Homeಮುಖಪುಟಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ: ಎನ್‌ಪಿಆರ್-ಎನ್ಆರ್‌ಸಿಯ ನಕಲಿ ಮುಖ!

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ.

- Advertisement -
- Advertisement -

ಗೌತಮ್ ಭಾಟಿಯಾ

ಅನುವಾದ: ನಿಖಿಲ್ ಕೋಲ್ಪೆ

ಎಪ್ರಿಲ್ ತಿಂಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಗಾಗಿ ಕೇಂದ್ರ ಸಂಪುಟವು 3,900 ಕೋಟಿ ರೂ.ಗಳ ಬಜೆಟನ್ನು ಅಂಗೀಕರಿಸಿದೆ. ತಕ್ಷಣವೇ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಹೇಳಿಕೆ ನೀಡಿ, ಇದು ಕೇವಲ ಒಂದು ಗಣತಿ ಕಾರ್ಯಕ್ರಮವಾಗಿದ್ದು, ಅದಕ್ಕೂ ವಿವಾದಾತ್ಮಕ ಮತ್ತು ಎಲ್ಲರೂ ಭಯಪಟ್ಟಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೂ ಸಂಬಂಧವಿಲ್ಲ ಎಂದರು.

ರಾಷ್ಟ್ರವ್ಯಾಪಿ ಪೌರತ್ವ ನೋಂದಣಿಯ ಕುರಿತು ಕೇಂದ್ರ ಸರಕಾರವು ಈ ತನಕ ಚರ್ಚಿಸಿಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯೊಂದರಲ್ಲಿ ಹೇಳಿದ ಬೆನ್ನಲ್ಲೇ ಈ ಮಂತ್ರಿಗಳು, ಎನ್‌ಪಿಆರ್ ಜನಗಣತಿಯಂತೆಯೇ ಒಂದು ನಿರುಪದ್ರವಿ ಕಾರ್ಯಕ್ರಮ ಎಂದು ವಾದಿಸಿದರು. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯವಿಲ್ಲ; ಇದನ್ನು ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗಾಗಿ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು.

ಅಲ್ಪ ಪರಿಶೀಲನೆಯಲ್ಲಿಯೇ ಇವರಿಬ್ಬರ ಹೇಳಿಕೆಗಳನ್ನು ಚಿಂದಿ ಉಡಾಯಿಸಬಹುದು. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಿನ ಸಂಬಂಧವನ್ನು ಬಿಜೆಪಿ ನಾಯಕರುಗಳೇ ಸಂಸತ್ತಿನಲ್ಲಿಯೇ ಏನಿಲ್ಲವೆಂದರೂ ಒಂಭತ್ತು ಸಲ ಉಲ್ಲೇಖಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಎತ್ತಿತೋರಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಇವೆರಡರ ನಡುವಿನ ಸಂಬಂಧವನ್ನು ಕಾನೂನು ಮೂಲಕವೂ ಗಟ್ಟಿಗೊಳಿಸಲಾಗಿದೆ. ವಾಜಪೇಯಿ ಸರಕಾರವು 2003ರಲ್ಲಿಯೇ ಭಾರತೀಯ ಪೌರತ್ವ ಕಾಯಿದೆಯನ್ನು ತಿದ್ದುಪಡಿ ಮಾಡಿ, ವಿಧಿ 14(ಎ)ಯನ್ನು ತರುವುದರ ಮೂಲಕ ಇದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸಿತ್ತು.

ಇದನ್ನು ಎಷ್ಟು ಸಾಧ್ಯವೋ ಅಷ್ಟು ಷೇರ್ ಮಾಡುವ ಅಗತ್ಯವಿದೆ. ಏಕೆಂದರೆ ಎನ್‌‌ಆರ್‌ಸಿ ಸಿಎಎ ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ದೇಶದ ಪ್ರಧಾನಿಯೊಬ್ಬರು ಈ ರೀತಿ ಹಸೀ ಸುಳ್ಳನ್ನು ಸಾರ್ವಜನಿಕವಾಗಿ ಗಟ್ಟಿ ಗಂಟಲಲ್ಲಿ ಕಿರುಲುವುದು ದೇಶಕ್ಕೇ ಅಪಮಾನವಲ್ಲವೇ? ಸಂಸತ್ತಿನಲ್ಲೇ ತನ್ನ ಗೃಹ ಸಚಿವ ಹೇಳಿದ್ದನ್ನು, ತಾನೇ ಮಾಧ್ಯಮ‌ ಸಂದರ್ಶನದಲ್ಲಿ ಹೇಳಿದ್ದನ್ನು ಮರೆತಿರಲು ಸಾಧ್ಯವೇ? ಆ ಪಾಟಿ ಮರೆವಿನ ಖಾಯಿಲೆ ಇದ್ದರೆ ಮೊದಲು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಚಿಕಿತ್ಸೆ ಕೊಡಿಸಬೇಕು. ಇಲ್ಲ ಎಂದಾದರೆ ಇಂತಹ ಸುಳ್ಳು ಹೇಳಿದ್ದಕ್ಕೆ ಕ್ಷಮೆ ಯಾಚಿಸಬೇಕು.ಯಾವುದಾದರೂ ಮೀಡಿಯಾದಲ್ಲಿ ಯಾರಾದರೂ ಇದನ್ನು ಬಯಲುಗೊಳಿಸಿ ಛೀಮಾರಿ‌ ಹಾಕಿದ್ದಾರೆಯೇ? ಇಲ್ಲದಿದ್ದರೆ ಅವರು ಮಾಧ್ಯಮ ಹೇಗಾಗುತ್ತಾರೆ?

Posted by Vasu Hv on Tuesday, December 24, 2019

ಇದಕ್ಕೆ ಮುಂಚಿತವಾಗಿ 2002ರಲ್ಲಿಯೇ ಪೌರತ್ವ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯತ್ತ ಒಂದು ಖಂಡಿತವಾದ ಹೆಜ್ಜೆ ಎಂದು ಸ್ಪಷ್ಟಪಡಿಸಲಾಗಿದೆ. ಇದು ಪೌರತ್ವ ನಿಯಮಾವಳಿಗಳ ನಿಯಮ 4(3)ರ ಸಾಲೊಂದರಲ್ಲಿ ಅಡಗಿದೆ. “ಪ್ರತಿಯೊಂದು ಕುಟುಂಬ ಮತ್ತು ವ್ಯಕ್ತಿಯ ವಿವರಗಳನ್ನು ಸ್ಥಳೀಯ ಜನಸಂಖ್ಯಾ ರಿಜಿಸ್ಟರ್‌ನಲ್ಲಿ ನಮೂದಿಸಬೇಕು ಮತ್ತು ಅದನ್ನು ಸ್ಥಳೀಯ ರಿಜಿಸ್ಟ್ರಾರ್ ತನಿಖೆಗೆ ಒಳಪಡಿಸಿ ಪರಿಶೀಲಿಸಬೇಕು” ಎಂದು ಅದರಲ್ಲಿ ಹೇಳಲಾಗಿದೆ. ಬೇರೆಯೇ ರೀತಿಯಲ್ಲಿ ಹೇಳುವುದಾದರೆ, ಎನ್‌ಪಿಆರ್‌ಗಾಗಿ ವ್ಯಕ್ತಿಗಳು ಮತ್ತು ಕುಟುಂಬಗಳಿಂದ ಸಂಗ್ರಹಿಸಲಾದ ಮಾಹಿತಿಗಳನ್ನು ಎನ್‌ಆರ್‌ಸಿಗಾಗಿ ನಿಯೋಜಿತರಾದ ಸರಕಾರಿ ಅಧಿಕಾರಿಗಳು ಪರಿಶೀಲಿಸಲು ಕಾನೂನು ಅವಕಾಶ ಮಾಡಿಕೊಡುತ್ತದೆ.

ನಿಯಮ 4(4) ಈ ನಿಯಮಾವಳಿಗಳ ಉದ್ದೇಶವನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಸುತ್ತದೆ. ಅದರ ಪ್ರಕಾರ ಯಾರ ಪೌರತ್ವ ಸಂಶಯಾಸ್ಪದವಾಗಿದೆಯೋ ಅಂತವರ ವಿವರಗಳನ್ನು ಸ್ಥಳೀಯ ರಿಜಿಸ್ಟ್ರಾರರು ಜನಸಂಖ್ಯಾ ನೋಂದಣಿಯಲ್ಲಿ ಸೂಕ್ತ ಟಿಪ್ಪಣಿಯೊಂದಿಗೆ  ಮುಂದಿನ ತನಿಖೆಗಾಗಿ ನೋಂದಾಯಿಸುತ್ತಾರೆ. ಇಲ್ಲಿ ಎನ್‌ಪಿಆರ್ ಮತ್ತು ಎನ್‌ಆರ್‌ಸಿಗಳ ಪ್ರಕ್ರಿಯೆಗಳು ಒಂದರೊಳಗೊಂದು ಕಲಸಿಹೋಗುತ್ತವೆ. ಎನ್‌ಪಿಆರ್ ಪ್ರಕ್ರಿಯೆಯಲ್ಲಿ ನೀಡಲಾದ ಮಾಹಿತಿಗಳ ಆಧಾರದಲ್ಲಿ ಒಬ್ಬ ವ್ಯಕ್ತಿ ‘ಸಂಶಯಾಸ್ಪದ ನಾಗರಿಕ’ನೇ ಎಂದು ನಿರ್ಧರಿಸಲು ಪೌರತ್ವ ನಿಯಮಾವಳಿಗಳು ಸ್ಥಳೀಯ ಸರಕಾರಿ ಅಧಿಕಾರಿಗಳಿಗೆ ಅವಕಾಶ ಒದಗಿಸಿಕೊಡುತ್ತವೆ.

ಅಸ್ಸಾಮಿನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿರುವಂತೆ ಲಕ್ಷಾಂತರ ‘ಸಂಶಯಾಸ್ಪದ’ ನಾಗರಿಕರು ದಪ್ಪ ಚರ್ಮದ, ನಿಷ್ಕರುಣಿ ಅಧಿಕಾರಿಗಳ ಮುಂದೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿದೆ. ಕತೆ ಇಲ್ಲಿಗೆ ಮುಗಿಯುವುದಿಲ್ಲ.  ಈ ಬೆಂಕಿಯನ್ನು ಹಾಯ್ದು ಎನ್‌ಆರ್‌ಸಿಯೊಳಗೆ ದಾಖಲಾದರೂ, ತಿದ್ದುಪಡಿಯು ಯಾವುದೇ ವ್ಯಕ್ತಿಗೆ ಈ ಯಾದಿಯಲ್ಲಿರುವ ಯಾವುದೇ ವ್ಯಕ್ತಿಯ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಆಕ್ಷೇಪಣೆಗೆ ಒಳಗಾದ ವ್ಯಕ್ತಿ ಮತ್ತೊಮ್ಮೆ ಅದೇ ಕಷ್ಟದಾಯಕ ಪ್ರಕ್ರಿಯೆಯನ್ನು ಪಾರುಮಾಡಬೇಕಾಗುತ್ತದೆ. ಆಕ್ಷೇಪಣೆ ಮಾಡುವ ವ್ಯಕ್ತಿ ನಿಮ್ಮನ್ನು ಕಂಡರಾಗದ ನೆರೆಮನೆಯವರಾಗಿರಬಹುದು ಅಥವಾ ನಿಮ್ಮ ಕಚೇರಿಯಲ್ಲಿಯೇ ಇರುವ ಪ್ರತಿಸ್ಪರ್ಧಿಯೂ ಆಗಿರಬಹುದು.

ಮತ್ತೊಮ್ಮೆ ಅಸ್ಸಾಮಿನ ಅನುಭವವು ಏನನ್ನು ತಿಳಿಸುತ್ತದೆ ಎಂದರೆ, ಲಕ್ಷಾಂತರ ಜನರ ಮೇಲೆ, ಮುಖ್ಯವಾಗಿ ಮುಸ್ಲಿಮರ ಮೇಲೆ ರಾಶಿಗಟ್ಟಲೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಅನೇಕ ಸಂದರ್ಭಗಳಲ್ಲಿ ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಗಳಿಗೆ ತಾವು ಯಾರ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ ಎಂದೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಗುಂಪಿನಲ್ಲಿ ಗೋವಿಂದ ಎಂಬಂತಹ ದ್ವೇಷ ಸಾಧನೆ.

ಆದುದರಿಂದ ಈ ನಿಯಮಾವಳಿಗಳು ಭಯ, ಅಭದ್ರತೆ, ಕಿರುಕುಳದ ವಾತಾವರಣವನ್ನು ಸೃಷ್ಟಿಸುವುದು ಖಂಡಿತ ಮತ್ತು ಎಲ್ಲವೂ ಕೊನೆಗೆ ಸ್ಥಳೀಯ ಅಧಿಕಾರಿಯ ಮರ್ಜಿಯ ಮೇಲೆ ನಿಂತಿರುತ್ತದೆ. ಆದುದರಿಂದ, ಇದನ್ನೆಲ್ಲಾ ಸಾಧ್ಯ ಮಾಡುವ ಮತ್ತು ಅದಕ್ಕೆ ಕಾನೂನಿನ ನೆಲೆಗಟ್ಟು ಒದಗಿಸುವ ಪೌರತ್ವ ನಿಯಮಾವಳಿ 2003 ಮತ್ತು ಪೌರತ್ವ ಕಾಯಿದೆಯ ವಿಧಿ 14ಎಯನ್ನು ತಕ್ಷಣವೇ ರದ್ದು ಮಾಡುವಂತೆ ನಾವು ತುರ್ತಾಗಿ ಬೇಡಿಕೆ ಸಲ್ಲಿಸಬೇಕಾಗಿದೆ.

ಇಷ್ಟಿದ್ದರೂ, ಎನ್‌ಪಿಆರ್ ನಿರುಪದ್ರವಿ ಮತ್ತು ಅದರ ಉದ್ದೇಶ ಸರಕಾರಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲಪಿಸುವುದು ಎಂದು ಬಿಜೆಪಿ ಹೇಳುತ್ತದೆ. ಇದು ಶುದ್ಧ ಸುಳ್ಳು. ವಕೀಲರಾದ ಮಾಳವಿಕಾ ಪ್ರಸಾದ್ ಅವರು ಹೇಳುವಂತೆ ಎನ್‌ಪಿಆರ್ ಕೇವಲ ಗಣತಿಯಾಗಿದ್ದರೆ, ಅದಕ್ಕೆ ಪೌರತ್ವವನ್ನು ನಿರ್ಧರಿಸುವ ಪೌರತ್ವ ಕಾಯಿದೆಯನ್ನು ಅನ್ವಯಿಸುವ ಅಗತ್ಯವಿರಲಿಲ್ಲ. ಇನ್ನು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಶ್ನೆ ಬಂದರೆ, ಎಲ್ಲದಕ್ಕೂ ಆಧಾರ್ ಕಾರ್ಡೇ ಆಧಾರ ಎಂದು ಸರಕಾರ ಕಳೆದ ಏಳು ವರ್ಷಗಳಿಂದಲೂ ಹೇಳುತ್ತಾಬಂದಿದೆ. ಸರಕಾರದ ಪರ ವಕೀಲರು ನ್ಯಾಯಾಲಯಗಳಲ್ಲಿ ಮತ್ತು ಅದರ ಚೇಲಾಗಳು ಮಾಧ್ಯಮಗಳಲ್ಲಿ ಇದನ್ನೇ ಹೇಳಿದ್ದಾರೆ. ಅಂದರೆ, ಆಧಾರ್ ಎಂಬುದು ಒಂದು ಗುಜುರಿ ದಾಖಲೆ ಎಂದು ಸರಕಾರ ಈಗ ಒಪ್ಪಿಕೊಳ್ಳಲು ಸಿದ್ಧವಿದೆಯೆ?

ಅಂತಿಮವಾಗಿ ಇನ್ನೊಂದು ಆತಂಕಕಾರಿ ವಿಷಯವಿದೆ. ಮೊತ್ತಮೊದಲ ಬಾರಿಗೆ (2010ಕ್ಕೆ ವಿರುದ್ಧವಾಗಿ) ಎನ್‌ಪಿಆರ್ ಹೆತ್ತವರ ಜನನ ಸ್ಥಳ ಮತ್ತು ದಿನಾಂಕದ ದಾಖಲೆಗಳನ್ನು ಕೇಳಲಿದೆ. ಯಾಕೆಂದರೆ ಪೌರತ್ವ ಕಾಯಿದೆಯ ಪ್ರಕಾರ 1987ರ ನಂತರ ಹುಟ್ಟಿದವರು ಹೆತ್ತವರಲ್ಲಿ ಒಬ್ಬರಾದರೂ ಭಾರತೀಯ ಪೌರರು ಎಂದು ಸಾಬೀತುಪಡಿಸಿದರೆ ಮಾತ್ರ ಭಾರತೀಯ ಪೌರರಾಗುತ್ತಾರೆ. ಆದುದರಿಂದ, ಎನ್‌ಪಿಆರ್ ಕೇವಲ ಗಣತಿಗೆ ಸಂಬಂಧಪಡದ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲಾ ರೀತಿಯಲ್ಲಿ ಅದನ್ನು ಪೌರತ್ವದೊಂದಿಗೆ ತಳಕುಹಾಕಿದೆ. ಆದುದರಿಂದ, ದಯವಿಟ್ಟು ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ. ಎನ್‌ಪಿಆರ್ ಮೊದಲು ನಡೆಯುವುದು ಮತ್ತು ಅದರಿಂದ ಪಡೆದ ಮಾಹಿತಿಯನ್ನು ರಾಷ್ಟ್ರವ್ಯಾಪಿ ಎನ್‌ಆರ್‌ಸಿಗಾಗಿ ಬಳಸಿಕೊಳ್ಳಲಾಗುವುದು.

ಎನ್‌ಆರ್‌ಸಿಯು ತಮ್ಮ ಪೌರತ್ವವನ್ನು ಸರಕಾರಿ ಅಧಿಕಾರಿಗಳ ಮುಂದೆ ಸಾಬೀತುಪಡಿಸುವಂತೆ ಪ್ರತಿಯೊಬ್ಬ ನಾಗರಿಕನನ್ನು ಬಲವಂತಪಡಿಸುತ್ತದೆ. ಮತ್ತು ಒಂದು ವೇಳೆ ಹಾಗೆ ಮಾಡಿದರೂ, ಯಾರೂ ಕೂಡಾ ಅದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.  ಮೇಲಾಗಿ ದೇಶದೊಳಗೆ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ವಲಸೆ ನಡೆದಿದೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ಇದನ್ನು ಮಾಡಲಾಗುತ್ತಿದೆ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಪ್ರಜೆಗಳನ್ನು ತೀರಾ ಅನಗತ್ಯವಾಗಿ ಇಂತಹ ಕಂಗೆಡಿಸುವ ಮತ್ತು ನೋವಿನ ಸಂಕಷ್ಟಕ್ಕೆ ತಳ್ಳಿದ್ದಿಲ್ಲ!

(ಲೇಖಕರು ಸುಪ್ರೀಂಕೋರ್ಟಿನ ವಕೀಲರು)


ಇದನ್ನೂ ಓದಿ: ಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...