Homeಮುಖಪುಟಹೈದರಾಬಾದ್‌ನಲ್ಲಿ ಇಸ್ರೇಲಿ ಕಂಪನಿಗಳ ಕಾರ್ಯಕ್ರಮಕ್ಕೆ ವಿರೋಧ : SIO, APCR ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ...

ಹೈದರಾಬಾದ್‌ನಲ್ಲಿ ಇಸ್ರೇಲಿ ಕಂಪನಿಗಳ ಕಾರ್ಯಕ್ರಮಕ್ಕೆ ವಿರೋಧ : SIO, APCR ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸರು

- Advertisement -
- Advertisement -

ಹೈದರಾಬಾದ್‌ನ ಟಿ-ಹಬ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ಸೋಮವಾರ (ನ.16) ಮುಂಜಾನೆ ತೆಲಂಗಾಣ ಪೊಲೀಸರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ನಾಯಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

maktoobmedia.com ವರದಿಯ ಪ್ರಕಾರ, ಹೈದರಾಬಾದ್‌ನ ಮಿರ್‌ಚೌಕ್ ಪೊಲೀಸರು ಎಸ್‌ಐಒ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ತಾಜ್ ಮತ್ತು ರಾಜ್ಯ ಕಾರ್ಯದರ್ಶಿ ತಕಿಯುದ್ದೀನ್ ಝೈದ್ ಅವರನ್ನು ವಶಕ್ಕೆ ಪಡೆದಿದ್ದು, ಆದಿಲಾಬಾದ್‌ನ ಇಚೋಡಾದಲ್ಲಿ ಎಪಿಸಿಆರ್ ರಾಜ್ಯ ಸಂಯೋಜಕ ಉಮರ್ ಫಾರೂಕ್ ಅವರನ್ನು ಕೂಡ ಪೊಲೀಸರು ಪಡೆದಿದ್ದಾರೆ.

ರಾಜ್ಯ ಸರ್ಕಾರ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದ ನಾಗರಿಕ ಗುಂಪುಗಳ ಪತ್ರಿಕಾಗೋಷ್ಠಿಯಲ್ಲಿ ಈ ಮೂವರೂ ಉಪಸ್ಥಿತರಿದ್ದರು ಎಂದು ವರದಿ ಹೇಳಿದೆ.

ಎಐಎಂಐಎಂ ಚಾರ್ಮಿನಾರ್ ಶಾಸಕ ಮೀರ್ ಝುಲ್ಫಿಕರ್ ಅಲೀ ಮಧ್ಯಪ್ರವೇಶಿಸಿದ ನಂತರ, ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸಲಾಗಿಲ್ಲ. ಈ ಬಂಧನಗಳನ್ನು ಸಂಘಟನೆಗಳು ‘ದಮನಕಾರಿ ಕ್ರಮ’ ಎಂದು ಕರೆದಿವೆ.

“ಆತ್ಮಸಾಕ್ಷಿಯ ಧ್ವನಿಗಳನ್ನು ಹತ್ತಿಕ್ಕುವುದರಿಂದ ದೃಢನಿಶ್ಚಯ, ಧೈರ್ಯ ಮತ್ತು ನ್ಯಾಯದಿಂದ ಕೂಡಿರುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ಪ್ಯಾಲೆಸ್ತೀನ್‌ಗೆ ನಮ್ಮ ಬೆಂಬಲ ಮತ್ತು ಒಗ್ಗಟ್ಟು ಸದಾ ಅಚಲವಾಗಿರುತ್ತದೆ” ಎಂದು ಎಸ್‌ಐಒ ತೆಲಂಗಾಣ ತನ್ನ ಎಕ್ಸ್ ಬರೆದುಕೊಂಡಿದೆ.

“ಇದು ಕೇವಲ ಬೆದರಿಕೆ ಮತ್ತು ಇಸ್ರೇಲ್‌ಗೆ ನೀಡುತ್ತಿರುವ ಅಚಲ ಬೆಂಬಲವಲ್ಲದೆ ಬೇರೇನೂ ಅಲ್ಲ, ಹೈದರಾಬಾದ್ ನಗರ ಪೊಲೀಸರ ಈ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಸಾಮಾಜಿಕ ಕಾರ್ಯಕರ್ತ ಎಸ್‌ಕ್ಯೂ ಮಸೂದ್ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.

ತೆಲಂಗಾಣ ಸರ್ಕಾರದ ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್ ಆಗಿರುವ ಟಿ-ಹಬ್, ನವೆಂಬರ್ 16 ರಂದು 20 ಇಸ್ರೇಲಿ ತಂತ್ರಜ್ಞಾನ ಕಂಪನಿಗಳ ನಿಯೋಗಕ್ಕೆ ಆತಿಥ್ಯ ವಹಿಸುತ್ತಿದೆ. ಈ ಕಂಪನಿಗಳ ಪೈಕಿ ಐದು ಕಂಪನಿಗಳು ಗಾಝಾ ಅಥವಾ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ಬಳಸುವ ಹಾರ್ಡ್‌ವೇರ್, ಸಾಫ್ಟ್‌ವೇರ್ ಅಥವಾ ಸೇವೆಗಳನ್ನು ಪೂರೈಸುತ್ತವೆ ಎಂದು ‘ಸಿಯಾಸತ್ ಡೈಲಿ’ ತನಿಖಾ ವರದಿ ಮಾಡಿದೆ.











ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೋಷಯುಕ್ತ ಬ್ರೇಕ್‌ಗಳೊಂದಿಗೆ 463 ಕಿ.ಮೀ. ಸಂಚರಿಸಿದ ವಂದೇ ಭಾರತ್ ರೈಲು; ತನಿಖೆಗೆ ಆದೇಶ

ಬ್ರೇಕ್ ಸಾಮರ್ಥ್ಯದ ಕೊರತೆಯ ಬಗ್ಗೆ ಲೋಕೋ ಪೈಲಟ್ ಎಚ್ಚರಿಕೆ ನೀಡಿದ್ದರೂ ಸಹ, ಖಾಲಿ ವಂದೇ ಭಾರತ್ ರೈಲನ್ನು ಅಕ್ಟೋಬರ್ 24 ರಂದು ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ನಡುವೆ 463 ಕಿ.ಮೀ. ದೂರ...

ಹಲವು ಸಾವುಗಳು ವರದಿಯಾಗಿದ್ದರೂ, ಇರಾನ್ ಯುದ್ಧದಲ್ಲಿ ‘ಕಳೆದ 5 ತಿಂಗಳಲ್ಲಿ ಒಬ್ಬ ಸೈನಿಕನನ್ನೂ ಕಳೆದುಕೊಂಡಿಲ್ಲ’ ಎಂದ ಟ್ರಂಪ್!

ಇರಾನ್ ವಿರುದ್ಧದ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದು, ಕಳೆದ ಐದು ತಿಂಗಳಲ್ಲಿ ಒಬ್ಬ ಅಮೆರಿಕನ್ ಸೈನಿಕನೂ ಪ್ರಾಣ ಕಳೆದುಕೊಂಡಿಲ್ಲ ಎಂದು...

‘ಹೊಸ ಸರ್ಕಾರದಲ್ಲೂ ಸುಲಿಗೆ ದಂಧೆ ಮುಂದುವರಿದಿದೆ’: ಅಕ್ರಮ ತಡೆಯಲು ಒಂದು ವರ್ಷ ಕಾಲಾವಕಾಶ ಕೋರಿದ ಪಶ್ಚಿಮ ಬಂಗಾಳದ ಹಣಕಾಸು ಸಚಿವ!

ಪಶ್ಚಿಮ ಬಂಗಾಳದಲ್ಲಿ ‘ಬದಲಾವಣೆಯ ಭರವಸೆ’ ನೀಡಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ, ರಾಜ್ಯದಲ್ಲಿ ‘ಸಿಂಡಿಕೇಟ್ ಸಂಸ್ಕೃತಿ’ ಮತ್ತು ಸುಲಿಗೆ (Extortion) ದಂಧೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿದೆ ಎಂಬ ಕಠಿಣ...

ದೇಶ ಆಳಲು ಬಿಜೆಪಿ ಅನರ್ಹ: ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತ ಮೌಲ್ಯಗಳ ವಿರೋಧಿ ಪಕ್ಷ:   ಸಿದ್ದರಾಮಯ್ಯ

ಬೆಂಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶಯಗಳು ಹಾಗೂ ಜಾತ್ಯತೀತ ಮೌಲ್ಯಗಳಿಗೆ ಬಿಜೆಪಿ ವಿರುದ್ಧವಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ದೇಶವನ್ನು ಆಳಲು ಅನರ್ಹ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಭಾರತ ಬಿಟ್ಟು 16 ವರ್ಷಗಳ ಬಳಿಕ ಬ್ರಿಟಿಷ್ ಪೌರತ್ವ ಪಡೆದ ಲಲಿತ್ ಮೋದಿ: ‘ಗಾಡ್ ಸೇವ್ ದಿ ಕಿಂಗ್’ ಎಂದು ಘೋಷಣೆ!

ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ, ಹಣಕಾಸು ಅವ್ಯವಹಾರಗಳು ಮತ್ತು ಐಪಿಎಲ್ ಸಂಬಂಧಿತ ಆರೋಪಗಳಡಿ ಜಾರಿ ನಿರ್ದೇಶನಾಲಯ (ED) ಸೇರಿದಂತೆ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಜಿ ಅಧ್ಯಕ್ಷ ಲಲಿತ್...

ಮಹಾರಾಷ್ಟ್ರ ಎಸ್‌ಐಆರ್ : ನೋಟಿಸ್ ನೀಡಲಾಗಿದ್ದ ಶೇ.99ಕ್ಕೂ ಹೆಚ್ಚು ಮತದಾರರ ಮರು ಸೇರ್ಪಡೆ

ಮಹಾರಾಷ್ಟ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಸಂದರ್ಭದಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದ 1.2 ಕೋಟಿ ಮತದಾರರ ಪೈಕಿ ಶೇಕಡಾ 99ಕ್ಕಿಂತ ಹೆಚ್ಚು ಮಂದಿಯನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹಿಂದೂಸ್ತಾನ್...

ಆರ್‌ಎಸ್‌ಎಸ್‌ ನಂಟಿರುವ ನಿಗಮ ಮಂಡಳಿ ನೇಮಕಾತಿದಾರರಿಗೆ ಎಚ್ಚರಿಕೆ: ರಾಜೀನಾಮೆ ನೀಡದಿದ್ದರೆ ಸರ್ಕಾರದಿಂದಲೇ ನೇಮಕಾತಿ ರದ್ದು: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕಗೊಂಡಿರುವ ಆರ್‌ಎಸ್‌ಎಸ್‌ ಸಂಪರ್ಕ ಹೊಂದಿರುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಅವರ ನೇಮಕಾತಿಗಳನ್ನು...

ಪ್ಯಾಲೆಸ್ಟೀನಿಯನ್ನರ ಸಂಪನ್ಮೂಲ ಶೋಷಣೆ ನಿಲ್ಲಿಸುವಂತೆ ಇಸ್ರೇಲ್‌ಗೆ 151 ದೇಶಗಳ ಆಗ್ರಹ: ನಿರ್ಣಯಕ್ಕೆ ಬೆಂಬಲ ಸೂಚಿಸಿದ ಭಾರತ

ಪ್ಯಾಲೆಸ್ಟೀನಿಯನ್ನರ ಭೂಮಿ, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಇಸ್ರೇಲ್‌ನ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ಮಹತ್ವದ ನಿರ್ಣಯಕ್ಕೆ ಭಾರತ ಸೇರಿದಂತೆ 151 ರಾಷ್ಟ್ರಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಬಲ...

ಈಶಾ ಯೋಗ ಕೇಂದ್ರದ ಸ್ವಯಂಸೇವಕ ನಾಪತ್ತೆ ಪ್ರಕರಣ: ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ!

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಈಶಾ ಯೋಗ ಕೇಂದ್ರದ ಸ್ವಯಂಸೇವಕರೊಬ್ಬರು ನಾಪತ್ತೆಯಾಗಿರುವ ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸರು ತೋರಿರುವ ದೀರ್ಘಕಾಲದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ತನಿಖೆಯನ್ನು ಸಿಬಿ-ಸಿಐಡಿಗೆ (CB-CID)...

ಅಸ್ಸಾಂ : 1983ರ ಗಲಭೆ ವೇಳೆ ನಿರಾಶ್ರಿತರಾಗಿದ್ದ 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿದ ಬಿಜೆಪಿ ಸರ್ಕಾರ

ಅಸ್ಸಾಂನ ಲಖಿಂಪುರದಲ್ಲಿ ಅಧಿಕಾರಿಗಳು ಶುಕ್ರವಾರ (ನ.13) 132 ಬಂಗಾಳಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಕೆಡವಿದ್ದಾರೆ. 1983ರಲ್ಲಿ ರಾಜ್ಯದಾದ್ಯಂತ ನಡೆದ ಗಲಭೆಗಳ ಸಂದರ್ಭದಲ್ಲಿ ನಿರಾಶ್ರಿತರಾದಾಗಿನಿಂದ ಈ ಕುಟುಂಬಗಳು ಬೊಗಿನದಿಯ ಸರ್ಕಾರಿ ಭೂಮಿಯೊಂದರಲ್ಲಿ ವಾಸಿಸುತ್ತಿದ್ದವು. ತಮ್ಮ ಹಿಂದೂ...