Homeರಾಜಕೀಯಈ ಅಜಾತಶತ್ರು ತನ್ನ ಹಲ್ಲು, ಉಗುರುಗಳನ್ನು ಧಾರೆಯೆರೆದ ವ್ಯಾಘ್ರನಂತಲ್ಲಾ

ಈ ಅಜಾತಶತ್ರು ತನ್ನ ಹಲ್ಲು, ಉಗುರುಗಳನ್ನು ಧಾರೆಯೆರೆದ ವ್ಯಾಘ್ರನಂತಲ್ಲಾ

- Advertisement -
- Advertisement -

ಅಟಲ್ ಬಿಹಾರಿ ವಾಜಪೇಯಿಯವರು ನಿರ್ಗಮಿಸಿದ್ದಾರೆ. ಅವರು ಮಾತು ನಿಲ್ಲಿಸಿ ಒಂದು ದಶಕವಾಗುತ್ತಾ ಬಂದಿತ್ತು. ಯಾರನ್ನೂ ಗುರುತಿಸಲಾಗದೆ ಮಗುವಿನಂತೆ ನೋಡುತ್ತಿದ್ದರು. ಎಲ್ಲರೂ ಅವರ ಸ್ಥಿತಿ ಕಂಡು ಮರುಗುತ್ತಿದ್ದರು. ಹಾಲಿ ಬಿಜೆಪಿಯ ಹಲವು ಹಿರಿಯರು ವಾಜಪೇಯಿಯಂತಲ್ಲದಿದ್ದರೂ ಒಂಥರದಲ್ಲಿ ಮೌನಿಗಳಾಗಿದ್ದಾರಂತಲ್ಲಾ.
ವಾಜಪೇಯಿಯವರ ನಿಧನಕ್ಕೆ ತಮ್ಮ ಬತ್ತಳಿಕೆಯಲ್ಲಿನ ಎಲ್ಲಾ ಪದಪುಂಜಗಳಿಗೂ ಸಾಣೆಹಿಡಿದು ಝಳಪಿದ ಮಾಧ್ಯಮದ ಬೃಹಸ್ಪತಿಗಳು ಕಡೆಗೆ `ಅಜಾತಶತೃ’ `ಕವಿಹೃದಯಿ’ ಎಂದೆಲ್ಲಾ ಕರೆದು ಸುಸ್ತಾದವಂತಲ್ಲಾ.
ವಾಜಪೇಯಿ ಅಜಾತಶತ್ರು ನಿಜ. ಆದರೂ, ಅವರು ಶತ್ರುಸೈನ್ಯವನ್ನು ಹೊಂದಿದ್ದರು. ಆ ಸೈನ್ಯದ ಸೇನಾಪತಿ ಮಾತ್ರ ಅಡ್ವಾನಿ. ಸದರಿ ಅಡ್ವಾನಿಯವರು ತಮ್ಮ ಗುರುವರ್ಯನನ್ನು ಪ್ರಧಾನಿಯಾಗಿ ಮಾಡಲು ಶ್ರೀ ರಾಮಚಂದ್ರನನ್ನೇ ಬೀದಿಗೆ ತಂದರು. ಅದರಿಂದಾದ ಸಾವುನೋವುಗಳಿಗೆ ಅದ್ವಾನಿಯೇ ಕಾರಣ, ವಾಜಪೇಯಿ ಅಲ್ಲ ಎಂದು ಹೇಗೆ ಹೇಳುವುದು. ಥೂತ್ತೇರಿ..!

*********

ಅಡ್ವಾನಿ ಈ ಅಜಾತಶತ್ರುವನ್ನು ಪ್ರಧಾನಿಯಾಗಿ ಮಾಡಲು ಸೈನ್ಯ ಸಮೇತರಾಗಿ ಹೊರಟಿದ್ದು ಬಾಬರಿ ಮಸೀದಿ ದಿಕ್ಕಿಗೆ. ನೋಡುನೋಡುತ್ತಿದ್ದಂತೆಯೇ ಮಸೀದಿ ನೆಲಸಮವಾಯ್ತು. ಅದಕ್ಕೆ ಸ್ಫೂರ್ತಿ ಅಜಾತಶತೃ ಕವನ. ಏಕೆಂದರೆ ನಮ್ಮ ಅಜಾತಶತ್ರು ಕವಿ ಬೇರೆ ಆಗಿದ್ದರಿಂದ ಭಾಷಣದಲ್ಲಿನ ಅರ್ಧಭಾಗದಲ್ಲಿ ಕವಿಸಾಲುಗಳಿರುತ್ತಿದ್ದವು. ಬಾಬರಿ ಮಸೀದಿ ಉರುಳಿಸುವುದರಲ್ಲಿ ವಾಜಪೇಯಿ ಕಾವ್ಯ ಎಂತಹ ಸ್ಫೂರ್ತಿ ಕೊಟ್ಟಿತ್ತೆಂದರೆ, ಅವರ ಸಾಲುಗಳನ್ನೇ ತರ್ಜುಮೆ ಮಾಡಿಕೊಂಡ ಚೆಡ್ಡಿಗಳು,
ನೀವು ಬಂದರೆ ಜೊತೆಯಾಗಿ,
ನೀವು ಬಾರದಿರೆ ಬಿಟ್ಟು,
ತಡೆಯ ಬಂದರೆ ಹತ್ತಿಕ್ಕಿ,
ಮಂದಿರವಲ್ಲೇ ಕಟ್ಟುವೆವು
ಭಜನೆಗೆ ಅಲ್ಲೇ ಕೂರುವೆವು
ಕೀರ್ಥನೆ ಅಲ್ಲೇ ಹಾಡುವೆವು
ಪಾಕಶಾಲೆ ಕಡೆ ಓಡುವೆವು
ಎಂದು ಕರೆದುಕೊಂಡು ಅದನ್ನೆ ದೇಶಕ್ಕೆಲ್ಲಾ ಮೆಸೇಜು ಮಾಡಿದವಲ್ಲಾ ಥೂತ್ತೇರಿ…!

********

ನಮ್ಮ ಕವಿಹೃದಯದ ಅಜಾತಶತ್ರು ನೆಹರು ಕಾಲದವರು. ರಾಜೀವ್‍ಗಾಂಧಿ ಪ್ರಧಾನಿಯಾದಾಗಲೂ ವಿರೋಧ ಪಕ್ಷದ ನಾಯಕ. ಆಗ ಭಾರತವನ್ನು ತಿರುಗುತ್ತಾ, ನಮ್ಮ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳು ತುಂಬಾ ಹೀನ ಸ್ಥಿತಿಯಲ್ಲಿವೆ, ಮಕ್ಕಳಿಗೆ ಅಕ್ಷರ ಬರೆದು ತೋರಲು ಬ್ಲಾಕ್ ಬೋರ್ಡುಗಳಿಲ್ಲ. ಇದು ರಾಜೀವ್‍ಗಾಂಧಿಯಂತಹ ನಾಯಕರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ನಂತರ ಸದರಿ ಕವಿಯೇ ಪ್ರಧಾನಿಯಾದರು. ಭಾರತದ ಎಲ್ಲಾ ಹಳ್ಳಿಗಳಲ್ಲಿ ಸುಸಜ್ಜಿತ ಪ್ರೈಮರಿ ಶಾಲೆ ರೂಪುಗೊಳ್ಳುತ್ತವೆಂದು ಕಾಯುತ್ತಿರಬೇಕಾದರೆ, ವಾಜಪೇಯಿ ಪ್ರೊಕ್ರಾನ್ ಸಿಡಿಸಿದರು. ಇದರಿಂದ ಶಾಕಾದ ಲಂಕೇಶ್ `ಮಗ ಎಲ್ಲಾ ಬಿಟ್ಟು ಭಂಗಿ ನೆಟ್ಟ’ ಎಂದು ಬರೆದರಂತಲ್ಲಾ, ಥೂತ್ತೇರಿ…!

********

ನಮ್ಮ ಅಜಾತಶತೃ ವಾಜಪೇಯಿಯವರನ್ನ ಕೆಲವು ಟೀಕಾಕಾರರು ಗೋಮುಖವ್ಯಾಘ್ರ ಎಂದು ಬಣ್ಣಿಸಿದ್ದರು. ಆದರೆ ಆ ವ್ಯಾಘ್ರನಿಗೆ ಹಲ್ಲು ಉಗುರುಗಳಿರಲಿಲ್ಲ. ಆದರೂ ಅವುಗಳನ್ನು ಬೇರೆಯವರಿಗೆ ಕರ್ಣನಂತೆ ಧಾರೆಯೆರೆದಿದ್ದರು. ಧಾರೆ ಎರೆಸಿಕೊಂಡ ಅಢ್ವಾನಿ ಅವತಾರ ಅಂತ್ಯಗೊಂಡ ನಂತರ ಪ್ರಖರ ಹಲ್ಲು ಉಗುರುಗಳೊಂದಿಗೆ ಕಂಗೊಳಿಸಿದ ಮೋದಿ ಎಂಬ ವ್ಯಾಘ್ರ ವಾಜಪೇಯಿ, ಅಡ್ವಾನಿಗಳ ಸೃಷ್ಟಿಯೇ ಹೊರತು, ಸ್ವಯಂ ಸೃಷ್ಟಿಯಾದುದಲ್ಲವಂತಲ್ಲಾ. ಈಚೆಗೆ ಪ್ರಾಣಿತಳಿ ಶಾಸ್ತ್ರಜ್ಞರು ಒಂದು ಪ್ರಯೋಗ ಮಾಡಿ, ಸಿಂಹ ಮತ್ತು ಹುಲಿಯನ್ನು ಕೂಡಿಸಿ ವಿಶೇಷ ತಳಿ ತೆಗೆದು ಅದಕ್ಕೆ ಲೈಗರ್ ಎಂದು ನಾಮಕರಣ ಮಾಡಿದ್ದಾರೆ. ಆ ಲೈಗರ್ ನೋಡಿದರೆ ಅದರೊಳಗೆ ಸಿಂಹ ಮತ್ತು ಹುಲಿ ಎರಡೂ ಅಡಗಿರುವುದು ಗೋಚರವಾಗುತ್ತದಂತೆ. ಭಾರತ ಕಂಡ ಅಪರೂಪದ ಪ್ರಧಾನಿ ಮೋದಿಯನ್ನು ನೋಡಿದರೆ ಗೋಮುಖವ್ಯಾಘ್ರನಾದ ವಾಜಪೇಯಿ, ವ್ಯಾಘ್ರಮುಖದ ಗೋವಾದ ಅಡ್ವಾನಿ, ಈ ಇಬ್ಬರ ಚಹರೆಗಳೂ ಗೋಚರಿಸುತ್ತಾ ದೇಶಕ್ಕೆ ಆತಂಕ ಉಂಟಾಗಿದೆಯಂತಲ್ಲಾ ಥೂತ್ತೇರಿ..!

********

ಭಾರತದ ಇಡೀ ಸಂಘಪರಿವಾರ ಮತ್ತದರ ನಿರ್ಮಾತೃಗಳೆಲ್ಲಾ ರಾಮಮಂದಿರದ ಬಗ್ಗೆ ಹೋರಾಡುತ್ತಿರುವುದರ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆಯಂತಲ್ಲಾ.
ಆ ಇತಿಹಾಸ ಯಾವುದಪ್ಪಾ ಎಂದರೆ, ಭಾರತವನ್ನೇ ಬಾಳೆಯೆಲೆ ಮಾಡಿಕೊಂಡು ಉಂಡ ಜನ ನೆಲೆಸಿದ್ದುದು ದೇವಸ್ಥಾನದ ಒಳಗೆ. ಆ ದೇವಸ್ಥಾನದಲ್ಲಿ ಹಜಾರ, ಗರ್ಭಗುಡಿ, ಪೌಳಿ ಮತ್ತು ಪಾಕಶಾಲೆಗಳಿದ್ದವು. ಮನೋರಂಜನೆಗೆ ಭಜನೆ ಕೀರ್ತನೆ ಜೊತೆಗೆ ಭರತನಾಟ್ಯಗಳು ಜರುಗುತ್ತಿದ್ದವು. ಕೈ ಸಡಿಲಬಿಟ್ಟು ಭೋಜನ ಭಾರಿಸಿದವರು ಸುಧಾರಿಸಿಕೊಳ್ಳಲು ಒಳ ಜಗಲಿ ಇದ್ದವು. ಹೀಗೆ ಮಂದಿರದೊಳಗೇ ಬದುಕಿದ್ದ ಜನ ಬಿಜೆಪಿ ಪಾರ್ಟಿ ಮಾಡಿಕೊಂಡು ಬೀದಿಗೆ ಬಂದಾಗಲೂ ಅವುಗಳ ಬಾಯಿಂದ ಬರುತ್ತಿರುವ ಮಾತೂ ಕೂಡಾ ಮಂದಿರ ನಿರ್ಮಾಣವೇ ಹೊರತು ಭಾರತ ಇಂದು ಹೆದರಿಸುತ್ತಿರುವ ಸಮಸ್ಯೆಗಳಲ್ಲವಂತಲ್ಲಾ ಥೂತ್ತೇರಿ..!

********

ದಿಢೀರನೆ ಕೇರಳದ ಕಡೆ ಅಪ್ಪಳಿಸಿದ ಜಲಪ್ರಳಯವಾದಂತೆ ಹಾಡುಹಗಲು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಉದ್ಭವಿಸಿದ ಕುಮಾರಣ್ಣ, ಎಮ್ಮೆ ಕರುವಿನ ಮೇಲೆ ಶಾಲು ಹಾಕಿದಂತೆ ವಸ್ತ್ರ ಧರಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ನುಗ್ಗಿ ಹೋಗುತ್ತಿದ್ದಾರಂತಲ್ಲಾ. ಹೊಸದಾಗಿ ಮುಖ್ಯಮಂತ್ರಿಯಾದವರು ಮೊದಲು ಮಾಡುವ ಕೆಲಸವೇನೆಂದರೆ, ಆಯಾ ಜಿಲ್ಲೆಯ ಆಡಳಿತವನ್ನು ಮೀಟಿಂಗ್ ಕರೆದು ಸಲಹೆಕೊಡುವುದು ಹಾಗೂ ತಾರತಮ್ಯದ ಕಾರಣಕ್ಕೆ ರೊಚ್ಚಿಗೆದ್ದ ಜನಗಳ ಬಳಿಗೋಗಿ ಸಾಂತ್ವನ ಹೇಳುವುದು, ಹಾಗೇ ಬಿತ್ತನೆಗೆ ಭೂಮಿ ರೆಡಿಮಾಡಿಕೊಂಡು ಮಳೆ ಬರದೆ ಕಂಗಾಲಾಗಿರುವ ರೈತನ ಬಳಿಗೋಗುವುದು.. ಇದೆಲ್ಲವನ್ನ ಬಿಟ್ಟು ಕುಮಾರಣ್ಣ ಮಂಡ್ಯದಲ್ಲಿ ನಾಲ್ಕು ಪೈರು ನಾಟಿ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಓಡಿಹೋದದ್ದು ನೋಡಿದ ಯಡ್ಡಿ ಪಟಾಲಂ ಕುಂಡಿ ಬಡಿದುಕೊಂಡು ನಕ್ಕವಂತಲ್ಲಾ, ಥೂತ್ತೇರಿ…!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...