Homeಗೌರಿ ಕಣ್ಣೋಟಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಲಿಂಗ ತಾರತಮ್ಯ ಕುರಿತು ಮೆಚ್ಚುಗೆ ಪಡೆದ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ ಜೂಲಿಯಾ ಭಾಷಣ

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರಿಸುತ್ತದೆ.

- Advertisement -
- Advertisement -

ಜೂಲಿಯಾ ಗಿಲ್ಲಾರ್ಡ್ ಆಸ್ಟ್ರೇಲಿಯಾ ದೇಶದ ಪ್ರಥಮ ಮಹಿಳಾ ಪ್ರಧಾನಿ. ವಿದ್ಯಾರ್ಥಿನಿ ಆಗಿದ್ದಾಗಲೇ ರಾಜಕೀಯದಲ್ಲಿ ಆಸಕ್ತಿ ಹೊಂದಿದ ಜೂಲಿಯಾ ಸಮಾಜವಾದದಲ್ಲಿ ನಂಬಿಕೆ ಇಟ್ಟವಳು. ಆ ಕಾರಣಕ್ಕೆ ಆಸ್ಟ್ರೇಲಿಯಾದ ಎಡಪಂಥೀಯ ಒಲವನ್ನು ಹೊಂದಿರುವ ಲೇಬರ್ ಪಾರ್ಟಿಯನ್ನು ಸೇರಿಕೊಂಡು ಒಂದೊAದೇ ಮೆಟ್ಟಿಲುಗಳನ್ನು ಏರುತ್ತಾ ಹೋದರು. ಹಿಂದಿನ ಪ್ರಧಾನಿ ಕೆವಿನ್ ರುಡ್ ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಬೆಂಬಲವನ್ನು ಕಳೆದುಕೊಂಡಾಗ ಜೂಲಿಯಾ ಅವರನ್ನು ಪ್ರಧಾನಿಯಾಗಿ ಆ ಪಕ್ಷದ ಸಂಸದರು ಮನಸಿಲ್ಲದ ಮನಸ್ಸಿನೊಂದಿಗೆ ಆಯ್ಕೆ ಮಾಡಿದ್ದರು. ಅವರ ಹಿಂಜರಿಕೆಗೆ ಕಾರಣ ಜೂಲಿಯಾ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಳನ್ನು ಹೊಂದಿದ್ದಾರೋ ಇಲ್ಲವೂ ಎಂಬುದಾಗಿರಲಿಲ್ಲ. ಬದಲಾಗಿ ಈ ಮಹಿಳೆಗಿಂತ ಸೂಕ್ತವಾದ ಪುರುಷ ತಮ್ಮ ಮುಂದೆ ಇಲ್ಲವಲ್ಲ ಎಂಬ ಲಿಂಗ ತಾರತಮ್ಯ.

ಜೂಲಿಯಾ ಅವರಿಗೆ ಈಗ 51 ವರ್ಷ ವಯಸ್ಸು. ಮದುವೆ ಆಗಿರದ ಆಕೆ ಯಾವ ಮುಚ್ಚುಮರೆ ಇಲ್ಲದೆ ತನ್ನ ಪುರುಷ ಸಂಗಾತಿಯೊಂದಿಗೆ ವಾಸಿಸುತ್ತಿದ್ದಾರೆ. ಇತರೆ ದೇಶಗಳ ಮಹಿಳೆಯರಂತೆ ಜೂಲಿಯಾ ಕೂಡ ತನ್ನ ವೃತ್ತಿ ಬದುಕಿನಲ್ಲಿ ಲಿಂಗಬೇಧವನ್ನು ಎದುರಿಸುತ್ತಲೇ ಮುಂದೆ ಬಂದವರು. ಈಗ ಅವರು ಪ್ರಧಾನಿ ಆಗಿದ್ದರೂ ಆಕೆ ಮಹಿಳೆ ಆಗಿರುವುದರಿಂದಲೇ ಆಕೆಯನ್ನು ಟೀಕೆ ಮಾಡುವವರಿಗೆ ಲೆಕ್ಕವಿಲ್ಲ. ಜೂಲಿಯಾ ಅವರ ಆತ್ಮಸ್ಥೈರ್ಯವನ್ನು ಮುರಿದು ಹಾಕಲು ಆಕೆಯ ಟೀಕಾಕಾರರು ಮಾಡಿರುವ ಪ್ರಯತ್ನಗಳಲ್ಲಿ ಹಲವು ಹೇಸಿಗೆ ಹುಟ್ಟಿಸುವಂತಹವು. ಉದಾಹರಣೆಗೆ ಜೂಲಿಯಾ ಅವರು ಮಕ್ಕಳನ್ನು ಹೆತ್ತಿಲ್ಲ. ಅದನ್ನೇ ಅಸ್ತ್ರವಾಗಿಸಿಕೊಂಡು ಕೆಲವರು ಅವರನ್ನು “ಬೇಕಂತಲೇ ಬಂಜೆ ಆಗಿರುವವಳು’’ ಎಂದು ಜರಿಯುವ ಮಟ್ಟಕ್ಕೆ ಹೋಗಿದ್ದೂ ಉಂಟು. ಜೊತೆಗೆ “Ditch the Bitch’’ (ಈ ಹಾದರಗಿತ್ತಿಯನ್ನು ತೊಲಗಿಸಿ) ಎಂಬ ಕರೆ ಕೊಟ್ಟು ಆಕೆಯ ವಿರುದ್ಧ ಚುನಾವಣಾ ಪ್ರಚಾರವನ್ನೂ ಮಾಡಲಾಗಿತ್ತು.

ಜೂಲಿಯಾ ಮಾಡಿದ ಭಾಷಣ ಎಲ್ಲಾ ಪುರುಷ ಪ್ರಧಾನ ಸಮಾಜಗಳಲ್ಲಿ ಲಿಂಗಭೇದ ಮತ್ತು ಸ್ರೀದ್ವೇಷಿ ಚಿಂತನೆಗಳು ಹೇಗೆ ಹಾಸುಹೊಕ್ಕಿದೆ ಎಂದು ತೋರುವುದರಿಂದ ಅವರ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇನೆ.

ನಾನು ಪ್ರಧಾನಿಯಾಗಿ ಈ ಕುರ್ಚಿಯಲ್ಲಿ ಕೂರುವ ನನ್ನ ಎದುರು ವಿರೋಧ ಪಕ್ಷದ ನಾಯಕರಾಗಿ ಕೂರುವ ಈ ಮನುಷ್ಯ ಮೊದಲಿನಿಂದಲೂ ಸ್ತ್ರೀದ್ವೇಷ ನೀತಿಯನ್ನೇ ಪ್ರದರ್ಶಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಒಮ್ಮೆ ಈ ಸಂಸತ್ತಿನಲ್ಲಿ ಮಾತನಾಡುತ್ತಾ ನಾನು ’ಗೌರವಾರ್ಹ ಮಹಿಳೆ’ಯಂತೆ ವರ್ತಿಸಬೇಕು ಎಂದಿದ್ದರು. ನನ್ನ ಜಾಗದಲ್ಲಿ ಪುರುಷನೊಬ್ಬ ಕೂತಿದ್ದರೆ ಆತನ ಬಗ್ಗೆ ಇಂತಹ ಪದಗಳನ್ನು ಉಪಯೋಗಿಸುತ್ತಿದ್ದರೆ? ಇಲ್ಲ. ವಿರೋಧ ಪಕ್ಷದ ನಾಯಕರು ಒಮ್ಮೆ ಸಂಸತ್ತಿನ ಹೊರಗಡೆ ನನ್ನ ವಿರುದ್ಧ ’Ditch the Bitch’ ಎಂದು ಬರೆಯಲಾಗಿದ್ದ ಪೋಸ್ಟರ್ ಪಕ್ಕ ನಿಂತರು. ಹಾಗೆಯೇ ಇನ್ನೊಮ್ಮೆ ನನ್ನನ್ನು ಯಾವುದೋ ಪುರಷನ ಹಾದರಗಿತ್ತಿ ಎಂದು ಬಣ್ಣಿಸಿದ್ದ ಪೋಸ್ಟರ್ ಪಕ್ಕ ನಿಂತರು. ಅದು ಮಹಿಳಾ ದ್ವೇಷ ನಿಲುವಲ್ಲದೆ ಇನ್ನೇನು? ಪ್ರತಿದಿನ, ಪ್ರತಿಹಂತದಲ್ಲಿ, ವಿವಿಧ ತರಹದಲ್ಲಿ ನಾನು ಈ ವ್ಯಕ್ತಿಯಿಂದ ಸ್ತ್ರೀದ್ವೇಷಿ ನಿಲುವನ್ನು, ಲಿಂಗಬೇಧ ತಾರತಮ್ಯವನ್ನು ಎದುರಿಸುತ್ತಿದ್ದೇನೆ.

ಇಂತಹ ಮನುಷ್ಯ ಈ ಸಂಸತನ್ನು ಪ್ರವೇಶಿಸಿ ಆಸ್ಟ್ರೇಲಿಯಾದ ಮಹಿಳೆಯರಲ್ಲಿ ಕ್ಷಮೆ ಕೇಳಿಲ್ಲ. ನನ್ನನ್ನು ಪದೇಪದೇ ಅವಮಾನಿಸಿದ್ದಕ್ಕೆ ನನಗೆ ಸಾರಿ ಹೇಳಿಲ್ಲ. ಆದರೆ ಇವತ್ತು ರಾಜಕೀಯ ದುರುದ್ದೇಶದಿಂದ ಮಹಿಳೆಯರ ಪರ ನಿಂತಿರುವುದಾಗಿ ಪೋಸು ಕೊಡುತ್ತಿದ್ದಾರೆ. ಇಂತಹ ಇಬ್ಬಂದಿ ನೀತಿಯನ್ನು ಯಾರೂ ಸಹಿಸಕೂಡದು.

ಆಕೆಯ ಭಾಷಣ ನನಗೆ ಇಷ್ಟವಾಗಿದ್ದರಿಂದ ಅದರ ಮುಖ್ಯ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ….

– ಗೌರಿ ಲಂಕೇಶ್

ಅಕ್ಟೋಬರ್ 31, 2012


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...