Homeಮುಖಪುಟಈಶಾ ಯೋಗ ಕೇಂದ್ರದ ಸ್ವಯಂಸೇವಕ ನಾಪತ್ತೆ ಪ್ರಕರಣ: ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ!

ಈಶಾ ಯೋಗ ಕೇಂದ್ರದ ಸ್ವಯಂಸೇವಕ ನಾಪತ್ತೆ ಪ್ರಕರಣ: ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ!

2016ರಿಂದ ಈಶಾ ಫೌಂಡೇಶನ್‌ನಿಂದ ಒಟ್ಟು 6 ಮಂದಿ ನಾಪತ್ತೆಯಾಗಿರುವುದಾಗಿ ತಮಿಳುನಾಡು ಪೊಲೀಸರು ಈ ಹಿಂದೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು.

- Advertisement -
- Advertisement -

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಯೋಗ ಕೇಂದ್ರದ ಸ್ವಯಂಸೇವಕರೊಬ್ಬರು ನಾಪತ್ತೆಯಾಗಿರುವ ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸರು ತೋರಿರುವ ದೀರ್ಘಕಾಲದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ತನಿಖೆಯನ್ನು ಸಿಬಿ-ಸಿಐಡಿಗೆ (CB-CID) ವರ್ಗಾಯಿಸಿ ಮಹತ್ವದ ಆದೇಶ ಹೊರಡಿಸಿದೆ. ಕಾನೂನು ಸುದ್ದಿ ಜಾಲತಾಣ ‘ಬಾರ್ ಅಂಡ್ ಬೆಂಚ್’ ಈ ಕುರಿತು ವರದಿ ಪ್ರಕಟಿಸಿದೆ.

ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನ ಹಾಗೂ ಮೂರು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವುದಾಗಿ ಪೊಲೀಸರೇ ನೀಡಿದ್ದ ಭರವಸೆಯ ಹೊರತಾಗಿಯೂ ತನಿಖೆ ಪೂರ್ಣಗೊಳಿಸಲು ವಿಫಲವಾಗಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಜಿ.ಕೆ. ಇಳಂತಿರೈಯನ್ ಅವರ ಪೀಠವು ಅಕ್ಟೋಬರ್ 27ರಂದು ಈ ಆದೇಶ ನೀಡಿದೆ. 2023ರ ಅಪರಾಧ ಸಂಖ್ಯೆ 26ರ ಪ್ರಕರಣದಲ್ಲಿ ಪೊಲೀಸರು ಇಂದಿಗೂ ತನಿಖೆಯನ್ನು ಮುಂದುವರಿಸಿಲ್ಲ ಮತ್ತು ತನಿಖೆ ಪೂರ್ಣಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ 46 ವರ್ಷದ ಗಣೇಶನ್ ಎಂಬುವವರು 2023ರ ಮಾರ್ಚ್ ತಿಂಗಳಿನಿಂದ ನಾಪತ್ತೆಯಾಗಿದ್ದರು. ಹಲವು ದಿನಗಳ ಕಾಲ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಸಹೋದರ ತಿರುಮಲೈ ಅವರು ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಿದ್ದರು. ಈ ವೇಳೆ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಗಣೇಶನ್ ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಕೇಂದ್ರದವರು ತಿಳಿಸಿದ್ದರು. ಬಳಿಕ ಕೊಯಮತ್ತೂರಿನ ಆಲಂದುರೈ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿತ್ತು.

ತಮ್ಮ ಸಹೋದರನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ತಿರುಮಲೈ ಅವರು ಹೈಕೋರ್ಟ್‌ನಲ್ಲಿ “ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರುವ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು”. 2024ರ ಮಾರ್ಚ್‌ನಲ್ಲಿ ನಡೆದ ವಿಚಾರಣೆಯ ವೇಳೆ, 2016ರಿಂದ ಈಶಾ ಫೌಂಡೇಶನ್‌ನಿಂದ ಒಟ್ಟು ಆರು ಮಂದಿ ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಮಿಳುನಾಡು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ನಂತರ 2024ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಎಂ.ಎಸ್. ರಮೇಶ್ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದ್ದ ಪೊಲೀಸರು, ಕೇಂದ್ರದ ಉದ್ಯೋಗಿಗಳು ಮತ್ತು ಸ್ವಯಂಸೇವಕರು ಸೇರಿದಂತೆ 36 ಮಂದಿಯನ್ನು ವಿಚಾರಣೆ ನಡೆಸಿರುವುದಾಗಿ ತಿಳಿಸಿ ವರದಿ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೋರಿದ್ದರು.

ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸುವಂತೆ ಕೋರಿ ತಿರುಮಲೈ ಅವರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆಯ ಸಂದರ್ಭದಲ್ಲಿ ಇದೇ ವರ್ಷದ ಜೂನ್ 9ರಂದು ಸ್ಥಿತಿಗತಿ ವರದಿ ಸಲ್ಲಿಸಿದ್ದ ಪೊಲೀಸರು, ಮೂರು ತಿಂಗಳೊಳಗೆ ತನಿಖೆ ಮುಗಿಸಿ ಅಂತಿಮ ವರದಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದ್ದರು. ಆದರೆ ಪೊಲೀಸರು ತಮ್ಮ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ಇಳಂತಿರೈಯನ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖೆಯನ್ನು ಆಲಂದುರೈ ಪೊಲೀಸ್ ಠಾಣೆಯಿಂದ ಹಿಂಪಡೆದು ಕೊಯಮತ್ತೂರು ಸಿಬಿ-ಸಿಐಡಿಗೆ ಹಸ್ತಾಂತರಿಸಿರುವ ಹೈಕೋರ್ಟ್, ಪ್ರಕರಣದ ಸಂಪೂರ್ಣ ಡೈರಿ (Case Diary) ಕೈಸೇರಿದ 12 ವಾರಗಳೊಳಗೆ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ಸಿಬಿ-ಸಿಐಡಿಗೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲ ಎಸ್.ಕೆ.ಡಿ. ರಾಜಶೇಖರ್ ಹಾಗೂ ಪೊಲೀಸ್ ಇಲಾಖೆಯ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ. ಅಮರನಾಥ್ ವಾದ ಮಂಡಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ : 1983ರ ಗಲಭೆ ವೇಳೆ ನಿರಾಶ್ರಿತರಾಗಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿದ ಬಿಜೆಪಿ ಸರ್ಕಾರ

ಅಸ್ಸಾಂನ ಲಖಿಂಪುರದಲ್ಲಿ ಅಧಿಕಾರಿಗಳು ಶುಕ್ರವಾರ (ನ.13) 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದ್ದಾರೆ. 1983ರಲ್ಲಿ ರಾಜ್ಯದಾದ್ಯಂತ ನಡೆದ ಗಲಭೆಗಳ ಸಂದರ್ಭದಲ್ಲಿ ನಿರಾಶ್ರಿತರಾದಾಗಿನಿಂದ ಈ ಕುಟುಂಬಗಳು ಬೊಗಿನದಿಯ ಸರ್ಕಾರಿ ಭೂಮಿಯೊಂದರಲ್ಲಿ ವಾಸಿಸುತ್ತಿದ್ದವು. ತಮ್ಮ ಹಿಂದೂ...

ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗೆ ಚಾಲನೆ

'ತೆಲಂಗಾಣ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ'ಗೆ ಶನಿವಾರ (ನ.14) ಹೈದರಾಬಾದ್‌ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ....

ಸಾಮಾನ್ಯ ಕ್ಷೇತ್ರವೇ ಸಾಮರ್ಥ್ಯದ ಪರೀಕ್ಷೆಯೇ? ಮೀಸಲು ಕ್ಷೇತ್ರದ ಗೆಲುವನ್ನು ಪ್ರಶ್ನಿಸುವವರ ಸಂವಿಧಾನಾತ್ಮಕ ಅರಿವು ಎಷ್ಟಿದೆ?

ಮೀಸಲಾತಿಯನ್ನು ಸಂವಿಧಾನ ನೀಡಿದ ಹಕ್ಕು ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುವವರು ಪರಿಶಿಷ್ಟ ಜಾತಿಯ ನಾಯಕರಿಗೆ ಮಾತ್ರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕುತ್ತಿರುವುದು ಯಾವ ರೀತಿಯ ಪ್ರಜಾಪ್ರಭುತ್ವದ ಮನೋಭಾವ? ಭಾರತದ ರಾಜಕೀಯದಲ್ಲಿ ಪರಿಶಿಷ್ಟ...

ಭಾರತ್ ಸಮ್ಮಿಟ್‌ನ 115 ಭಾಷಣಕಾರರಿಗೆ ಭಾರತ ಪ್ರವೇಶ ನಿರಾಕರಣೆ : ವೀಸಾ ವಿಚಾರ ‘ಸಾರ್ವಭೌಮ ಅಧಿಕಾರ’ ಎಂದ ವಿದೇಶಾಂಗ ಸಚಿವಾಲಯ

ಆರಂಭದಲ್ಲಿ ಅನುಮತಿ ನೀಡಿದ ನೀಡಿದ್ದರೂ, ಕಾಂಗ್ರೆಸ್ ಪಕ್ಷದ 'ಭಾರತ್ ಸಮ್ಮಿಟ್'ನಲ್ಲಿ ಭಾಗವಹಿಸಬೇಕಿದ್ದ ಮೂರನೇ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷಣಕಾರರ ಭಾರತ ಪ್ರವೇಶಿಸಕ್ಕೆ ತಡೆಯೊಡ್ಡಲಾಗಿದೆ. ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ...

ಗ್ರಾಮ ದೇವತೆ, ದೇವಸ್ಥಾನದ ಜಾಗ, ಸಾರ್ವಜನಿಕ ರಸ್ತೆ ಕಬಳಿಕೆ ಆರೋಪ; ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಕುಟುಂಬದ ಒತ್ತುವರಿ ಜಾಗ ತೆರವುಗೊಳಿಸಿದ ಅಧಿಕಾರಿಗಳು!

ಜಾನಪದ ಗಾಯಕಿ ಹಾಗೂ ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಕುಟುಂಬವು ದರ್ಭಂಗಾ ಜಿಲ್ಲೆಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಸ್ಥಳೀಯ ಆಡಳಿತವು ಗುರುವಾರ ತೆರವುಗೊಳಿಸಿದೆ. 'ದಿ...

ಜಿಬಿಎ ಚುನಾವಣೆ ಗಡುವು ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅನುಮತಿ ಕೋರಿದ ಕರ್ನಾಟಕ ಚುನಾವಣಾ ಆಯೋಗ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ವಿಧಿಸಿರುವ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ....

ಮುಸ್ಲಿಮರ ಮನೆ ಕೆಡವಿದ ಬುಲ್ಡೋಜರ್‌ಗಳೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದ ಯೋಗಿ ಆದಿತ್ಯನಾಥ್; ಹೆಚ್ಚಿನ ಉತ್ಪಾದನೆ, ರಫ್ತಿಗೆ ಕರೆ 

ಲಖನೌ: ಮುಸ್ಲಿಮರು, ದಲಿತರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ನಡೆದಿರುವ ಮನೆ, ಕಟ್ಟಡಗಳ ಧ್ವಂಸ ಕಾರ್ಯಾಚರಣೆಗಳ ಮೂಲಕ ವಿವಾದದ ಕೇಂದ್ರವಾಗಿರುವ ಬುಲ್ಡೋಜರ್‌ಗಳನ್ನೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದು...

ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರಕ್ಕೆ ವಿಶೇಷ ಅಧಿವೇಶನ: ‘ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದ ಪ್ರಿಯಾಂಕಾ

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಉದ್ದೇಶದಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ...

ನನ್ನ ಫೋನ್ ಟ್ಯಾಪ್ ಮಾಡುತ್ತಿರುವ ಪ್ರಧಾನಿ, ಅವರ ವಿರುದ್ಧದ ಸಾಕ್ಷ್ಯಗಳೇನು ಎಂಬುದು ಅವರಿಗೆ ಗೊತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲಿವೆ. ಅದನ್ನು ಪ್ರಧಾನಿ ಟ್ಯಾಪ್ ಮಾಡುತ್ತಿದ್ದಾರೆ ಎಂದು...

ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸಿದೆ; ವ್ಯವಸ್ಥಿತ ಹತ್ಯೆ, ವಿನಾಶವನ್ನು ಪುನರುಚ್ಚರಿಸಿದ ನೊಬೆಲ್ ಪುರಸ್ಕೃತೆ ನವಿ ಪಿಳ್ಳೈ 

ಗಾಜಾ/ಡರ್ಬನ್: ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನಡೆಸಿರುವುದು ಕೇವಲ ಯುದ್ಧದ ಭಾಗವಾಗಿ ನಡೆದ ದಾಳಿಗಳಲ್ಲ, ಬದಲಿಗೆ ಒಂದು ಜನಸಮುದಾಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಉದ್ದೇಶದಿಂದ ನಡೆಸಿದ ವ್ಯವಸ್ಥಿತ ನರಮೇಧ ಎಂಬ ತಮ್ಮ ಹಿಂದಿನ...