ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್ಗಳಿಗೆ ಚೀನೀ ಮೂಲದ ಜನರನ್ನು ಅನುಮತಿಸಲಾಗುವುದಿಲ್ಲ ಎಂಬ ಹೇಳಿಕೆಯೊಂದಿಗೆ ದಂಪತಿಗಳು ಒಬ್ಬ ವ್ಯಕ್ತಿಯೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಗುಜರಾತಿ ನ್ಯೂಸ್ ಚಾನೆಲ್ ಟಿವಿ9 “# ಕೊರೋನವೈರಸ್, #ಆಸ್ಟ್ರೇಲಿಯಾದಲ್ಲಿ ಚೀನೀಯರ ಮೇಲೆ ಜನಾಂಗೀಯ ದಾಳಿಯನ್ನು ಹುಟ್ಟುಹಾಕಿದೆ. ವೈರಲ್ ವೀಡಿಯೊ ಪ್ರಕಾರ, ಚೀನೀ ಜನರಿಗೆ ಸೂಪರ್ ಮಾರ್ಕೆಟ್ಗಳಿಗೆ ಪ್ರವೇಶಿಸಲು ಅವಕಾಶವಿಲ್ಲ.” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದೆ.
#viralvideo : #coronavirus has sparked racist attacks on Chinese in #Australia .
According to Viral video, chinese people are not allowed to enter supermarket. pic.twitter.com/HOaSeBAtr3— tv9gujarati (@tv9gujarati) April 16, 2020
ಬಿಜೆವೈಎಂ ತೆಲಂಗಾಣದ ವಕ್ತಾರ ರೂಪ್ ದಾರಕ್ ಅವರು “ಇಡೀ ವಿಶ್ವವೂ ಇದನ್ನು ಅನುಸರಿಸಬೇಕು. ಚೈನೀಸ್ ಅನ್ನು ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್ಗಳಲ್ಲಿ ಅನುಮತಿಸಲಾಗುವುದಿಲ್ಲ. ಇದು ಈಗ ಶುರುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ 1,000 ಕ್ಕೂ ಹೆಚ್ಚು ರಿಟ್ವೀಟ್ಗಳನ್ನು ಸಂಗ್ರಹಿಸಿದೆ. ಐಪಿಎಸ್ ಅಧಿಕಾರಿ ಎಚ್ಜಿಎಸ್ ಧಲಿವಾಲ್ ಕೂಡ ಇದೇ ವಿಡಿಯೋ ಜೊತೆಗೆ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್ ಚೆಕ್:
ವಾಸ್ತವವೇನೆಂದರೆ, ಇದರ ಮೂಲ 2020 ರ ಏಪ್ರಿಲ್ 11 ರಂದು ಪ್ರಕಟವಾದ ಯುಕೆ ಸುದ್ದಿವಾಹಿನಿ ಡೈಲಿ ಮೇಲ್ನಲ್ಲಿ ದೊರೆತಿದೆ. ಅದರ ಪ್ರಕಾರ ಮೆಲ್ಬೋರ್ನ್ನ ಲಿಲಿಡೇಲ್ನಲ್ಲಿರುವ ಬಿಗ್ ಡಬ್ಲ್ಯೂ ಮಾಲ್ನಲ್ಲಿ ಬೇಬಿ ಫಾರ್ಮುಲಾ ಕುರಿತು ಇಬ್ಬರು ಗ್ರಾಹಕರ ನಡುವಿನ ದೊಡ್ಡ ಜಗಳ ಇದಾಗಿದೆ.
ಬಿಗ್ ಡಬ್ಲ್ಯೂ, ಕೋಲ್ಸ್ ಮತ್ತು ವೂಲ್ವರ್ತ್ಸ್ನಂತಹ ಪ್ರಮುಖ ಚಿಲ್ಲರೆ ವ್ಯಾಪಾರಿಗಳು ದೀರ್ಘಕಾಲದಿಂದ ಅಂಗಡಿಯಲ್ಲಿನ ಕೆಲ ನೀತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ನ್ಯೂಸ್.ಕಾಮ್ ತಿಳಿಸಿದೆ. ಅದರಂತೆ ಒಬ್ಬರು ಪ್ರತಿ ಖರೀದಿಗೆ ಎರಡು ಬೇಬಿ ಫಾರ್ಮುಲಾ ಟಿನ್ಗಳನ್ನು ಮಾತ್ರ ಖರೀದಿಸಬಹುದಾಗಿದೆ.
ಆದರೆ ವಿಡಿಯೋದಲ್ಲಿ ಕಾಣುವಂತೆ ಯುವ ದಂಪತಿಗಳಿಬ್ಬರೂ ಎರಡಕ್ಕಿಂತ ಹೆಚ್ಚಿನ ಬೇಬಿ ಫಾರ್ಮುಲಾ ಟಿನ್ಗಳನ್ನು ಹಿಡಿದುಕೊಂಡಿರುವುದನ್ನು ಹಿರಿಯ ದಂಪತಿಗಳು ಪ್ರಶ್ನಿಸಿದ್ದಾರೆ. ಅಲ್ಲಿಗೆ ಜಗಳ ಆರಂಭವಾಗಿದೆ. ಕೈ ಕೈ ಮಿಲಾಯಿಸುವ ಪರಿಸ್ಥಿತಿ ಬಂದಾಗ ಭದ್ರತಾ ಅಧಿಕಾರಿಗಳು ಯುವ ದಂಪತಿಗಳನ್ನು ಸೂಪರ್ ಮಾರ್ಕೆಟ್ನಿಂದ ಹೊರ ಕಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಪರಿಹಾರ ನಿಧಿಯಿಂದ ಹಣ ತೆಗೆಯಲು ಸೋನಿಯಾ ಒಪ್ಪಿಗೆ ಬೇಕೆ? ಅದಕ್ಕಾಗಿ ಮೋದಿ PM CARES ಶುರು ಮಾಡಿದರೆ?
ಯಾಹೂ ನ್ಯೂಸ್ ಆಸ್ಟ್ರೇಲಿಯಾ ನೀಡಿದ ಹೇಳಿಕೆಯಲ್ಲಿ, ಬಿಗ್ ಡಬ್ಲ್ಯೂ ವಕ್ತಾರರು, “ಗ್ರಾಹಕರಿಗೆ ಭಿನ್ನಾಭಿಪ್ರಾಯವಿತ್ತು, ಹಾಗಾಗಿ ಜಗಳ ಆರಂಭವಾಗಿದೆ. ಕೂಡಲೇ ಬಿಗ್ ಡಬ್ಲ್ಯೂ ಲಿಲಿಡೇಲ್ ಅಂಗಡಿಯಿಂದ ಹೊರಹೋಗುವಂತೆ ನಮ್ಮ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ ಕೇಳಿದ್ದಾರೆ. ಇಲ್ಲಿಗೆ ಪ್ರಕರಣ ಮುಗಿದಿದೆ, ಪೊಲೀಸರ ಅಗತ್ಯ ಬಿದ್ದಿಲ್ಲ ಎಂದು ತಿಳಿಸಿದ್ದಾರೆ.
ಮಗುವಿನ ಆಹಾರವನ್ನು ಸಂಗ್ರಹಿಸಿಡಲಾಗಿದೆ ಎಂಬ ಆರೋಪದ ಮೇಲೆ ಇಬ್ಬರು ಗ್ರಾಹಕರ ನಡುವಿನ ತೀವ್ರ ಜಗಳದ ವಿಡಿಯೋವನ್ನು ಚೀನಾದ ಪ್ರಜೆಗಳಿಗೆ ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್ಗಳಲ್ಲಿ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಕೃಪೆ: ಆಲ್ಟ್ನ್ಯೂಸ್
ಇದನ್ನೂ ಓದಿ: Fact Check: ಸ್ವಿಟ್ಜರ್ಲ್ಯಾಂಡ್ ಪರ್ವತದಲ್ಲಿ ಭಾರತದ ತ್ರಿವರ್ಣ ಧ್ವಜ! ಬಿ.ಎಲ್ ಸಂತೋಷ್ ಸುಳ್ಳು ಹೇಳಿದರೆ?
Please avoid using question marks in the headings of articles. Be objective while reporting. For example, in the present article the heading could have been “ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್ಗಳಲ್ಲಿ ಚೀನಿಯರಿಗೆ ಪ್ರವೇಶವಿಲ್ಲ ಎಂಬ ಸುಳ್ಳು ಸುದ್ದಿ”
I agree that the heading you have chosen creates curiosity, it also creates an impression that the reporter/ broadcaster is not sure of what is being reported.
Thanks Nandan, You are right. But our social media experts say that since 60% of readers come through social media, they will be think that the content is over with the title. Anyway, we shall discuss this in our team. You can also write to us to [email protected].