Homeಮುಖಪುಟಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ.

- Advertisement -
- Advertisement -

ಸುಶಾಂತ್ ಸಿಂಗ್ ಎಂಬ ಬಾಲಿವುಡ್ ಪ್ರತಿಭೆಯ ಸಾವಿನ ಸುದ್ದಿ ಗೊತ್ತಾದ ಕೂಡಲೇ, ನನ್ನ ತಲೆಯಲ್ಲಿ ಬಂದಿದ್ದು ನನಗೂ ಮತ್ತು ಅವನ ನಡುವಿನ ಕಾಮನ್ ಫ್ರೆಂಡ್ಸ್. ಅವರನ್ನು ಕರೆ ಮಾಡಿ ಅವನ್ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಬೇಕೆನಿಸಿತು. ಆದರೆ, ನಾನು ಯಾರಿಗೂ ಫೋನ್ ಮಾಡಲಿಲ್ಲ. ಅವರೇನೇ ಹೇಳಿದರೂ, ಅದು ನನ್ನ ಕುತೂಹಲವನ್ನು ಒಂದಿಷ್ಟು ತಣಿಸುತ್ತಿತ್ತೇ ಹೊರತು ಅದರಿಂದ ಮತ್ತೇನೂ ಆಗುತ್ತಿದ್ದಿಲ್ಲ. ಸುಶಾಂತ್‌ನ ಸಾವಿನ ಸುತ್ತ ಏನಾಯಿತು, ಆ ನಟನ ಮಾನಸಿಕ ಸ್ಥಿತಿ ಹೇಗಿತ್ತು, ಯಾವ್ಯಾವ ಒತ್ತಡಗಳಿದ್ದವು, ಅದಕ್ಕೆ ಏನು ಮಾಡಬೇಕಾಗಿತ್ತು ಎಂದು ಹೇಳಲು ನಾನು ಮನೋವಿಜ್ಞಾನದ ತಜ್ಞನೂ ಅಲ್ಲ.

ಅದೇ ಇಂಡಸ್ಟ್ರಿಯಲ್ಲಿ ನಾನೂ ಸುಮಾರು ಒಂದೂವರೆ ದಶಕ ಕಳೆದಿದ್ದರಿಂದ, ಅಲ್ಲಿಯ ಒತ್ತಡಗಳೇನು ಎಂಬುದುನ್ನು ಖುದ್ದಾಗಿ ಅನುಭವಿಸಿದ್ದೇನೆ; ಅದನ್ನೇ ಹಂಚಿಕೊಳ್ಳುವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಂಬಯಿ ಎಂಬ ಮಾಯಾನಗರಿಗೆ ಹೋದೆ. ಒಂದಿಷ್ಟು ದಿನಗಳಲ್ಲಿ ಸ್ವಾಭಾವಿಕವಾಗಿಯೇ ನನ್ನ ಹಾಗೇ ಬೇರೆ ಬೇರೆ ಊರುಗಳಿಂದ ಬಂದವರು ಜೊತೆಗೂಡಿದೆವು. ಚಿತ್ರರಂಗ ಕಾರ್ಯನಿರ್ವಹಿಸುವ ವಿಧಾನವನ್ನು ಗ್ರಹಿಸದೇ ಹೋದ ಅನೇಕರು, ಮುಂಬಯಿಯನ್ನು, ಚಿತ್ರರಂಗವನ್ನೂ ಟೀಕಿಸಿ, ಸಿನಿಕರಾದರು. ಅದರಲ್ಲಿ ಹೆಚ್ಚಿನವರು ಯಾರಿಗೂ ಗೋಚರವಾಗದಂತೆ ಮರಳಿ ಮನೆಗೆ ಹೋದರೆ ಇನ್ನೂ ಕೆಲವರು ತಮ್ಮನ್ನು ತಾವು ಇಂಡಸ್ಟ್ರಿಗೆ ಅಳವಡಿಸಲು ಪ್ರಯತ್ನಿಸುತ್ತ ಇನ್ನಷ್ಟು ಕಾಲ ದೂಡಿದರು.

ನಾನು ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದ ಒಂದು ಪ್ರೊಡಕ್ಷನ್ ಹೌಸ್‌ನಲ್ಲಿ ಇನ್‌ಹೌಸ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಸೇರಿಕೊಂಡಿದ್ದೆ. ಮೊದಲ ಕೆಲ ತಿಂಗಳು ನಾನು ಆಯ್ಕೆ ಮಾಡುತ್ತಿದ್ದ ನಟರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು ನನ್ನ ಬಾಸ್‌ಗಳು. ನಿಧಾನವಾಗಿ ಅವರಿಗೆ ಎಂತಹ ‘ನಟ’ರು ಬೇಕೋ ಅಂತಹ ನಟರನ್ನೇ ಆಯ್ಕೆ ಮಾಡಿ, ಶಾರ್ಟ್ಲಿಸ್ಟ್ ಮಾಡಲು ಪ್ರಾರಂಭಿಸಿದೆ. ಆದರೂ, ನಾನು ಆಯಾ ನಟರನ್ನು ನಿಜವಾಗಿಯೂ ಯಾವ ಕಾರಣಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂಬುದು ನನಗೇ ಗೊತ್ತಿದ್ದಿಲ್ಲ. ಅದಕ್ಕೆ ಕಾರಣ ಹುಡುಕಲು ಪ್ರಾರಂಭಿಸಿದೆ. ಉತ್ತರ ಸಿಗುವುದು ತಡವಾಗಲಿಲ್ಲ. ನಾನು ಕಂಡುಕೊಂಡ ಉತ್ತರ: ನಾನು ನಟರನ್ನು ಆಯ್ಕೆ ಮಾಡುತ್ತಿದ್ದ ನಟರಲ್ಲಿ ಹೆಚ್ಚಿನವರು ಕಾರಿನಲ್ಲಿ ಬರುವವರಾಗಿದ್ದರು. ಮುಂಬಯಿಯ ಸೆಕೆಯಲ್ಲಿ ಬಸ್ಸೋ, ಟ್ರೇನೋ ಹಿಡಿದು, ಅಂಧೇರಿಗೆ ಬಂದು ಅಲ್ಲಿಂದ ಒಂದಿಷ್ಟು ದೂರ ನಡೆದುಕೊಂಡು ಬರುವವರ ಮುಖ ನೋಡಿ, ಅವರ ಆಡಿಷನ್ ಮಾಡಲು ‘ಮನಸ್ಸಾದರೂ ಹೇಗೆ ಆದೀತು’?

ನಾವುಗಳೂ ಮೊದಲ ಅನೇಕ ವರ್ಷ ಟ್ರೇನ್ ಮತ್ತು ಕಾಲ್ನಡಿಗೆಯನ್ನು ನಂಬಿಕೊಂಡವರೆ. ಎಲ್ಲೋ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾದೊಡನೇ ಆಡಿಷನ್‌ಗಾಗಿ ಸರದಿಯಲ್ಲಿ ಕಾದು, ‘ಇಲ್ಲ ನೀವು ಈ ರೋಲ್‌ಗೆ ಫಿಟ್ ಆಗುವುದಿಲ್ಲ’ ಎಂಬುದನ್ನು ಕೇಳಿಸಿಕೊಂಡಾಗ, ಇಂದಿನ ಸ್ಟ್ರಗಲ್ ಮಾಡಿದೆನಲ್ಲ ಎಂಬ ‘ಗುಡ್ ಫೀಲಿಂಗ್’ನೊಂದಿಗೆ ಮರಳುತ್ತಿದ್ದೆವು. ಕ್ರಮೇಣ, ನಾವು ಹೀರೋ ಆಗಲು ಸಾಧ್ಯವಿಲ್ಲ ಎಂಬ ತಥ್ಯ ಹೆಚ್ಚಿನವರಿಗೆ ಒಂದೆರಡು ವರ್ಷಗಳಲ್ಲಿ ತಿಳಿಯುತ್ತಿತ್ತು. ಹೇಗಾದರೂ ಮಾಡಿ ಯಾವುದೋ ಒಂದು ರೋಲ್ ಸಿಕ್ಕರೆ ಸಾಕು ಎಂದು ಸ್ಟ್ರಗಲ್ ಮುಂದುವರೆಯುತ್ತಿತ್ತು. ಇನ್ನಿತರರು ನಾಟಕದ ಗುಂಪಿಗೆ ಸೇರಿ, ಅಲ್ಲಿಯೇ ಮಾನಸಿಕ ನೆಲೆ ಕಂಡುಕೊಳ್ಳುತ್ತಿದ್ದರು.

ಇಂಡಸ್ಟ್ರಿಯಲ್ಲೂ ಜಾಹೀರಾತುಗಳ ಮತ್ತು ಧಾರಾವಾಹಿಗಳ ಜಗತ್ತು ಸಿನಿಮಾ ಜಗತ್ತಿಗಿಂತ ಒಂದಿಷ್ಟು ನೇರ. ಅಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದರೂ, ಆಡಿಷನ್ ಕೊಡುವ, ಅದರಲ್ಲಿ ಶಾರ್ಟ್ಲಿಸ್ಟ್ ಆಗುವ ಅವಕಾಶ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಸುಶಾಂತ್‌ನಂತವರು ಟಿವಿ ಧಾರಾವಾಹಿಗೆ ಹೇಳಿ ಮಾಡಿಸಿದಂಥವರು.

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ. ಇರ್ಫಾನ್, ನವಾಜುದ್ದಿನ್ ಸಿದ್ದಿಕಿ, ರಾಜ್‌ಕುಮಾರ್ ರಾವ್‌ನಂತವರೆಲ್ಲ ಪ್ರತಿಷ್ಠಿತ ಸಂಸ್ಥೆಗಳಿಂದ ಬಂದವರು. ಅವರು ಮುಂಬಯಿಗೆ ಕಾಲಿಟ್ಟಾಗ ಅವರನ್ನು ತರಬೇತುಗೊಳಿಸಲು ರೆಕಮೆಂಡ್ ಮಾಡಲು ಸೀನಿಯರ್‌ಗಳ ಒಂದು ತಂಡವಿರುತ್ತೆ. ಅದರಲ್ಲೂ ಅನೇಕರಿಗೆ ಸಿನೆಮಾ ಇಂಡಸ್ಟ್ರಿಯಲ್ಲಿ ನಿಲ್ಲಲಾಗುವುದಿಲ್ಲ.

ಇದು ಇಂಡಸ್ಟ್ರಿಯನ್ನು ಭೇದಿಸಲಾಗದವರ ಕಥೆಯಾದರೆ, ಭೇದಿಸಿದವರ ಕಥೆಯೇ ಬೇರೆ.

ತಮ್ಮ ಅದೃಷ್ಟ, ಲುಕ್, ಪ್ರತಿಭೆ ಮತ್ತು ಇತರ ಕಾಣದ ಕಾರಣಗಳಿಂದ ಇಂಡಸ್ಟ್ರಿಯಲ್ಲಿ ನೆಲೆಯೂರಿದರೂ, ಅವರ ಗೋಳು ಕಡಿಮೆಯಾಗುವುದಿಲ್ಲ. ಅದಕ್ಕೆ ಒಬ್ಬ ಸೀನಿಯರ್ ಹೇಳಿದ ಒಂದು ಮಾತನ್ನು ಉಲ್ಲೇಖಿಸುತ್ತೇನೆ; ಓಂ ಪುರಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು, ಅವರು ಚಾರ್ಲಿ ವಿಲ್ಸನ್ಸ್ ವಾರ್ ಎಂಬ ಹಾಲಿವುಡ್ ಚಿತ್ರದಲ್ಲಿ ವಿಶ್ವವಿಖ್ಯಾತ ನಟ ಟಾಮ್ ಹ್ಯಾಂಕ್ಸ್‌ನೊಂದಿಗೆ ಅಭಿನಯಿಸಿದರು. ಚಿತ್ರೀಕರಣದ ನಂತರ ಟಾಮ್ ಹ್ಯಾಂಕ್ಸ್ ಮನೆಗೆ ಅತಿಥಿಯಾಗಿ ಹೋಗಿದ್ದರಂತೆ ಓಮ್ ಪುರಿ. ಆದರೆ, ಓಂ ಪುರಿಯಂತಹ ನಟರಿಗೆ ಯಾವುದಾದರೂ ಬಾಲಿವುಡ್ ಸ್ಟಾರ್‌ಗಳ ಮನೆಗೆ ಆಹ್ವಾನವಿತ್ತಾ? ಇಲ್ಲ. ಅವರೆಂದೂ ಹೊರಗಿನವರೆ, ಕ್ಯಾರೆಕ್ಟರ್ ರೋಲ್‌ಗಳನ್ನು ಮಾಡುವವರು, ಆರ್ಟ್ ಸಿನೆಮಾ ಮಾಡುವವರು.

ಅದೇ ಸಮಯದಲ್ಲಿ, ಸಂಜಯ್ ಲೀಲಾ ಭನ್ಸಾಲಿ ಎಂಬ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅನಿಲ್ ಕಪೂರ್‌ನ ಮಗಳು ಮತ್ತು ರಿಷಿ ಕಪೂರ್‌ನ ಮಗನನ್ನು ಹೀರೊ, ಹೀರೊಯಿನ್ ಆಗಿ ಮಾಡುತ್ತಾನೆ. ಜೆ.ಪಿ.ದತ್ತಾ ಎಂಬ ಯಶಸ್ವಿ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅಮಿತಾಭ್ ಬಚ್ಚನ್‌ನ ಮಗ ಮತ್ತು ರಾಜ್‌ಕಪೂರ್‌ನ ಮೊಮ್ಮಗಳನ್ನು ಹೀರೊ, ಹೀರೋಯಿನ್ ಆಗುತ್ತಾರೆ. ಇದು ಮಾಮೂಲು. ಇಷ್ಟು ದೊಡ್ಡ ನಿರ್ದೇಶಕರಾದ ಇವರೇಕೇ ಸ್ಟಾರ್‌ಸನ್, ಸ್ಟಾರ್‌ಡಾಟರ್‌ಗಳನ್ನು ಲಾಂಚ್ ಮಾಡುತ್ತಾರೆ ಎಂದು ಈ ನಿರ್ದೇಶಕರ ಬಗ್ಗೆ ಸಿಟ್ಟು ಬರುತ್ತಿತ್ತು. ಆದರೆ ಅದು ವ್ಯವಸ್ಥೆ; ಅಲ್ಲಿ ಬದುಕುಳಿಯಬೇಕಾದರೆ, ಅಲ್ಲಿಯ ನಿಯಮಗಳನ್ನು ಪಾಲಿಸಲೇಬೇಕು. ಯಾವ ಹೀರೋ ಅಥವಾ ಹೀರೋಯಿನ್ ಮನಬಿಚ್ಚಿ ಮಾತನಾಡುವಂತಿಲ್ಲ. ಅವರ ಎಲ್ಲಾ ಸಂದರ್ಶನಗಳನ್ನು ಮೊದಲೇ ಪ್ಲಾನ್ ಮಾಡಲಾಗುತ್ತೆ; ಅವರು ಸಂದರ್ಶನಗಳನ್ನು ಕೊಡುವುದೂ ಅವರ ಚಿತ್ರಗಳ ಬಿಡುಗಡೆಗೆ ಮುನ್ನ ಮಾತ್ರ. ಹಾಗಾಗಿ ಕೇವಲ ‘ಪಾಸಿಟಿವ್’ ಆಗಿರುವ ವಿಷಯಗಳನ್ನೇ ಹೇಳಬೇಕಾಗುತ್ತೆ. ಸಂದರ್ಶನದ ಈ ನಿಯಮವನ್ನು ಮುರಿಯುವಂತಿಲ್ಲ. ಏಕೆಂದರೆ ಬಹಿಷ್ಕಾರ ಎಂಬುದು ತೂಗುವ ಕತ್ತಿ ಅವರ ತಲೆಯ ಮೇಲೆ ಸದಾಕಾಲ ತೂಗುತ್ತಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಬಂದ ಹೀರೋಗಳನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಸ್ಟಾರ್‌ಸನ್‌ಗಳೇ. ಸ್ವಾಭಾವಿಕವಾಗಿಯೇ ಹೊರಗಿನವರನ್ನು ಇವರು ಸಹಿಸಿಕೊಳ್ಳುವುದಿಲ್ಲ. ಸುಶಾಂತ್ ಸಿಂಗ್ ನಿಧನದ ನಂತರ ಬಂದ ಸಂತಾಪಗಳ ಮಹಾಪೂರವನ್ನು ನೋಡಿ ಸಿಟ್ಟಿಗೆದ್ದು, ಚಿತ್ರರಂಗದ ಹಿಪಾಕ್ರಸಿಯನ್ನು ತೋರಿಸಿ ಇಷ್ಟೆಲ್ಲ ಸುಳ್ಳು ಹೇಳುವ ಬದಲಿಗೆ ಒಂದು ದಿನದ ಮೌನಾಚರಣೆ ಆಚರಿಸಿ ಎಂದು ಹೇಳಿದ್ದೂ ಒಬ್ಬ ಸ್ಟಾರ್‌ಸನ್, ಸೈಫ್ ಅಲಿ ಖಾನ್.

#ಮೀಟೂ ಎಂಬ ಚಳವಳಿ ಇಂಡಸ್ಟ್ರಿಯಲ್ಲಿ ‘ಸ್ವಾಭಾವಿಕ’ವಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಬೆಳಕು ಚೆಲ್ಲಿತು. ಸುಶಾಂತ್ ಸಿಂಗ್ ಎಂಬ ಪ್ರತಿಭಾವಂತ ನಟನ ಸಾವು ಬಾಲಿವುಡ್ ನ ಕರಾಳ ಒಳಜಗತ್ತು, ಅದರ ಕಟ್ಟುನಿಟ್ಟಾದ ನಿಯಮಗಳು, ಶೋಷಣೆ ಮತ್ತು ಚಿತ್ರರಂಗವನ್ನು ಭೇದಿಸಿದ ಪ್ರತಿಭೆಗಳು ಎದುರಿಸಬೇಕಾದ ಸಮಸ್ಯೆಗಳನ್ನು ಬೆಳಕಿಗೆ ತರಬಹುದು ಎಂದು ಆಶಿಸಬಹುದಷ್ಟೆ.


ಇದನ್ನೂ ಓದಿ: ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...