Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

ಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

- Advertisement -
- Advertisement -

ಸಾರ್ವಜನಿಕ ಉತ್ಪಾದನೆ ಮತ್ತು ಸೇವಾಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವುದರಿಂದ ಮಾತ್ರ ದೇಶದಲ್ಲಿ ಶೀಘ್ರಗತಿಯ ಅಭಿವೃದ್ಧಿಯನ್ನು ತರಬಹುದೆಂಬ ನವಉದಾರೀಕರಣದ ನೀತಿ ಜಾರಿಗೆ ಬಂದಾಗಿನಿಂದಲೂ ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ಹಳಿತಪ್ಪುತ್ತಾ ಬಂದಿದೆ. ಈ ನೀತಿಯ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನು ಮೆರಿಟ್ ಮತ್ತು ನಾನ್ ಮೆರಿಟ್ ಎಂಬ ಎರಡು ಭಾಗವನ್ನಾಗಿ ವಿಂಗಡಿಸಲಾಯಿತು. ಇದರ ಪ್ರಕಾರ ನಾನ್‌ಮೆರಿಟ್ ಗುಂಪಿನಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗೀಕರಣವನ್ನು ತರುವ ಪ್ರಯತ್ನ ಮೊದಲಾಯಿತು. ಉನ್ನತ ಶಿಕ್ಷಣವನ್ನೂ ನಾನ್‌ಮೆರಿಟ್ ಕ್ಷೇತ್ರಕ್ಕೆ ಸೇರಿಸಿದ್ದರಿಂದ ಆರ್ಥಿಕ ಅನುದಾನವನ್ನು ಹಂತಹಂತವಾಗಿ ಕಡಿತಗೊಳಿಸಿಕೊಂಡು ಬರಲಾಯಿತು. ಇದರಿಂದ ಖಾಸಗೀ ಉದ್ಯಮಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸಾಧ್ಯವಾಗುತ್ತದೆ ಎನ್ನುವ ವಾದವನ್ನು ಮುಂದೊಡ್ಡಲಾಯಿತು. ಇದರ ನೇರ ಪರಿಣಾಮ ಎಂದರೆ ಶಿಕ್ಷಣ ಒಂದು ಸರಕಾಗಿ ಮಾರ್ಪಟ್ಟು, ವಿದ್ಯಾರ್ಥಿಗಳು ಗ್ರಾಹಕರಾಗಿ ಬದಲಾದರು. ಇಲ್ಲಿ ಜ್ಞಾನ ಎಂದರೆ ಕೌಶಲ್ಯ, ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆ ಮಾತ್ರ ಎಂದಾಯಿತು. ಹೊಸ ಖಾಸಗೀ ವಿವಿಗಳು ವಿಜೃಂಭಿಸತೊಡಗಿ ಒಂದು ಕಾಲಕ್ಕೆ ಹೆಸರು ಪಡೆದಿದ್ದ ಸರ್ಕಾರಿ ವಿವಿಗಳು ತಮ್ಮ ಘನತೆ ಮತ್ತು ಆಕರ್ಷಣೆಯನ್ನು ಕಳೆದು ಕೊಂಡವು. ಕಾಲೇಜು ಮತ್ತು ವಿವಿಗಳಲ್ಲಿ ಕೆಲಸ ಮಾಡುವವರಲ್ಲಿ ಅರೆಕಾಲಿಕ ಅಥವಾ ತಾತ್ಕಾಲಿಕ ಹುದ್ದೆಗಳಲ್ಲಿರುವವರ ಸಂಖ್ಯೆ ಹೆಚ್ಚಾಯಿತು. ಹೆಚ್ಚಿನ ಸಂಬಳ ಸಿಗದ ಕಾರಣ ಪ್ರತಿಭಾವಂತರು ಶಿಕ್ಷಣ ಕ್ಷೇತ್ರದಿಂದ ವಿಮುಖರಾದರು.

ಜ್ಞಾನದ ಹಸಿವು, ಬೆಳವಣಿಗೆ, ಹೊಸಜ್ಞಾನ ಶಾಖೆಗಳ ಆವಿಷ್ಕಾರ ಎಲ್ಲವೂ ಕುಸಿಯುತ್ತಾ ಹೋಯಿತು. ಉನ್ನತ ಶಿಕ್ಷಣದ ಬಗ್ಗೆ ಮಹತ್ವದ ಧ್ಯೇಯಗಳನ್ನು ರೂಪಿಸಿದ್ದ ರಾಧಾಕೃಷ್ಣನ್, ಕೊಠಾರಿ ಇತ್ಯಾದಿ ಕಮಿಷನ್‌ಗಳ ವರದಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗೆ ಒಪ್ಪಿಸಲಾಗಿದೆ. ರಾಧಾಕೃಷ್ಣನ್, ಕೊಠಾರಿಗಳ ಬದಲು, ಅಂಬಾನಿ, ಬಿರ್ಲಾ ಮತ್ತು ನಾರಾಯಣಮೂರ್ತಿಗಳು ಉನ್ನತ ಶಿಕ್ಷಣದ ಯೋಜನಾ ಆಯೋಗದಲ್ಲಿ ಪ್ರವೇಶ ಪಡೆದಿದ್ದಾರೆ. ಲಾಭದಾಯಕವಾದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದರೂ, ಈಗ ಅದೇ ಮೇಲುಗೈ ಸಾಧಿಸಿದೆ. ಸಧ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀ ಸಂಸ್ಥೆಗಳ ಪಾಲು ಶೇ.59ರಷ್ಟಾಗಿದೆ.

ಇವೆಲ್ಲಾ ಬೆಳವಣಿಗೆಗಳ ಹಿಂದೆ ಉನ್ನತ ಶಿಕ್ಷಣ ಸಾರ್ವಜನಿಕ ಸೇವೆ ಅಲ್ಲ ಎನ್ನುವ ತತ್ವ ಅಡಗಿದೆ. ಇದರರ್ಥ ಈಗ ಅದೊಂದು ಮೌಲ್ಯಾಧಾರಿತ ಸರಕು. ಅಂದರೆ, ಅದನ್ನು ಬಳಸುವವರು ಅದಕ್ಕೆ ತಕ್ಕನಾದ ಶುಲ್ಕ ನಿಡಿ ಅದನ್ನು ಉಪಯೋಗಿಸಬೇಕು. ಉನ್ನತ ಶಿಕ್ಷಣಕ್ಕೆ ನಾಲ್ಕು ಮೂಲಭೂತ ಲಕ್ಷಣಗಳು ಇರ

ಬೇಕು. ಇಂದು, ಹೊಸ ಜ್ಞಾನದ ಅನ್ವೇಷಣೆ. ಎರಡು, ಅದಕ್ಕೆ ಬೇಕಾದ ತರಗತಿ, ಮೂರು, ಸಾಮಾಜಿಕ ಸೇವೆಗಳಿಗೆ ಶಿಕ್ಷಣವನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ವಿವೇಕ; ನಾಲ್ಕು, ವಿಮರ್ಶಾತ್ಮಕ ಧೋರಣೆಯನ್ನು ಬೆಳೆಸುವುದು. ಇದರಲ್ಲಿ ಕಡೆಯದು ಅತ್ಯಂತ ಪ್ರಮುಖವಾದ ಸಾಮಾಜಿಕ ನೈತಿಕತೆಯನ್ನು ಬೆಳೆಸುವುದೂ ಸೇರಿದೆ.
ಆದರೆ ಉನ್ನತ ಶಿಕ್ಷಣವನ್ನು ಒಂದು

 ವ್ಯಾಪಾರವನ್ನಾಗಿಸಿದಾಗ ಈ ನಾಲ್ಕು ಅಂಶಗಳೂ ಮರೆಯಾಗುತ್ತವೆ. ಜ್ಞಾನದ ಅನ್ವೇಷಣೆ ಅಂದರೆ ಇಲ್ಲಿ ಹೊಸ ಬಂಡವಾಳವನ್ನು ಸ್ಥಾಪಿಸಲು ಅಥವಾ ಇರುವ ಹುಡಿಕೆಯನ್ನು ವೃದ್ಧಿಸಲು ಬೇಕಾದ ಕೌಶಲ್ಯವಾಗಿಬಿಡುತ್ತದೆ. ತರಬೇತಿ ಎಂದರೆ, ಕೌಶಲ್ಯ ಪಾಠ ಮಾಡುವ, ಕಲಿಯುವ ತಂತ್ರಜ್ಞಾನಕ್ಕೆ ಸೀಮಿತವಾಗುತ್ತದೆ. ಸಾಮಾಜಿಕ ಸೇವೆಗಳ ಬದಲು ಹೊಸ ಸರಕನ್ನು ಸೃಷ್ಟಿಸುವುದೇ ಮುಖ್ಯವಾಗುತ್ತದೆ. ವಿಮರ್ಶಾತ್ಮಕ ಧೋರಣೆ ಬೆಳೆಸುವುದಂತೂ ನವ ಶಿಕ್ಷಣ ನೀತಿಯಲ್ಲಿ ಸಂಪೂರ್ಣ ನಿಷೇಧಕ್ಕೆ ಒಳಪಡುತ್ತದೆ.

ಇತ್ತೀಚೆಗೆ ಯುಜಿಸಿ ಹೊರಡಿಸಿರುವ ಸುತ್ತೋಲೆ ಪ್ರಕಾರ ಇನ್ನು ಮುಂದೆ ವಿವಿ ಅಧ್ಯಾಪಕರು ಸರ್ಕಾರದ ನೀತಿಗಳನ್ನು ಕುರಿತು ವಿಮರ್ಶೆ ಮಾಡುವಂತಿಲ್ಲ. ಇದರಿಂದ ಈಗಾಗಲೇ ಸೊಂಟ ಬಗ್ಗಿರುವ ಅಧ್ಯಾಪಕರು ಇನ್ನು ಮುಂದೆ ತೆವಳುವಂತಾಗುತ್ತದೆ. ಈ ನೀತಿ ಕೇವಲ ಅಧ್ಯಾಪಕರ ಧ್ವನಿಯನ್ನು ದಮನಮಾಡುವುದಿಲ್ಲ; ವಿದ್ಯಾರ್ಥಿಗಳ ಯೋಜನಾ ಶಕ್ತಿಯನ್ನೇ ಕುಂಠಿಸುತ್ತದೆ.

ಇದಕ್ಕಿಂತಲೂ ದೊಡ್ಡ ಹೊಡೆತವೆಂದರೆ, ಈ ಖಾಸಗೀಕರಣ ಉಳ್ಳವರಿಗಾಗಿ ಮಾತ್ರ ತೆರೆದುಕೊಳ್ಳುವುದರಿಂದ ದೇಶದ ಬಹುತೇಕ ಯುವಜನತೆ ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಾರೆ ಅಥವಾ ಕಳಪೆ ಕಾಲೇಜು/ವಿವಿಗಳಲ್ಲಿ ಮಾತ್ರ ಕಲಿಯುವಂತಾಗುತ್ತದೆ. ಕಾಲೇಜು/ವಿವಿಗಳ ಸ್ವಾಯತ್ತತೆ ಮೇಲೆ ಈಗ ವಿಶೇಷ ಗಮನ ನೀಡಲಾಗುತ್ತಿದೆ. ಅದನ್ನು ಬಯಸದೇ ಇದ್ದ ಸಂಸ್ಥೆಗಳ ಮೇಲೂ ಸ್ವಾಯತ್ತತೆಯನ್ನು ಹೇರಲಾಗುತ್ತಿದೆ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ತಮಗಿಷ್ಟ ಬಂದ ಶಿಕ್ಷಣ ಕ್ರಮ, ಸೇವಾ ನಿಯಮ, ಶುಲ್ಕ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬಹುದಾದ್ದರಿಂದ ಶಿಕ್ಷಣದ ಮೂಲ ಧ್ಯೇಯಗಳಲ್ಲಿ ಒಂದಾದ ಒಳಗೊಳ್ಳುವಿಕೆಗೆ ಧಕ್ಕೆ ಬರುತ್ತದೆ.

ಇವೆಲ್ಲಕ್ಕೂ ಬರೆ ಇಟ್ಟಂತೆ ಇದೇ ವರ್ಷದ ಜೂನ್ 27ರಂದು ಯುಜಿಸಿಯನ್ನು ವಿಸರ್ಜಿಸಿ ಅದರ ಜಾಗದಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪಿಸುವ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಇದರಿಂದ ಉನ್ನತ ಶಿಕ್ಷಣ ಮತ್ತಷ್ಟು ಬಲಗೊಂಡು ಹೆಚ್ಚಿನ ಸ್ವಾಯತ್ತತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ ಒಂದು ಕಡೆ ಸ್ವಾಯತ್ತತೆಯ ಮಾತನ್ನಾಡುತ್ತಲೇ ಇನ್ನೊಂದು ಕಡೆ ಇಡೀ ಉನ್ನತ ಶಿಕ್ಷಣವನ್ನು ಒಂದು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ ಇದು. ಇದರಲ್ಲಿ ರಾಜ್ಯದ ವಿವಿಗಳು ಮಾತ್ರ ಕಾಲೇಜು ಆಡಳಿತ ಮಂಡಳಿಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಇಲ್ಲಿಯವರೆಗೆ ಆಡಳಿತ ಮಾತ್ರ ಹಣಕಾಸಿನ ನಿರ್ವಹಣೆ-ಇವೆರಡನ್ನು ಯುಜಿಸಿ ನೋಡಿಕೊಳ್ಳುತ್ತಿತ್ತು. ಈಗ ಅದನ್ನು ಬೇರ್ಪಡಿಸಲಾಗಿದೆ. ಹಣಕಾಸಿನ ನಿರ್ವಹಣೆ ಇನ್ನುಮುಂದೆ ನೇರವಾಗಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ನೋಡಿಕೊಳ್ಳುತ್ತದೆ. ಅರ್ಥಾತ್ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ಇದು ಶಿಕ್ಷಣದಲ್ಲಿ ರಾಜಕೀಯ ಪಕ್ಷಗಳು ಮೂಗು ತೂರಿಸಲು ದಾರಿಯನ್ನು ಸುಗಮಗೊಳಿಸುತ್ತದೆ.

47ರಿಂದ ಇಲ್ಲಿಯವರೆಗೆ ಉನ್ನತ ಶಿಕ್ಷಣ ಕುರಿತು ಬಂದಿರುವ ವಿವಿಧ ಆಯೋಗಗಳ ವರದಿಗಳು ಹೊಸ ಶಿಕ್ಷಣ ನೀತಿಗಳು, ಮಸೂದೆಗಳನ್ನು ನೋಡಿದರೆ ದೊಡ್ಡ ಗೊಂದಲ ಎದ್ದು ಕಾಣುತ್ತದೆ. ಇಷ್ಟೆಲ್ಲಾ ಅಧ್ಯಯನ ವಿಶೇಷ ವರದಿಗಳಿದ್ದರೂ ನಮ್ಮ ದೇಶದ ಉನ್ನತ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಸೋಲಿಗೆ ಕೇವಲ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿ ಖಾಸಗೀಕರಣದ ಕಡೆಗೆ ಒಂದಿರುವುದರಿಂದಲೇ ಶಿಕ್ಷಣದಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆ ಆಗಿಲ್ಲ ಇಂದು ದೇಶದ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಜೆಎನ್‌ಯು, ಹೈದರಾಬಾದ್, ದೆಹಲಿ ವಿವಿಗಳಲ್ಲಿ ವಿದ್ಯಾರ್ಥಿ ಸಮೂಹ ಎಚ್ಚೆತ್ತುಕೊಂಡಿದ್ದರೆ, ಪ್ರಭುತ್ವಕ್ಕೆ ಹೊಸ ಪ್ರಶ್ನೆಗಳನ್ನು ಕೇಳುತ್ತಿದೆ ಎಂದಾದರೆ, ಅದು ಅಲ್ಲಿನ ಪಠ್ಯಕ್ರಮ ಅಥವಾ ಕಲಿಕಾ ಪದ್ದತಿಯಿಂದ ಪಡೆದ ಎಚ್ಚರವಲ್ಲ ಬದಲಿಗೆ ವಿದ್ಯಾರ್ಥಿಗಳು ತರಗತಿಯ ಹೊರಗಡೆ ಜನಸಮುದಾಯವನ್ನು ನೋಡಿ ಕಲಿತದ್ದರಿಂದ ಮೂಡಿಬಂದ ಎಚ್ಚರ. ಹೀಗಾಗಿ ಉನ್ನತ ಶಿಕ್ಷಣ ತನ್ನ ಮೂಲ ಧ್ಯೇಯೋದ್ದೇಶಗಳನ್ನು ಮರಳಿ ಪಡೆದು, ಸರಕಿನಿಂದ ಸೇವೆಗೆ ಪಲ್ಲಟಗೊಳ್ಳಬೇಕಾದರೆ ಅದು ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...