Homeಮುಖಪುಟಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ದೆಹಲಿ ಪೊಲೀಸರಿಂದ 3 ಪ್ರಕರಣ ದಾಖಲು; 1 ಸಾವಿರ...

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ದೆಹಲಿ ಪೊಲೀಸರಿಂದ 3 ಪ್ರಕರಣ ದಾಖಲು; 1 ಸಾವಿರ ಜನ ವಶಕ್ಕೆ

- Advertisement -
- Advertisement -

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಶುಕ್ರವಾರ ಜಂತರ್ ಮಂತರ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಈ ಸಂಬಂಧ ದೆಹಲಿ ಪೊಲೀಸರು ಕನಿಷ್ಠ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಬೆಳವಣಿಗೆಯ ಕುರಿತು ಮಾಹಿತಿಯಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ‘ಹಿಂದೂಸ್ಥಾನ್ ಟೈಮ್ಸ್‌’ ವರದಿ ಮಾಡಿದೆ.

ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಮತ್ತು ಕನ್ನಾಟ್ ಪ್ಲೇಸ್ ಎಂಬ ಎರಡು ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಮಾಡಿಕೊಂಡ ದಿನಚರಿ ನಮೂದುಗಳ ಆಧಾರದ ಮೇಲೆ ಮೂರು ಎಫ್‌ಐಆರ್ ದಾಖಲಿಸಲಾಗಿದೆ. “ಸರ್ಕಾರಿ ನೌಕರರು ಕಾನೂನುಬದ್ಧವಾಗಿ ಹೊರಡಿಸಿದ ಆದೇಶಕ್ಕೆ ಅಸಮ್ಮತಿ/ಉಲ್ಲಂಘನೆ”ಗಾಗಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 223 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

“ಎಫ್‌ಐಆರ್‌‌ಗಳ ಶಂಕಿತರು/ಆರೋಪಿಗಳ ಅಂಕಣದಲ್ಲಿ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳ ಹೆಸರುಗಳನ್ನು ಹೆಸರಿಸಲಾಗಿಲ್ಲವಾದರೂ, ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಮತ್ತು ಭಾಗವಹಿಸಿದ ಸಂಘಟಕರು ಮತ್ತು ಸಂಘಟನೆಗಳ ಉಲ್ಲೇಖವು ಎಫ್‌ಐಆರ್‌ನ ವಿವರಗಳಲ್ಲಿದೆ” ಎಂದು ತಮ್ಮ ಹೆಸರು ಹೆಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಷೇಧಾಜ್ಞೆ ಆದೇಶ ಉಲ್ಲಂಘಿಸುವುದರ ಪರಿಣಾಮಗಳೇನು?

ಶುಕ್ರವಾರ ನಡೆದ ಪ್ರತಿಭನೆಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳಲ್ಲಿ ಬಿಎನ್‌ಎಸ್ ಅಥವಾ ಇತರ ಪ್ರಸ್ತುತ ಕಾನೂನುಗಳ ಹೆಚ್ಚಿನ ಸೆಕ್ಷನ್‌ಗಳನ್ನು ಸೇರಿಸಲಾಗಿದೆಯೇ ಎಂಬುದು ತಕ್ಷಣವೇ ತಿಳಿದುಬಂದಿಲ್ಲ.

ಷರತ್ತಿನ ಮೇಲೆ ಮಾತನಾಡಿದ ಮತ್ತೋರ್ವ ಅಧಿಕಾರಿಯು, ನವದೆಹಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸುವ ಮೂಲಕ ಪ್ರತಿಭಟನಾಕಾರರು ಕೇಂದ್ರ ದೆಹಲಿಯಾದ್ಯಂತ (ನವದೆಹಲಿ ಜಿಲ್ಲಾ ಪೊಲೀಸ್ ವ್ಯಾಪ್ತಿ) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್ 163 ರ ಅಡಿಯಲ್ಲಿ ಈಗಾಗಲೇ ಜಾರಿಯಲ್ಲಿದ್ದ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಕಾನೂನು ಏನು ಹೇಳುತ್ತದೆ?

“ಬಿಎನ್‌ಎಸ್‌ನ ಸೆಕ್ಷನ್ 223 ರ ಅಡಿಯಲ್ಲಿ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಕಂಡುಬಂದ ವ್ಯಕ್ತಿಗೆ ಆರು ತಿಂಗಳವರೆಗೆ ಸಾಧಾರಣ ಜೈಲು ಶಿಕ್ಷೆ, ರೂ. 2,500 ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಮಾನವ ಜೀವ, ಆರೋಗ್ಯ ಅಥವಾ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಥವಾ ದಂಗೆ ಅಥವಾ ಗಲಾಟೆಗೆ ಕಾರಣವಾಗುವ ಸರ್ಕಾರಿ ನೌಕರನ ಆದೇಶದ ಉಲ್ಲಂಘನೆಗೆ ಅಪರಾಧಿ ಎಂದು ಕಂಡುಬಂದಲ್ಲಿ, ವ್ಯಕ್ತಿಯು ಒಂದು ವರ್ಷದವರೆಗೆ ಜೈಲು ಶಿಕ್ಷೆ, ರೂ. 5,000 ರವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡನ್ನೂ ಎದುರಿಸಬೇಕಾಗಬಹುದು” ಎಂದು ಮೇಲೆ ಉಲ್ಲೇಖಿಸಲಾದ ಎರಡನೇ ಅಧಿಕಾರಿಯು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ, ಪ್ರತಿಭಟನೆ ಆರಮಭವಾಗುವ ಸುಮಾರು ಮೂರು ಗಂಟೆಗಳ ಮೊದಲು, ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿ, “ಸಾರ್ವಜನಿಕ ಸುರಕ್ಷತೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು” ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದರು.

163 ಬಿಎನ್‌ಎಸ್‌ಎಸ್‌ ಆದೇಶಗಳ ಅಡಿಯಲ್ಲಿ, ಪೂರ್ವ ಲಿಖಿತ ಅನುಮತಿಯಿಲ್ಲದೆ ಸಾರ್ವಜನಿಕ ಸಭೆಗಳು ಅಥವಾ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು, ಮೆರವಣಿಗೆಗಳು, ಧರಣಿಗಳು, ಘೋಷಣೆಗಳನ್ನು ಕೂಗುವುದು ಅಥವಾ ಭಾಷಣ ಮಾಡುವುದು, ಶಸ್ತ್ರಾಸ್ತ್ರಗಳು, ಬ್ಯಾನರ್‌ಗಳು, ಪ್ಲೇಕಾರ್ಡ್‌ಗಳು, ಲಾಠಿ, ಕತ್ತಿ, ಕೋಲು, ಇಟ್ಟಿಗೆ ತುಂಡುಗಳು ಅಥವಾ ಅಂತಹ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಪೊಲೀಸರ ಸಾಮಾಜಿಕ ಮಾಧ್ಯಮ ಪೋಸ್ಟ್ ಹೇಳಿದೆ.

“ನಾಗರಿಕರು, ಭೇಟಿ ನೀಡುವವರು ಮತ್ತು ಎಲ್ಲಾ ಪಾಲುದಾರರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಅನಧಿಕೃತ ಸಭೆ ಅಥವಾ ನಿಷೇಧಿತ ಚಟುವಟಿಕೆಗಳಿಂದ ದೂರವಿರಬೇಕು. ಉಲ್ಲಂಘನೆಗಳು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 223 ಮತ್ತು ಕಾನೂನಿನ ಇತರ ಅನ್ವಯವಾಗುವ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇವೆ” ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಸುಮಾರು 1,000 ಪ್ರತಿಭಟನಾಕಾರರ ಬಂಧನ

ಪ್ರತಿಭಟನೆಗಾಗಿ ಜಂತರ್ ಮಂತರ್ ತಲುಪಲು ಯತ್ನಿಸಿದ ಸುಮಾರು 1,000 ಜನರನ್ನು ಶುಕ್ರವಾರ ದೆಹಲಿಯಾದ್ಯಂತ ವಶಕ್ಕೆ ಪಡೆಯಲಾಗಿದೆ. ಆಮ್ ಆದ್ಮಿ ಪಾರ್ಟಿ (ಎಎಪಿ), ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಊಎಸ್‌ಎ), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ), ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ), ಇಂಡಿಯನ್ ಯೂತ್ ಕಾಂಗ್ರೆಸ್ (ಐವೈಸಿ) ಮತ್ತು ಇತರ ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಬೆಳಿಗ್ಗೆ 11 ಗಂಟೆಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದವು.

ದಿನ ಆರಂಭದಲ್ಲಿ ಜಂತರ್ ಮಂತರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 750 ಜನರನ್ನು ಮತ್ತು ದೆಹಲಿಯ ಇತರ ಭಾಗಗಳಲ್ಲಿ 400 ಜನರನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಿನ ಜಾವ ಸುಮಾರು 200 ಜನರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ರಸ್ತೆಗಳಿಂದ ವಶಕ್ಕೆ ಪಡೆಯಲಾದ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಮೊದಲೇ ವ್ಯವಸ್ಥೆಗೊಳಿಸಿದ್ದ ಬಸ್‌ಗಳಲ್ಲಿ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದರು.

ವಶಕ್ಕೆ ಪಡೆಯಲಾದವರಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಹಿರಿಯ ನಾಯಕಿ ಅತಿಶಿ, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ನೇಹಾ ಬೋರಾ ಮತ್ತು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಸೇರಿದ್ದಾರೆ. ವಶದಲ್ಲಿರುವವರಲ್ಲಿ ಎಎಪಿ ನಾಯಕರು, ನಾಗರಿಕ ಸಮಾಜದ ಕಾರ್ಯಕರ್ತರು, ಎಡಪಂಥೀಯ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಮತ್ತು ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಸೇರಿದ್ದಾರೆ.

ಪ್ರತಿಭಟನಾಕಾರರು ಜಂತರ್ ಮಂಥರ್ ತಲುಪದಂತೆ ತಡೆಯಲು ಅದರ ಸುತ್ತಮುತ್ತ 5,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ಸಿಇಸಿ ಗ್ಯಾನೇಶ್‌ ಕುಮಾರ್ ವಿರುದ್ಧದ ಹೋರಾಟಕ್ಕೆ ಕಪಿಲ್ ಸಿಬಲ್ – ಪ್ರಶಾಂತ್ ಭೂಷಣ್ ಸೇರ್ಪಡೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹಿರಿಯ ವಕೀಲ ಕಪಿಲ್ ಸಿಬಲ್, ವಕೀಲ ಪ್ರಶಾಂತ್ ಭೂಷಣ್, ಎಐಎಸ್‌ಎ...

ಫಾರಂ-7 ಮೂಲಕ ಆಕ್ಷೇಪ: ಬಿಜೆಪಿ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯುವಂತೆ ವಿಜಯೇಂದ್ರ ಒತ್ತಾಯ

ಚುನಾವಣಾ ಆಯೋಗದ ನಿಯಮಾನುಸಾರ ಫಾರಂ-7 ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಎಫ್‌ಐಆರ್ (FIR) ದಾಖಲಿಸಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಈ ಪ್ರಕರಣಗಳನ್ನು ಕೂಡಲೇ...

ಕೇರಳ ಯುಡಿಎಫ್ ಸರ್ಕಾರದಲ್ಲಿ ಭಿನ್ನಮತದ ಹೊಗೆ: ಸಿಎಂ ಸತೀಶನ್ ಏಕಪಕ್ಷೀಯ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರ ಅಸಮಾಧಾನ

ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳು ಕಳೆಯುವುದರೊಳಗೇ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ತೀವ್ರಗೊಳ್ಳುತ್ತಿರುವ ಲಕ್ಷಣಗಳು ಗೋಚರಿಸಿವೆ. ಉನ್ನತ...

ರಾಜ್ಯದ ಬರ ಪರಿಹಾರಕ್ಕೆ 3,705 ಕೋಟಿ ರೂ. ನೀಡಲು ಕೇಂದ್ರಕ್ಕೆ ಮನವಿ: ಸಿಎಂ

ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದಾಗಿ ಕಂಗಾಲಾಗಿರುವ ರೈತರು ಮತ್ತು ಜನಸಾಮಾನ್ಯರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ತಕ್ಷಣವೇ ಎನ್‌ಡಿಆರ್‌ಎಫ್ (NDRF) ಮಾನದಂಡಗಳನ್ವಯ 3,705.30 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಡಿ.ಕೆ....

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅ.10 ರಂದು ಪ್ರತಿಭಟನೆ; ದೆಹಲಿಗೆ ಆಗಮಿಸುವಂತೆ ಸಿಜೆಪಿ ಕರೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ರಾಜೀನಾಮೆ ನೀಡದಿದ್ದರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ನಾಗರಿಕನೂ ಅಕ್ಟೋಬರ್ 10 ರ ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕಾಕ್ರೋಚ್ ಜನತಾ ಪಾರ್ಟಿ...

SIR ಹಗರಣ | ಪರಿಶೀಲನೆಗೆ ನಿವೃತ್ತ ನ್ಯಾಯಾಧೀಶರ ಸ್ವತಂತ್ರ ಆಯೋಗ ರಚನೆ

ಭಾರತೀಯ ಚುನಾವಣಾ ಆಯೋಗ (ಇಸಿಐ) ದೇಶದಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಸಾಂವಿಧಾನಿಕ ಸಿಂಧುತ್ವ, ವಿಧಾನ ಮತ್ತು ಅದರ ಪ್ರಭಾವವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಐವರು...

ಪಶ್ಚಿಮ ಬಂಗಾಳ ಎಸ್‌ಐಆರ್; ಮತದಾರರ ಹೆಸರು ಡಿಲೀಟ್- ಮರು ನೋಂದಣಿ ಕುರಿತು ಚುನಾವಣಾ ಆಯೋಗಕ್ಕೆ ಚಿದಂಬರಂ ಪ್ರಶ್ನೆ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರನ್ನು ಹೊರಗಿಟ್ಟಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಪ್ರಶ್ನಿಸಿದ್ದು, ಪಟ್ಟಿಯಿಂದ...

ದೆಹಲಿ ಮತದಾರರ ಪಟ್ಟಿ ಪರಿಷ್ಕರಣೆ: 25 ಪ್ರಕರಣಗಳಲ್ಲಿ ಅಧಿಕಾರಿಗಳೇ ‘ಆಕ್ಷೇಪಕರು’! ‘ಕಾರಣ’ ನೀಡದೆ ನೋಟಿಸ್ ಜಾರಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ ಅತ್ಯಂತ ಅಪರೂಪದ ಹಾಗೂ ಕಾನೂನು ತಜ್ಞರ ಹುಬ್ಬೇರಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕರಡು ಮತದಾರರ ಪಟ್ಟಿಯಿಂದ...

Fly Dubai ಹೈಜಾಕ್ ಯತ್ನ: ಭಾರತೀಯ ಪೈಲಟ್ ಮೇಲೆ ದಾಳಿ ಮಾಡಿದ್ದ ಸಹಪೈಲಟ್ ಉಗ್ರರ ನಂಟಿನ ಆರೋಪ

ದುಬೈಯಿಂದ ಟೆಲ್ ಅವೀವ್‌ಗೆ 170ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನವನ್ನು ಹೈಜಾಕ್ ಮಾಡಲು ಹಾಗೂ ಅಪಘಾತಕ್ಕೀಡು ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಸಹಪೈಲಟ್ ಹಮಾಮ್ ಅಲ್‌ಹಮಾಮಿ ಕುರಿತು ಮತ್ತಷ್ಟು ಆಘಾತಕಾರಿ ಮಾಹಿತಿಗಳು...

ಪ್ರತಿಭಟನಾಕಾರರನ್ನು ಬಂಧಿಸುವಂತೆ ಸಿಎಂ ಫಡ್ನವೀಸ್‌ಗೆ ಅಭಿಜೀತ್ ಸವಾಲು

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶಿವಾಜಿ ಪಾರ್ಕ್‌ನಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಸಿ‌ಜೆ‌ಪಿ (ಕಾಕ್ರಾಚ್ ಜನತಾ ಪಾರ್ಟಿ) ನಾಯಕ ಅಭಿಜೀತ್...