Homeಮುಖಪುಟಬೇಜವಾಬ್ದಾರಿ ನಡವಳಿಕೆಗಾಗಿ ಕ್ಷಮೆ ಕೋರಿದ ದಿ ಟೈಮ್ಸ್‌ ಆಫ್‌ ಇಂಡಿಯಾ : ಉಳಿದ ಮಾಧ್ಯಮಗಳಿಗೂ ಇದು...

ಬೇಜವಾಬ್ದಾರಿ ನಡವಳಿಕೆಗಾಗಿ ಕ್ಷಮೆ ಕೋರಿದ ದಿ ಟೈಮ್ಸ್‌ ಆಫ್‌ ಇಂಡಿಯಾ : ಉಳಿದ ಮಾಧ್ಯಮಗಳಿಗೂ ಇದು ಪಾಠ

- Advertisement -
- Advertisement -

“ಈ ಸುದ್ದಿಯಲ್ಲಿ ನಾವು ಅಜಾಗರೂಕತೆಯಿಂದಾಗಿ ತಪ್ಪಾದ ಫೋಟೋವನ್ನು ಅಪ್‌ಲೋಡ್ ಮಾಡಿದ್ದೇವೆ. ಈ ದೋಷಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ.” ಹೀಗೆಂದು ದಿ ಟೈಮ್ಸ್‌ ಆಫ್‌ ಇಂಡಿಯಾ ಇಂದಿನ ಒಂದು ವರದಿಯ ಮೊದಲ ಪ್ಯಾರದಲ್ಲಿ ಬರೆದುಕೊಂಡಿದೆ. ಹಾಗಾದರೆ ಅದು ಮಾಡಿದ ತಪ್ಪಾದರೂ ಏನು? ಅದರಿಂದಾದ ಅನಾಹುತವೇನು ನೋಡೋಣ ಬನ್ನಿ. ಏಕೆಂದರೆ ಇದರಿಂದ ಉಳಿದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ.

ಕ್ಷಮೆ ಕೇಳಿದ ಟೈಮ್ಸ್‌ ಆಫ್‌ ಇಂಡಿಯಾ

“ಭಾರತದಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಇಳಿದಿದೆ. TOI ಮತ್ತು ಭಾರತೀಯ ಪತ್ರಿಕೋದ್ಯಮದ ಮೇಲೆ ನಾನು ಇಟ್ಟಿದ್ದ ಸಣ್ಣ ಪ್ರಮಾಣದ ನಂಬಿಕೆ ಈಗಷ್ಟೇ ಕಡಿಮೆಯಾಗಿದೆ. ನಾವು ಸಂಪೂರ್ಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಈ ಘಟನೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ನಿಜವಾಗಿಯೂ ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಬೆಚ್ಚಿಬೀಳಿಸಿದೆ ಮತ್ತು ಈ ಬೆಳಿಗ್ಗೆ ನಮಗೆ ಡಿಸ್ಟರ್ಬ್‌ ಆಗಿದೆ.”

“TOI, ದಯವಿಟ್ಟು ಈ ತಪ್ಪನ್ನು ತಿದ್ದುಪಡಿ ಮಾಡಿ ಮತ್ತು ಔಪಚಾರಿಕ ಕ್ಷಮೆಯಾಚನೆಯೊಂದಿಗೆ ಸರಿಪಡಿಸಿ. ಮತ್ತೊಮ್ಮೆ ಹೇಳುತ್ತಿದ್ದೇವೆ, ನಾವು ಚೆನ್ನಾಗಿದ್ದೇವೆ ಮತ್ತು ನಮ್ಮ ಬಗ್ಗೆ ಕಾಳಜಿ ವಹಿಸುವ ಎಲ್ಲ ಪ್ರೀತಿಪಾತ್ರರಿಗೆ ಧನ್ಯವಾದಗಳು. ನಾವು ಹಿಂದೆಂದಿಗಿಂತಲೂ ಸಂತೋಷದಿಂದ ಮತ್ತು ಒಟ್ಟಿಗೆ ಇದ್ದೇವೆ.” ಹೀಗೆಂದು ಇಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ದಂಪತಿಗಳು ಸಿದ್ದ ಆಹಾರ ಉದ್ಯಮಿಗಳಾದ (ಬಗೆ ಬಗೆ ಅಡುಗೆ ಮಾಡುವ ಮತ್ತು ರೆಸಿಪಿ ಹೇಳಿಕೊಡುವ) ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್.

TOI has used our photo for an unrelated news without any verification. This is what the journalism has come down to.

This is what the journalism has come down to in India. Whatever small amount of trust I had on TOI and on Indian journalism has just gone down the drain. We (Amit Agarwal & Shilpi Agarwal) are doing totally fine and this incident is nowhere related to us. This has really shocked our family and friends and caused a chaos this morning for us.TOI, please fix this asap with a correction and formal apology. Once again, we are fine and thanks to all the loved ones who are concerned about us. We are happy and together like never before 🙂 #incorrectnews #timesofindia #fakenews #TOINewslink: https://timesofindia.indiatimes.com/city/kolkata/man-kills-estranged-wife-in-bluru-mom-in-law-in-kol-shoots-self/articleshow/76519987.cms

Posted by Foods And Flavors on Monday, June 22, 2020

ಅವರು ಹೀಗೆ ಹೇಳಲು ಕಾರಣವೆಂದರೆ ಜೂನ್ 22 ರಂದು ಬೆಂಗಳೂರಿನಲ್ಲಿ ನಡೆದ ಸರಣಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣವೊಂದನ್ನು ವರದಿ ಮಾಡಿರುವ ಟೈಮ್ಸ್‌ ಆಫ್‌ ಇಂಡಿಯಾವು ತನ್ನ ಸುದ್ದಿಯ ಮುಖಪುಟದಲ್ಲಿ ಈ ಇಬ್ಬರೂ ದಂಪತಿಗಳ ಫೋಟೊವನ್ನು ಪ್ರಕಟಿಸಿಬಿಟ್ಟಿದೆ. ಅದನ್ನು ಗಮನಿಸಿದ ಅವರ ಸ್ನೇಹಿತರು ಮತ್ತು ಸಂಬಂಧಿಕರು ಆತಂಕಗೊಂಡು ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್‌ಗೆ ಫೋನ್ ಮಾಡಿ ಆತಂಕ ಹಂಚಿಕೊಂಡಿದ್ದಾರೆ.

ನಿಜವಾಗಿ ನಡೆದುದ್ದೇನು? ತಪ್ಪಾಗಿದ್ದು ಎಲ್ಲಿ?

ಕೋಲ್ಕತ್ತಾ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಆದ ವ್ಯಕ್ತಿಯೊಬ್ಬ ಬೆಂಗಳೂರಿನ ಹುಡುಗಿಯನ್ನು ಮದುವೆಯಾಗಿದ್ದಾರೆ. ತದನಂತರ ಅವರ ಸಂಸಾರದಲ್ಲಿ ಬಿರುಕುಬಂದು ವಿಚ್ಚೇದನ ಪಡೆದಿದ್ದಾರೆ. ಆದರೆ ಆಸ್ತಿ ವಿಷಯಕ್ಕೆ ತೀವ್ರ ಜಗಳವಾದ್ದರಿಂದ ತನ್ನ ವಿಚ್ಛೇದಿತ ಹೆಂಡತಿ ಮನೆಗೆ ನುಗ್ಗಿ ಆಕೆಯನ್ನು ಕೊಲೆ ಮಾಡಿದ್ದಾನೆ. ಅಲ್ಲಿಂದ ಕೊಲ್ಕತ್ತಾಗೆ ಮರಳಿ ಆಕೆಯ ತಾಯಿಯನ್ನು ಸಹ ಕೊಂದಿದ್ದಾನೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಹೆಸರೂ ಅಮಿತ್ ಅಗರ್ವಾಲ್ ಮತ್ತು ಆತನ ವಿಚ್ಛೇದಿತ ಪತ್ನಿಯ ಹೆಸರು ಶಿಲ್ಪಿ ಅಗರ್ವಾಲ್ ಆಗಿದೆ. ಇಬ್ಬರೂ ಸಹ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಟೈಮ್ಸ್ ಆಫ್‌ ಇಂಡಿಯಾ ಸುದ್ದಿ ಮಾಡುವ ಭರದಲ್ಲಿ ಇವರ ಬದಲಿಗೆ ಸಿದ್ದ ಆಹಾರ ಉದ್ಯಮಿಗಳಾದ ಅಮಿತ್ ಅಗರ್ವಾಲ್ ಮತ್ತು ಶಿಲ್ಪಿ ಅಗರ್ವಾಲ್‌ರವರ ಚಿತ್ರ ಪ್ರಕಟಿಸಿಬಿಟ್ಟಿದೆ.

ಇದರಿಂದ ನೊಂದುಕೊಂಡ ಆ ಉದ್ಯಮಿಗಳು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ “ಖ್ಯಾತ ಪತ್ರಿಕೆ ಈ ರೀತಿ ಮಾಡಬಾರದು. ಸುದ್ದಿ ಪ್ರಕಟಿಸುವ ಮುನ್ನ ಪರೀಶಿಲಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಸುದ್ದಿಯನ್ನು ಬ್ರೇಕಿಂಗ್‌ ಮಾಡುವ ವಿಪರೀತ ಹುಚ್ಚಿನೊಂದಿಗೆ ಅನೈತಿಕ ಮತ್ತು ವೃತ್ತಿಪರವಲ್ಲದ ಕೆಲಸದ ಸಂಸ್ಕೃತಿಯು ಭಾರತೀಯ ಪತ್ರಿಕೋದ್ಯಮವನ್ನು ನಾಶಪಡಿಸುತ್ತಿದೆ. ಇದೇ ತಪ್ಪಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ನ್ಯಾಯಾಲಯಗಳು ಮಿಲಿಯನ್ ಡಾಲರ್‌ ಡಂಡ ವಿಧಿಸುತ್ತಿದ್ದವು” ಎಂದು ಅರುಣ್ ಭೋಥ್ರಾ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ತದನಂತರ ತನ್ನ ತಪ್ಪಿನ ಅರಿವಾದ ಕೂಡಲೇ ಟೈಮ್ಸ್‌ ಆಫ್‌ ಇಂಡಿಯಾ ಆ ದಂಪತಿಗಳ ಫೋಟೊವನ್ನು ತೆಗೆದುಹಾಕಿ ಕ್ರೈಂ ನ ಸಾಂಕೇತಿಕ ಫೋಟೊವನ್ನು ಅಪ್‌ಲೋಡ್‌ ಮಾಡಿದೆ. ಜೊತೆಗೆ ತಾನು ಮಾಡಿದ ಪ್ರಮಾದಕ್ಕಾಗಿ ಕ್ಷಮೆ ಕೇಳಿದೆ.

ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾದ ಛೀಫ್‌ ಎಡಿಟರ್‌ ರಾಜೇಶ್‌ ಕುರ್ಲಾ ಪ್ರತಿಕ್ರಿಯಿಸಿ “ಈ ತಪ್ಪು ಮತ್ತೆ ಮರಕಳಿಸುವುದಿಲ್ಲ. ಈ ಭಯಾನಕ ತಪ್ಪಿನಿಂದಾಗಿ ದಂಪತಿಗಳಿಗೆ ಏನಾಗಿದೆಯೆಂದು ಗೊತ್ತಿದೆ. ನಾನು ಅವರಿಗೆ ವೈಯಕ್ತಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಜಗತ್ತು ಅವಲಂಬಿಸಿರುವ ಅಧಿಕೃತ ಮೂಲವನ್ನು ನಾವು ಅವಲಂಬಿಸಿದ್ದೇವೆ. ಪಾಠ ಕಲಿತಿದ್ದೇವೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇದು ಉಳಿದೆಲ್ಲಾ ಮಾಧ್ಯಮಗಳಿಗೂ ಪಾಠವಾಗಬೇಕಿದೆ. ಸಾವಧಾನದಿಂದ ಪುನರ್‌ ಪರಿಶೀಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ. ಪ್ರಮಾಣಿಕೃತ ಮೂಲಗಳು ಇಲ್ಲದಿದ್ದರೆ ಆ ಸುದ್ದಿ ಅಥವಾ ಫೋಟೊವನ್ನು ಪ್ರಕಟಿಸದಿದ್ದರೂ ನಷ್ಟವೇನಿಲ್ಲ. ಆದರೆ ಗಾಳಿ ಸುದ್ದಿಗಳನ್ನು ನಂಬಿಕೊಂಡು ಸುದ್ದಿ ಪ್ರಕಟಿಸಿ ಇನ್ನೊಬ್ಬರ ವೈಯಕ್ತಿಕ ಗೌಪ್ಯತೆಯ ಮೇಲೆ ದಾಳಿ ಮಾಡುವುದು ಸರ್ವಥಾ ಸರಿಯಲ್ಲ ಎಂಬುದನ್ನು ಕಲಿಯಬೇಕಿದೆ. ನಮ್ಮ ಮಾಧ್ಯಮ ಮಿತ್ರರು ಮಾಧ್ಯಮಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಬಂದಿರುವ ಅತ್ಯುತ್ತಮ ಹಾಲಿವುಡ್‌ ಚಿತ್ರ ’ಸ್ಪಾಟ್‌ಲೈಟ್‌’ ಒಮ್ಮೆ ನೋಡಿದರೆ ಈ ರೀತಿಯ ತಪ್ಪುಗಳಾಗುವುದಿಲ್ಲ.


ಇದನ್ನೂ ಓದಿ; ಸ್ಪಾಟ್‍ಲೈಟ್ ಎನ್ನುವ ಸಿನೆಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...