Homeಅಂಕಣಗಳುಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

ಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

- Advertisement -
- Advertisement -

ಕೇಳುಗರಿಗೆಲ್ಲ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಉಡುಪಿಯ ಅಷ್ಟಮಠದ ಶಿರೂರು ಸ್ವಾಮಿಗಳ ಪಾಯ್ಸನ್ ಫುಡ್ ಸಾವಿಗೆ ಕಿಂಚಿತ್ತೂ ಕರುಳು ಕರಗದ ತೇಜಾವರ ಸ್ವಾಮಿಗಳು, ಆ ಸ್ವಾಮಿ ನಂತರ ಫೊರೆನ್ಸಿಕ್ ಸೈನ್ಸನ್ನೇ ನುಣ್ಣಗೆ ಅರೆದು ಗಟಗಟ ಕುಡಿದವರಂತೆ ಕೆಕರುಮಕರಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಸ್ವಾಮಿ ಎಣ್ಣೆ ತಗತಿದ್ದ, ಹೆಣ್ಮಕ್ಕಳ ಮ್ಯಾಟ್ರಲ್ಲಿ ವೀಕ್ ಇದ್ದ, ಹಂಗಾಗಿ ಸತ್ತೋಗಿರಬೇಕು ಅಂತ ತೇಜಾವರರು ಕೀರಲು ದನಿಯಲ್ಲಿ ಊಳಿಟ್ಟಿದ್ದಾರೆ. ದಿವಂಗತ ಸ್ವಾಮಿ ಬದುಕಿದ್ದಾಗ “ಎಂಟು ಮಠಗಳ ಎಲ್ಲ ಸ್ವಾಮುಗೋಳು ಮ್ಯಾರೇಜ್ ಮಾಡ್ಕಂಡು, ಕದ್ದು ಮಕ್ಕಳು ಹುಟ್ಟುಸಿ, ಹುಟ್ಟಿಸಿದ ಮಕ್ಳೆಲ್ಲವನ್ನು ಕದ್ದು ಮಡಗಿದ್ದಾರೆ, ಬಾಂಬೆ, ಪೂನಾದಲ್ಲಿ ಹೋಟೆಲ್ ಬ್ಯುಜಿನೆಸ್ ನಡುಸ್ತಾವ್ರೆ, ಮೀಟ್ರುಬಡ್ಡಿಗೆ ಸಾಲ ಕೊಟ್ಟು ಪರ್ಸೆಂಟೇಜ್ ಬಡ್ಡಿ ಯವಾರ ನಡುಸ್ತಾವ್ರೆ” ಅಂತ ಮುರಕೊಂಡು ಬಿದ್ದಿದ್ದಾಗ ಬಾಯಿಗೆ ಹೊಲಿಗೆ ಹಾಕ್ಕಂಡು ಕಮಕ್ ಕಿಮಕ್ ಅನ್ನದೆ ಇದ್ದ ತೇಜಾವರರಿಗೆ ಇದ್ದಕ್ಕಿದ್ದಂತೆ ಈ ಧೈರ್ಯ ಎಲ್ಲಿಂದ ಬಂತು ಎಂದು ಭಕ್ತಾದಿಗಳೇ ಗಾಬರಿಯಾಗಿದ್ದಾರೆ. ನೂರಾರು ಸಲ ಮಠದ ಗಾಯಕಿಯೊಬ್ಬರ ಮೇಲೆ ರೇಪು ಮಾಡಿ ಕೋರ್ಟಿಂದ ಉಗಿಸಿಕೊಂಡ ಕೌಬಾಯ್ ಸ್ವಾಮಿ ವಿಷಯದಲ್ಲಿ ಲವಿಡವಿ ಸೈಲೆನ್ಸ್ ಮೈಂಟೈನ್ ಮಾಡುತ್ತ ಸಪೋರ್ಟ್ ಕೊಡೋ ತೇಜಾವರರು ತಮ್ಮ ಎಂಟು ಮಠಗಳ ಸ್ವಾಮಿಗಳ ರಹಸ್ಯವನ್ನೆಲ್ಲ ಹರಾಜು ಹಾಕುತ್ತಿದ್ದ ಸ್ವಾಮಿ ಅನುಮಾನಾಸ್ಪದವಾಗಿ ಸತ್ತ ನಂತರವೂ ಹಗೆ ಸಾಧಿಸಿ ಕಳಪೆ ಮಾತನ್ನಾಡುವುದು ಆ ಮನುಷ್ಯನ ನೀಚತನ ಎಂಬ ಜನ ಮಾತಾಡಿಕೊಳ್ಳುತ್ತಿರುವುದು ತಿಳಿದುಬಂದಿದೆ.

*****

ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ರಂಥ ಪಳಗಿದ ಆರ್ಥಿಕತಜ್ಞರಿಗೆ ಕೊಡಬಾರದ ಕಾಟ ಕೊಟ್ಟು ಒಕ್ಕಲೆಬ್ಬಿಸಿದ ಶಿಲಾಯುಗದ ಸನಾತನಿ ಪೀಡೆಗಳು, ಚೀಪಿದ ಮೂಳೆ ತಮ್ಮತ್ತ ಬಿಸಾಕುವ ಅಂಬಾನಿಗಳ ಕೊಂಪೆಯಿಂದ ಕೊಳೆತ ಮಿದುಳಿನ ಆಸಾಮಿಯನ್ನು ತಂದು ಆ ಜಾಗಕ್ಕೆ ಕೂರಿಸಿದ್ದು ಈಗ ಹಳೆಯ ವಿಷಯ, ಹೊಸ ವಿಷಯ ಏನಪ್ಪ ಅಂದ್ರೆ ರಿಸರ್ವ್ ಬ್ಯಾಂಕೆಂದರೆ ಬೊಂಬಾಯ್ ಮಿಠಾಯ್ ಮಾರೋ ಅಂಗಡಿ ಅಂತ ಭ್ರಮೆಯಲ್ಲಿರೋ ಈ ಅಂಬಾನಿ ಜವಾನನಿಗೆ ಒಂದೈವತ್ತು ಹುಚ್ಚರು ಒಮ್ಮೆಲೇ ಕಚ್ಚಿ ತಲೆ ಇನ್ಫೆಕ್ಷನ್ ಆಗಿರೋ ಸಾಧ್ಯತೆಗಳು ಕಂಡುಬರುತ್ತಿವೆ. ಜನರು ಬಳಸುತ್ತಿದ್ದ ಮುದ್ದಾದ ನೋಟುಗಳನ್ನು ಕಚಡಿ ಪಿಚಡಿ ಆಕಾರದಲ್ಲಿ ಇಷ್ಟಬಂದಂತೆ ಚಡ್ಡಿ ಬದಲಿಸಿದಂತೆ ಬದಲಿಸಿ ಒಂದರ ಹಿಂದೊಂದು ಪೀಕಲಾಟ ತಂದಿಡ್ತಿರೋ ಉರ್ಜಿತ್ ಪಟೇಲ್ ಎಟಿಎಂ ವ್ಯವಸ್ಥೆಗೇ ಡಿಚ್ಚಿ ಹೊಡೆಯುತ್ತಿದ್ದಾನೆ. ಇವನು ಬದಲಿಸೋ ನೋಟುಗಳ ಸೈಜು ಎಟಿಎಂಗಳಿಗೆ ಸರಿ ಹೋಗದೆ ಬ್ಯಾಂಕುಗಳು ಲಬೋಲಬೋ ಬಾಯಿ ಬಡ್ಕೊಂಡ್ರೂ ಹೊಸದಾಗಿ 100 ರುಪಾಯಿ ನೋಟು ಡಿಸೈನ್ ಚೇಂಜ್ ಮಾಡಿ ಚಲಾವಣೆಗೆ ಬಿಡಲಾಗಿದೆ. ನೋಟ್ ಬ್ಯಾನ್ ಟೈಮಿನಲ್ಲಿ ನಾವು ನೋಟೇ ಇಲ್ಲದ ಕ್ಯಾಶ್‍ಲೆಸ್ ಎಕಾನಮಿ ನಿರ್ಮಿಸ್ತೀವಿ ಅಂತ ಬೊಗಳಿದವರು ತಿಂಗಳಿಂದ ತಿಂಗಳಿಗೆ ನೋಟುಗಳ ಪ್ರಿಂಟಿಂಗನ್ನು ಹೆಚ್ಚಿಸ್ತಿರೋದ್ಯಾಕೆ ಅನ್ನೋ ಮರ್ಮ ಯಾರಿಗೂ ಗೊತ್ತಾಗ್ತ ಇಲ್ಲ. ಜನರ ಪಡಿಪಾಟಲುಗಳನ್ನು ಸೈಕೋಗಳಂತೆ ಎಂಜಾಯ್ ಮಾಡ್ತಿರೋ ಈ ಸನಾತನಿ ಪಿಶಾಚಿಗಳಿಗೆ ಬರಬಾರದ್ದು ಬಂದು ಹುಳ ಬಿದ್ದು ಸಾಯಲೆಂದು ಜನರು ಶಾಪ ಹಾಕುತ್ತಿರುವುದು ತಿಳಿದು ಬಂದಿದೆ.

*****

ವಯಸ್ಸಲ್ಲದ ವಯಸ್ಸಲ್ಲಿ “ಕುಚ್ ಕುಚ್ ಹೋತಾ ಹೈ, ಬ್ಲೂಜೆಪಿವಾಲೇ ಲಡ್ಕಿ ಲೇಜಾಯೇಂಗೆ” ಅಂತ ಸರ್ಕಾರಿ ಕ್ಲರ್ಕ್ ಹುಡುಗಿಯೊಂದಿಗೆ ಕದ್ದುಮುಚ್ಚಿ ಕುಸುಮುಸು ಮಾಡಿ ಕೈ ಎತ್ತಿದ್ದ ಬ್ಲೂಜೆಪಿಯ ರಾಮದಾಸನಿಗೆ ಶನಿ ಮಕದ ಮೇಲೆ ಅಂಡೂರಿ ಕುಂತುಬಿಟ್ಟಿದ್ದಾನೆ. ಎಲ್ಲ ಮುಗಿದ ಮೇಲೆ ರಾಮ್ದಾಸ ಕೈಗೆ ಸಿಗದಂಗೆ ತಪ್ಪಿಸ್ಕಂಡು ಓಡೋಗವ್ನೆ ಅಂತ ರೊಚ್ಚಿಗೆದ್ದಿರೋ ಪ್ಲೇಮಕುಮಾರಿಯೆಂಬ ರಾಮ್ದಾಸನ ಮಾಜಿ ಲವರ್ರು ಸೀದಾ ಕೈಕೊಟ್ಟ ಮಿಡಲ್ ಏಜ್ ಮನ್ಮಥನ ಆಫೀಸಿನ ಮುಂದೆ ಧುಡುಮ್ಮನೆ ಬಿದ್ದಿದೆ. ದೀಪಾವಳಿಯ ವಿಷ್ಣುಚಕ್ರದಂತೆ ಗರಗರಗರ ತಿರುಗುತ್ತ ನೆಲದ ಮೇಲೆ ಕೂಚಿಪುಡಿ-ಭರತನಾಟ್ಯ ಎರಡನ್ನೂ ಮಿಕ್ಸ್ ಮಾಡಿದ ಘನಘೋರ ನೃತ್ಯವಾಡಿ ರಾಮ್ದಾಸ್ ಕಛೇರಿಯೆದುರು ನೆರೆದ ಬ್ಲೂಜೆಪಿ ಕಾರ್ಯಕರ್ತರಿಗೆ ಪುಗ್ಸಟ್ಟೆ ಮನರಂಜನೆ ಒದಗಿಸಿದ್ದಾರೆ. ಈ ಹೆಣ್ಣಿನೊಡನೆ ಕಳ್ಳಾಟವಾಡಿ ಕೈಗೆ ಚೊಂಬು ಕೊಟ್ಟು ಯಾಮಾರಿಸಿ ಇನ್ನೊಂದರ ಬೆನ್ನುಬೀಳಲು ರೆಡಿಯಾಗಿದ್ದ ರಾಮ್ದಾಸನ ಗಂಟಲಿಗೆ ಹೆಟ್ಟಿದ ಗಢಾರಿಯಾಗಿರೋ ಪ್ಲೇಮಕುಮಾರಿ.. ನಾನು ಕುಲಗೆಟ್ಟು ಹೋಗಿರೋ ರಾಮ್ದಾಸನಿಗೆ ಬಾಳು ಕೊಡ್ತೇನೆ, ಈ ಓತಿಕ್ಯಾತದ ಮೂತಿಯವನ ಬಾಳು ಬಂಗಾರ ಮಾಡಿ, ಮಾನ ಹರಿದು ಊರು ಬಾಗಲು ಮಾಡಿ, ಅವನ ಹಣೆಗೆ ಅಕ್ಕಿಕಾಳು ಮಡಗೋತನಕ ನಾನು ಬ್ಯೂಟಿಪಾರ್ಲರಿನಲ್ಲಿ ಐಬ್ರೋ ಮಾಡ್ಸಲ್ಲ ಅಂತ ಶಪಥಗೈದಿದ್ದಾರೆ. ಈ ವೀರಪ್ರತಿಜ್ಞೆ ತಿಳಿದ ರಾಮ್ದಾಸನು ಕೆ.ಆರ್.ಪುರದ ಬಾರ್‍ನ ಟಾಯ್ಲೆಟ್ಟಿನಲ್ಲಿ ಕುಳಿತು ಗೊಳೋ ಅಂತ ಅಳುತ್ತಿದ್ದಾರೆಂದು ಬಾರ್ ಸಪ್ಲೈಯರ್ ಮಾಹಿತಿ ನೀಡಿದ್ದಾರೆ.

*****

ರಾಜಕಾರಣಿಗಳು ಜನರ ದುಡ್ಡು ದೋಚುವುದನ್ನು ನೀವು ಕೇಳಿದ್ದೀರಿ, ಈಗ ಟಾಯ್ಲೆಟ್, ಕಮೋಡ್, ಪೈಪುಗಳನ್ನೂ ಬಿಡದೆ ದೋಚುತ್ತಿರುವುದು ಹೊಸ ವಿಷಯ. ವಿಷ್ಯ ಏನಪ್ಪ ಅಂದ್ರೆ ಕಾರವಾರದ ಹಿಂದಿನ ಕೈ ಪಕ್ಷದ ಎಮ್ಮೆಲ್ಲೆ ಸತೀಶ್ ಸೈಲ್ ಎಂಬ ಗಣಿ ಗಢವನು ತನಗೆ ಸರ್ಕಾರ ಒದಗಿಸಿದ್ದ ಕಛೇರಿ ಶೌಚಾಲಯದ ಕಮೋಡು, ಪೈಪು, ಫ್ಲಶ್ ಬ್ಲಾಕ್ಸೆಲ್ಲವನ್ನೂ ಬಿಚ್ಚಿಕೊಂಡು ಮಂಗಮಾಯವಾಗಿದ್ದಾನೆ. ಹೊಸದಾಗಿ ಆಯ್ಕೆಯಾದ ಎಮ್ಮೆಲ್ಲೆ ಲೂಪಾಲಿ ನಾಯ್ಕ ಎಂಬ ಬ್ಲೂಜೆಪಿ ಎಮ್ಮೆಲ್ಲೆ ಈ ಕಛೇರಿಗೆ ಬಂದಾಗ ಟಾಯ್ಲೆಟ್ ರೂಮಿನಲ್ಲಿ ಬಕೀಟು ನಲ್ಲಿಯೊಂದನ್ನು ಬಿಟ್ಟು ಉಳಿದದ್ದೆಲ್ಲ ಠಣಾರ್ ಆಗಿರುವುದು ಕಂಡು ಕಂಗಾಲಾಗಿದ್ದಾರೆ. ಅಜೆರ್ಂಟಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲೂ ಸಾಧ್ಯವಾಗದಂತೆ ಪೀಕಲಾಟಕ್ಕೆ ಸಿಲುಕಿರೋ ಬ್ಲೂಜೆಪಿ ಎಮ್ಮೆಲ್ಲೆಗೆ ಸದ್ಯಕ್ಕೆ ಪೇ & ಯೂಸ್ ಸುಲಭ್ ಶೌಚಾಲಯವೇ ಗತಿಯಾಗಿದೆಯಂತೆ. ತನ್ನನ್ನು ಈ ಸ್ಥಿತಿಗೆ ನೂಕಿ ಹೋಗಿರೊ ಹಳೇ ಎಮ್ಮೆಲ್ಲೆ ಸತೀಶನ ಮೇಲೆ ಟಾಯ್ಲೆಟ್ ಕಳ್ಳತನದ ಕೇಸು ಹಾಕಲು ಲೂಪಾಲಿ ಮೇಡಂ ಸಿದ್ದರಾಗಿದ್ದಾರೆಂದು ಸುಲಭ್ ಶೌಚಾಲಯದ ಸಿಬ್ಬಂದಿ ತಿಳಿಸಿದ್ದಾರೆ. ನೂರಾರು ಕೋಟಿ ಗಣಿ ಯವಾರ ನಡೆಸೋ ಸತೀಶನಿಗೆ ಟಾಯ್ಲೆಟ್ ಐಟಂಗಳನ್ನ ಕದ್ಕೊಂಡು ಹೋಗೋ ದುರ್ಗತಿ ಯಾಕೆ ಬಂತೆಂದು ವಿಚಾರಿಸಿದಾಗ ಹೊಸ ಸಂಗತಿಯೊಂದು ಬಯಲಾಗಿದೆ. ವಾಸ್ತುಪ್ರಕಾರ ಪೂಜೆ ಮಾಡಿ ಅಳವಡಿಸಿರೋ ಇದೇ ಐಟಂಗಳನ್ನು ಬಳಸಿದ್ರೆ ನಿನಗೆ ಒಳ್ಳೆಯದೆಂದು ಗಢವ ಗೋರಿಲ್ಲ ಬ್ರಮ್ಮಾಂಡ ಪಿಂಡ ಟಾಯ್ಲೆಟ್ಟೋಪದೇಶ ಮಾಡಿದ್ದನಂತೆ. ಅದಕ್ಕೆಂದು ಅಧಿಕಾರ ಎಗರಿಹೋದ ಮೇಲೆ ಮಾಜಿ ಎಮ್ಮೆಲ್ಲೆ ಸತೀಶನು ಟಾಯ್ಲೆಟ್ಟನ್ನು ಅನಾಮತ್ತಾಗಿ ಪಾರ್ಟ್ ಪಾರ್ಟಾಗಿ ಬಿಚ್ಚಿಕೊಂಡು ಹೋಗಿದ್ದಾನೆಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

*****

ದನದ ಮಾಂಸ ತಿನ್ನುವುದನ್ನು ನಿಲ್ಲಿಸಿದರೆ, ಗೋರಕ್ಷಕರಿಂದ ನಡೆಯುತ್ತಿರುವ ದನಸಾಗಾಟಗಾರರ ಕೊಲೆಗಳು ನಿಲ್ಲುತ್ತವೆಂದು ರಾಷ್ಟ್ರೀಯ ಸರ್ವನಾಶಕ ಸಂಘದ ಇಂದ್ರೇಶನೆಂಬ ಮುದಿಹೋರಿ ಸ್ಟೇಟ್‍ಮೆಂಟ್ ಎಸೆದಿದೆ. ‘ದನದಮಾಂಸ ತಿನ್ನುವರನ್ನು ನಾವು ಕೊಲ್ತಾನೇ ಇರ್ತೇವೆ, ಜೀವ ಬೇಕೋ ದನದ ಮಾಂಸ ಬೇಕೋ?’ ಅಂತ ಬೆದರಿಕೆಯೊಡ್ಡಿದೆ. ಇತ್ತಕಡೆ ಪಕೋಡತಾತನ ಆಳ್ವಿಕೆಯಲ್ಲಿ ಇಂಡಿಯದೇಶ ಜಗತ್ತಿನಲ್ಲೇ ಅತಿದೊಡ್ಡ ದನದಮಾಂಸ ರಫ್ತುದಾರ ದೇಶವಾಗಿದೆ. ದನಹಸುಗಳನ್ನು ಕೊಂದು ರಫ್ತುಮಾಡೋ ಕಂಪನಿಗಳಿಂದ ಎಂಜಲೆತ್ತಿಕೊಂಡು ಓಡಾಡ್ತಿರೋ ಇವರು ದನಗಳನ್ನು ರಕ್ಷಿಸೋ ಮಾತನಾಡುವುದು, ವಿಕೃತಕಾಮಿ ಉಮೇಶ್ ರೆಡ್ಡಿ ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಹೊಡೆದಂತೆ ಕೇಳುತ್ತದೆಯೆಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...