆ ಅನುಮೋದನೆಯನ್ನು ಸಭೆಯಲ್ಲಿ ನೀಡಲಾಗಿದೆಯೇ, ಕಡತದ ಚಲಾವಣೆಯ ಮೂಲಕ ನೀಡಲಾಗಿದೆಯೇ ಅಥವಾ ಎಲೆಕ್ಟ್ರಾನಿಕ್ ಸಂವಹನದ ಮೂಲಕ ನೀಡಲಾಗಿದೆಯೇ ಎಂದು ಅವರು ಯೆತೂರು ಅವರನ್ನು ಕೇಳಿದ್ದಾರೆ. ಅಲ್ಲದೆ, ಚುನಾವಣಾ ಆಯೋಗದ ಮೂವರು ಸದಸ್ಯರಲ್ಲಿ ಪ್ರತಿಯೊಬ್ಬರೂ ಅಫಿಡವಿಟ್‌ಗೆ ಹೇಗೆ ಅನುಮೋದನೆ ನೀಡಿದ್ದಾರೆ ಎಂಬುದನ್ನು ತೋರಿಸುವ ಸಂಬಂಧಿತ ದಿನಾಂಕಗಳು ಮತ್ತು ದಾಖಲೆಗಳನ್ನು ಸಹ ಅವರು ಕೋರಿದ್ದಾರೆ.

ಈ ಪ್ರತಿ-ಅಫಿಡವಿಟ್ ಅನ್ನು “ಚುನಾವಣಾ ಆಯೋಗದ ಮೂವರು ಸದಸ್ಯರ ಸರ್ವಾನುಮತದ ನಿರ್ಧಾರದಿಂದ ಈ ಗೌರವಾನ್ವಿತ ನ್ಯಾಯಾಲಯದ ಮುಂದೆ ಸಲ್ಲಿಸಲು ಅನುಮೋದಿಸಲಾಗಿದೆ” ಎಂದು ಚುನಾವಣಾ ಆಯೋಗವು ತಿಳಿಸಿತ್ತು. ಈ ಅನುಮೋದನೆಯ ದಿನಾಂಕಗಳು, ಅದನ್ನು ತಿಳಿಸಿದ ವಿಧಾನ, ಅದನ್ನು ದಾಖಲಿಸಲಾದ ಕಡತಗಳು ಅಥವಾ ದಾಖಲೆಗಳ ವಿವರಗಳನ್ನು ಹಾಗೂ ಯಾವುದೇ ಸದಸ್ಯರು ತಿದ್ದುಪಡಿಗಳನ್ನು ಸೂಚಿಸಿದ್ದಾರೆಯೇ ಅಥವಾ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆಯೇ ಎಂಬ ಮಾಹಿತಿಯನ್ನು ಅರ್ಜಿದಾರರು ಕೋರಿದ್ದಾರೆ.

SIR ನಿರ್ಧಾರಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳ ವಿವರಗಳು

ಎಸ್‌ಐಆರ್ ನಿರ್ಧಾರಗಳು, ಇಸಿಐನೆಟ್, ಫಾರ್ಮ್ 6 ಮತ್ತು ಮೇಲ್ಮನವಿಗಳ ಸಲ್ಲಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರು ದಾಖಲಿಸಿರುವ ಯಾವುದೇ ಆಕ್ಷೇಪಣೆಗಳು, ಭಿನ್ನಾಭಿಪ್ರಾಯಗಳು ಅಥವಾ ತಕರಾರುಗಳ ವಿವರಗಳನ್ನು ಸಹ ಅರ್ಜಿದಾರರು ಕೋರಿದ್ದಾರೆ. 19.02.2025 ಮತ್ತು 26.10.2026 ರ ನಡುವೆ ಈ ನಿರ್ಧಾರಗಳಿಗೆ ಸಂಬಂಧಿಸಿದಂತೆ ತಾವು ಎಷ್ಟು ಬಾರಿ ಲಿಖಿತವಾಗಿ ಆಕ್ಷೇಪಣೆ, ಭಿನ್ನಾಭಿಪ್ರಾಯ ಅಥವಾ ತಕರಾರುಗಳನ್ನು ದಾಖಲಿಸಿದ್ದೀರಿ ಎಂಬುದನ್ನು ತಿಳಿಸುವಂತೆ ಚುನಾವಣಾ ಆಯುಕ್ತರನ್ನು ಕೇಳಲಾಗಿದೆ.

ಇದಲ್ಲದೆ, ಅಧಿಕೃತ ದಾಖಲೆಗಳ ಪ್ರಕಾರ ಈ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆಯೇ ಅಥವಾ ಬಹುಮತದಿಂದ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ತಿಳಿಯಲು ವಿರೋಧ ಪಕ್ಷದ ನಾಯಕರು ಬಯಸಿದ್ದಾರೆ.

































ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖುಲಾಸೆಗೊಂಡರೂ 7 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ₹30 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್; ಅಕ್ರಮ ಬಂಧನಕ್ಕೆ ಪರಿಹಾರ ನೀಡಲು ಕಾನೂನು ರಚಿಸುವಂತೆ ಶಿಫಾರಸು

ಖುಲಾಸೆ ಆದೇಶದ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸುವಲ್ಲಿ ಉಂಟಾದ ಸಂವಹನದ ಕೊರತೆಯಿಂದಾಗಿ, ನಿರ್ದೋಷಿ ಎಂದು ಸಾಬೀತಾದ ನಂತರವೂ ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸೋಮವಾರ (ನವೆಂಬರ್...

SIR ನಿರ್ಧಾರಗಳಿಗೆ ಮೂವರು ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂಬುದಕ್ಕೆ ಚುನಾವಣಾ ಆಯೋಗ ದಾಖಲೆ ಸಲ್ಲಿಸಿಲ್ಲ : ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರ ಹೇಳಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ ಭಾರತೀಯ ಚುನಾವಣಾ...

‘ನೋವು, ಆಘಾತ, ಅಪನಂಬಿಕೆಯಲ್ಲಿದ್ದೇನೆ’: ಇಬ್ಬರು ಅತ್ಯಾಚಾರ ಅಪರಾಧಿಗಳ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಆದೇಶದ ಕುರಿತು ಬಿಲ್ಕಿಸ್ ಬಾನು ಪ್ರತಿಕ್ರಿಯೆ

ಗುಜರಾತ್ ಗಲಭೆಯ ಸಂದರ್ಭದಲ್ಲಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ತಮ್ಮ ಕುಟುಂಬ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳ ಪೈಕಿ ಇಬ್ಬರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿರುವುದು ತನಗೆ...

ಕಿಶ್ತ್ವಾರ್ ಪೊಲೀಸರ ಹತ್ಯೆ : ‘ಮಸೀದಿ ಘೋಷಣೆ’ ಕುರಿತ ಬಿಜೆಪಿ ಶಾಸಕಿಯ ಹೇಳಿಕೆಗೆ ಆಕ್ರೋಶ; ತನಿಖೆಗೆ ಕಾಂಗ್ರೆಸ್ ಆಗ್ರಹ

ಕಿಶ್ತ್ವಾರ್‌ನಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ಹತ್ಯೆಯ ಕುರಿತು ಹಲವು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಈ ಘಟನೆಯನ್ನು ಮಸೀದಿ ಘೋಷಣೆಗಳೊಂದಿಗೆ ತಳುಕು ಹಾಕುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಯತ್ನಕ್ಕೆ ಸ್ಥಳೀಯ...

SIR ವಿವಾದ: ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಸುಪ್ರೀಂ ಕೋರ್ಟ್ ಅನುಮತಿ ಕೋರಿದ ರಾಹುಲ್ ಗಾಂಧಿ!

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಏಕಪಕ್ಷೀಯ ನಿರ್ಧಾರಗಳು ಮತ್ತು ಬೃಹತ್ ಪ್ರಮಾಣದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಆರೋಪಗಳಿಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ...

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ | ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ : ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ ಮಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು...

ಬಿಲ್ಕಿಸ್ ಬಾನು ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದ ಸುಪ್ರೀಂ ಕೋರ್ಟ್

2002ರ ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ನಡೆದಿದ್ದ ಭೀಕರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ ಅವರಿಗೆ ಜಾಮೀನು ಮಂಜೂರು...

‘ನೀವು ಆ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ, ನಿಮಗೆ ಸಮಗ್ರತೆ ಇಲ್ಲ’: ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೂರ್ಯ ಕಾಂತ್ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಮ್ಯೂಟ್!

ನವದೆಹಲಿ: ಭಾರತೀಯ ನ್ಯಾಯಾಂಗದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ತೀವ್ರ ಘರ್ಷಣೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಲು...

ಜಾರ್ಖಂಡ್‌ | ಕಲ್ಲಿದ್ದಲು ಗಣಿ ವಿಸ್ತರಣೆಗೆ ಕೇಂದ್ರ ಅನುಮತಿ : 6 ಲಕ್ಷ ಮರಗಳ ಮಾರಣಹೋಮ, ಆನೆಗಳ ಆವಾಸಸ್ಥಾನ ನಾಶಕ್ಕೆ ಕಾರಣವಾಗಲಿರುವ ಯೋಜನೆ!

ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿನ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿಸ್ತರಣೆಗಾಗಿ 928.03 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ (ವರ್ಗಾಯಿಸುವ) ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ಅರಣ್ಯ...

ಹೈದರಾಬಾದ್‌ನಲ್ಲಿ ಇಸ್ರೇಲಿ ಕಂಪನಿಗಳ ಕಾರ್ಯಕ್ರಮಕ್ಕೆ ವಿರೋಧ : SIO, APCR ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸರು

ಹೈದರಾಬಾದ್‌ನ ಟಿ-ಹಬ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ಸೋಮವಾರ (ನ.16) ಮುಂಜಾನೆ ತೆಲಂಗಾಣ ಪೊಲೀಸರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)...