Homeಮುಖಪುಟಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಜೆಎನ್‌ಯು : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿಗಳು

- Advertisement -
- Advertisement -

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (JNUSU) ಸದಸ್ಯರು ಮಂಗಳವಾರ (ಅಕ್ಟೋಬರ್ 20) ತಮ್ಮ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿಶ್ವವಿದ್ಯಾಲಯದ ಡೀನ್ ನೇತೃತ್ವದ ಸಮಿತಿಯ ನಡುವೆ ನಡೆದ ಸಭೆಗಳ ನಂತರ ಈ ಬೆಳವಣಿಗೆ ನಡೆದಿದೆ.

ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್‌ನ ಡೀನ್ ವಿವೇಕ್ ಕುಮಾರ್ ಸಹಿ ಮಾಡಿರುವ ಪತ್ರದಲ್ಲಿ, ಐವರು ವಿದ್ಯಾರ್ಥಿಗಳ ಅಮಾನತು ಆದೇಶವನ್ನು ಹಿಂಪಡೆಯಲು ನಿರ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಆ ಪತ್ರದಲ್ಲಿ ಅದಿತಿ ಮಿಶ್ರಾ, ಕೆ. ಗೋಪಿಕಾ ಬಾಬು, ಸುನಿಲ್ ಯಾದವ್, ದಾನಿಶ್ ಅಲಿ ಮತ್ತು ನಿತೀಶ್ ಕುಮಾರ್ ಎಂಬ ವಿದ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.

ಅಧ್ಯಕ್ಷರು ಸೇರಿದಂತೆ ಜೆಎನ್‌ಯುಎಸ್‌ಯು ಪದಾಧಿಕಾರಿಗಳ ಅಮಾನತು ಆದೇಶವನ್ನು (ರಸ್ಟಿಕೇಶನ್) ಹಿಂಪಡೆಯುವುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.

ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯ ಸಮಿತಿಯ ನಡುವಿನ ಸಭೆಯಲ್ಲಿ ಚರ್ಚಿಸಲಾದ 5 ಪ್ರಮುಖ ವಿಷಯಗಳು ಇಲ್ಲಿವೆ:

1.ವಿದ್ಯಾರ್ಥಿಗಳ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುವುದು.

2.ವಿವಾದಾತ್ಮಕ ಷರತ್ತುಗಳನ್ನು ಪರಿಶೀಲಿಸಲು ಮತ್ತು ಅವುಗಳನ್ನು ತೆಗೆದುಹಾಕಲು, ಜೆಎನ್‌ಯುಎಸ್‌ಯು ಪದಾಧಿಕಾರಿಗಳ ಪೈಕಿ ಒಬ್ಬರು, ಒಬ್ಬ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಒಬ್ಬ ಚುನಾಯಿತ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು.

3.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಜೆಎನ್‌ಯುಇಇ) ಕುರಿತಾಗಿ, ಜೆಎನ್‌ಯುಎಸ್‌ಯು ಪದಾಧಿಕಾರಿಯೊಬ್ಬರ ಪ್ರತಿನಿಧಿಯನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು.

4.ಜೆಎನ್‌ಯುಎಸ್‌ಯು ಪದಾಧಿಕಾರಿಗಳ ಪ್ರತಿನಿಧಿಗಳನ್ನು ಒಳಗೊಂಡ ಹಾಸ್ಟೆಲ್ ಮೀಸಲಾತಿ ಸಮಿತಿಯನ್ನು ರಚಿಸಲಾಗುವುದು.

5.ವಿದ್ಯಾರ್ಥಿಗಳನ್ನು ಉಚ್ಚಾಟಿಸುವ ಕ್ರಮದ ವಿರುದ್ಧದ ಪ್ರತಿಭಟನೆ, ಯುಜಿಸಿ ನಿಯಮಾವಳಿಗಳ ವಿರುದ್ಧದ ಪ್ರತಿಭಟನೆ ಹಾಗೂ ಹಾಸ್ಟೆಲ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರತಿಭಟನೆಯ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಶಿಸ್ತು ವಿಚಾರಣೆಗಳನ್ನು ಹಿಂಪಡೆಯಲಾಗುವುದು.

ಇದು ಮಾತ್ರವಲ್ಲದೆ, ವಸತಿ ನಿಲಯದ (ಹಾಸ್ಟೆಲ್) ಮೀಸಲಾತಿ ಮತ್ತು ಅದರ ರಚನೆ, ಗ್ರಂಥಾಲಯದ (ಲೈಬ್ರರಿ) ಸಮಯ ಹಾಗೂ ಸಿಎಸ್‌ಎಲ್‌ಜಿಯಲ್ಲಿ ಕ್ಯಾಂಟೀನ್ ತೆರೆಯುವ ಕುರಿತು ಚರ್ಚೆಗಳನ್ನು ಸಹ ನಡೆಸಲಾಗಿದೆ ಎಂದು ವರದಿಯಾಗಿದೆ.

ಜೆಎನ್‌ಯುಎಸ್‌ಯು ಸದಸ್ಯರು ಅಮಾನತುಗೊಂಡಿದ್ದ ಪದಾಧಿಕಾರಿಗಳನ್ನು ಮರುಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದರು. ಪಿಟಿಐಸುದ್ದಿ ಸಂಸ್ಥೆಯ ಪ್ರಕಾರ, ವಿದ್ಯಾರ್ಥಿ ಸಂಘಟನೆಯು ತಾನು ಕೇವಲ ಒಂದು ವಿದ್ಯಾರ್ಥಿ ಗುಂಪಲ್ಲ, ಬದಲಿಗೆ ಸುಮಾರು 9,000 ವಿದ್ಯಾರ್ಥಿಗಳ ಬೆಂಬಲ ಹೊಂದಿರುವ ಚುನಾಯಿತ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ವಾದಿಸಿದೆ. ಇದರ ಪ್ರತಿನಿಧಿಗಳನ್ನು ಸ್ವತಂತ್ರ ಚುನಾವಣಾ ಸಮಿತಿಗಳ ಮೂಲಕ ಆಯ್ಕೆ ಮಾಡಲಾಗಿದ್ದು, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿಯ (ಡೀನ್ ಆಫ್ ಸ್ಟೂಡೆಂಟ್ಸ್) ಕಚೇರಿಯಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅದು ತಿಳಿಸಿದೆ.

ವಿಶ್ವವಿದ್ಯಾನಿಲಯದ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಸಂಘಟನೆಯು, ತೆರಿಗೆದಾರರ ಹಣವನ್ನು ರಕ್ಷಿಸುವಲ್ಲಿ ಆಡಳಿತ ಮಂಡಳಿಗಿರುವ ಬದ್ಧತೆಯನ್ನು ಪ್ರಶ್ನಿಸಿದೆ ಎಂದು ವರದಿಯಾಗಿದೆ.

ಸೋಮವಾರ (ಅ.19) ಉಪಕುಲಪತಿ (ವಿ-ಸಿ) ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು, ಅ.16ರಂದು ಬೆಳಿಗ್ಗೆ 8.50ಕ್ಕೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಮರ್ಥ ಅಧಿಕಾರಿಯೊಬ್ಬರು ಸಿದ್ಧರಿದ್ದರು, ಆದರೆ ಆ ಸಮಯದಲ್ಲಿ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದು ತಿಳಿಸಿದ್ದರು.

ವಿಸಿಯ ಈ ಹೇಳಿಕೆಯನ್ನು ವಿದ್ಯಾರ್ಥಿಗಳು ತಳ್ಳಿಹಾಕಿದ್ದು, ಬೆಳಿಗ್ಗೆ 9 ಗಂಟೆಗೆ ಉಪಕುಲಪತಿಗಳು (ವಿ-ಸಿ) ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಮಯವನ್ನು ಪ್ರಶ್ನಿಸಿದ್ದಾರೆ. ಕೇವಲ ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಭ್ರಮೆಯನ್ನು ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಉಪವಾಸ ಸತ್ಯಾಗ್ರಹದ ಸಮಯದಲ್ಲಿ ಅಮಾನತುಗೊಂಡಿದ್ದ ತಮ್ಮ ಪದಾಧಿಕಾರಿಗಳಿಗೆ ವೈದ್ಯಕೀಯ ತಪಾಸಣೆಯನ್ನು ನಿರಾಕರಿಸಲಾಗಿತ್ತು ಎಂದು ಜೆಎನ್‌ಯುಎಸ್‌ಯು ಆರೋಪಿಸಿದೆ. ಇದಕ್ಕೆ ವಿರುದ್ಧವಾಗಿ ಉಪಕುಲಪತಿಗಳು (ವಿ-ಸಿ), ಆಡಳಿತ ಮಂಡಳಿಯು “ಅತ್ಯಂತ ಪ್ರಜಾಸತ್ತಾತ್ಮಕವಾಗಿ ಮತ್ತು ಮಾನವೀಯವಾಗಿ” ನಡೆದುಕೊಂಡಿದೆ ಹಾಗೂ “20 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ” ನಾಶವಾಗಿದ್ದರೂ ಸಹ ಅಮಾನತುಗೊಂಡ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.


























ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಬ್ಬರೇ ಭೇಟಿಯಾಗಿದ್ದು ಯಾಕೆ?’ : ಎಪ್‌ಸ್ಟೀನ್ ಜೊತೆಗಿನ ಸಚಿವ ಹರ್ದೀಪ್ ಸಿಂಗ್ ಪುರಿ ಪೋಟೋ ಹಂಚಿಕೊಂಡು ಪ್ರತಿಪಕ್ಷ ನಾಯಕರ ಪ್ರಶ್ನೆ, ಉತ್ತರ ನೀಡಲು ಆಗ್ರಹ

ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ವಿರೋಧ ಪಕ್ಷದ ನಾಯಕರು, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅನ್ನು ಭೇಟಿಯಾಗಿರುವ ಫೋಟೋ...

ಸಿಎಂಆರ್‌ಎಲ್-ಎಕ್ಸಾಲಾಜಿಕ್ ಪ್ರಕರಣ: ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ 7 ದಿನಗಳ ತಡೆ ನೀಡಿದ ಸುಪ್ರೀಂ ಕೋರ್ಟ್: ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ

ಖಾಸಗಿ ಕಂಪನಿಯಿಂದ ಅಕ್ರಮ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 'ಸಿಎಂಆರ್‌ಎಲ್-ಎಕ್ಸಾಲಾಜಿಕ್' ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅಳಿಯ, ಮಾಜಿ ಸಚಿವ...

ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ – ಅಶುತೋಷ್

ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿರುವ ಜಂತರ್ ಮಂತರ್‌ನಲ್ಲಿ ರಾಷ್ಟ್ರಧವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ)...

ಆಂಧ್ರ ಪ್ರದೇಶ ಮುನ್ಸಿಪಲ್ ಚುನಾವಣೆ: ವೈಎಸ್‌ಆರ್‌ಸಿಪಿ ಅರ್ಜಿ ಪರಿಶೀಲಿಸಿ ನಾಳೆಯೊಳಗೆ ತೀರ್ಮಾನಿಸಿ; ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ!

ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ವ್ಯಾಪಕ ಹಿಂಸಾಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಪ್ರಮುಖ...

ಸಿಜೆಪಿ ನಾಯಕರು – ನೇಹಾ ಬೋರಾ ಅರ್ಜಿಗಳ ತುರ್ತು ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್‌

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸಲ್ಲಿಸಿರುವ ಅರ್ಜಿಯನ್ನು ಬುಧವಾರ (ಅ.21) ವಿಚಾರಣೆ...

‘ಪ್ರಜಾಪ್ರಭುತ್ವದಲ್ಲಿ ಇದು ಕಳವಳಕಾರಿ, ಸಿಜೆಪಿ ಪ್ರಶ್ನೆಗಳಿಗೆ ನನ್ನ ಬೆಂಬಲವಿದೆ’: CJP ನಾಯಕರ ಬೆನ್ನಿಗೆ ನಿಂತ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ!

ಕಾಕ್‌ರೋಚ್ ಜನತಾ ಪಾರ್ಟಿಯ ಯುವ ನಾಯಕರ ಮೇಲೆ ದೆಹಲಿ ಪೊಲೀಸರು ನಡೆಸುತ್ತಿರುವ ಕಸ್ಟಡಿ ಮತ್ತು ಕಾನೂನು ಪ್ರಕ್ರಿಯೆಗಳ ಕುರಿತು ಪ್ರಜಾಪ್ರಭುತ್ವವಾದಿ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ...

ಯೇಸುವಿನ ದರ್ಶನದ ಹೆಸರಲ್ಲಿ 191 ಜನರ ಮಾರಣಹೋಮ : ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಸೇರಿ 29 ಮಂದಿ ತಪ್ಪಿತಸ್ಥರು ಎಂದ ನ್ಯಾಯಾಲಯ  

ಬರೋಬ್ಬರಿ 191 ಜನರ ಸಾವಿಗೆ ಕಾರಣನಾದ ಕೀನ್ಯಾದ ಧಾರ್ಮಿಕ ಮುಖಂಡ ಪೌಲ್ ಮೆಕೆಂಜಿ ಮತ್ತು ಆತನ ಸಹಚರರನ್ನು ಸೋಮವಾರ (ಅಕ್ಟೋಬರ್ 19) ನ್ಯಾಯಾಲಯ ತಪ್ಪಿತಸ್ಥರು ಎಂದು ಘೋಷಿಸಿದ್ದು, ನವೆಂಬರ್ 6ರಂದು ಶಿಕ್ಷೆ ಪ್ರಮಾಣ...

ಪ್ರಧಾನಿ ನಿವಾಸದ ಬಳಿಯ ಐತಿಹಾಸಿಕ ಮಸೀದಿ ತೆರವಿಗೆ ಆರು ದಿನಗಳ ಗಡುವು : ವಕ್ಫ್ ಬೋರ್ಡ್ ಕೈಬಿಟ್ಟಿದೆ, ಕುಡಿಯಲು ನೀರೂ ಇಲ್ಲ ಎಂದ ಇಮಾಮ್

ನವದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಇರುವ ಐತಿಹಾಸಿಕ ಮಸೀದಿಯೊಂದಕ್ಕೆ ಅಕ್ಟೋಬರ್ 19, ಸೋಮವಾರದಂದು ತೆರವು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (ಎಲ್&ಡಿಒ)...

‘ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’: ಎಸ್ಐಆರ್ ವಿರೋಧಿಸಿ ಅ. 28ರಂದು ಮುಂಬೈನಲ್ಲಿ ಬೃಹತ್ ಪ್ರತಿಭಟನೆಗೆ ಪ್ರಕಾಶ್ ಅಂಬೇಡ್ಕರ್ ಕರೆ

ಮುಂಬೈ: ಮತದಾನದ ಹಕ್ಕು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ,...

ಹೋರಾಟಗಾರನ ಕೊಲೆ, ಅಮಿತ್ ಶಾ ಭೇಟಿ : ಪಂಜಾಬ್‌ನಲ್ಲಿ ಎಎಪಿಗೆ ಮುಳುವಾಗುತ್ತಾ ಡ್ರಗ್ ವಿರೋಧಿ ಜನಾಕ್ರೋಶ?

ಕಳೆದ ವಾರ ಪಂಜಾಬ್‌ನ ಮಾನಸಾ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ ಮಾಲೀಕನೊಬ್ಬ 42 ವರ್ಷದ ಮಾದಕವಸ್ತು ವಿರೋಧಿ ಕಾರ್ಯಕರ್ತ (Anti-Drugs Activist's) ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಹತ್ಯೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ....