Homeಮುಖಪುಟಜಾರ್ಜ್ ಫ್ಲಾಯ್ಡ್ ಹತ್ಯೆ ಮಾದರಿಯಲ್ಲೇ ಜೋಧಪುರದಲ್ಲೊಂದು ಅಮಾನವೀಯ ಘಟನೆ; ವಿಡಿಯೋ ವೈರಲ್

ಜಾರ್ಜ್ ಫ್ಲಾಯ್ಡ್ ಹತ್ಯೆ ಮಾದರಿಯಲ್ಲೇ ಜೋಧಪುರದಲ್ಲೊಂದು ಅಮಾನವೀಯ ಘಟನೆ; ವಿಡಿಯೋ ವೈರಲ್

- Advertisement -
- Advertisement -

ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯನ್ನು ಅಮೆರಿಕದಲ್ಲಿ ಪೊಲೀಸ್ ಓರ್ವ ಕತ್ತಿನ ಮೇಲೆ ತುಳಿದು ಅಮಾನವೀಯವಾಗಿ ಕೊಂದ ಘಟನೆ ಆ ದೇಶದಲ್ಲಿ ದೊಡ್ಡ ಹೋರಾಟಕ್ಕೆ ಕಾರಣವಾಗಿದೆ. ಇದರ ಬೆನ್ನಿಗೆ ಇದೇ ರೀತಿಯ ಮತ್ತೊಂದು ಕಹಿ ಘಟನೆ ಭಾರತದ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಜೋಧಪುರದ ಪೊಲೀಸರು ಒಬ್ಬ ವ್ಯಕ್ತಿಯನ್ನು ನೆಲದ ಮೇಲೆ ಬೀಳಿಸಿ ತಮ್ಮ ಮೊಣಕಾಲನ್ನು ಕುತ್ತಿಗೆಗೆ ಒತ್ತಿ ಹಿಡಿಯುವುದನ್ನು ಕಾಣಬಹುದಾಗಿದೆ. ಆನಂತರ ಆ ವ್ಯಕ್ತಿಗೆ ಪೊಲೀಸರು ಹಲ್ಲೆ ಮಾಡಿರುವುದು ದಾಖಲಾಗಿದೆ. ಈ ವಿಡಿಯೋವನ್ನು ಇದೀಗ ಜಾರ್ಜ್ ಫ್ಲಾಯ್ಡ್ ಘಟನೆಗೆ ಹೋಲಿಸಿ ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯ ಹಿನ್ನೆಲೆ

ಗುರುವಾರ ಮುಖೇಶ್ ಕುಮಾರ್ ಪ್ರಜಾಪತ್ ಎಂಬ ವ್ಯಕ್ತಿಯೊಬ್ಬ ಜೋಧಪುರ ನಗರದಲ್ಲಿ ಮಾಸ್ಕ್ ಹಾಕಿಕೊಳ್ಳದೆ ಓಡಾಡಿದ್ದಾನೆ. ಈ ಕಾರಣಕ್ಕೆ ಆತನನ್ನು ವಿಚಾರಣೆ ನಡೆಸುವ ವೇಳೆ ಪೊಲೀಸರು ಕಟುವಾಗಿ ವರ್ತಿಸಿದ್ದು ನೆಲಕ್ಕೆ ಬೀಳಿಸಿ ಕತ್ತಿನ ಮೇಲೆ ಮೊಣಕಾಲಿಟ್ಟು ವಿಚಾರಣೆ ನಡೆಸಿದ್ದಾರೆ. ಆದರೆ, ಈ ಘಟನೆ ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ವೀಡಿಯೊವನ್ನು ನೆನಪಿಸುವಂತಿದೆ.

ಪ್ರಕರಣದ ಕುರಿತು ಸ್ಪಷ್ಟಪಡಿಸಿರುವ ದೇವ್ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೋಮ್ಕರನ್, “ಕೊರೋನಾ ಭೀತಿಯ ನಡುವೆಯೂ ಮುಕೇಶ್ ಕುಮಾರ್ ಎಂಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುತ್ತಿದ್ದ. ಪೊಲೀಸರು ಆತನನ್ನು ವಿಚಾರಣೆ ನಡೆಸುವ ವೇಳೆ ಆತ ಆಕ್ರಮಣಕಾರಿಯಾಗಿ ವರ್ತಿಸಿದ್ದ. ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಪೊಲೀಸರು ಸಹ ಬಲವಂತವಾಗಿ ಆತನನ್ನು ಬಂಧಿಸಿದ್ದಾರೆ. ಈ ಘಟನೆ ಗುರುವಾರ ಜೋಧಪುರ ನಗರದಲ್ಲಿ ನಡೆದಿದ್ದು ಜನ ಇದನ್ನು ವಿಡಿಯೋ ಮಾಡಿದ್ದಾರೆ. ಮುಖರ್ಜಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ “ಸಾಂಕ್ರಾಮಿಕ ಕಾಯ್ದೆಯ” ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಆತನನ್ನು ಇಂದು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.

ಒಟ್ಟಾರೆ ಜೋಧಪುರದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಪೋಲೀಸ್ ತನ್ನ ಮೊಣಕಾಲಿನಿಂದ ಕುತ್ತಿಗೆಯನ್ನು ಒತ್ತುತ್ತಿದ್ದರೆ, ಇತರ ಇಬ್ಬರು ಪೊಲೀಸರು ಯುವಕನ ಕಾಲುಗಳನ್ನು ಹಿಡಿದಿರುವುದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ಆತನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

ಜಾರ್ಜ್ ಫ್ಲಾಯ್ಡ್ ಎಂಬ 46 ವರ್ಷದ ಕಪ್ಪು ಜನಾಂಗದ ವ್ಯಕ್ತಿ ಮೇ 25 ರಂದು ಅಮೆರಿಕದ ಮಿನ್ನಿಯಾಪೋಲಿಸ್ ಅಂಗಡಿಯೊಂದರ ಹೊರಗೆ ಪೊಲೀಸರಿಂದ ಬಂಧಿಸಲ್ಪಟ್ಟ. ಆದರೆ, ಪೊಲೀಸರ ಅಮಾನವೀಯ ವರ್ತನೆಯಿಂದಾಗಿ ಆತ ನಡು ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದ. ಈ ಘಟನೆ ಇದೀಗ ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜೋಧಪುರದಲ್ಲಿ ಘಟನೆ ಸಹ ಸಾಮಾಜಿಕ ಜಾಲತಾನದಲ್ಲಿ ಭಾರೀ ಸದ್ದು ಮಾಡುತ್ತಿದೆ.


ಇದನ್ನೂ ಓದಿ: ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ...

ಕ್ಯಾಬ್ ಚಾಲಕನಿಂದ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ಎಲ್ಲ ಮೃತದೇಹಗಳೂ ಪತ್ತೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದ ಪ್ರಕರಣದಲ್ಲಿ, ನವೆಂಬರ್ 9ರ ಸೋಮವಾರ ಕೊನೆಯ ಎರಡೂ ಮೃತದೇಹಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಶಿರಾಡಿ ಘಾಟ್‌ನ ಅರಣ್ಯ...

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಆರೋಪಕ್ಕೆ ಕರ್ನಾಟಕ ಸರ್ಕಾರ ಬದ್ಧ: ಸಚಿವ ರಿಜ್ವಾನ್ ಅರ್ಷದ್

ಪೆಟ್ರೋಲ್‌ನಲ್ಲಿ ನಿಗದಿಪಡಿಸಿರುವ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ತನ್ನ ವರದಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ...

ಫಿರೋಜಾಬಾದ್‌ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಭೀಕರ ಹಲ್ಲೆ: ಆಗ್ರಾ ಆಸ್ಪತ್ರೆಯಲ್ಲಿ 16ರ ಬಾಲಕಿ ಸಾವು 

ಉತ್ತರ ಪ್ರದೇಶ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮೂವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಅತ್ಯಂತ ಕ್ರೂರ ಹಲ್ಲೆಗೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಒಂದು ವಾರದ ಸಾವು ಬದುಕಿನ ಹೋರಾಟದ ಬಳಿಕ ಶುಕ್ರವಾರ...

ಗ್ಯಾನೇಶ್ ಕುಮಾರ್ ವಿರುದ್ಧ ಭ್ರಷ್ಟಾಚಾರ ತನಿಖೆ: ಕೇರಳದ ವಿಜಿಲೆನ್ಸ್ ಮುಂದೆ ಹಾಜರಾದ ಗುತ್ತಿಗೆದಾರ; ಹಿಂದಿನ ತನಿಖೆ ಸಾಕ್ಷ್ಯ ಮುಚ್ಚಿಹಾಕಿದ ಆರೋಪ

ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ತನಿಖೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಡೆದ ರಸ್ತೆ...

ಸಿಂಧನೂರು| ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ದೌರ್ಜನ್ಯ; ತಿಡಿಗೋಳದಲ್ಲಿ ಬೃಹತ್‌ ಪ್ರತಿಭಟನೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಡೆದ ದೌರ್ಜನ್ಯ, ಸಾಮೂಹಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆ ಆಚರಣೆ ವಿರೋಧಿಸಿ ದಲಿತ ಮತ್ತು ಪ್ರಗತಿಪರ...

ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ಪ್ರಕರಣ: 6 ತಿಂಗಳಲ್ಲಿ ವಿಚಾರಣೆ ಮುಗಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸುವೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂಬರುವ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಕೇರಳದ...

ದೀಪಾವಳಿಯ ಮರುದಿನ ದಟ್ಟ ಹೊಗೆಯಿಂದ ಮುಸುಕಾದ ದೆಹಲಿ ಆಕಾಶ; ಅಪಾಯಕಾರಿ ಮಟ್ಟಕ್ಕೆ ಏರಿದ ವಾಯುಮಾಲಿನ್ಯ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಗದಿತ ಸಮಯ ಮೀರಿಯೂ ನಗರದಾದ್ಯಂತ ಪಟಾಕಿ ಸಿಡಿಸಿದ ಪರಿಣಾಮ, ಸೋಮವಾರ ಬೆಳಗ್ಗೆ ದೆಹಲಿ ತೀವ್ರ ವಾಯುಮಾಲಿನ್ಯದ ಹೊಡೆತಕ್ಕೆ ಸಿಲುಕಿದೆ. ದಟ್ಟ ಬೂದು ಬಣ್ಣದ ಹೊಗೆಯ ಮಂಜು ನಗರದ ಆಕಾಶವನ್ನು...

‘ಉತ್ತರ ಪ್ರದೇಶದಲ್ಲಿ ನಾಗರಿಕ ಸ್ವಾತಂತ್ರ್ಯದ ಸ್ಥಿತಿ ನಾಚಿಕೆಗೇಡಿನದ್ದು’; ಹಕ್ಕುಗಳ ಉಲ್ಲಂಘನೆ ಪೊಲೀಸರಿಗೆ ದಿನನಿತ್ಯದ ಸಂಗತಿ: ಅಲಹಾಬಾದ್ ಹೈಕೋರ್ಟ್

ಲಕ್ನೋ: ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ರಾಜ್ಯದಲ್ಲಿನ ನಾಗರಿಕ ಸ್ವಾತಂತ್ರ್ಯದ ಪರಿಸ್ಥಿತಿಯನ್ನು 'ನಾಚಿಕೆಗೇಡಿನದ್ದು' ಎಂದು ಬಣ್ಣಿಸಿದೆ. ನಾಗರಿಕರ...

ಗಾಜಾದಲ್ಲಿ ಟೆಂಟ್‌ಗಳ ಮೇಲೆ ಕುಸಿದ ಮರಳಿನ ದಿಬ್ಬ; ನಾಲ್ವರು ಮಕ್ಕಳು ಸೇರಿ ಐವರ ಸಾವು

ಮಧ್ಯ ಗಾಜಾದ ದೇರ್ ಅಲ್-ಬಲಾಹ್‌ನಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ಆಶ್ರಯ ಪಡೆದಿದ್ದ ಟೆಂಟ್‌ಗಳ ಮೇಲೆ ಮರಳಿನ ದಿಬ್ಬ ಕುಸಿದು ಬಿದ್ದ ಪರಿಣಾಮ ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ ಕನಿಷ್ಠ ಐವರು ಪ್ಯಾಲೆಸ್ತೀನಿಯರು...